ನಾಗರೀಕ ವಿಮಾನಯಾನ ಸಚಿವಾಲಯ
azadi ka amrit mahotsav

ಗ್ವಾಲಿಯರ್-ಇಂದೋರ್ ನಡುವಿನ ಮೊದಲ ನೇರ ವಿಮಾನಯಾನಕ್ಕೆ ಚಾಲನೆ ನೀಡಿದ ನಾಗರಿಕ ವಿಮಾನಯಾನ ಖಾತೆ ಸಚಿವ ಶ್ರೀ ಜ್ಯೋತಿರಾದಿತ್ಯ ಸಿಂಧಿಯಾ


ಇಂದೋರ್-ದುಬೈ ನಡುವೆ ವಿಮಾನ ಸಂಚಾರ ಪುನಾರಂಭ

Posted On: 01 SEP 2021 1:04PM by PIB Bengaluru

ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ, ನಾಗರಿಕ ವಿಮಾನಯಾನ ಖಾತೆ ರಾಜ್ಯ ಸಚಿವ ಜನರಲ್ ಡಾ.ವಿ.ಕೆ.ಸಿಂಗ್ (ನಿವೃತ್ತ) ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಶ್ರೀ ಪ್ರದೀಪ್ ಖರೋಲಾ ಅವರ ಸಮಕ್ಷಮದಲ್ಲಿ ಇಂದು ಮಧ್ಯಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮತ್ತು ದೇಶೀಯ ವೈಮಾನಿಕ ಸಂಪರ್ಕ ಬಲವರ್ಧನೆಗೊಳಿಸುವ ಉದ್ದೇಶದ ಎರಡು ವಿಮಾನಗಳ ಸಂಚಾರಕ್ಕೆ ವರ್ಚುವಲ್ ರೂಪದಲ್ಲಿ ಹಸಿರು ನಿಶಾನೆ ತೋರಲಾಯಿತು. ಕಾರ್ಯಕ್ರಮದಲ್ಲಿ ದೆಹಲಿ ಮಾರ್ಗವಾಗಿ ಗ್ವಾಲಿಯರ್-ಇಂದೋರ್ (ಮಧ್ಯಪ್ರದೇಶ) ನಡುವೆ ಇಂಡಿಗೋದ ನೇರ ಮೊದಲ ವಿಮಾನ ಸಂಚಾರ ಆರಂಭಕ್ಕೆ ಮತ್ತು ಇಂದೋರ್ (ಮಧ್ಯಪ್ರದೇಶ)- ದುಬೈ (ಯುಎಇ) ನಡುವೆ  ಏರ್ ಇಂಡಿಯಾದ ನೇರ ವಿಮಾನ ಸಂಚಾರ ಪುನರಾರಂಭಕ್ಕೆ ಚಾಲನೆ ನೀಡಲಾಯಿತು.

ಮಧ್ಯಪ್ರದೇಶದ ಮುಖ್ಯಮಂತ್ರಿ ಶ್ರೀ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಭೂಪಾಲ್ ನಿಂದ ವರ್ಚುವಲ್ ಮೂಲಕ ಭಾಗವಹಿಸಿದ್ದರು.

