ಪರಿಸರ ಮತ್ತು ಅರಣ್ಯ ಸಚಿವಾಲಯ
azadi ka amrit mahotsav g20-india-2023

ಗ್ಲಾಸ್‌ಗೋನಲ್ಲಿ ನವೆಂಬರ್‌ಗೆ ನಡೆಯಲಿರುವ ಸಿಒಪಿ26 ಸಮಾವೇಶ; ಯುನೈಟೆಡ್ ಕಿಂಗ್‌ಡಮ್‌ಗೆ ಭಾರತ ಸಂಪೂರ್ಣ ಬೆಂಬಲ


ಹವಾಮಾನ ಬದಲಾವಣೆಯ ಕ್ರಮಗಳು ರಾಷ್ಟ್ರೀಯ ಮಟ್ಟದಲ್ಲಿ ನಿಶ್ಚಯವಾಗಬೇಕು ಎಂಬುದನ್ನು ಭಾರತ ಬಲವಾಗಿ ನಂಬಿದೆ: ಶ್ರೀ ಭೂಪೇಂದರ್ ಸಿಂಗ್

ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಂದ ಹಣಕಾಸು ಮತ್ತು ತಂತ್ರಜ್ಞಾನ ವರ್ಗಾವಣೆಯಂತಹ ಹೆಚ್ಚಿನ ನಿಶ್ಚಿತ ಕ್ರಮಗಳು ವಿಶ್ವಕ್ಕೆ ಅಗತ್ಯ

Posted On: 18 AUG 2021 1:04PM by PIB Bengaluru

ಹವಾಮಾನ ಬದಲಾವಣೆ ಕುರಿತ ವಿಶ್ವಸಂಸ್ಥೆ ಒಡಂಬಡಿಕೆಯ ಮಾರ್ಗಸೂಚಿಗಳು ಮತ್ತು ಪ್ಯಾರಿಸ್ ಒಪ್ಪಂದಗಳನ್ನು ಪಾಲಿಸಲು, ಜಾರಿಗೆ ತರಲು ಭಾರತ ಸದಾ ಬದ್ಧವಾಗಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಶ್ರೀ ಭೂಪೇಂದರ್ ಸಿಂಗ್ ದೃಢಪಡಿಸಿದ್ದಾರೆ.

ವರ್ಷದ ನವೆಂಬರ್|ನಲ್ಲಿ ಗ್ಲಾಸ್‌ಗೋನಲ್ಲಿ ನಡೆಯಲಿರುವ ವಿಶ್ವಸಂಸ್ಥೆ ಹವಾಮಾನ ಬದಲಾವಣೆ ಸಮಾವೇಶ(ಸಿಒಪಿ26)ದಲ್ಲಿ ಯಶಸ್ವೀ ಮತ್ತು ಸಮತೋಲಿತ ಫಲಿತಾಂಶ ಪಡೆಯಲು ಭಾರತವು ಸಕಾರಾತ್ಮಕವಾಗಿ ಕೆಲಸ ಮಾಡಲಿದೆ. ಜತೆಗೆ, ಯುನೈಟೆಡ್ ಕಿಂಗ್ಮ್ಗೆ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಅವರು ಪ್ರಕಟಿಸಿದರು.

