ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ
ಆಗಸ್ಟ್ 13ರಂದು ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ 2.0 ರಾಷ್ಟ್ರವ್ಯಾಪಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿರುವ ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ. ಅನುರಾಗ್ ಸಿಂಗ್ ಠಾಕೂರ್
ನಾಳೆ 10 ಸ್ಮಾರಕ ತಾಣಗಳಲ್ಲಿ ಉದ್ಘಾಟನೆಯಾಗಲಿರುವ ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ 2.0
Posted On:
12 AUG 2021 6:10PM by PIB Bengaluru
ಪ್ರಮುಖ ಮುಖ್ಯಾಂಶಗಳು:
• ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟದ ಆಯೋಜನೆ.
• ದೇಶಾದ್ಯಂತದ 744 ಜಿಲ್ಲೆಗಳಲ್ಲಿ, 744 ಜಿಲ್ಲೆಗಳ ತಲಾ 75 ಗ್ರಾಮಗಳಲ್ಲಿ ಮತ್ತು 30,000 ಶಿಕ್ಷಣ ಸಂಸ್ಥೆಗಳಲ್ಲಿ ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟದ ಆಯೋಜನೆ
• ಈ ಉಪಕ್ರಮದ ಮೂಲಕ ಓಟದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು 7.50 ಕೋಟಿ ಯುವಜನರು ಮತ್ತು ನಾಗರಿಕನ್ನು ತಲುಪುವ ಗುರಿ.
ಕೇಂದ್ರ ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಅವರು 2021ರ ಆಗಸ್ಟ್ 13ರಂದು ನವದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ 2.0 ರಾಷ್ಟ್ರವ್ಯಾಪಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಯುವ ಜನ ವ್ಯವಹಾರಗಳು ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವ ಶ್ರೀ ನಿಸಿತ್ ಪ್ರಾಮಾಣಿಕ್ ಈ ಸಮಾರಂಭದಲ್ಲಿ ಉಪಸ್ಥಿತರಿರುತ್ತಾರೆ. ದೆಹಲಿಯೊಂದಿಗೆ ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟ 2.0 ಕಾರ್ಯಕ್ರಮವನ್ನು ದೇಶಾದ್ಯಂತದ 9 ಇತರ ಸ್ಮಾರಕ ತಾಣಗಳಲ್ಲಿ ಆಯೋಜಿಸಲಾಗಿದೆ. ಈ ಸ್ಮಾರಕ ತಾಣಗಳಲ್ಲಿ ಉತ್ತರ ಪ್ರದೇಶದ ಅಲಹಾಬಾದ್ ನ ಚಂದ್ರಶೇಕರ್ ಆಜಾ಼ದ್ ಉದ್ಯಾನ; ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಪೋರ್ಟ್ ಬ್ಲೇರ್ ನ ಸೆಲ್ಯೂಲರ್ ಜೈಲ್; ಹಿಮಾಚಲ ಪ್ರದೇಶದ ಲಹೂಲ್ ಸ್ಪಿತಿಯ ಕಾಜಾ ಪೋಸ್ಟ್; ಮುಂಬೈನ ಗೇಟ್ ವೇ ಆಫ್ ಇಂಡಿಯಾ; ಅಸ್ಸಾಂನ ತೇಜ್ ಪುರದ ಚಿತ್ರಲೇಖಾ ಉದ್ಯಾನ (ಕೋಲೆ ಪಾರ್ಕ್) ; ಅಠಾರಿ ಗಡಿ; ಜಾನ್ಸಿ ರೈಲು ನಿಲ್ದಾಣ; ಲೆಹ್ ಮತ್ತು ಚೆನ್ನೈ ಸೇರಿದ್ದು, ಇಲ್ಲಿ ಫಿಟ್ ಇಂಡಿಯಾ ಓಟವನ್ನು ಸಿಆರ್.ಪಿ.ಎಫ್, ಸಿಐ.ಎಸ್.ಎಫ್., ಐಟಿಬಿಪಿ, ಎನ್.ಎಸ್.ಜಿ., ಎಸ್.ಎಸ್.ಬಿ., ಬಿ.ಎಸ್.ಎಫ್. ರೈಲ್ವೆ ಮತ್ತು ಎನ್.ವೈ.ಕೆ.ಎಸ್. ಆಯೋಜಿಸಿವೆ. ಶ್ರೀ ಅನುರಾಗ್ ಠಾಕೂರ್ ಈ ತಾಣಗಳಲ್ಲಿ ಪಾಲ್ಗೊಳ್ಳುವವರೊಂದಿಗೆ ವರ್ಚುವಲ್ ಮೂಲಕ ಸಂವಾದ ನಡೆಸಲಿದ್ದಾರೆ.
ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟದ ಉದ್ಘಾಟನೆಯ ಅಂಗವಾಗಿ ವಿಡಿಯೋ ಸಂದೇಶದಲ್ಲಿ ಶ್ರೀ ಅನುರಾಗ್ ಠಾಕೂರ್ ಅವರು, 75ನೇ ಸ್ವಾತಂತ್ರ್ಯವರ್ಷದ ಸಂದರ್ಭದಲ್ಲಿ ಆರೋಗ್ಯಪೂರ್ಣ ಭಾರತ ನಿರ್ಮಾಣದ ಪ್ರತಿಜ್ಞೆ ಮಾಡೋಣ. ಆರೋಗ್ಯಪೂರ್ಣ ಭಾರತ ಮಾತ್ರವೇ ಬಲಿಷ್ಠವಾಗಿರುತ್ತದೆ, ಆತ್ಮನಿರ್ಭರ ಮತ್ತು ನವ ಭಾರತವಾಗುತ್ತದೆ ಎಂದು ತಿಳಿಸಿದ್ದಾರೆ. ಎಲ್ಲರೂ ಮುಂದೆ ಬಂದು ಇದನ್ನು ಜನಾಂದೋಲನವನ್ನಾಗಿ ಮಾಡಬೇಕು ಮತ್ತು "ಸದೃಢತೆಗಾಗಿ ನಿತ್ಯ ಅರ್ಧಗಂಟೆ". ಎಂಬ ಮಂತ್ರವನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಪ್ರತಿಯೊಬ್ಬರಿಗೂ ಮನವಿ ಮಾಡಿದ್ದಾರೆ.
ಪ್ರತಿ ವಾರ 75 ಜಿಲ್ಲೆಗಳ, ಪ್ರತಿ ಜಿಲ್ಲೆಯ 75 ಗ್ರಾಮಗಳಲ್ಲಿ 2021ರ ಅಕ್ಟೋಬರ್ 2ರವರೆಗೆ ಕಾರ್ಯಕ್ರಮಗಳು ನಡೆಯಲಿವೆ. ಹೀಗಾಗಿ ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟವನ್ನು 744 ಜಿಲ್ಲೆಗಳು, 744 ಜಿಲ್ಲೆಗಳ ತಲಾ 75 ಗ್ರಾಮಗಳಲ್ಲಿ ಮತ್ತು ದೇಶಾದ್ಯಂತದ 30000 ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸಲಾಗಿದೆ. ಈ ಉಪಕ್ರಮದ ಮೂಲಕ ಈ ಓಟದಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು 7.50 ಕೋಟಿಗೂ ಹೆಚ್ಚು ಜನರನ್ನು ತಲುಪಲಾಗುವುದು.
ಈ ಪ್ರಚಾರದ ಉದ್ದೇಶ ಜನರು ತಮ್ಮ ನಿತ್ಯದ ಬದುಕಿನಲ್ಲಿ ಓಟ ಮತ್ತು ಕ್ರೀಡೆಯನ್ನು ಸದೃಢತೆಯ ಚಟುವಟಿಕೆಯಾಗಿ ತೆಗೆದುಕೊಳ್ಳಬೇಕು ಮತ್ತು ಸ್ಥೂಲಕಾಯ, ಆಲಸ್ಯ, ಒತ್ತಡ, ಆತಂಕ, ಕಾಯಿಲೆ ಇತ್ಯಾದಿಯಿಂದ ಮುಕ್ತರಾಗಬೇಕು ಎಂಬುದಾಗಿದೆ. ಈ ಪ್ರಚಾರದ ಮೂಲಕ ನಾಗರಿಕರಿಗೆ ದಿನವೂ ತಮ್ಮ ಬದುಕಿನಲ್ಲಿ ಕನಿಷ್ಠ 30 ನಿಮಿಷಗಳ ಕಾಲವನ್ನು "ಸದೃಢತೆಗಾಗಿ ನಿತ್ಯ ಅರ್ಧಗಂಟೆ" ದೈಹಿಕ ಚಟುವಟಿಕೆಗೆ ಮೀಸಲಿಡಲು ಕರೆ ಮಾಡುವುದಾಗಿದೆ.
