ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ 59 ಕೋಟಿ ಡೋಸ್ ದಾಟಿದ ಕೋವಿಡ್-19 ಲಸಿಕೆ ನೀಡಿಕೆ; ಹೊಸ ಮೈಲಿಗಲ್ಲು ಸ್ಥಾಪನೆ


ಕಳೆದ 24 ತಾಸುಗಳಲ್ಲಿ 61 ಲಕ್ಷ ಡೋಸ್ ಗಿಂತ ಹೆಚ್ಚಿನ ಲಸಿಕೆ ನೀಡಿಕೆ

ಚೇತರಿಕೆ ದರ ಪ್ರಸ್ತುತ 97.67%ಗೆ ಸುಧಾರಣೆ

ಕಳೆದ 24 ತಾಸುಗಳಲ್ಲಿ 37,593 ಹೊಸ ಕೊರೊನಾ ಪ್ರಕರಣಗಳು ಪತ್ತೆ

ಸಕ್ರಿಯ ಪ್ರಕರಣಗಳ ಸಂಖ್ಯೆ 3,22,327ಕ್ಕೆ ಇಳಿಕೆ; ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 0.99%ಗೆ ಇಳಿಕೆ

ದೈನಂದಿನ ಪಾಸಿಟಿವಿಟಿ ದರ 2.10%ಗೆ ಇಳಿಕೆ; ಸತತ 30 ದಿನಗಳಿಂದ 3% ಮಟ್ಟದಿಂದ ಕೆಳಗೆ

Posted On: 25 AUG 2021 9:46AM by PIB Bengaluru

ಭಾರತದಲ್ಲಿ ನಡೆಯುತ್ತಿರುವ ಬೃಹತ್ ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಾಗಿದ್ದು, ನಿನ್ನೆಗೆ ಅನ್ವಯವಾಗುವಂತೆ ಲಸಿಕೆ ನೀಡಿಕೆಯ ಪ್ರಮಾಣ 59 ಕೋಟಿ ಡೋಸ್ ದಾಟಿದೆ. ಕಳೆದ 24 ತಾಸುಗಳಲ್ಲಿ 61,90,930 ಡೋಸ್ ಲಸಿಕೆ ನೀಡಲಾಗಿದೆ. ಇಂದು ಬೆಳಗ್ಗೆ 7 ಗಂಟೆಗೆ ಪ್ರಕಟವಾಗಿರುವ ತಾತ್ಕಾಲಿಕ ವರದಿ ಪ್ರಕಾರ, ದೇಶಾದ್ಯಂತ ಇಲ್ಲಿಯ ತನಕ 65,52,748 ಆಂದೋಲನಗಳ ಮೂಲಕ 59.55 ಕೋಟಿಗಿಂತ ಹೆಚ್ಚಿನ ಅಂದರೆ 59,55,04,593 ಡೋಸ್ ಲಸಿಕೆ ಹಾಕಲಾಗಿದೆ.

ಇಂದು ಬೆಳಗ್ಗೆ 8 ಗಂಟೆಗೆ ಲಭ್ಯವಾಗಿರುವ ತಾತ್ಕಾಲಿಕ ವರದಿಯ ಪ್ರಕಾರ, ಈ ಕೆಳಗಿನ ಗುಂಪುಗಳು ಇದರಲ್ಲಿ ಸೇರಿವೆ:

ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು

ಮೊದಲ ಡೋಸ್

1,03,54,325

2ನೇ ಡೋಸ್

82,50,871

ಮುಂಚೂಣಿ ಕಾರ್ಯಕರ್ತರು

ಮೊದಲ ಡೋಸ್

1,83,09,553

2ನೇ ಡೋಸ್

1,27,11,166

18-44 ವಯೋಮಾನದವರು

ಮೊದಲ ಡೋಸ್

22,37,85,210

2ನೇ ಡೋಸ್

2,11,94,373

45-59 ವಯೋಮಾನದವರು

ಮೊದಲ ಡೋಸ್

12,43,11,158

2ನೇ ಡೋಸ್

4,99,65,293

60 ವರ್ಷ ದಾಟಿದವರು

ಮೊದಲ ಡೋಸ್

8,40,42,537

2ನೇ ಡೋಸ್

4,25,80,107

ಒಟ್ಟು

59,55,04,593

ದೇಶಾದ್ಯಂತ ನಡೆಯುತ್ತಿರುವ ಕೋವಿಡ್-19 ಬೃಹತ್ ಲಸಿಕೆ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಕಾರ್ಯಕ್ರಮದ ಗತಿಗೆ ವೇಗ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ.

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 34,169 ರೋಗಿಗಳು ಗುಣಮುಖರಾಗಿದ್ದು, ಇದರೊಂದಿಗೆ ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ ಒಟ್ಟು 3,17,54,281 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ.

ಇದರ ಪರಿಣಾಮವಾಗಿ, ಭಾರತದ ಚೇತರಿಕೆ ದರವೀಗ 97.67%ಗೆ ಸುಧಾರಣೆ ಕಂಡಿದೆ.

https://static.pib.gov.in/WriteReadData/userfiles/image/image001EVS0.jpg

ಕೇಂದ್ರ ಸರ್ಕಾರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸರಕಾರಗಳ ಸುಸ್ಥಿರ ಮತ್ತು ಜಂಟಿ ಸಹಭಾಗಿತ್ವದ ಪ್ರಯತ್ನಗಳ ಫಲವಾಗಿ, ದೈನಂದಿನ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ ಸತತ 59 ದಿನಗಳಿಂದ 50,000 ಮಟ್ಟದಿಂದ ಕೆಳಗೆ ಮುಂದುವರಿಯುತ್ತಿದೆ.

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 37,593 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

https://static.pib.gov.in/WriteReadData/userfiles/image/image002GN4G.jpg

ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರಸ್ತುತ 3,22,327ಕ್ಕೆ ಇಳಿಕೆ ಕಂಡಿದೆ. ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1% ಮಟ್ಟದಿಂದ ಕೆಳಗಿದ್ದು, ಅದೀಗ 0.99%ಗೆ ಇಳಿಕೆ ಕಂಡಿದೆ.

https://static.pib.gov.in/WriteReadData/userfiles/image/image003IZ2R.jpg

ದೇಶಾದ್ಯಂತ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದ್ದು, ಕಳೆದ 24 ತಾಸುಗಳಲ್ಲೇ 17,92,755 ಪರೀಕ್ಷೆಗಳನ್ನು ನಡೆಸಲಾಗಿದೆ. ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ 51.11 ಕೋಟಿಗಿಂತ ಹಚ್ಚಿನ ಅಂದರೆ 51,11,84,547 ಪರೀಕ್ಷೆಗಳನ್ನು ನಡೆಸಲಾಗಿದೆ.

ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿರುವ ಪರಿಣಾಮ, ವಾರದ ಪಾಸಿಟಿವಿಟಿ ದರ ಇದೀಗ 1.92%ಗೆ ಇಳಿಕೆ ಕಂಡಿದೆ. ಸತತ 61 ದಿನಗಳಿಂದ 3% ಮಟ್ಟದಿಂದ ಕೆಳಗಿದೆ. ದೈನಂದಿನ ಪಾಸಿಟಿವಿಟಿ ದರ ಪ್ರಸ್ತುತ 2.10%ಗೆ ಇಳಿಕೆ ಕಂಡಿದೆ. ಸತತ 30 ದಿನಗಳಿಂದ ಅದು 3% ಮಟ್ಟದಿಂದ ಕೆಳಗಿದ್ದು, ನಿರಂತರ 79 ದಿನಗಳಿಂದ 5% ಮಟ್ಟದ ಕೆಳಗೆ ಮುಂದುವರಿದಿದೆ.

https://static.pib.gov.in/WriteReadData/userfiles/image/image004WI9J.jpg

***



(Release ID: 1748818) Visitor Counter : 188