ಇಂಧನ ಸಚಿವಾಲಯ

ಇಂಧನ ಸಚಿವಾಲಯವು ಕೇಂದ್ರ ಸರ್ಕಾರದ ಕಚೇರಿಗಳಿಗೆ ಆದ್ಯತೆ ಮೇರೆಗೆ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್‌ಗಳಿಗೆ ಬದಲಾಗಲು ಸಲಹೆ ನೀಡಿದೆ


ಹಣಕಾಸು ಸಚಿವಾಲಯ ಸ್ಪಷ್ಟೀಕರಣ ನೀಡಿದೆ; ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳು ಮುಂಚಿತವಾಗಿ ಪಾವತಿಸಿದ ಮೀಟರ್ ವಿದ್ಯುತ್ತಿಗಾಗಿ ಮುಂಗಡ ಪಾವತಿಗಳನ್ನು ಮಾಡಬಹುದು

ಆರ್ಥಿಕ ಸುಸ್ಥಿರತೆಯ ಹಾದಿಯಲ್ಲಿ ಡಿಸ್ಕಾಮ್‌ ಗಳನ್ನು ಮರಳಿ ತರುವ ಪ್ರಯತ್ನ

ರಾಜ್ಯ ಇಲಾಖೆಗಳು ವಿದ್ಯುತ್ ಪೂರ್ವ ಪಾವತಿಯನ್ನು ಉತ್ತೇಜಿಸಲು ಇದೇ ರೀತಿಯ ಕಾರ್ಯವಿಧಾನಗಳನ್ನು ಅನುಕರಿಸಬಹುದು

Posted On: 12 AUG 2021 4:01PM by PIB Bengaluru

ಇಂಧನ ಸಚಿವಾಲಯವು ಸರ್ಕಾರದ ಎಲ್ಲಾ ಕೇಂದ್ರ ಸಚಿವಾಲಯಗಳಿಗೆ ತಮ್ಮ ಆಡಳಿತದ ನಿಯಂತ್ರಣದಲ್ಲಿರುವ ಸಂಸ್ಥೆಗಳನ್ನು ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್‌ಗಳಿಗೆ  (ಮುಂಚಿತವಾಗಿ ಪಾವತಿಸಿದ ಮೀಟರ್ ) ಆದ್ಯತೆಯ ಮೇರೆಗೆ ಬದಲಾಗುವಂತೆ  ಸೂಚಿಸಲು ಸಲಹೆ ನೀಡಿದೆ.  ಇದೇ ಪ್ರಕ್ರಿಯೆಯ ಭಾಗವಾಗಿ, ಸಚಿವಾಲಯಗಳು ಈ ನಿಟ್ಟಿನಲ್ಲಿ ಎಲ್ಲಾ   ಆದೇಶಗಳನ್ನು ಹೊರಡಿಸಲು ಕೇಳಲಾಗಿದೆ. ಇದು ಹಣಕಾಸು ಸಚಿವಾಲಯವು ನೀಡಿದ ಸ್ಪಷ್ಟೀಕರಣವನ್ನು ಅನುಸರಿಸುತ್ತದೆ, ಎಲ್ಲಾ ಕೇಂದ್ರ ಸಚಿವಾಲಯಗಳು ಮತ್ತು ಕೇಂದ್ರ ಇಲಾಖೆಗಳು ಯಾವುದೇ ಬ್ಯಾಂಕ್ ಖಾತರಿಗಳಿಗಾಗಿ ಒತ್ತಾಯಿಸದೆ ಪೂರ್ವ ಪಾವತಿ ಮೀಟರ್ ವಿದ್ಯುತ್ಗಾಗಿ ಮುಂಗಡ ಪಾವತಿ ಮಾಡಲು ಅನುವು ಮಾಡಿಕೊಡುತ್ತದೆ, ಅದೇ ಸಮಯದಲ್ಲಿ ಸರಿಯಾದ ಲೆಕ್ಕಪತ್ರ ವ್ಯವಸ್ಥೆಗಳನ್ನು ಖಾತ್ರಿಪಡಿಸುತ್ತದೆ.

 

ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಪ್ರಿಪೇಯ್ಡ್ ಸ್ಮಾರ್ಟ್ ಮಾಪನವು   ಡಿಸ್ಕಾಮ್‌ಗಳನ್ನು ಆರ್ಥಿಕ ಸುಸ್ಥಿರತೆ, ಇಂಧನ ದಕ್ಷತೆಯ ಉತ್ತೇಜನದ ಹಾದಿಗೆ ತರುವಲ್ಲಿ ಸರ್ಕಾರದ ಬದ್ಧತೆಯನ್ನು ಖಾತ್ರಿಪಡಿಸುವಲ್ಲಿ ಪ್ರಮುಖವಾಗಿರುವುದೆ ಅಲ್ಲದೆ ತಮ್ಮದೇ ಇಲಾಖೆಗಳಿಂದ ವಿದ್ಯುತ್ ಬಾಕಿ ಮುಂಗಡ ಪಾವತಿಯನ್ನು ಬೆಂಬಲಿಸುವ ಇಂತಹ ಕಾರ್ಯವಿಧಾನಗಳು ರಾಜ್ಯಗಳ ಅನುಕರಣೆಗೆ ಮಾದರಿಯಾಗಲಿದೆ.

 

ಭಾರತ ಸರ್ಕಾರವು ಎಲ್ಲಾ ಗ್ರಾಹಕರಿಗೆ ನಿರಂತರ, ವಿಶ್ವಾಸಾರ್ಹ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆಯನ್ನು ಒದಗಿಸಲು ಬದ್ಧವಾಗಿದೆ, ಇದಕ್ಕಾಗಿ ಒಂದು ದಕ್ಷ ಕಾರ್ಯಾಚರಣೆಯ ಮತ್ತು ಆರ್ಥಿಕವಾಗಿ ಸಮರ್ಥನೀಯ ವಿದ್ಯುತ್ ಇಂಧನ ವಲಯವು ಅತ್ಯಗತ್ಯವಾಗಿದೆ. ಡಿಸ್ಕಾಮ್‌ಗಳನ್ನು ಹೆಚ್ಚಾಗಿ ಪ್ರಮುಖವಾದುದೆಂದು ಹೇಳಲಾಗುತ್ತದೆ, ಆದರೆ ವಿದ್ಯುತ್ ವಲಯ ಮೌಲ್ಯದ ಸರಪಳಿಯಲ್ಲಿನ ದುರ್ಬಲ ಕೊಂಡಿ, ಮೌಲ್ಯ ಸರಪಳಿಯ ಕೆಳಭಾಗದಲ್ಲಿರುವ ಅವರ ಕಳಪೆ ಆರ್ಥಿಕ ಸ್ಥಿತಿಯು  ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. ಅಲ್ಲದೆ ಆರ್ಥಿಕ ನಷ್ಟವನ್ನು ಉಂಟುಮಾಡುವ ಕಾರ್ಯಾಚರಣೆಯ ಅಸಮರ್ಥತೆಗಳನ್ನು ಹೊರತುಪಡಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ಸರ್ಕಾರಿ ಇಲಾಖೆಗಳ ವಿದ್ಯುತ್ ಬಾಕಿಗಳನ್ನು ಹೆಚ್ಚಿಸುವುದು; ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು; ಮತ್ತು ವಿದ್ಯುತ್ ಬಳಕೆಗೆ ವಿಳಂಬ ಮತ್ತು ಅಸಮರ್ಪಕ ಪಾವತಿಗಳಿಂದಾಗಿ ಸರ್ಕಾರಿ ಮಂಡಳಿಗಳು ಮತ್ತು ನಿಗಮಗಳು ಡಿಸ್ಕಾಮ್‌ಗಳಲ್ಲಿ ನಗದು ಹರಿವಿನ ತೊಂದರೆಯನ್ನು ಉಂಟುಮಾಡುತ್ತದೆ. ಕೊರತೆಗಳನ್ನು ನಿವಾರಿಸಲು ಡಿಸ್ಕಾಮ್‌ ಗಳ ಹೆಚ್ಚುವರಿ ಕೆಲಸದ ಬಂಡವಾಳದ ಮೇಲಿನ ಬಡ್ಡಿಯ ಹೊರೆ ಅದರ ವೆಚ್ಚಗಳ ಮೇಲೆ ಹಣದುಬ್ಬರದ ಒತ್ತಡವನ್ನು ಸೃಷ್ಟಿಸುತ್ತದೆ, ಇದರಿಂದಾಗಿ ಅದರ ಕಾರ್ಯಸಾಧ್ಯತೆಯ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ.   ರಾಜ್ಯಗಳಿಂದ ಪಡೆದ ಮಾಹಿತಿಗಳ ಪ್ರಕಾರ   ಹಣಕಾಸು ವರ್ಷ 2020-21ರ ಅಂತ್ಯದ ವೇಳೆಗೆ ಸರ್ಕಾರಿ ಇಲಾಖೆಗಳ ಉಳಿದಿರುವ ಬಾಕಿ  ರೂ 48,664 ಕೋಟಿಯಷ್ಟಿದೆ, ಇದು ವಾರ್ಷಿಕ  ವಿದ್ಯುತ್ ಇಂಧನ ವಲಯದ ವಹಿವಾಟಿನ ~ 9% ನಷ್ಟು ಮೌಲ್ಯವಾಗಿದೆ.