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್, ಇಂಧನ ಸಚಿವ (ಮಧ್ಯಪ್ರದೇಶ) ಶ್ರೀ ಪ್ರದ್ಯುಮ್ನ ಸಿಂಗ್ ತೋಮರ್, ತೋಟಗಾರಿಕೆ ಮತ್ತು ಆಹಾರ ಸಂಸ್ಕರಣೆ ( ಸ್ವತಂತ್ರ) ರಾಜ್ಯ ಸಚಿವ ಶ್ರೀ ಭರತ್ ಸಿಂಗ್ ಕುಶ್ವಾಲಾ, ಲೋಕಸಭಾ ಸದಸ್ಯ ಶ್ರೀ ವಿವೇಕ್ ನಾರಾಯಣ್ ಶೆಜ್ ವಾಲ್ಕರ್ಗ್ವಾಲಿಯರ್ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಲಕ ಡಾ. ಸತೀಶ್ ಸಿಕಾರ್ವಾರ್ ಅವರು ಗ್ವಾಲಿಯರ್ ನಿಂದ ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಜಲಸಂಪನ್ಮೂಲ, ಮೀನುಗಾರರ ಕಲ್ಯಾಣ ಮತ್ತು ಮೀನುಗಾರಿಕೆ ಅಭಿವೃದ್ಧಿ ಸಚಿವ ಶ್ರೀ ತುಳಸೀರಾಮ್ ಸಿಲಾವತ್, ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಆದ್ಯತಂ ಸಚಿವ ಶ್ರೀ ಉಷಾ ಠಾಕೂರ್, ಲೋಕಸಭಾ ಸದಸ್ಯ ಶ್ರೀ ಶಂಕರ್ ಲಲ್ವಾನಿ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ ಕೈಲಾಶ್ ವಿಜಯವರ್ಗಿಯಾ, ಇಂದೋರ್ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ರಮೇಶ್ ಮೆಂಡೋಲಾ, ಶಾಸಕರಾದ ಶ್ರೀಮತಿ ಮಾಲಿನಿ ಲಕ್ಷ್ಮಣ್ ಸಿಂಗ್ ಗೌರ್, ಶ್ರೀ ಮಹೇಂದ್ರ ಹರ್ದಿಯಾ, ಶ್ರೀ ಆಕಾಶ್ ವಿಜಯವರ್ಗಿಯಾ, ಶ್ರೀ ಸಂಜಯ್ ಶುಕ್ಲಾ, ಶ್ರೀ ವಿಶಾಲ್ ಜಗದೀಶ್ ಪಟೇಲ್ ಅವರೂ ಸಹ ಇಂದೋರ್ ನಿಂದ ವರ್ಚುವಲ್ ರೂಪದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ನವದೆಹಲಿಯ ರಾಜೀವ್ ಗಾಂಧಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾದಿಕಾರಿದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಶ್ರೀ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಅವರು ಮಾತನಾಡಿದೆಹಲಿ ಮಾರ್ಗವಾಗಿ ಇಂದೋರ್-ಗ್ವಾಲಿಯರ್ ನಡುವೆ ನೇರ ವಿಮಾನ ಸಂಪರ್ಕ ಸ್ಥಾಪನೆಯು ಭಾರತ ಸರ್ಕಾರದ ಸಬ್ ಉಡೇನ್ ಸಬ್ ಜುಡೇನ್ ಉಪಕ್ರಮದ ಉದ್ದೇಶಕ್ಕೆ ಹೊಂದಿಕೆಯಾಗುತ್ತದೆ. ಮಧ್ಯಪ್ರದೇಶದ ಎರಡು ನಗರಗಳ ನಡುವಿನ ವೈಮಾನಿಕ ಸಂಪರ್ಕದಿಂದಾಗಿ ಅಪಾರ ಸಾಮರ್ಥ್ಯದೊಂದಿಗೆ ವ್ಯಾಪಾರ ಮತ್ತು ಪ್ರವಾಸೋದ್ಯಮ ವಲಯಗಳ ಉತ್ತೇಜನಕ್ಕೆ ಹೊಸ ಅವಕಾಶಗಳು ಲಭ್ಯವಾಗಲಿವೆ’’ಎಂದರು. ಕಳೆದ 58 ದಿನಗಳಲ್ಲಿ ಮಧ್ಯಪ್ರದೇಶವು 58 ಹೊಸ ವಿಮಾನಗಳನ್ನು ಪಡೆದುಕೊಂಡಿದೆ ಮತ್ತು ಇದರಿಂದಾಗಿ ರಾಜ್ಯದಲ್ಲಿ 314 ಹೊಸ ವಿಮಾನ ಸಂಚಾರದೊಂದಿಗೆ ಒಟ್ಟು ವಿಮಾನಯಾನ ಚಾಲನೆ ಸಂಖ್ಯೆ 424ರಿಂದ 738ಕ್ಕೆ ಏರಿಕೆಯಾಗಿದೆ ಎಂದು ಸಿಂಧಿಯಾ ತಿಳಿಸಿದರು. ಇಂದೋರ್ ಮೊದಲು ಕೇವಲ 8 ನಗರಗಳ ಜೊತೆ ಸಂಪರ್ಕ ಹೊಂದಿತ್ತು, ಇದೀಗ ಅದು 13 ನಗರಗಳೊಂದಿಗೆ ಸಂಪರ್ಕ ಹೊಂದಿದೆ. ಅಂತೆಯೇ ಗ್ವಾಲಿಯರ್ ಸಂಪರ್ಕ 4 ನಗರಗಳಿಂದ 6 ನಗರಗಳಿಗೆ ಏರಿಕೆಯಾಗಿದೆ.

