ನೀತಿ ಆಯೋಗ
ನೀತಿ ಆಯೋಗ (NITI) ಮತ್ತು ನೀತಿ ಆಯೋಗ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯವು ಈಶಾನ್ಯ ಪ್ರದೇಶ ಜಿಲ್ಲಾ ಎಸ್ ಡಿ ಜಿ ಸೂಚ್ಯಂಕ ಮತ್ತು ಡ್ಯಾಶ್‌ಬೋರ್ಡ್, 2021-22 ರ ಮೊದಲ ಆವೃತ್ತಿಯನ್ನು 26 ನೇ ಆಗಸ್ಟ್ 2021 ರಂದು ಬಿಡುಗಡೆ ಮಾಡಲಿದೆ
Posted On:
24 AUG 2021 1:21PM by PIB Bengaluru
ನೀತಿ ಆಯೋಗ ಮತ್ತು ಈಶಾನ್ಯ ಪ್ರದೇಶದ ಅಭಿವೃದ್ಧಿ ಸಚಿವಾಲಯವು ಈಶಾನ್ಯ ಪ್ರದೇಶ (NER) ಜಿಲ್ಲಾ ಎಸ್ ಡಿ ಜಿ ಸೂಚ್ಯಂಕ ವರದಿ ಮತ್ತು ಡ್ಯಾಶ್‌ಬೋರ್ಡ್ 2021–22 ರ ಮೊದಲ ಆವೃತ್ತಿಯನ್ನು 26 ಆಗಸ್ಟ್ 2021 ರಂದು ಆರಂಭಿಸಲಿದೆ. ಈ ಉದ್ಘಾಟನಾ ಆವೃತ್ತಿಯು ದೇಶದಲ್ಲಿ ಈ ರೀತಿಯ ಪ್ರಾದೇಶಿಕ ಜಿಲ್ಲಾ ಎಸ್‌ಡಿಜಿ ಸೂಚ್ಯಂಕದಲ್ಲಿಯೇ ಮೊದಲನೆಯದಾಗಿದ್ದು, 8 ರಾಜ್ಯಗಳಾದ ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರಾದ 120 ಜಿಲ್ಲೆಗಳಲ್ಲಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್ ಡಿಜಿ) ಸ್ಥಳೀಕರಿಸುವ ಪ್ರಯತ್ನದಲ್ಲಿ ಒಂದು ಮೈಲಿಗಲ್ಲಾಗಿದೆ. ನೀತಿ ಆಯೋಗದ ಉಪಾಧ್ಯಕ್ಷರಾದ ಡಾ ರಾಜೀವ್ ಕುಮಾರ್, , ಡೊನೆರ್, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವರಾದ ಶ್ರೀ ಜಿ. ಕಿಶನ್ ರೆಡ್ಡಿ ಮತ್ತು ಡೊನೆರ್ ಮತ್ತು ಸಹಕಾರದ ರಾಜ್ಯ ಮಂತ್ರಿ ಶ್ರೀ ಬಿ ಎಲ್ ವರ್ಮಾ ಅವರು ಸೂಚ್ಯಂಕ ಮತ್ತು ಡ್ಯಾಶ್‌ಬೋರ್ಡ್ ಅನ್ನು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಶ್ರೀ ಅಮಿತಾಬ್ ಕಾಂತ್; ಡಾ ಇಂದರ್ ಜಿತ್ ಸಿಂಗ್, ಡೊನೆರ್ ಸಚಿವಾಲಯದ ಕಾರ್ಯದರ್ಶಿ ಮತ್ತು