ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
azadi ka amrit mahotsav

ಭಾರೀ ಯಶಸ್ಸು ಸಾಧಿಸಿದ ಹಾಲ್‌ಮಾರ್ಕಿಂಗ್ ಯೋಜನೆ, ಹಾಲ್‌ಮಾರ್ಕ್ ಪಡೆದ ಒಂದು ಕೋಟಿಗೂ ಹೆಚ್ಚು ಆಭರಣಗಳು


ಈಗಾಗಲೇ 90,000 ಕ್ಕೂ ಹೆಚ್ಚು ಆಭರಣ ವ್ಯಾಪಾರಿಗಳ ನೋಂದಾವಣೆ

ಪ್ರತಿ ದಿನ ಸುಮಾರು 4 ಲಕ್ಷ ಆಭರಣಗಳಿಗೆ ಹಾಲ್‌ಮಾರ್ಕ್

ಹೆಚ್ ಯು ಐ ಡಿ-ಆಧಾರಿತ ಹಾಲ್‌ಮಾರ್ಕಿಂಗ್ ನಿಂದ ಎಲ್ಲರಿಗೂ ಪ್ರಯೋಜನ, ಇದು ಉದ್ಯಮದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತರುತ್ತದೆ, ಗ್ರಾಹಕರು ತಮ್ಮ ಹಣಕ್ಕೆ ಸರಿಯಾದ ಆಭರಣ ಪಡೆಯುವ ಹಕ್ಕನ್ನು ಖಾತ್ರಿಪಡಿಸುತ್ತದೆ ಮತ್ತು ಇನ್ಸ್‌ಪೆಕ್ಟರ್ ರಾಜ್ ನಿಂದ ಮುಕ್ತಿ ನೀಡುತ್ತದೆ

ಯಾರು ಬೇಕಾದರೂ ಅಸ್ತಿತ್ವದಲ್ಲಿರುವ ಆಭರಣಗಳಿಗೆ ಹಾಲ್‌ಮಾರ್ಕ್ ಪಡೆಯಬಹುದು ಮತ್ತು ಅವರ ಚಿನ್ನ ಮತ್ತು ಉಳಿತಾಯದ ನೈಜ ಮೌಲ್ಯಮಾಪನವನ್ನು ತಿಳಿಯಬಹುದು

ಹಾಲ್‌ಮಾರ್ಕಿಂಗ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ, ಸರ್ಕಾರವು ಆಭರಣ ವ್ಯಾಪಾರಿಗಳ ಜೊತೆ ನಿರಂತರ ಮಾತುಕತೆ ನಡೆಸುತ್ತಿದೆ ಮತ್ತು ಯೋಜನೆಯ ಲಾಭವನ್ನು ಬಹುತೇಕ ಆಭರಣ ವ್ಯಾಪಾರಿಗಳು ಮೆಚ್ಚಿಕೊಂಡಿದ್ದಾರೆ

ಉದ್ಯಮದ ನೈಜ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಸಂಪೂರ್ಣ ಬದ್ಧವಾಗಿದೆ

Posted On: 21 AUG 2021 5:33PM by PIB Bengaluru

ಅತ್ಯಲ್ಪ ಅವಧಿಯಲ್ಲಿಯೇ 1 ಕೋಟಿಗೂ ಹೆಚ್ಚು ಆಭರಣಗಳಿಗೆ ಹಾಲ್‌ಮಾರ್ಕ್ ಹಾಕುವ ಮೂಲಕ ಹಾಲ್‌ಮಾರ್ಕಿಂಗ್ ಯೋಜನೆಯು ಭಾರೀ ಯಶಸ್ಸು ಗಳಿಸಿದೆ ಎಂದು ಬಿಐಎಸ್ ಮಹಾನಿರ್ದೇಶಕರು ಹೇಳಿದ್ದಾರೆ. ಭಾರತದಲ್ಲಿ ಹಾಲ್‌ಮಾರ್ಕಿಂಗ್‌ ಪ್ರಗತಿಯ ಬಗ್ಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದೇ ಸಮಯದಲ್ಲಿ 90,000 ಕ್ಕೂ ಹೆಚ್ಚು ಆಭರಣ ವ್ಯಾಪಾರಿಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು.

ಆಭರಣ ವ್ಯಾಪಾರಿಗಳ ಬೆಂಬಲ ಮತ್ತು ಸಹಕಾರದಿಂದಾಗಿ ಈ ಯೋಜನೆಯು ಭರ್ಜರಿ ಯಶಸ್ಸನ್ನು ಸಾಧಿಸಿದೆ ಎಂದು ಅವರು ಹೇಳಿದರು. ನೋಂದಾಯಿತ ಆಭರಣಕಾರರ ಸಂಖ್ಯೆ 91,603 ಕ್ಕೆ ಹೆಚ್ಚಾಗಿದೆ ಮತ್ತು ಹಾಲ್‌ಮಾರ್ಕಿಂಗ್‌ಗಾಗಿ 1 ಜುಲೈ, 2021 ರಿಂದ ಆಗಸ್ಟ್ 20 ರವರೆಗೆ ಒಂದು ಕೋಟಿ ಹದಿನೇಳು ಲಕ್ಷ ಆಭರಣಗಳನ್ನು ಸ್ವೀಕರಿಸಲಾಗಿದ್ದು, ಇವುಗಳಲ್ಲಿ ಒಂದು ಕೋಟಿ ಎರಡು ಲಕ್ಷ ಆಭರಣಗಳಿಗೆ ಹಾಲ್‌ಮಾರ್ಕ್ ಮಾಡಲಾಗಿದೆ. ವ್ಯಾಪಾರಿಗಳು ಹಾಲ್‌ಮಾರ್ಕಿಂಗ್‌ಗಾಗಿ ತಮ್ಮ ಆಭರಣಗಳನ್ನು ಕಳುಹಿಸಿದ ಸಂಖ್ಯೆಯು ಜುಲೈ 15 ರಿಂದ ಜುಲೈ 15 ರ ವರೆಗೆ 5145 ಇತ್ತು. ಆಗಸ್ಟ್ 1 ರಿಂದ ಆಗಸ್ಟ್ 15, 2021 ರವರೆಗೆ 14,349 ಕ್ಕೆ ಹೆಚ್ಚಾಗಿದೆ; ಮತ್ತು 861 ಎಎಚ್‌ಸಿಗಳು ಹೆಚ್ ಯು ಐ ಡಿ  ಆಧಾರಿತ ವ್ಯವಸ್ಥೆಯ ಪ್ರಕಾರ ಹಾಲ್‌ಮಾರ್ಕಿಂಗ್ ಅನ್ನು ಪ್ರಾರಂಭಿಸಿವೆ ಎಂದರು.

ಹಾಲ್‌ಮಾರ್ಕಿಂಗ್‌ನ ವೇಗದ ಕುರಿತು ಮಾತನಾಡಿದ ಬಿಐಎಸ್ ಮಹಾ ನಿರ್ದೇಶಕರು, ಹಾಲ್‌ಮಾರ್ಕಿಂಗ್‌ ವೇಗದಲ್ಲಿ ಕ್ರಮೇಣ ಮತ್ತು ತೃಪ್ತಿದಾಯಕ ಹೆಚ್ಚಳ ಕಂಡುಬಂದಿದೆ ಎಂದು ಹೇಳಿದರು. 2021 ರ ಜುಲೈ 1 ರಿಂದ ಜುಲೈ 15 ರವರೆಗಿನ ಹದಿನೈದು ದಿನಗಳಲ್ಲಿ 14.28 ಲಕ್ಷ ಆಭರಣಗಳಿಗೆ ಹಾಲ್‌ಮಾರ್ಕ್ ಮಾಡಲಾಗಿದೆ, ಆದರೆ ಈ ಸಂಖ್ಯೆ ಆಗಸ್ಟ್ 1 ರಿಂದ ಆಗಸ್ಟ್ 15 ರ ಅವಧಿಯಲ್ಲಿ 41.81 ಲಕ್ಷಕ್ಕೆ ಹೆಚ್ಚಾಗಿದೆ. 2021 ರ ಆಗಸ್ಟ್ 20 ರಂದು ಒಂದೇ ದಿನದಲ್ಲಿ 3 ಲಕ್ಷ 90 ಸಾವಿರ ಆಭರಣಗಳನ್ನು ಹಾಲ್‌ಮಾರ್ಕ್ ಮಾಡಲಾಗಿದೆ. ಒಂದು ವರ್ಷದಲ್ಲಿ 10 ಕೋಟಿ ಆಭರಣಗಳನ್ನು ಹಾಲ್‌ಮಾರ್ಕ್ ಮಾಡಲು ಯಾವುದೇ ಸಮಸ್ಯೆ ಇರುವುದಿಲ್ಲ. ಇದು ದೇಶಾದ್ಯಂತ ಹಾಲ್‌ಮಾರ್ಕಿಂಗ್ ಕಡ್ಡಾಯವಾದರೆ ಹಾಲ್‌ಮಾರ್ಕ್ ಮಾಡಲಾಗುವ ಅಂದಾಜು ಸಂಖ್ಯೆಯ ಆಭರಣಗಳಾಗಿವೆ ಎಂದರು.

256 ಜಿಲ್ಲೆಗಳಲ್ಲಿ ಅಸ್ತಿತ್ವದಲ್ಲಿರುವ ಎಎಚ್‌ಸಿ ಸಾಮರ್ಥ್ಯವು ಬೇಡಿಕೆಯನ್ನು ಪೂರೈಸಲು ಸಾಕಾಗುವುದಿಲ್ಲ ಎಂಬ ವಾದವನ್ನು ಬಿಐಎಸ್ ಮಹಾ ನಿರ್ದೇಶಕರು ತಳ್ಳಿ ಹಾಕಿದರು. ಆಗಸ್ಟ್ 1 ರಿಂದ 15 ಆಗಸ್ಟ್, 2021 ರ ಹದಿನೈದು ದಿನಗಳಲ್ಲಿ ಆಭರಣಗಳನ್ನು ಪಡೆದ 853 ಎಎಚ್‌ಸಿಗಳಲ್ಲಿ 161 ಮಾತ್ರ ದಿನಕ್ಕೆ 500 ಕ್ಕಿಂತ ಹೆಚ್ಚು ಆಭರಣ ತುಣುಕುಗಳನ್ನು ಪಡೆದಿವೆ ಮತ್ತು 300 ಕ್ಕೂ ಹೆಚ್ಚು ಎಎಚ್‌ಸಿಗಳು ದಿನಕ್ಕೆ 100 ಕ್ಕಿಂತ ಕಡಿಮೆ ತುಣುಕುಗಳನ್ನು ಪಡೆದುಕೊಂಡಿವೆ. ಆದ್ದರಿಂದ, ದೇಶದಲ್ಲಿ ಇನ್ನೂ ಸಾಕಷ್ಟು ಬಳಕೆಯಾಗದ ಸಾಮರ್ಥ್ಯವಿದೆ ಎಂದರು. ಎಎಚ್‌ಸಿಗಳ ಕಾರ್ಯನಿರ್ವಹಣೆಯನ್ನು ನಿಯಮಿತವಾಗಿ ಪರಿಶೀಲಿಸಲಾಗುತ್ತಿದೆ ಮತ್ತು ಅವರು ಫಿಫೊ ತತ್ವವನ್ನು ಅನುಸರಿಸುವಂತೆ ಸೂಚಿಸಲಾಗಿದೆ. ಎಎಚ್‌ಸಿಗಳ ವ್ಯಾಪ್ತಿಯನ್ನು ಹೆಚ್ಚಿಸಲು ಡಿಒಸಿಎಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಆಭರಣ ಉದ್ಯಮದ ಬೇಡಿಕೆಗಳ ಬಗ್ಗೆ ಸರ್ಕಾರವು ಮುಕ್ತವಾಗಿದ್ದು ಅವರ ನೈಜ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಿದೆ ಎಂದು ಅವರು ಹೇಳಿದರು. ಕಡ್ಡಾಯ ಹಾಲ್‌ಮಾರ್ಕಿಂಗ್ ಯೋಜನೆಯನ್ನು ಪ್ರಾರಂಭಿಸುವ ಮೊದಲು ಮಾನ್ಯ ಗ್ರಾಹಕರ ವ್ಯವಹಾರಗಳ ಸಚಿವರು ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿದರು ಮತ್ತು ಸಮಿತಿಯು ಮೂರು ಸಭೆಗಳನ್ನು ನಡೆಸಿತು. ಕಡ್ಡಾಯ ಹಾಲ್‌ಮಾರ್ಕಿಂಗ್ ಅನ್ನು ಪ್ರಾರಂಭಿಸಿದ ನಂತರ, ಕಡ್ಡಾಯ ಹಾಲ್‌ಮಾರ್ಕಿಂಗ್‌ನ ಸುಗಮ ಅನುಷ್ಠಾನಕ್ಕಾಗಿ ಶಿಫಾರಸು ಮಾಡಲಾದ ಕ್ರಮಗಳಿಗಾಗಿ ಸಲಹಾ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು ಆರು ಸಭೆಗಳನ್ನು ನಡೆಸಿತು ಮತ್ತು ಕೆಲವು ದಿನಗಳ ಹಿಂದೆ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಪಾಲುದಾರರೊಂದಿಗಿನ ಕೊನೆಯ ಸಭೆಯು 19 ಆಗಸ್ಟ್ 2021 ರಂದು ನಡೆಯಿತು, ಇದರಲ್ಲಿ ತಯಾರಕರು, ಸಗಟು ವ್ಯಾಪಾರಿಗಳು, ಚಿಲ್ಲರೆ ವ್ಯಾಪಾರಿಗಳು, ಗ್ರಾಹಕರ ಗುಂಪುಗಳು, ಎಎಚ್‌ಸಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಆದ್ದರಿಂದ ಆಭರಣ ಉದ್ಯಮದ ಕೆಲವು ವಿಭಾಗಗಳು ಕರೆ ನೀಡಿರುವ ಮುಷ್ಕರ ಅನಗತ್ಯವಾದುದು ಎಂದು ಅವರು ಹೇಳಿದರು. 19 ಆಗಸ್ಟ್ 2021 ರಂದು ಪಾಲುದಾರರ ಸಭೆಯಲ್ಲಿ, ಹಲವಾರು ಸಂಘಟನೆಗಳ ಪ್ರತಿನಿಧಿಗಳು ಮುಷ್ಕರವನ್ನು ಖಂಡಿಸಿದ್ದಾರೆ ಮತ್ತು ಹೆಚ್ ಯು ಐ ಡಿ ಆಧಾರಿತ ಹಾಲ್‌ಮಾರ್ಕಿಂಗ್ ಯೋಜನೆಗೆ ಸಂಪೂರ್ಣ ಬೆಂಬಲವನ್ನು ನೀಡಿದ್ದಾರೆ ಎಂದು ಅವರು ಹೇಳಿದರು.

ಆಭರಣ ಉದ್ಯಮದ ನಿಜವಾದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ತೆಗೆದುಕೊಂಡ ಕ್ರಮಗಳ ವಿವರಗಳನ್ನು ಬಿಐಎಸ್ ಮಹಾ ನಿರ್ದೇಶಕರು ಹಂಚಿಕೊಂಡರು.

  1. ಎಎಚ್‌ಸಿ ಹೊಂದಿರುವ 256 ಜಿಲ್ಲೆಗಳಲ್ಲಿ ಮಾತ್ರ ಹಾಲ್‌ಮಾರ್ಕಿಂಗ್ ಕಡ್ಡಾಯಗೊಳಿಸಲಾಗಿದೆ.
  2. ಆರಂಭದಲ್ಲಿ ಹೆಚ್ ಯು ಐ ಡಿ  ಯನ್ನು ಎಎಚ್‌ಸಿ ಮಟ್ಟಕ್ಕೆ ಸೀಮಿತಗೊಳಿಸಲಾಗಿದೆ. ಹೊಸ ವ್ಯವಸ್ಥೆಯು ಸಂಪೂರ್ಣವಾಗಿ ಸುವ್ಯವಸ್ಥೆಗೊಂಡ ನಂತರ ಆಭರಣಕಾರರು ಮತ್ತು ಗ್ರಾಹಕರ ಮಟ್ಟದಲ್ಲಿ ಅಳವಡಿಸಲಾಗುವುದು.
  • III. ನೋಂದಣಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ ಮತ್ತು ನೋಂದಣಿ ಶುಲ್ಕವನ್ನು ಮನ್ನಾ ಮಾಡಲಾಗಿದೆ.
  • IV. ಹಾಲ್‌ಮಾರ್ಕಿಂಗ್‌ಗೆ 20, 23 ಮತ್ತು 24 ಕ್ಯಾರೆಟ್ ಚಿನ್ನದ ಆಭರಣಗಳನ್ನು ಅನುಮತಿಸಲಾಗಿದೆ.
  1. ಭಾರತೀಯ ಮಾನದಂಡವನ್ನು ತಿದ್ದುಪಡಿ ಮಾಡಲಾಗಿದ್ದು, ಒಂದೇ ರೀತಿಯ ಶುದ್ಧತೆಯ ಸಣ್ಣ ಮಿಶ್ರಣಗಳಿಗೂ ಹಾಲ್‌ಮಾರ್ಕಿಂಗ್ ಅನ್ನು ಅನುಮತಿಸುತ್ತದೆ.
  • VI. ಎಎಚ್‌ಸಿ ಮಟ್ಟದಲ್ಲಿ ಆಭರಣಗಳನ್ನು ಹಸ್ತಾಂತರಿಸಲು ಸಾಫ್ಟ್‌ವೇರ್ ಸುಧಾರಿಸಲಾಗಿದೆ..
  1. ಪ್ರಧಾನ ಕಚೇರಿ ಮತ್ತು ಶಾಖಾ ಕಚೇರಿಗಳಲ್ಲಿ ಸಹಾಯ ಕೇಂದ್ರಗಳು ರಚಿಸಲಾಗಿದೆ ಮತ್ತು ಇದುವರೆಗೆ ನ300 ಜಾಗೃತಿ ಶಿಬಿರಗಳನ್ನು ಆಯೋಜಿಸಲಾಗಿದೆ.
  2. ಸಲಹಾ ಸಮಿತಿಯು ಹಾಲ್‌ಮಾರ್ಕಿಂಗ್‌ಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿವರವಾದ ಪರಿಶೀಲನೆ ನಡೆಸಿದ್ದು, ವರದಿಯನ್ನು ಡಿಒಸಿಎಗೆ ಸಲ್ಲಿಸಿದೆ.

ಬಿಐಎಸ್, ಆಭರಣಗಳ ಬಿ-ಟಿ-ಬಿ ಚಲನೆಯನ್ನು ಟ್ರ್ಯಾಕಿಂಗ್ ಮಾಡುತ್ತಿದೆ ಮತ್ತು ಆಭರಣ ವ್ಯಾಪಾರಿಗಳು ಬಿಐಎಸ್ ಪೋರ್ಟಲ್ ನಲ್ಲಿ ಮಾರಾಟದ ವಿವರಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ ಎಂಬುದು ಸಂಪೂರ್ಣ ತಪ್ಪು ಮಾಹಿತಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರಶ್ನೆಗಳಿಗೆ ಉತ್ತರಿಸಿದ ಬಿಐಎಸ್ ಮಹಾ ನಿರ್ದೇಶಕರು ಸ್ಪಷ್ಟಪಡಿಸಿದರು.  ಆಭರಣ ವ್ಯಾಪಾರಿಗಳು ಅಂತಹ ಯಾವುದೇ ವಿವರ ನೀಡಬೇಕಾದ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದರು.

ಈ ಯೋಜನೆಯು ಭರ್ಜರಿ ಯಶಸ್ಸನ್ನು ಸಾಧಿಸಿದೆ ಎಂದು ಅವರು ಒತ್ತಿ ಹೇಳಿದರು. ಒಂದು ಕೋಟಿಗೂ ಹೆಚ್ಚು ಆಭರಣಗಳನ್ನು ಹಾಲ್‌ಮಾರ್ಕ್ ಮಾಡಿದ ನಂತರ, ಯೋಜನೆಯನ್ನು ಮುಂದೂಡುವ ಅಥವಾ ಹಿಂತೆಗೆದುಕೊಳ್ಳುವ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ ಎಂದು ಅವರು ತಿಳಿಸಿದರು. ಹೆಚ್ ಯು ಐ ಡಿ- ಆಧಾರಿತ ಹಾಲ್‌ಮಾರ್ಕಿಂಗ್ ಪ್ರತಿಯೊಬ್ಬರಿಗೂ ಪ್ರಯೋಜನಕಾರಿಯಾಗಿದೆ ಎಂದು ಅವರು ಪುನರುಚ್ಚರಿಸಿದರು, ಏಕೆಂದರೆ ಇದು ಉದ್ಯಮದ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯನ್ನು ತರುತ್ತದೆ, ಗ್ರಾಹಕರು ತಮ್ಮ ಹಣಕ್ಕೆ ಸರಿಯಾದ ಆಭರಣವನ್ನು ಪಡೆಯುವ ಹಕ್ಕನ್ನು ಖಾತ್ರಿಪಡಿಸುತ್ತದೆ ಮತ್ತು ಇನ್ಸ್‌ಪೆಕ್ಟರ್ ರಾಜ್ ನಿಂದ ಮುಕ್ತಿ ನೀಡುತ್ತದೆ ಎಂದು ಹೇಳಿದರು.

ಈ ಯೋಜನೆಯ ಅನುಷ್ಠಾನದಲ್ಲಿ ಉದ್ಯಮದ ಸದಸ್ಯರು ತಮ್ಮ ಸಂಪೂರ್ಣ ಸಹಕಾರವನ್ನು ನೀಡಬೇಕು. ಉದ್ಯಮದ ನಿಜವಾದ ಬೇಡಿಕೆಗಳನ್ನು ಈಡೇರಿಸಲು ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿರುವುದರಿಂದ ಮುಷ್ಕರ ಮತ್ತು ಅಂತಹ ಚಟುವಟಿಕೆಗಳಿಂದ ದೂರವುಳಿಯಬೇಕು ಎಂದು ಅವರು ಮನವಿ ಮಾಡಿದರು.

***


(Release ID: 1747929) Visitor Counter : 371