ಗ್ವಾಲಿಯರ್ ಸುಂದರವಾದ ಕೋಟೆಗಳು, ದೇವಾಲಯಗಳು, ಸಮಾಧಿಗಳು, ಮ್ಯೂಸಿಯಂ ಮತ್ತು ಅರಮನೆಗಳಿಗೆ ಹೆಸರುವಾಸಿಯಾಗಿದೆ. ಅವುಗಳನ್ನು ತಲುಪುವುದು ಸುಲಭವಾಗಿರುವುದರಿಂದ ಪ್ರದೇಶದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರಕುವುದಲ್ಲದೆ, ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆ ವೃದ್ಧಿಗೂ ಸಹಕಾರಿಯಾಗಲಿದೆ.

ಏರ್ ಇಂಡಿಯಾ ಬಳಗ ಸದ್ಯ ಭೂಪಾಲ್, ಇಂದೋರ್, ಜಬಲ್ ಪುರ ಮತ್ತು ಬಿಲಾಸ್ ಪುರನಿಂದ ಭಾರತದ ಹಲವು ಸ್ಥಳಗಳಿಗೆ ವಿಮಾನಯಾನ ಸಂಚಾರ ಕಾರ್ಯಾಚರಣೆ ನಡೆಸುತ್ತಿದೆ. ಅಂತಾರಾಷ್ಟ್ರೀಯ ಮಾರ್ಗದಲ್ಲಿ, ಏರ್ ಇಂಡಿಯಾ 2019ರಿಂದ ಇಂದೋರ್ ನಿಂದ ದುಬೈಗೆ ನೇರ ವಿಮಾನಯಾನ ಸಂಚಾರ ಆರಂಭಿಸಿದೆ, ಇದು ತಡೆರಹಿತ ಸಂಪರ್ಕದೊಂದಿಗೆ ಇದೀಗ ಪುನಾರಂಭಗೊಳ್ಳುತ್ತಿದೆ.

ವಿಮಾನ ಸಂಚಾರದ ವೇಳಾಪಟ್ಟಿನ ಕೆಳಗಿನಂತಿದೆ.

ಇಂಡಿಗೋ ಗ್ವಾಲಿಯರ್-ದೆಹಲಿ-ಇಂದೋರ್

ವಿಮಾನ ಸಂಖ್ಯೆ

ಎಲ್ಲಿಂದ

ಎಲ್ಲಿಗೆ

ಅವಧಿ

ನಿರ್ಗಮನ ಸಮಯ

ಆಗಮನ ಸಮಯ

ಎಸಿಎಫ್ ಟಿ

ಯಾವಾಗ ಜಾರಿ

6E 7356

DEL

GWL

ಪ್ರತಿದಿನ

7:10

8:10

ATR

1-ಸೆ-21

6E 7358

GWL

IDR

ಪ್ರತಿದಿನ

8:30

10:00

1-ಸೆ.-21

6E 7359

IDR

GWL

ಪ್ರತಿದಿನ

10:20

12:00

1-ಸೆ.-21

6E 7357

GWL

DEL

ಪ್ರತಿದಿನ

12:20

13:30

1-ಸೆ-21

ಏರ್ ಇಂಡಿಯಾ ಇಂದೋರ್- ದುಬೈ ವಿಮಾನದ ವೇಳಾಪಟ್ಟಿ:

ವಿಮಾನ ಸಂಖ್ಯೆ

ಎಲ್ಲಿಂದ

ಎಲ್ಲಿಗೆ

ಅವಧಿ

ನಿರ್ಗಮನ ಸಮಯ

ಆಗಮನ ಸಮಯ

ಯಾವಾಗ ಜಾರಿ

ಎಐ0955

ಇಂದೋರ್

ದುಬೈ

ಬುಧವಾರ

12:35

15:05

1-ಸೆ.21

ಎಐ0956

ದುಬೈ

ದುಬೈ

ಬುಧವಾರ

16:05

20:55

1-ಸೆ-21

***


(Release ID: 1751084) Visitor Counter : 286