ಶ್ರೀಮತಿ ನಾಡಿಯಾ ರಶೀದ್, ಪ್ರತಿನಿಧಿ, ಯು ಎನ್ ಡಿ ಪಿ ಇಂಡಿಯಾ ಇವರುಗಳ ಸಮ್ಮುಖದಲ್ಲಿ ಬಿಡುಗಡೆ ಮಾಡುವರು. ಎನ್ಇಆರ್ ಜಿಲ್ಲಾ ಎಸ್‌ಡಿಜಿ ಸೂಚ್ಯಂಕ ಮತ್ತು ಡ್ಯಾಶ್‌ಬೋರ್ಡ್ ಯುಎನ್‌ಡಿಪಿಯಿಂದ ತಾಂತ್ರಿಕ ಬೆಂಬಲದೊಂದಿಗೆ ನೀತಿ ಆಯೋಗ ಮತ್ತು ಡೊನೆರ್ ಸಚಿವಾಲಯದ ಸಹಯೋಗದ ಪ್ರಯತ್ನವಾಗಿದೆ. ಇದು ಎಸ್‌ಡಿಜಿಗಳಲ್ಲಿ ಈಶಾನ್ಯ ಪ್ರದೇಶದ ಎಂಟು ರಾಜ್ಯಗಳ ಜಿಲ್ಲೆಗಳ ಕಾರ್ಯಕ್ಷಮತೆಯನ್ನು ಮತ್ತು ಅವುಗಳ ಅನುಗುಣವಾದ ಗುರಿಗಳನ್ನು ಮತ್ತು ಅದರ ಆಧಾರದ ಮೇಲೆ ಜಿಲ್ಲೆಗಳನ್ನು ಶ್ರೇಣೀಕರಿಸುತ್ತದೆ. ಸೂಚ್ಯಂಕವು ನೀತಿ ಆಯೋಗದ SDG ಇಂಡಿಯಾ ಸೂಚ್ಯಂಕವನ್ನು ಆಧರಿಸಿದೆ - ರಾಷ್ಟ್ರೀಯ ಮತ್ತು ರಾಜ್ಯ/ ಕೇಂದ್ರಾಡಳಿತ ಮಟ್ಟದಲ್ಲಿ ಎಸ್‌ಡಿಜಿ ಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡಲು ಪ್ರಧಾನ ಮತ್ತು ಅಧಿಕೃತ ಸಾಧನವಾಗಿದೆ ಮತ್ತು ಜಿಲ್ಲೆಗಳ ನಡುವೆ ಪೈಪೋಟಿಯನ್ನು ಉತ್ತೇಜಿಸಲು ಎಸ್‌ಡಿಜಿ ಗಳ ಬೆಂಚ್‌ಮಾರ್ಕಿಂಗ್ ಕಾರ್ಯಕ್ಷಮತೆ ಮತ್ತು ಶ್ರೇಯಾಂಕದ ಸಾಮಾನ್ಯ ತತ್ವಗಳನ್ನು ಹಂಚಿಕೊಳ್ಳುತ್ತದೆ .
ಈಶಾನ್ಯ ಪ್ರದೇಶ (NER) ಜಿಲ್ಲಾ ಎಸ್ ಡಿ ಜಿ ಸೂಚ್ಯಂಕ ಮತ್ತು ಡ್ಯಾಶ್‌ಬೋರ್ಡ್ 2021-22: ಒಂದು ಸಂಕ್ಷಿಪ್ತ ಪರಿಚಯ
ಈಶಾನ್ಯ ಪ್ರದೇಶ ಜಿಲ್ಲಾ ಎಸ್‌ಡಿಜಿ ಸೂಚ್ಯಂಕ ಮತ್ತು ಡ್ಯಾಶ್‌ಬೋರ್ಡ್: ಆರಂಭಿಕ ವರದಿ 2021-22 ಅನ್ನು ಭಾರತದಲ್ಲಿ ಎಸ್‌ಡಿಜಿಗಳ ನೋಡಲ್ ಏಜೆನ್ಸಿಯಾದ ನೀತಿ (ಎನ್ಐಟಿಐ) ಆಯೋಗ ನಿರ್ಮಿಸಿದೆ. ಇದರಲ್ಲಿ 50 ಗುರಿಗಳಲ್ಲಿ 15 ಜಾಗತಿಕ ಗುರಿಗಳನ್ನು ಒಳಗೊಂಡ 84 ಸೂಚಕಗಳನ್ನು ಬಳಸಲಾಗಿದೆ. ಸೂಚ್ಯಂಕದ ನಿರ್ಮಾಣ ಮತ್ತು ನಂತರದ ವಿಧಾನವು ಎಸ್‌ಡಿಜಿ ಗಳಲ್ಲಿ ಜಿಲ್ಲೆಗಳ ಕಾರ್ಯಕ್ಷಮತೆಯನ್ನು ಅಳೆಯುವ ಮತ್ತು ಅವುಗಳನ್ನು ಶ್ರೇಣೀಕರಿಸುವುದು, ಹೆಚ್ಚಿನ ಗಮನ ಅಗತ್ಯವಿರುವ ಪ್ರದೇಶಗಳನ್ನು ಗುರುತಿಸುವಲ್ಲಿ ರಾಜ್ಯಗಳನ್ನು ಬೆಂಬಲಿಸುವುದು; ಮತ್ತು ಅವರ ನಡುವೆ ಆರೋಗ್ಯಕರ ಪೈಪೋಟಿಯನ್ನು ಉತ್ತೇಜಿಸುವುದು ಇಂತಹ ಮುಖ್ಯ ಉದ್ದೇಶಗಳನ್ನು ಒಳಗೊಂಡಿದೆ. ಈಶಾನ್ಯ ಜಿಲ್ಲಾ ಎಸ್ ಡಿ ಜಿ ಸೂಚ್ಯಂಕ ಮತ್ತು ಡ್ಯಾಶ್‌ಬೋರ್ಡ್‌ನ ಸೂಚಕಗಳ ಆಯ್ಕೆ ಮತ್ತು ಲೆಕ್ಕಾಚಾರದ ವಿಧಾನಕ್ಕೆ ಸಂಬಂಧಿಸಿದ ಎಲ್ಲಾ ಅಂಶಗಳು ಈ ಪ್ರದೇಶದ ಎಲ್ಲಾ ಎಂಟು ರಾಜ್ಯಗಳೊಂದಿಗೆ ವ್ಯಾಪಕ ಸಮಾಲೋಚನೆಯನ್ನು ಅನುಸರಿಸಿವೆ. ಸ್ಥಳೀಯ ಒಳನೋಟಗಳು ಮತ್ತು ಕ್ಷೇತ್ರದ ಅನುಭವದೊಂದಿಗೆ ಪ್ರತಿಕ್ರಿಯೆಯ ಪ್ರಕ್ರಿಯೆಯನ್ನು ಸಮೃದ್ಧಗೊಳಿಸುವ ಮೂಲಕ ಸೂಚ್ಯಂಕವನ್ನು ರೂಪಿಸುವಲ್ಲಿ ರಾಜ್ಯಗಳು ನಿರ್ಣಾಯಕ ಪಾತ್ರವನ್ನು ವಹಿಸಿವೆ.
ಸೂಚ್ಯಂಕವು ನಿರ್ಣಾಯಕ ಅಂತರವನ್ನು ಗುರುತಿಸಲು ಮತ್ತು ಈ ಪ್ರದೇಶದಲ್ಲಿ ಎಸ್‌ಡಿಜಿಗಳನ್ನು ಸಾಧಿಸುವ ಪ್ರಗತಿಯನ್ನು ತೀವ್ರಗೊಳಿಸಲು ಮತ್ತು ಮಧ್ಯಸ್ಥಿಕೆಗಳನ್ನು ತಿಳಿಸಲು ಸಹಾಯ ಮಾಡುತ್ತದೆ ಹಾಗು ಆರೋಗ್ಯ, ಶಿಕ್ಷಣ, ಲಿಂಗ, ಸಂಸ್ಥೆಗಳು, ಹವಾಮಾನ ಬದಲಾವಣೆ ಮತ್ತು ಪರಿಸರ, ಆರ್ಥಿಕ ಬೆಳವಣಿಗೆಯ ವಿಸ್ತಾರವಾದ ಜಾಗತಿಕ ಗುರಿಗಳ ಜಿಲ್ಲೆಗಳ ಪ್ರಗತಿಯನ್ನು ಅಳೆಯಲು ಸಿದ್ಧ ಸೂತ್ರವಾಗಿಕಾರ್ಯನಿರ್ವಹಿಸುತ್ತದೆ.
ಈಶಾನ್ಯ ಪ್ರದೇಶ ಜಿಲ್ಲಾ ಎಸ್‌ಡಿಜಿ ಸೂಚ್ಯಂಕವು ‘ಜಾಗತಿಕದಿಂದ ರಾಷ್ಟ್ರದಿಂದ ಸ್ಥಳೀಯವಾಗಿ’ ಎಸ್ಡಿಜಿಯನ್ನು ಸ್ಥಳೀಕರಿಸುವ ನೀತಿ ಆಯೋಗದ ಪ್ರಯತ್ನಗಳಲ್ಲಿ ಮತ್ತೊಂದು ಮೈಲಿಗಲ್ಲಾಗಿದೆ.
***
(Release ID: 1748530)
Visitor Counter : 365