IMG-3380.JPG

ದೆಹಲಿಯಲ್ಲಿಂದು ಸಿಒಪಿ26 ಸಮಾವೇಶದ ಯುಕೆ ನಿಯೋಜಿತ ಅಧ್ಯಕ್ಷ ಅಲೋಕ್ ಶರ್ಮಾ ಅವರೊಂದಿಗೆ ವಿಸ್ತೃತ ಸಭೆ ನಡೆಸಿದ ಪರಿಸರ ಸಚಿವರು, ಹವಾಮಾನ ಬದಲಾವಣೆ, ಸಿಒಪಿ26 ಸಮಾವೇಶ, ಭಾರತ-ಯುಕೆ 2030 ಮಾರ್ಗಸೂಚಿ ಮತ್ತು ಇತರೆ ವಿಷಯಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಹವಾಮಾನ ಬದಲಾವಣೆಯ ಕ್ರಮಗಳು ರಾಷ್ಟ್ರೀಯ ಮಟ್ಟದಲ್ಲಿ ನಿಶ್ಚಯವಾಗಬೇಕು. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೀಡಲಾಗಿರುವ ಹವಾಮಾನ ಬದಲಾವಣೆಯ ವಿಶ್ವಸಂಸ್ಥೆ ಒಡಂಬಡಿಕೆಯ ಮಾರ್ಗಸೂಚಿಗಳು ಮತ್ತು ಪ್ಯಾರಿಸ್ ಒಪ್ಪಂದದ ಅನುಷ್ಠಾನ ಮತ್ತು ಅದಕ್ಕೆ ಎದುರಾಗಿರುವ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳಲು ಸಿಒಪಿ26 ಸಮಾವೇಶದ ಪ್ರಮುಖ ನಿರ್ಧಾರಗಳಲ್ಲಿ ಆದ್ಯತೆ ಸಿಗಬೇಕು ಎಂದು ಅವರು ಬಲವಾಗಿ ಪ್ರತಿಪಾದಿಸಿದರು.

ಹವಾಮಾನ ಬದಲಾವಣೆಗೆ ಹೋರಾಡುತ್ತಿರುವಾಗ ಎಲ್ಲ ರಾಷ್ಟ್ರಗಳಿಗೂ ಸಮಾನ ನ್ಯಾಯ ಸಿಗಬೇಕು ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಒತ್ತುನೀಡುತ್ತಿರುವುದನ್ನು ಸಚಿವರು ಸಭೆಯಲ್ಲಿ ಪುನರುಚ್ಚರಿಸಿದರು.

 

ಹವಾಮಾನ ಬದಲಾವಣೆಯ ಪ್ರತೀಕೂಲಗಳನ್ನು ಹತ್ತಿಕ್ಕಲು ಭಾರತವು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಮುನ್ನಡೆಸುತ್ತಿರುವ ಜಾಗತಿಕ ಉಪ್ರಮಗಳನ್ನು ಸಚಿವರು ಪ್ರಸ್ತಾಪಿಸಿದರು. ಅವೆಂದರೆ ಉದ್ಯಮ ಪರಿವರ್ತನೆಗಾಗಿ ನಾಯಕತ್ವ ಗುಂಪು(ಲೀಡ್ ಐಟಿ), ವಿಕೋಪ ನಿರ್ವಹಣಾ ಮೂಲಸೌಕರ್ಯ ಮೈತ್ರಿಕೂಟ (ಸಿಡಿಆರ್‌ಐ) ಮತ್ತು ಅಂತಾರಾಷ್ಟ್ರೀಯ ಸೌರಶಕ್ತಿ ಒಕ್ಕೂಟ (ಐಎಸ್‌ಎ) ಬಲವರ್ಧನೆ ಕುರಿತು ವ್ಯಾಪಕ ಚರ್ಚೆ ನಡೆಯಬೇಕು ಎಂದರು.

ಯುನೈಟೆಡ್ ಕಿಂಗ್ಮ್ಗ್ಲಾಸ್‌ಗೋನಲ್ಲಿ ನಡೆಸಲಿರುವ ಸಿಒಪಿ26 ಸಮಾವೇಶಕ್ಕೆ ಸಂಪೂರ್ಣ ಬೆಂಬಲ ನೀಡುವಂತೆ ನಿಯೋಜಿತ ಅಧ್ಯಕ್ಷ ಅಲೋಕ್ ಶರ್ಮಾ ಅವರು ಮನವಿ ಮಾಡಿದರು. ಭಾರತದ ನಾಯಕತ್ವ ಪಾತ್ರವನ್ನು ಅವರು ಸಭೆಯಲ್ಲಿ ಪ್ರಸ್ತಾಪಿಸಿದರು. ಸಿಒಪಿ26 ಸಮಾವೇಶದಲ್ಲಿ ಚರ್ಚೆಗೆ ಬರಲಿರುವ ಹವಾಮಾನ ಬದಲಾವಣೆಯ ಪ್ರಮುಖ ಸಂಧಾನ ಕಾರ್ಯಸೂಚಿಗಳ ಕುರಿತು ಉಭಯ ನಾಯಕರು ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡರು.   

IMG-3384.JPG

***(Release ID: 1746974) Visitor Counter : 395