ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಎನ್‌ ಇ ಪಿ ಅನುಷ್ಠಾನದ ಒಂದು ವರ್ಷದ ಸಾಧನೆಗಳ ಕಿರುಪುಸ್ತಕ ಬಿಡುಗಡೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ 2020 (ಎನ್‌ ಇ ಪಿ 2020) ರ ಕೆಲವು ಪ್ರಮುಖ ಉಪಕ್ರಮಗಳಿಗೆ ಚಾಲನೆ ನೀಡಿದರು


Posted On: 23 AUG 2021 4:39PM by PIB Bengaluru

ರಾಷ್ಟ್ರೀಯ ಶಿಕ್ಷಣ ನೀತಿ 2020 (ಎನ್‌ ಇ ಪಿ 2020) ಅನುಷ್ಠಾನದ ಒಂದು ವರ್ಷದ ನೆನಪಿಗಾಗಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ, ಶಿಕ್ಷಣ ಸಚಿವಾಲಯವು ಎನ್‌ ಇ ಪಿ ಅನುಷ್ಠಾನದ ಒಂದು ವರ್ಷದ ಸಾಧನೆಗಳ ಕುರಿತು ಒಂದು ಕಿರುಪುಸ್ತಕವನ್ನು ಸಿದ್ಧಪಡಿಸಿದೆ. ದೀಕ್ಷಾ ಮುಂತಾದ ಯೋಜನೆಗಳ ಬಗ್ಗೆ ಇರುವ ಈ ಕಿರುಪುಸ್ತಕವನ್ನು ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಧರ್ಮೇಂದ್ರ ಪ್ರಧಾನ್ ಅವರು ಆಗಸ್ಟ್ 24, 2021 ರಂದು ಬಿಡುಗಡೆ ಮಾಡುವರು.

ಕಿರುಪುಸ್ತಕದ ಜೊತೆಗೆ, ಕೆಲವು ಪ್ರಮುಖ (ಎನ್‌ ಇ ಪಿ 2020) ಉಪಕ್ರಮಗಳಿಗೂ ಶಿಕ್ಷಣ ಸಚಿವರು ಚಾಲನೆ ನೀಡುವರು. ಇವುಗಳಲ್ಲಿ: ದೀಕ್ಷಾ ಡಿಜಿಟಲ್‌ ಮೂಲಸೌಕರ್ಯಕ್ಕಾಗಿ ನಿಪುಣ್‌ ಭಾರತ್, ಎಫ್‌ ಎಲ್‌ ಎನ್‌ ಉಪಕರಣಗಳು ಮತ್ತು ಸಂಪನ್ಮೂಲಗಳು ಇವೆ, ಇದು ನಿಪುಣ್‌ ಭಾರತ್ ಅನ್ನು ಅನುಷ್ಠಾನಗೊಳಿಸಲು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಮತ್ತು ಶಿಕ್ಷಕರಿಗೆ ಸಹಾಯ ಮಾಡಲು ಮತ್ತು ಮಾರ್ಗದರ್ಶನ ಮಾಡಲು ದೀಕ್ಷಾ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಎಫ್‌ ಎಲ್‌ ಎನ್‌ ಸಂಪನ್ಮೂಲಗಳಿಗಾಗಿ ಇರುವ ಪ್ರತ್ಯೇಕ ವಿಭಾಗವಾಗಿದೆ; ವರ್ಚುವಲ್ ಲೈವ್ ತರಗತಿಗಳು ಮತ್ತು ವರ್ಚುವಲ್ ಪ್ರಯೋಗಾಲಯಗಳ ಮೂಲಕ ಸುಧಾರಿತ ಡಿಜಿಟಲ್ ಕಲಿಕಾ ವೇದಿಕೆಗಳನ್ನು ಒದಗಿಸಲು ವರ್ಚುವಲ್ ಸ್ಕೂಲ್ ಆಫ್ ಎನ್‌ ಐ ಒ ಎಸ್; ಎನ್‌ಸಿಇಆರ್‌ಟಿಯ ಪರ್ಯಾಯ ಶೈಕ್ಷಣಿಕ ಕ್ಯಾಲೆಂಡರ್ 2021-22 ಕಲಿಕಾ ಫಲಿತಾಂಶಗಳು, ವಿಷಯಗಳು ಮತ್ತು ಪಠ್ಯಪುಸ್ತಕದಿಂದ ತೆಗೆದ ಅಧ್ಯಾಯಗಳನ್ನು ಉಲ್ಲೇಖಿಸಿ ಆಸಕ್ತಿದಾಯಕ ಮತ್ತು ಸವಾಲಿನ ಚಟುವಟಿಕೆಗಳ ವಾರಗಳ ಯೋಜನೆಯನ್ನು ಒಳಗೊಂಡಿದೆ.

ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಡಾ ವೀರೇಂದ್ರ ಕುಮಾರ್ ಜೊತೆಗೆ ಕೇಂದ್ರ ಶಿಕ್ಷಣ ಸಚಿವರು, 'ಪ್ರಿಯಾ' ಎನ್ನುವ ಕಿರುಪುಸ್ತಕವನ್ನು ಬಿಡುಗಡೆ ಮಾಡಲಿರುವರು. ಈ ಕಿರುಪುಸ್ತಕವನ್ನು ವಿಶೇಷ ಚೇತನರ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ ಎನ್‌ಸಿಇಆರ್‌ಟಿ ಅಭಿವೃದ್ಧಿಪಡಿಸಿದ್ದು

ಇದು ಬೆಳವಣಿಗೆಯ ವರ್ಷಗಳಿಂದಲೇ ಅಂತರ್ಗತ ಶಿಕ್ಷಣ ದೊರಕಿಸುವತ್ತ ಮಕ್ಕಳಲ್ಲಿ ಪ್ರವೇಶಿಸುವಿಕೆಯ ಪರಿಕಲ್ಪನೆ ಮತ್ತು ಮಹತ್ವವನ್ನು ಬೇರೂರಿಸಲು ರಚಿಸಲಾಗಿದೆ.

ರಾಷ್ಟ್ರೀಯ ಶಿಕ್ಷಣ ನೀತಿ 2020 ಎಲ್ಲಾ ಹಂತಗಳಲ್ಲೂ ಸಂಪೂರ್ಣ ಶಿಕ್ಷಣ ವ್ಯವಸ್ಥೆಯಲ್ಲಿ ಗಣನೀಯ ಬದಲಾವಣೆಯನ್ನು ಕಲ್ಪಿಸಿದಂತೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಎನ್‌ ಇ ಪಿ 2020ರ ಅನುಷ್ಠಾನವನ್ನು ಒಂದು ನಿರ್ದಿಷ್ಟ ಯೋಜನೆಯಂತೆ ಪರಿಗಣಿಸಿದೆ ಮತ್ತು ಹೊಂದಿಕೊಳ್ಳುವ, ಸಂವಾದಾತ್ಮಕ, ಸೂಚಕ ಮತ್ತು ಎಲ್ಲವನ್ನೂ ಒಳಗೊಂಡ ಎನ್‌ ಇ ಪಿ ಅನುಷ್ಠಾನ ಸಾರ್ಥಕ್ (SARTHAQ) ಎಂಬ ಯೋಜನೆಯನ್ನು ಸಿದ್ಧಪಡಿಸಿದೆ. ಈ ಒಂದು ವರ್ಷದಲ್ಲಿ ಇಲಾಖೆಯು 62 ಪ್ರಮುಖ ಮೈಲಿಗಲ್ಲುಗಳನ್ನು ಸಾಧಿಸಿದ್ದು, ಇದು ಶಾಲಾ ಶಿಕ್ಷಣ ಕ್ಷೇತ್ರವನ್ನು ಪರಿವರ್ತಿಸುತ್ತದೆ. ಇವುಗಳಲ್ಲಿ : ನಿಪುಣ್‌ ಭಾರತ್ ಮಿಷನ್ ಆನ್ ಫೌಂಡೇಶನಲ್ ಲಿಟರಸಿ ಮತ್ತು ನ್ಯೂಮೆರಸಿ , ಎನ್‌ ಇ ಪಿ 2020 ರೊಂದಿಗೆ ಸಮಗ್ರ ಶಿಕ್ಷಾ ಯೋಜನೆಯನ್ನು ಜೋಡಿಸುವುದು, ವಿದ್ಯಾ ಪ್ರವೇಶ್- ಮೂರು ತಿಂಗಳ ಶಾಲಾ ತಯಾರಿಕೆ ಮಾಡ್ಯೂಲ್, ನ್ಯಾಷನಲ್ ಡಿಜಿಟಲ್ ಎಜುಕೇಶನ್ ಆರ್ಕಿಟೆಕ್ಚರ್ (NDEAR) ನ ನೀಲ ನಕ್ಷೆ, ನಿಷ್ಠಾ ಯೋಜನೆಯಡಿ ಪ್ರೌಢ ಶಿಕ್ಷಕರ ಸಾಮರ್ಥ್ಯ ನಿರ್ಮಾಣ, ಮೌಲ್ಯಮಾಪನ ಸುಧಾರಣೆಗಳು, ದೀಕ್ಷಾದಲ್ಲಿ ಡಿಜಿಟಲ್ ವಿಷಯಗಳು, ಇತ್ಯಾದಿ.

ಈ ಕಾರ್ಯಕ್ರಮದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸ್ವಾಯತ್ತ ಸಂಸ್ಥೆಗಳ ಮುಖ್ಯಸ್ಥರು ಮತ್ತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಶಾಲಾ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದಾರೆ, ಮತ್ತು ನಂತರ ನಿಪುಣ್(NIPUN) ಭಾರತ್ ಮಿಷನ್ ಗಾಗಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ‌ (SCERT)ಗಳೊಂದಿಗೆ ಕಾರ್ಯಾಗಾರ ನಡೆಯಲಿದೆ

***

 

 

 

 



(Release ID: 1748366) Visitor Counter : 155