ಹಣಕಾಸು ಸಚಿವಾಲಯ
ಕೇಂದ್ರೀಯ ನೇರ ತೆರಿಗೆ ಮಂಡಳಿಯು ವಿವಾದ್ ಸೆ ವಿಶ್ವಾಸ್ ಕಾಯಿದೆಯ ಪರಿಚ್ಛೇದ 3 ರ ಅಡಿಯಲ್ಲಿ ಕೊನೆಯ ದಿನಾಂಕವನ್ನು ವಿಸ್ತರಿಸಿದೆ.
Posted On:
29 AUG 2021 2:13PM by PIB Bengaluru
ನೇರ ತೆರಿಗೆ ವಿವಾದ್ ಸೆ ವಿಶ್ವಾಸ್ ಕಾಯಿದೆ 2020 ರ ಅಡಿಯಲ್ಲಿ (ಇನ್ನು ಮುಂದೆ "ವಿವಾದ್ ಸೆ ವಿಶ್ವಾಸ್ ಕಾಯಿದೆ" ಎಂದು ಉಲ್ಲೇಖಿಸಲಾಗುತ್ತದೆ), ಘೋಷಿಸಿದವರು ಪಾವತಿಸಬೇಕಾದ ಮೊತ್ತವನ್ನು ವಿವಾದ್ ಸೆ ವಿಶ್ವಾಸ್ ಕಾಯಿದೆಯ ಪರಿಚ್ಛೇದ 3 ರ 3 ರ ಅಡಿಯಲ್ಲಿರುವ ಪಟ್ಟಿಯಲ್ಲಿ ತಿಳಿಸಲಾಗಿದೆ.
25 ನೇ ಜೂನ್ 2021 ರ ಇತ್ತೀಚಿನ ಅಧಿಸೂಚನೆಯ ಪ್ರಕಾರ, ಮೊತ್ತದ ಪಾವತಿಯ ಕೊನೆಯ ದಿನಾಂಕವನ್ನು (ಯಾವುದೇ ಹೆಚ್ಚುವರಿ ಮೊತ್ತವಿಲ್ಲದೆ) 31 ನೇ ಆಗಸ್ಟ್ 2021 ಎಂದು ಸೂಚಿಸಲಾಗಿದೆ. ವಿವಾದ್ ಸೆ ವಿಶ್ವಾಸ್ ಕಾಯ್ದೆ ಅಡಿಯಲ್ಲಿ ಈ ಮೊತ್ತವನ್ನು (ಹೆಚ್ಚುವರಿ ಮೊತ್ತದೊಂದಿಗೆ) ಪಾವತಿಸಲು ಕೊನೆಯ ದಿನಾಂಕ 31 ನೇ ಅಕ್ಟೋಬರ್, 2021 ಎಂದು ತಿಳಿಸಲಾಗಿದೆ.
ವಿವಾದ್ ಸೆ ವಿಶ್ವಾಸ್ ಕಾಯ್ದೆ ಅಡಿಯಲ್ಲಿ ಘೋಷಣೆಯಿಂದ ಪಾವತಿ ಮಾಡಲು ಪೂರ್ವಾಪೇಕ್ಷಿತವಾದ ನಮೂನೆ ಸಂಖ್ಯೆ 3 ರ ವಿತರಣೆಯಲ್ಲಿ ಮತ್ತು ತಿದ್ದುಪಡಿಯಲ್ಲಿ ಎದುರಿಸುತ್ತಿರುವ ತೊಂದರೆಗಳನ್ನು ಪರಿಗಣಿಸಿ, ಮೊತ್ತವನ್ನು (ಯಾವುದೇ ಹೆಚ್ಚುವರಿ ಮೊತ್ತವಿಲ್ಲದೆ) ಪಾವತಿಸುವ ಕೊನೆಯ ದಿನಾಂಕವನ್ನು 30 ನೇ ಸೆಪ್ಟೆಂಬರ್, 2021ಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದೆ. ಈ ಕುರಿತು ಅಗತ್ಯ ಅಧಿಸೂಚನೆಯನ್ನು ಶೀಘ್ರದಲ್ಲಿಯೇ ನೀಡಲಾಗುವುದು.
ವಿವಾದ್ ಸೆ ವಿಶ್ವಾಸ್ ಕಾಯ್ದೆ ಅಡಿಯಲ್ಲಿ (ಹೆಚ್ಚುವರಿ ಮೊತ್ತದೊಂದಿಗೆ) ಮೊತ್ತವನ್ನು ಪಾವತಿಸಲು ಇರುವ ಕೊನೆಯ ದಿನಾಂಕ 31 ನೇ ಅಕ್ಟೋಬರ್, 2021 ಅನ್ನು ಬದಲಾಯಿಸುವ ಪ್ರಸ್ತಾಪವಿಲ್ಲ.
***
(Release ID: 1750217)
Visitor Counter : 328