ವಿತರಣಾ ವಲಯದ ಕಾರ್ಯಾಚರಣೆಯ ದಕ್ಷತೆ ಮತ್ತು ಆರ್ಥಿಕ ಸುಸ್ಥಿರತೆಯನ್ನು ಸುಧಾರಿಸಲು, ಭಾರತ ಸರ್ಕಾರವು ನವೀಕರಿಸಿದ ವಿತರಣಾ ವಲಯ ಯೋಜನೆಯನ್ನು ಅನುಮೋದಿಸಿದೆ -  ಇದು ಒಂದು ಸುಧಾರಣೆ ಆಧಾರಿತ ಮತ್ತು ಫಲಿತಾಂಶದ ಆಧಾರಿತ   ಯೋಜನೆಯಾಗಿದೆ . ಈ ಯೋಜನೆಯು ಅಸ್ತಿತ್ವದಲ್ಲಿರುವ ಡಿಸ್ಕಾಮ್‌ಗಳನ್ನು ಕಾರ್ಯಾಚರಣೆ ಪರಿಣಾಮಕಾರಿಯಾಗಿ ಮತ್ತು ಆರ್ಥಿಕವಾಗಿ ಸಮರ್ಥನೀಯವಾಗಿ ಕಾರ್ಯನಿರ್ವಹಿಸುವಂತೆ ಪ್ರಯತ್ನಿಸುತ್ತದೆ. ಯೋಜನೆಯ ಅಡಿಯಲ್ಲಿ ನವೀನ ಮಧ್ಯಸ್ಥಿಕೆಗಳಲ್ಲಿ ಷಿ ಗ್ರಾಹಕರನ್ನು ಹೊರತುಪಡಿಸಿ ಎಲ್ಲಾ ವಿದ್ಯುತ್ ಗ್ರಾಹಕರಿಗೆ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸುವ ಯೋಜನೆಯಾಗಿದ್ದು, ಇದಕ್ಕಾಗಿ ಅರ್ಧದಷ್ಟು ಯೋಜನಾ ವೆಚ್ಚವನ್ನು ಮೀಸಲಾಗಿರಿಸಲಾಗಿದೆ. ಸರಿಯಾಗಿ ಮುಂಗಡ ಖರ್ಚಿನ ವಿವರಗಳನ್ನು ಸಿದ್ಧಪಡಿಸುವುದು ಮತ್ತು ವಿದ್ಯುತ್ ಸೇವೆಗಳನ್ನು ಪಾವತಿಸಿದಂತೆ ಬಳಸುವುದನ್ನು ಖಾತ್ರಿಪಡಿಸಿಕೊಳ್ಳಲು,   ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳು, ಸರ್ಕಾರಿ ಮಂಡಳಿಗಳು , ನಿಗಮಗಳು ಸರ್ಕಾರಿ ಇಲಾಖೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿದಂತೆ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಕೆಗೆ ಆದ್ಯತೆ ನೀಡಲಾಗಿದೆ

 

*.*.*



(Release ID: 1745284) Visitor Counter : 246