ಫಿಟ್ ಇಂಡಿಯಾ ಸ್ವಾತಂತ್ರ್ಯ ಓಟ 2.0ರ ಪ್ರಮುಖ ಚಟುವಟಿಕೆಗಳಲ್ಲಿ ಪ್ರತಿಜ್ಞಾವಿಧಿ, ರಾಷ್ಟ್ರಗೀತೆಯ ಗಾಯನ, ಸ್ವಾತಂತ್ರ್ಯದ ಓಟ, ಸ್ಥಳಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಇಂತಹುದೇ ಸ್ವಾತಂತ್ರ್ಯದ ಓಟ ಕಾರ್ಯಕ್ರಮವನ್ನು ತಮ್ಮ ಗ್ರಾಮಗಳಲ್ಲಿ ಆಯೋಜಿಸಲು ಅರಿವು ಮೂಡಿಸುವುದಾಗಿದೆ. ಜನರು ನೋಂದಾಯಿಸಿಕೊಂಡು, ಜನರು ಫಿಟ್ ಇಂಡಿಯಾ ಪೋರ್ಟಲ್ https://fitindia.gov.in ನಲ್ಲಿ ನೋಂದಾಯಿಸಿಕೊಂಡು ತಮ್ಮ ಫಿಟ್ ಇಂಡಿಯಾ ಓಟವನ್ನು ಅಪ್ ಲೋಡ್ ಮಾಡಬಹುದು ಮತ್ತು #Run4India ಮತ್ತು #AzadikaAmritMahotsav ತಮ್ಮ ಸಾಮಾಜಿಕ ಮಾಧ್ಯಮ ಚಾನೆಲ್ ಗಳಲ್ಲಿ ಸ್ವಾತಂತ್ರ್ಯ ಓಟವನ್ನು ಉತ್ತೇಜಿಸಬಹುದು.
ಗಣ್ಯರು, ಜನ ಪ್ರತಿನಿಧಿಗಳು, ಪಿ.ಆರ್.ಐ ನಾಯಕರು, ಸಾಮಾಜಿಕ ಕಾರ್ಯಕರ್ತರು, ಕ್ರೀಡಾಪಟುಗಳು, ಮಾಧ್ಯಮ ವ್ಯಕ್ತಿಗಳು, ವೈದ್ಯರು, ರೈತರು ಮತ್ತು ಸೇನಾ ಸಿಬ್ಬಂದಿ ವಿವಿಧ ಹಂತಗಳಲ್ಲಿ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸುವಂತೆ ಮತ್ತು ಪ್ರೇರೇಪಿಸುವಂತೆ ಮನವಿ ಮಾಡಲಾಗುತ್ತಿದೆ. ಕೋವಿಡ್-19 ಶಿಷ್ಟಾಚಾರಗಳನ್ನು ಅನುಸರಿಸುವ ಮೂಲಕ ದೇಶಾದ್ಯಂತ ಭೌತಿಕವಾಗಿ ಮತ್ತು ವರ್ಚುವಲ್ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು.
