ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
azadi ka amrit mahotsav

ಕೋವಿಡ್ -19 ಲಸಿಕೆಗಳ ಬ್ಯಾಚ್ - ಪರೀಕ್ಷೆ ಮತ್ತು ಬಿಡುಗಡೆಗಾಗಿ ಮತ್ತೊಂದು ಪ್ರಯೋಗಾಲಯಕ್ಕೆ ಅನುಮೋದನೆ


ರಾಷ್ಟ್ರೀಯ ಪ್ರಾಣಿ ಜೈವಿಕ ತಂತ್ರಜ್ಞಾನ ಸಂಸ್ಥೆ, ಹೈದರಾಬಾದ್ ಈಗಲಸಿಕೆಗಳ ಗುಣಮಟ್ಟ ಪರಿಶೀಲನೆ ನಡೆಸಬಹುದು ಮತ್ತು ಇದರ ಪರಿಣಾಮವಾಗಿ ಪರಿಶೀಲನಾಂತರ
ಕೋವಿಡ್ -19 ಲಸಿಕೆಗಳನ್ನು ಬಿಡುಗಡೆ ಮಾಡಬಹುದು

ಲಸಿಕೆ ಪೂರೈಕೆ ಸರಪಳಿಯನ್ನು ಬಲಪಡಿಸುವ ಮತ್ತು
ಅತಿದೊಡ್ಡ ಲಸಿಕೆ ಆಂದೋಲನವನ್ನುವಿಸ್ತರಿಸುವ ಗುರಿ

प्रविष्टि तिथि: 16 AUG 2021 6:03PM by PIB Bengaluru

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಾರತ ಸರ್ಕಾರವು ಕೋವಿಡ್ -19 ಲಸಿಕೆಗಳ ಉತ್ಪಾದನೆ, ಪೂರೈಕೆ ಮತ್ತು ನಿರ್ವಹಣೆಯನ್ನು ಸುಧಾರಿಸಲು ನಿರಂತರವಾಗಿ ಮತ್ತು ದಣಿವರಿಯಿಲ್ಲದೆ ಹಗಲೂ ರಾತ್ರಿ ಎಂಬಂತೆ ಕೆಲಸ ಮಾಡುತ್ತಿದೆ. ಲಸಿಕೆಯ ಅಭಿಯಾನದ ವೇಗವನ್ನು ಹೆಚ್ಚಿಸುವ ಒಂದು ಪ್ರಮುಖ ಉಪಕ್ರಮವಾಗಿ ಕೋವಿಡ್ -19 ಲಸಿಕೆಗಳನ್ನು ಪರೀಕ್ಷಿಸಲು ಮತ್ತು ಪರಶೀಲಿಸಿದ ಲಸಿಕೆಗಳನ್ನು ಬಿಡುಗಡೆ ಮಾಡಲು ಮತ್ತೊಂದು ನೂತನ ಪ್ರಯೋಗಾಲಯವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು (ಎಂ.ಹೆಚ್.ಎ‍ಫ್.ಡಬ್ಲೂ) ಅನುಮೋದಿಸಿದೆ.     

ಕೋವಿಡ್ -19 ಲಸಿಕೆಗಳ ಪರೀಕ್ಷೆ ಮತ್ತು ಬಿಡುಗಡೆಗಾಗಿ ರಾಷ್ಟ್ರೀಯ ಪ್ರಾಣಿ ಜೈವಿಕ ತಂತ್ರಜ್ಞಾನ ಸಂಸ್ಥೆ (ಎನ್.ಐ.ಎ.ಬಿ)ಯನ್ನು ಕೇಂದ್ರ ಔಷಧ ಪ್ರಯೋಗಾಲಯವಾಗಿ (ಸಿ.ಡಿ.ಎಲ್) ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಅಧಿಕೃತಗೊಳಿಸಿದೆ.  
 
ಭಾರತದಲ್ಲಿ ಕೋವಿಡ್ -19 ಲಸಿಕೆ ವಿತರಣೆಯ ವಿವಿಧ ಅಂಶಗಳನ್ನು ಚರ್ಚಿಸಲು, ನವೆಂಬರ್ 11, 2020 ರಂದು ಸಂಪುಟ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಭೆ ಆಯೋಜಿಸಲಾಗಿತ್ತು. ಸಚಿವಾಲಯಗಳು ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ (ಡಿ.ಬಿ.ಟಿ.), ಇಲಾಖೆಗಳು ವಿಜ್ಞಾನ ಮತ್ತು ತಂತ್ರಜ್ಞಾನ (ಡಿ.ಎಸ್‌.ಟಿ) ಮತ್ತು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿ.ಎಸ್‌.ಐ.ಆರ್.) ಯನ್ನು ಯಾವುದೇ ಪ್ರಯೋಗಾಲಯಗಳನ್ನು ಸಿ.ಡಿ.ಎಲ್. ಆಗಿ ಪರಿವರ್ತಿಸಲು ಆರೋಗ್ಯ ಸಚಿವಾಲಯಕ್ಕೆ ಸೂಚಿಸಲು ಈ. ಸಭೆಯಲ್ಲಿ ಸೂಚಿಸಲಾಗಿದೆ.
 
