ಪರಿಸರ ಮತ್ತು ಅರಣ್ಯ ಸಚಿವಾಲಯ

ಅಖಿಲ ಭಾರತ ಆನೆ ಮತ್ತು ಹುಲಿ ಗಣತಿಯ ಕಾರ್ಯವನ್ನು ಮೊದಲ ಬಾರಿಗೆ 2022 ರಲ್ಲಿ ಒಟ್ಟಾಗಿ ಮಾಡಲಾಗುವುದು; ಅಳವಡಿಸಿಕೊಳ್ಳಲಾಗುವ ಗಣತಿಯ ಮಾರ್ಗಸೂಚಿ (ಪ್ರೊಟೊಕಾಲ್) ಯನ್ನು ವಿಶ್ವ ಆನೆ ದಿನದಂದು ಬಿಡುಗಡೆ ಮಾಡಲಾಯಿತು .



ಸಂರಕ್ಷಣೆಗೆ ಸ್ಥಳೀಯ ಸಮುದಾಯಗಳನ್ನು ಒಳಗೊಂಡ ಒಂದು ತಳಮಟ್ಟದ ವಿಧಾನ, ಇದು ಸಂರಕ್ಷಣೆಯತ್ತ ಮುಂದಿನ ಹೆಜ್ಜೆಯಾಗಿದೆ: ಶ್ರೀ ಭೂಪೇಂದರ್ ಯಾದವ್

ಆನೆ ಸಂರಕ್ಷಣೆಯು ಪರಿಸರ ವ್ಯವಸ್ಥೆಗಳ ಸಂರಕ್ಷಣೆಗೆ ಮುಖ್ಯವಾಗಿ ಸಂಬಂಧ ಹೊಂದಿದೆ: ಶ್ರೀ ಅಶ್ವಿನಿ ಕುಮಾರ್ ಚೌಬೆ

Posted On: 12 AUG 2021 3:01PM by PIB Bengaluru

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವರಾದ ಶ್ರೀ ಭೂಪೇಂದರ್ ಯಾದವ್ ಅವರು 2022 ರಲ್ಲಿ ಅಖಿಲ ಭಾರತ ಆನೆ ಮತ್ತು ಹುಲಿ ಜನಸಂಖ್ಯೆಯ ಗಣತಿಗಾಗಿ  ಕೈಗೊಳ್ಳಲಿರುವ ಕಾರ್ಯದಲ್ಲಿ   ಅಳವಡಿಸಿಕೊಳ್ಳಬೇಕಾದ ಗಣತಿಯ ಮಾರ್ಗಸೂಚಿ (ಪ್ರೊಟೊಕಾಲ್)ಯನ್ನು   ಇಂದು ಬಿಡುಗಡೆ ಮಾಡಿದರು. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC), ಮೊದಲ ಬಾರಿಗೆ ಆನೆ ಮತ್ತು ಹುಲಿ ಗಣತಿಯ ಕಾರ್ಯವನ್ನು ಒಟ್ಟಾಗಿ ಮಾಡುತ್ತಿದೆ, ಇದರ  ಮಾರ್ಗಸೂಚಿಯನ್ನು  ಇಂದು ವಿಶ್ವ ಆನೆ ದಿನದಂದು ಬಿಡುಗಡೆ ಮಾಡಲಾಗಿದೆ.

 

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಪರಿಸರ ಸಚಿವರು, ಆನೆಗಳ ಸಂರಕ್ಷಣೆಯಲ್ಲಿ ಸ್ಥಳೀಯ ಮತ್ತು ಸ್ಥಳೀಯ ಜನರ ಒಳಗೊಳ್ಳುವಿಕೆ ಬಗ್ಗೆ ಒತ್ತಿ ಹೇಳಿದರು ಮತ್ತು ತಳಮಟ್ಟದ ವಿಧಾನವು ಮುಂದಿನ ಮಾರ್ಗವಾಗಿದೆ, ಇದು ಮಾನವ - ಆನೆ ಸಂಘರ್ಷವನ್ನು ಕಡಿಮೆ ಮಾಡಲು ಕೂಡ ಸಹಾಯ ಮಾಡುತ್ತದೆ ಎಂದು ಹೇಳಿದರು.

 

 ಶ್ರೀ ಯಾದವ್ ಅವರು ಭಾರತದಾದ್ಯಂತ ವಿವಿಧ ರಾಜ್ಯಗಳಲ್ಲಿ ಹೆಚ್ಚು ವೈಜ್ಞಾನಿಕ ಮಾರ್ಗಗಳಲ್ಲಿ ಗಣತಿಯ ವಿಧಾನಗಳನ್ನು ಸುಧಾರಿಸುವ ಮತ್ತು ಸಮನ್ವಯಗೊಳಿಸುವ ಅವಶ್ಯಕತೆ ಇದೆ ಎಂದು ಹೇಳಿದರು ಮತ್ತು ಸಚಿವಾಲಯವು ಮೊದಲ ಬಾರಿಗೆ ಆನೆ ಮತ್ತು ಹುಲಿಗಳ ಸಂಖ್ಯೆಯ ಗಣತಿ  ಎರಡನ್ನೂ  ಒಟ್ಟಿಗೆ ಮಾಡುತ್ತಿದೆ  ಎಂದು ಸಂತಸ ವ್ಯಕ್ತಪಡಿಸಿದರು.

