ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಇಂದಿನ ಪರಿಷ್ಕೃತ ವರದಿ
Posted On:
24 AUG 2021 9:08AM by PIB Bengaluru
ದೇಶಾದ್ಯಂತ ನಡೆಯುತ್ತಿರುವ ಬೃಹತ್ ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಇದುವರೆಗೆ 58.89 ಕೋಟಿ ಡೋಸ್ ಲಸಿಕೆ ಹಾಕಲಾಗಿದೆ.
ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 25,467 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 3,19,551ಕ್ಕೆ ಇಳಿಕೆ ಕಂಡಿದ್ದು, ಕಳೆದ 156 ದಿನಗಳಲ್ಲೇ ಅತ್ಯಂತ ಕನಿಷ್ಠ ಸಂಖ್ಯೆ ಇದಾಗಿದೆ.
ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳ ಪೈಕಿ ಸಕ್ರಿಯ ಪ್ರಕರಣಗಳ ಪ್ರಮಾಣ 1%ಗಿಂತ ಕಡಿಮೆ ಇದೆ. 2020 ಮಾರ್ಚ್ ನಿಂದ ಅತ್ಯಂತ ಕನಿಷ್ಠ ಪ್ರಮಾಣ ಇದಾಗಿದೆ.
ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 39,486 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿದ್ದಾರೆ, ದೇಶದಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ ಒಟ್ಟು 3,17,20,112 ಜನರು ಗುಣಮುಖರಾಗಿದ್ದಾರೆ.
ಇದರೊಂದಿಗೆ ಚೇತರಿಕೆ ದರ ಇದೀಗ 97.68%ಗೆ ಸುಧಾರಣೆ ಕಂಡಿದೆ. 2020 ಮಾರ್ಚ್ ನಿಂದ ಆಗಿರುವ ಗರಿಷ್ಠ ಸುಧಾರಣೆ ಇದಾಗಿದೆ.
ವಾರದ ಪಾಸಿಟಿವಿಟಿ ದರ 1.90%ಗೆ ಇಳಿಕೆ ಕಂಡಿದ್ದು, ಸತತ 60 ದಿನಗಳಿಂದ 3% ಮಟ್ಟದ ಕೆಳಗಿದೆ.
ದೈನಂದಿನ ಪಾಸಿಟಿವಿಟಿ ದರ 1.55%ಗೆ ಕುಸಿದಿದ್ದು, ಸತತ 29 ದಿನಗಳಿಂದ 3% ಮಟ್ಟದಿಂದ ಕೆಳಗಿದೆ.
ಇದುವರೆಗೆ ದೇಶಾದ್ಯಂತ 50.93 ಕೋಟಿ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷೆ ನಡೆಸಲಾಗಿದೆ.
***
(Release ID: 1748477)
Visitor Counter : 246
Read this release in:
English
,
Urdu
,
Marathi
,
Hindi
,
Manipuri
,
Bengali
,
Punjabi
,
Gujarati
,
Odia
,
Tamil
,
Telugu
,
Malayalam