ಸೂಕ್ತ ಚರ್ಚೆಗಳ ನಂತರ, ಜೈವಿಕ ತಂತ್ರಜ್ಞಾನ ಇಲಾಖೆ (ಡಿ.ಬಿ.ಟಿ.) ಈ ಉದ್ದೇಶಕ್ಕಾಗಿ ಎನ್.ಐ.ಎ.ಬಿ ಮತ್ತು ನ್ಯಾಷನಲ್ ಸೆಂಟರ್ ಫಾರ್ ಸೆಲ್ ಸೈನ್ಸಸ್ (ಎನ್.ಸಿ.ಒ.ಸಿ.ಎಸ್.) ಎಂಬ ಎರಡು ಪ್ರಯೋಗಾಲಯಗಳನ್ನು ಪ್ರಸ್ತಾಪಿಸಿತು. ಈ ಎರಡು ಪ್ರಯೋಗಾಲಯಗಳ ಉನ್ನತೀಕರಣಕ್ಕಾಗಿ ಪ್ರಧಾನಮಂತ್ರಿ ಕೇರ್ಸ್ ಫಂಡ್ ಟ್ರಸ್ಟ್ (ಪಿ.ಎಮ್.-ಸಿ.ಎ.ಆರ್.ಇ.ಎಸ್)ನಿಂದ ಹಣವನ್ನು ಮಂಜೂರು ಮಾಡಲಾಗಿದೆ. 
 
ಎನ್.ಐ.ಎ.ಬಿ, ಹೈದರಾಬಾದ್ ಅನ್ನು ಸಿ.ಡಿ.ಎಲ್. ಪ್ರಯೋಗಾಲಯವಾಗಿ ಸೂಚಿಸಲು ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿ.ಡಿ.ಎಸ್.ಸಿ.ಒ) ಸಂಸ್ಥೆಯು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಕರಡು ಅಧಿಸೂಚನೆಯನ್ನು ಸಲ್ಲಿಸಿದೆ, ಇದಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರ ಆರೋಗ್ಯ ಸಚಿವಾಲಯವು ಈಗ ಎನ್.ಐ.ಎ.ಬಿ, ಹೈದರಾಬಾದ್ ಅನ್ನು “ಸಿ.ಡಿ.ಎಲ್. ಪ್ರಯೋಗಾಲಯ” ಎಂದು ಗುರುತಿಸಿ ಅಧಿಕೃತಗೊಳಿಸಿ ಸೂಚನೆ ಹೊರಡಿಸಿದೆ.
 
ಎನ್‌.ಸಿ.ಸಿ.ಎಸ್., ಪುಣೆಯನ್ನು ಈಗಾಗಲೇ ಸಿ.ಡಿ.ಎಲ್. ಪ್ರಯೋಗಾಲಯವಾಗಿ ಜೂನ್ 28, 2021 ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ (ಎಂ.ಹೆಚ್.ಎ‍ಫ್.ಡಬ್ಲೂ) ದಿಂದ  ಸೂಚಿಸಲಾಗಿತ್ತು ಎಂಬುದನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವಾಗಿದೆ.

ಸಿ.ಡಿ.ಎಲ್. ಪ್ರಯೋಗಾಲಯಗಳಾಗಿ ಈ ಎರಡು ಪ್ರಯೋಗಾಲಯಗಳ ಅಧಿಸೂಚನೆಯು ದೇಶದ ಲಸಿಕೆ ಉತ್ಪಾದನೆಯನ್ನು ಸುಧಾರಿಸುತ್ತದೆ ಮತ್ತು ಅಂತಿಮವಾಗಿ ಲಸಿಕೆ ಅಭಿಯಾನವನ್ನು ಬಲಪಡಿಸುತ್ತದೆ.

***


(रिलीज़ आईडी: 1746487) आगंतुक पटल : 307
इस विज्ञप्ति को इन भाषाओं में पढ़ें: English , Urdu , हिन्दी , Marathi , Manipuri , Punjabi , Tamil