 


ರಾಜ್ಯ ಸಚಿವರಾದ ಶ್ರೀ ಅಶ್ವಿನ್ ಕುಮಾರ್ ಚೌಬೆಯವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಆನೆಗಳನ್ನು ಉಳಿಸುವುದು ಕಾಡುಗಳನ್ನು ಉಳಿಸಿದಂತೆ   ಮತ್ತು ಕಾಡುಗಳನ್ನು ಉಳಿಸುವುದು ಇಡೀ ಪರಿಸರವನ್ನು ಉಳಿಸಲು ಕಾರಣವಾಗುತ್ತದೆ ಮತ್ತು ವಿಶೇಷವಾಗಿ ಎಲ್ಲಾ ಯುವಕರು ಪ್ರಕೃತಿ ಮತ್ತು ವನ್ಯಜೀವಿಗಳೊಂದಿಗೆ ಸಾಮರಸ್ಯದಿಂದ ಬಾಳುವ ಭಾರತೀಯ ಸಂಸ್ಕೃತಿಯ ಸಾಂಪ್ರದಾಯಿಕ ತತ್ವವನ್ನು   ಪಾಲಿಸಲು ಸಲಹೆ ನೀಡಿದರು. 


ಕಾರ್ಯಕ್ರಮವು ಸಚಿವಾಲಯದ ಆನೆ ವಿಭಾಗದ ತ್ರೈಮಾಸಿಕ ವಾರ್ತಾಪತ್ರ "ಟ್ರಂಪೆಟ್" ನ ನಾಲ್ಕನೇ ಆವೃತ್ತಿಯನ್ನು ಉಭಯ ಗಣ್ಯರಿಂದ ಬಿಡುಗಡೆ ಮಾಡಲಾಯಿತು.  ರಾಜ್ಯ ಅರಣ್ಯ ಇಲಾಖೆಗಳು ಹಾಗೂ ಸಂಸ್ಥೆಗಳು ಮತ್ತು ಸಂಸ್ಥೆಗಳಿಂದ ದೇಶದಾದ್ಯಂತ ಅಳವಡಿಸಲಾಗಿರುವ ವಿವಿಧ ಸಂರಕ್ಷಣಾ ಮಾಹಿತಿಗಳ ಬಗ್ಗೆ  ತಿಳಿಸಲು, ಪ್ರಾಜೆಕ್ಟ್ ಎಲಿಫೆಂಟ್ ಡಿವಿಷನ್ ಮತ್ತು ಆನೆ ಸೆಲ್ ತ್ರೈಮಾಸಿಕ ವಾರ್ತಾಪತ್ರವನ್ನು "ಟ್ರಂಪೆಟ್ " ಬಿಡುಗಡೆ ಮಾಡುತ್ತದೆ. ವಾರ್ತಾಪತ್ರದ ಈ ಆವೃತ್ತಿಯು ಒಗ್ಗೂಡಿಸಿದ ಆನೆಗಳ ಸಂಖ್ಯೆ ಗಣತಿಗೆ ಲ್ಯಾಂಡ್‌ ಸ್ಕೇಪ್‌ ಅಪ್ರೋಚ್‌  ವಿಧಾನದ ಅಗತ್ಯವನ್ನು ತಿಳಿಸುತ್ತದೆ.

 

ಸಚಿವಾಲಯವು  ಡಬ್ಲ್ಯೂ  ಐ ಐ, ಎಮ್‌ ಎನ್‌ ಎಚ್‌, MNH, ಡಬ್ಲ್ಯೂ ಡಬ್ಲ್ಯೂ ಡಬ್ಲ್ಯೂ  ಇಂಡಿಯಾ  ಮತ್ತು ಡಬ್ಲ್ಯೂಟಿ ಐ ನೊಂದಿಗೆ ಪಾಲುದಾರಿಕೆ ಮಾಡಿಕೊಂಡು "ಆಜಾ಼ದಿ ಕಾ ಅಮೃತ್ ಮಹೋತ್ಸವ" ವಾರದ ಕಾರ್ಯಕ್ರಮವನ್ನು ವಿಶ್ವ ಆನೆ ದಿನ, 2021 ರ ಪೂರ್ವಭಾವಿಯಾಗಿ ಆಯೋಜಿಸಿದೆ. ಮಂತ್ರಿಗಳಿಂದ.ಆನ್‌ಲೈನ್ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆಯ ವಿಜೇತರನ್ನೂ ಘೋಷಿಸಲಾಯಿತು 

ಏಷ್ಯನ್ ಆನೆಗಳನ್ನು "ಅಳಿವಿನಂಚಿನಲ್ಲಿರುವ ಪ್ರಾಣಿಗಳು" ಎಂದು ಐಯುಸಿಎನ್‌ ಪಟ್ಟಿಯ  ಅಳಿವಿನಂಚಿನಲ್ಲಿರುವ ಪ್ರಾಣಿಗಳ ಪಟ್ಟಿಯಲ್ಲಿ ಹಾಕಲಾಗಿದೆ. ಭಾರತವನ್ನು ಹೊರತುಪಡಿಸಿ ಹೆಚ್ಚಿನ ಶ್ರೇಣಿಯ ಪ್ರದೇಶಗಳು, ಆವಾಸಸ್ಥಾನಗಳ ಕಳೆದುಕೊಳ್ಳುವಿಕೆ ಮತ್ತು ಬೇಟೆಯಾಡುವಿಕೆಯಿಂದಾಗಿ  ಅವುಗಳ ಸಂಖ್ಯೆಯನ್ನು ಇಳಿಮುಖವಾಗಿರುವುದರಿಂದ ಪಟ್ಟಿಯಲ್ಲಿ ಸೇರಿಸಲಾಗಿದೆ. ಪ್ರಸ್ತುತ ಸಂಖ್ಯೆಯ ಗಣತಿಯಂತೆ ಪ್ರಪಂಚದಲ್ಲಿ ಸುಮಾರು 50,000 – 60,000 ಏಷ್ಯನ್ ಆನೆಗಳಿವೆ ಎಂದು ಸೂಚಿಸುತ್ತದೆ. 60%ಕ್ಕಿಂತ ಹೆಚ್ಚು ಸಂಖ್ಯೆಯು ಭಾರತದಲ್ಲಿ ಇದೆ.

ಫೆಬ್ರವರಿ 2020 ರಲ್ಲಿ ಗುಜರಾತ್‌ನ ಗಾಂಧಿ ನಗರದಲ್ಲಿ ಇತ್ತೀಚೆಗೆ ನಡೆದ ಸಿ ಎಮ್‌ ಎಸ್‌  13 ರ ಸಮ್ಮೇಳನದಲ್ಲಿ ವಲಸೆ ಜಾತಿಯ ಸಮಾವೇಶದ ಅನುಬಂಧ I ರಲ್ಲಿ ಭಾರತೀಯ ಆನೆಯನ್ನು ಸಹ ಪಟ್ಟಿಗೆ ಸೇರಿಸಲಾಗಿದೆ.

ಆನೆಗಳಿಗೆ ನೆರವಾಗಲು ವಿವಿಧ ಸಂರಕ್ಷಣಾ ನೀತಿಗಳನ್ನು ಬೆಂಬಲಿಸಲು ವಿವಿಧ ಮಧ್ಯಸ್ಥಗಾರರ ಗಮನವನ್ನು ತರಲು ವಿಶ್ವ ಆನೆ ದಿನವನ್ನು ಆಚರಿಸಲಾಗುತ್ತಿದೆ. ಕಾನೂನುಬಾಹಿರ ಬೇಟೆ ಮತ್ತು ದಂತದ ವ್ಯಾಪಾರವನ್ನು ತಡೆಯಲು ಜಾರಿಗೊಳಿಸುವ ನೀತಿಗಳನ್ನು ಸುಧಾರಿಸುವುದು, ಆನೆಗಳ ಆವಾಸಸ್ಥಾನಗಳನ್ನು ಸಂರಕ್ಷಿಸುವುದು, ಸೆರೆಹಿಡಿದ ಆನೆಗಳಿಗೆ ಉತ್ತಮ ಚಿಕಿತ್ಸೆ ನೀಡುವುದು ಮತ್ತು ಕೆಲವು ಬಂಧಿತ ಆನೆಗಳನ್ನು ಅಭಯಾರಣ್ಯಗಳಲ್ಲಿ ಮತ್ತೆ ಬಿಡುವುದು ಈ ನೀತಿಗಳಲ್ಲಿ ಸೇರಿವೆ. ಆನೆ ಭಾರತದ ನೈಸರ್ಗಿಕ ಪರಂಪರೆಯ ಪ್ರಾಣಿಯಾಗಿದ್ದು, ಇದನ್ನು ಸಂರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಲು ಭಾರತವು ಈ ದಿನವನ್ನು ಆಚರಿಸುತ್ತದೆ.

ಈ ವರ್ಷ, ನವದೆಹಲಿಯ ಇಂದಿರಾ ಪರ್ಯಾವರಣ್ ