ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಭಾರತದ ಭಾರತೀಯ ವೈದ್ಯ ಸಂಶೋಧನಾ ಮಂಡಳಿ (ಐ.ಸಿ.ಎಂ.ಆರ್.) ಮತ್ತು ಸ್ವಿಜರ್ಲ್ಯಾಂಡಿನ ಸೂಕ್ಷ್ಮ ಜೀವಾಣು ಪ್ರತಿರೋಧ ಸಂಶೋಧನೆ ಮತ್ತು ಅನ್ವೇಷಣೆಗಾಗಿರುವ ಜಿ.ಎ.ಆರ್.ಡಿ.ಪಿ. ಪ್ರತಿಷ್ಠಾನ ನಡುವೆ ತಿಳಿವಳಿಕಾ ಒಡಂಬಡಿಕೆಗೆ ಸಂಪುಟದ ಅನುಮೋದನೆ
Posted On:
18 AUG 2021 4:16PM by PIB Bengaluru
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತದ ಭಾರತೀಯ ವೈದ್ಯ ಸಂಶೋಧನಾ ಮಂಡಳಿ (ಐ.ಸಿ.ಎಂ.ಆರ್.) ಮತ್ತು ಸೂಕ್ಷ್ಮ ಜೀವಾಣು ಪ್ರತಿರೋಧ ಸಂಶೋಧನೆ ಮತ್ತು ಅನ್ವೇಷಣೆಗಾಗಿರುವ ಜಿ.ಎ.ಆರ್.ಡಿ.ಪಿ. ಪ್ರತಿಷ್ಠಾನ ನಡುವೆ ಅಂತಾರಾಷ್ಟ್ರೀಯ ವೈಜ್ಞಾನಿಕ ಮತ್ತು ತಾಂತ್ರಿಕ ಸಹಯೋಗದ ಚೌಕಟ್ಟಿನಲ್ಲಿ ಬಾಂಧವ್ಯವನ್ನು ಬಲಪಡಿಸುವ ಮತ್ತು ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಸಹಕಾರವನ್ನು ಉತ್ತೇಜಿಸುವ ತಿಳವಳಿಕಾ ಒಡಂಬಡಿಕೆಗೆ ಸಹಿ ಹಾಕಿರುವುದನ್ನು ಪರಾಮರ್ಶಿಸಿತು. ಈ ತಿಳವಳಿಕಾ ಒಡಂಬಡಿಕೆಗೆ 2021 ಮಾರ್ಚ್ ತಿಂಗಳಲ್ಲಿ ಭಾರತವು ಅಂಕಿತ ಹಾಕಿತ್ತು.
ಪ್ರಯೋಜನಗಳು:
ಈ ತಿಳವಳಿಕಾ ಒಡಂಬಡಿಕೆಯು ಭಾರತ ಮತ್ತು ಸ್ವಿಜರ್ಲ್ಯಾಂಡ್ ನಡುವೆ ಪರಸ್ಪರ ಆಸಕ್ತಿಯ ಕ್ಷೇತ್ರಗಳಲ್ಲಿ ಅಂತಾರಾಷ್ಟ್ರೀಯ ವ್ವೈಜ್ಞಾನಿಕ ಮತ್ತು ತಾಂತ್ರಿಕ ಸಹಕಾರವನ್ನು ಇನ್ನಷ್ಟು ಬಲಪಡಿಸಲಿದೆ ಮತ್ತು ಬಾಂಧವ್ಯವನ್ನು ವೃದ್ಧಿ ಮಾಡಲಿದೆ.
ಹಣಕಾಸು ಬಾಧ್ಯತೆಗಳು:
ಐ.ಸಿ.ಎಂ.ಆರ್- ಜಿ.ಎ.ಆರ್.ಡಿ.ಪಿ. ಸಹಯೋಗವು ಉಭಯ ಪಕ್ಷಗಳವರೂ ಜಂಟಿ ಉದ್ದೇಶಗಳ ಯಶಸ್ಸನ್ನು ಖಾತ್ರಿಪಡಿಸಲು ಹಣಕಾಸು ಮತ್ತು ಇತರ ವಸ್ತುಗಳ ದೇಣಿಗೆಗಳ ಮಾದರಿಗಳನ್ನು ಮತ್ತು ವ್ಯೂಹವನ್ನು ರೂಪಿಸುವುದನ್ನೂ ಒಳಗೊಂಡಿದೆ. ಹಣಕಾಸನ್ನು ಯೋಜನೆಗಳಲ್ಲಿ ತೊಡಗಿರುವ ಮೂರನೇ ಪಕ್ಷದವರಿಗೆ ನೇರವಾಗಿ ಒದಗಿಸಬಹುದಾಗಿರುತ್ತದೆ. ಎಲ್ಲಾ ಹಣಕಾಸು ಮತ್ತು ವಸ್ತು ರೂಪದ ದೇಣಿಗೆಗಳು ಪ್ರತ್ಯೇಕ ಕಾನೂನಾತ್ಮಕ ಬದ್ಧತೆಯ ಒಪ್ಪಂದಗಳಿಗೆ ಅನುಸಾರವಾಗಿರುತ್ತವೆ.
ಹಿನ್ನೆಲೆ:
ಐ.ಸಿ.ಎಂ.ಆರ್. ದೇಶದಲ್ಲಿ ಅಂತರ್ಗತ ಮತ್ತು ಅಂತರ್ಗತವಲ್ಲದ ಸಂಶೋಧನೆಯ ಮೂಲಕ ಜೀವ ವೈದ್ಯಕೀಯ ಸಂಶೋಧನೆಯ ಕಾರ್ಯಗಳನ್ನು ಉತ್ತೇಜಿಸುತ್ತದೆ. ಜಿ.ಎ.ಆರ್.ಡಿ.ಪಿ. ಯು ಲಾಭರಹಿತ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯಾಗಿದ್ದು , ಹೊಸ ಮತ್ತು ಸುಧಾರಿತ ಜೀವಪ್ರತಿರೋಧಕ ಚಿಕಿತ್ಸಾ ವಿಧಾನಗಳನ್ನು ಪೂರೈಸುವ ಮೂಲಕ ಮತ್ತು ಅವುಗಳ ಸುಸ್ಥಿರ ಲಭ್ಯತೆಯನ್ನು ಖಾತ್ರಿಪಡಿಸುವ ಮೂಲಕ ಜಾಗತಿಕ ಸಾರ್ವಜನಿಕ ಆರೋಗ್ಯ ಅಗತ್ಯಗಳನ್ನು ಈಡೇರಿಸಲು ಪ್ರಯತ್ನಿಸುತ್ತದೆ.
***
(Release ID: 1747016)
Visitor Counter : 225