ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ)
ಈಶಾನ್ಯ ಪ್ರಾದೇಶಿಕ ಕೃಷಿ ಮಾರುಕಟ್ಟೆ ನಿಗಮದ ಪುನರುಜ್ಜೀವಕ್ಕೆ ಸಂಪುಟದ ಅನುಮೋದನೆ
ರೂ.77.45 ಕೋಟಿ ಪುನಶ್ಚೇತನ ಪ್ಯಾಕೇಜ್ (ನಿಧಿ ಆಧಾರಿತ ಬೆಂಬಲಕ್ಕಾಗಿ ರೂ.17 ಕೋಟಿ ಮತ್ತು ನಿಧಿಯೇತರ ಬೆಂಬಲಕ್ಕಾಗಿ ರೂ.60.45 ಕೋಟಿ)
ಈ ಕ್ರಮವು ಈಶಾನ್ಯ ಪ್ರದೇಶದ ರೈತರಿಗೆ ಅವರ ಉತ್ಪನ್ನಗಳಿಗೆ ಲಾಭದಾಯಕ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ
ಸುಮಾರು 33,000 ಜನರಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಉದ್ಯೋಗ ದೊರಕುವುದು
Posted On:
18 AUG 2021 4:10PM by PIB Bengaluru
ಈಶಾನ್ಯ ಪ್ರಾದೇಶಿಕ ಅಭಿವೃದ್ಧಿ ಸಚಿವಾಲಯದ ಆಡಳಿತದ ನಿಯಂತ್ರಣದಲ್ಲಿರುವ ಕೇಂದ್ರ ಸಾರ್ವಜನಿಕ ವಿಭಾಗ ಉದ್ಯಮವಾದ ಈಶಾನ್ಯ ಪ್ರಾದೇಶಿಕ ಕೃಷಿ ಮಾರುಕಟ್ಟೆ ನಿಗಮ ನಿಯಮಿತ (ಎನ್ ಇ ಆರ್ ಎ ಎಮ್ ಎಸಿ)ಕ್ಕೆ ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು (ಸಿಸಿಇಎ) (ಸಿಸಿಇಎ) ರೂ.77.45 ಕೋಟಿ (ನಿಧಿ ಆಧಾರಿತ ಬೆಂಬಲಕ್ಕಾಗಿ ರೂ.17 ಕೋಟಿ ಮತ್ತು ನಿಧಿಯೇತರ ಬೆಂಬಲಕ್ಕಾಗಿ ರೂ.60.45 ಕೋಟಿ) ಪುನಶ್ಚೇತನ ಪ್ಯಾಕೇಜ್ ಅನ್ನು ಅನುಮೋದಿಸಿದೆ.,
ಪ್ರಯೋಜನಗಳು:
ಪುನಶ್ಚೇತನ ಪ್ಯಾಕೇಜ್ನ ಜಾರಿಯಿಂದಾಗಿ ಈಶಾನ್ಯ ಪ್ರದೇಶದ ರೈತರಿಗೆ ಅವರ ಉತ್ಪನ್ನಗಳ ಲಾಭದಾಯಕ ಬೆಲೆಯನ್ನು ಖಾತ್ರಿಪಡಿಸಲಾಗುತ್ತದೆ.
ಪುನಶ್ಚೇತನ ಪ್ಯಾಕೇಜ್ ಎನ್ ಇ ಆರ್ ಎ ಎಮ್ ಎ ಸಿ ಗೆ ವಿವಿಧ ವಿನೂತನ ಯೋಜನೆಗಳನ್ನು ಜಾರಿಗೆ ತರಲು ಸಹಾಯ ಮಾಡುತ್ತದೆ, ಅವುಗಳೆಂದರೆ ಉತ್ತಮ ಕೃಷಿ ಸೌಲಭ್ಯಗಳನ್ನು ಒದಗಿಸುವುದು, ರೈತರಿಗೆ ಕ್ಲಸ್ಟರ್‌ಗಳು, ಸಾವಯವ ಬೀಜಗಳು ಮತ್ತು ರಸಗೊಬ್ಬರ ತರಬೇತಿ, ವಿಶ್ವ ಮಾರುಕಟ್ಟೆಯಲ್ಲಿ ಈಶಾನ್ಯ ರೈತರ ಉತ್ಪನ್ನಗಳ ಪ್ರಚಾರಕ್ಕಾಗಿ ವಿಶ್ವದ ಸಮಾವೇಶಗಳಲ್ಲಿ ಭಾಗವಹಿಸುವಿಸುವುದಕ್ಕಾಗಿ ಕೊಯ್ಲಿನ ನಂತರದ ಸೌಲಭ್ಯಗಳು, ಜಿಐ ಉತ್ಪನ್ನಗಳ ನೋಂದಣಿ ಇತ್ಯಾದಿ.
ವಿಆರ್‌ಎಸ್ ಮತ್ತು ಇತರ ವೆಚ್ಚ ಕಡಿತದ ಕ್ರಮಗಳ ಪರಿಣಾಮವಾಗಿ ನಿಗಮದ ಆದಾಯ ಹೆಚ್ಚಾಗುತ್ತದೆ ಮತ್ತು ಖರ್ಚುಗಳು ಕಡಿಮೆಯಾಗುತ್ತವೆ ಮತ್ತು ನಿಗಮವು ನಿರಂತರವಾಗಿ ಲಾಭ ಗಳಿಸಲು ಪ್ರಾರಂಭಿಸುತ್ತದೆ ಮತ್ತು ಭಾರತದ ಸರ್ಕಾರದ ಮೇಲಿನ ಸಾಲದ ಅವಲಂಬನೆಯು ನಿಲ್ಲುತ್ತದೆ.
ಉದ್ಯೋಗ ಸೃಷ್ಟಿಯ ಸಾಮರ್ಥ್ಯ:
ಎನ್ ಇ ಆರ್ ಎ ಎಮ್ ಎ ಸಿ ಯ ಪುನಶ್ಚೇತನದ ಅನುಷ್ಠಾನದ ನಂತರ, ಕೃಷಿ ವಲಯ, ಯೋಜನೆಗಳು ಮತ್ತು ಸಮಾವೇಶಗಳ ನಿರ್ವಹಣಾ ವಲಯ, ಸಾಗಾಣಿಕೆ, ವಿಂಗಡಣೆ ಮತ್ತು ಶ್ರೇಣೀಕರಣ ಮತ್ತು ಮೌಲ್ಯವರ್ಧನೆ, ಉದ್ಯಮಶೀಲತೆ ಮತ್ತು ಮಾರ್ಕೆಟಿಂಗ್‌ನಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉದ್ಯೋಗ ಸೃಷ್ಟಿಯಾಗುತ್ತದೆ. ಇದರಿಂದಾಗಿ ಸುಮಾರು 33,000 ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.
ಗುರಿಗಳು:
ಪುನಶ್ಚೇತನದ ಪ್ಯಾಕೇಜ್ ಎನ್ ಇ ಆರ್ ಎ ಎಮ್ ಎ ಸಿ ಗೆ ವಿವಿಧ ವಿನೂತನ ಯೋಜನೆಗಳನ್ನು ಜಾರಿಗೆ ತರಲು ಸಹಾಯ ಮಾಡುತ್ತದೆ, ಅವುಗಳೆಂದರೆ ಉತ್ತಮ ಕೃಷಿ ಸೌಲಭ್ಯಗಳನ್ನು ಒದಗಿಸುವುದು, ರೈತರಿಗೆ ಕ್ಲಸ್ಟರ್‌ಗಳು, ಸಾವಯವ ಬೀಜಗಳು ಮತ್ತು ರಸಗೊಬ್ಬರ ತರಬೇತಿ, ವಿಶ್ವ ಮಾರುಕಟ್ಟೆಯಲ್ಲಿ ಈಶಾನ್ಯ ರೈತರ ಉತ್ಪನ್ನಗಳ ಪ್ರಚಾರಕ್ಕಾಗಿ ವಿಶ್ವದ ಸಮಾವೇಶಗಳಲ್ಲಿ ಭಾಗವಹಿಸುವಿಸುವುದಕ್ಕಾಗಿ ಕೊಯ್ಲಿನ ನಂತರದ ಸೌಲಭ್ಯಗಳು, ಜಿಐ (ಭೌಗೋಳಿಕ ಸೂಚನೆಗಳು) ಉತ್ಪನ್ನಗಳ ನೋಂದಣಿ ಇತ್ಯಾದಿ, ಎಫ್ ಪಿ ಒ ಗಳು ಮತ್ತು ಇತರ ಬೆಳೆಗಾರರನ್ನು ಉತ್ತೇಜಿಸುವುದು. ಇದಲ್ಲದೇ, ಬಿದಿರು ನೆಡುತೋಪು ಮತ್ತು ಜೇನು ಸಾಕಣೆಯಲ್ಲಿ ಗಮನ ಕೇಂದ್ರೀಕರಿಸುವುದು, ಇ-ಕಾಮರ್ಸ್ ಮೂಲಕ ಮಾರಾಟ, ಭಾರತ ಸರ್ಕಾರದ ಇತರ ಯೋಜನೆಗಳಾದ ಪಿಎಂ ಕಿಸಾನ್ ಸಂಪದ ಯೋಜನೆ ಮತ್ತು ಕೃಷಿ ಮೂಲಸೌಕರ್ಯ ನಿಧಿಯಂತಹ ಆತ್ಮ ನಿರ್ಭರ ಭಾರತ, ಕೃಷಿ ಉಡಾನ್ ಮತ್ತು ಕಿಸಾನ್ ರೈಲು, ಹೆಚ್ಚಿನ ಮೌಲ್ಯದ ಸಾವಯವ ಬೆಳೆಗಳಲ್ಲಿ ತೊಡಗಿರುವ ರೈತರು ಮತ್ತು ಉದ್ಯಮಿಗಳು, ಫ್ರಾಂಚೈಸಿ ಪರಿಕಲ್ಪನೆಯಡಿಯಲ್ಲಿ ತನ್ನದೇ ಬ್ರ್ಯಾಂಡ್‌ಗಳಾದ "NE Fresh" ಮತ್ತು "ONE" (ಆರ್ಗಾನಿಕ್ ನಾರ್ತ್ ಈಸ್ಟ್) ಮತ್ತು NAFED, TRIFED (ಟ್ರೈಫೆಡ್) ಇತ್ಯಾದಿಗಳ ಮೂಲಕ ಚಿಲ್ಲರೆ ಮಾರಾಟ ಮಳಿಗೆಗಳನ್ನು ಆರಂಭಿಸುವುದು ಕೂಡ ಯೋಜನೆಯಲ್ಲಿದೆ.
ಪುನಶ್ಚೇತನದ ಪ್ಯಾಕೇಜ್ ಅನುಷ್ಠಾನವು ಕೃಷಿ ವಲಯ, ಯೋಜನೆಗಳು ಮತ್ತು ಸಮಾವೇಶಗಳ ನಿರ್ವಹಣಾ ವಲಯ, ಲಾಜಿಸ್ಟಿಕ್ಸ್, ವಿಂಗಡಣೆ ಮತ್ತು ಶ್ರೇಣೀಕರಣ ಮತ್ತು ಮೌಲ್ಯವರ್ಧನೆ, ಉದ್ಯಮಶೀಲತೆ ಮತ್ತು ಮಾರ್ಕೆಟಿಂಗ್‌ನಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉದ್ಯೋಗವನ್ನು ಸೃಷ್ಟಿಸುತ್ತದೆ.
ಜಿಐ ಟ್ಯಾಗಿಂಗ್ ಮತ್ತು ದೇಶದ ಇತರ ಭಾಗಗಳಲ್ಲಿ ಮತ್ತು ದೇಶದ ಹೊರಗೆ ಈಶಾನ್ಯ ಪ್ರದೇಶದ ಸಾವಯವ ಉತ್ಪನ್ನಗಳ ಮಾರ್ಕೆಟಿಂಗ್, ಈ ಉತ್ಪನ್ನಗಳ ರಫ್ತನ್ನು ಹೆಚ್ಚಿಸುತ್ತದೆ, ಇದು ಈಶಾನ್ಯ ಪ್ರದೇಶದ ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ.
***
(Release ID: 1747045)
Visitor Counter : 279
Read this release in:
English
,
Urdu
,
Marathi
,
Hindi
,
Assamese
,
Bengali
,
Manipuri
,
Punjabi
,
Gujarati
,
Odia
,
Tamil
,
Telugu
,
Malayalam