ಕೇಂದ್ರ ಸರ್ಕಾರದ ಸಚಿವಾಲಯಗಳು, ರಾಜ್ಯಗಳು ಸರ್ಕಾರಗಳು ಮತ್ತು ಇತರ ಸಂಸ್ಥೆಗಳಿಗೆ 2021ರ ಅಕ್ಟೋಬರ್ 2 ರವರೆಗೆ ಅಭಿಯಾನದುದ್ದಕ್ಕೂ ಭೌತಿಕ /ವರ್ಚುವಲ್ ಸ್ವಾತಂತ್ರ್ಯದ ಓಟ ಕಾರ್ಯಕ್ರಮಗಳನ್ನು ನಡೆಸುವಂತೆ ಕೋರಲಾಗಿದೆ. ಅಭಿಯಾನವನ್ನು ಜನರನ್ನು ಪ್ರೇರೇಪಿಸಲು, ಸ್ನೇಹಿತರು, ಕುಟುಂಬಗಳು ಮತ್ತು ಸಮಾನ ಮನಸ್ಕ ಗುಂಪುಗಳು ಇತ್ಯಾದಿಗಳನ್ನು ಗರಿಷ್ಠ ಪ್ರಮಾಣದಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲು ಪ್ರಯತ್ನಿಸಲಾಗುತ್ತಿದೆ.
ಕಳೆದ ವರ್ಷ ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ದೈಹಿಕ ಅಂತರವು 'ಹೊಸ ಸಾಮಾನ್ಯ ಜೀವನಶೈಲಿ' ಆದಾಗ 'ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟವನ್ನು ರೂಪಿಸಲಾಯಿತು, ಇದರಿಂದ ದೈಹಿಕ ಅಂತರ ಮಾನದಂಡಗಳನ್ನು ಅನುಸರಿಸುವಾಗಲೂ ಫಿಟ್ನೆಸ್ ನ ಅಗತ್ಯವನ್ನು ಸಕ್ರಿಯವಾಗಿಡಲು, ಫಿಟ್ ಇಂಡಿಯಾ ಸ್ವಾತಂತ್ರ್ಯದ ಓಟವನ್ನು ವರ್ಚುವಲ್ ರನ್ ಪರಿಕಲ್ಪನೆಯ ಮೇಲೆ ಪ್ರಾರಂಭಿಸಲಾಯಿತು, ಅಂದರೆ 'ಇದನ್ನು ಎಲ್ಲಿ ಬೇಕಾದರೂ, ಯಾವಾಗ ಬೇಕಾದರೂ ನಡೆಸಬಹುದು! ನಿಮಗೆ ಸೂಕ್ತವಾದ ಸಮಯದಲ್ಲಿ ನೀವು ನಿಮ್ಮ ಆಯ್ಕೆಯ ಮಾರ್ಗವನ್ನು ನಡೆಸುತ್ತೀರಿ. ಮೂಲತಃ, ನೀವು ನಿಮ್ಮ ಸ್ವಂತ ಓಟವನ್ನು ನಡೆಸುತ್ತೀರಿ ಮತ್ತು ನಿಮ್ಮ ಸ್ವಂತ ಓಟದ ಸ್ಪರ್ಧೆಗೆ ಸಮಯ ಮಾಡಿಕೊಳ್ಳುತ್ತೀರಿ'.
ಅಭಿಯಾನದ ಮೊದಲ ಆವೃತ್ತಿಯನ್ನು ಆಗಸ್ಟ್ 15ರಿಂದ ಅಕ್ಟೋಬರ್ 2,2020 ರವರೆಗೆ ಆಯೋಜಿಸಲಾಗಿತ್ತು. ಕೇಂದ್ರ ಸಶಸ್ತ್ರ ಪಡೆಗಳು, ಎನ್.ಜಿ.ಒಗಳು, ಖಾಸಗಿ ಸಂಸ್ಥೆಗಳು, ಶಾಲೆಗಳು, ವ್ಯಕ್ತಿಗಳು, ಯುವ ಕ್ಲಬ್ ಗಳು ಸೇರಿದಂತೆ ಕೇಂದ್ರ/ರಾಜ್ಯ ಇಲಾಖೆಗಳು ಮತ್ತು ಸಂಘಟನೆಗಳ 5 ಕೋಟಿಗೂ ಹೆಚ್ಚು ಜನರು ಭಾಗವಹಿಸಿದ್ದರು ಮತ್ತು ಸುಮಾರು 18 ಕೋಟಿ ಕಿ.ಮೀ ದೂರವನ್ನು ಕ್ರಮಿಸಿದ್ದರು.
*******
(Release ID: 1745301)
Visitor Counter : 561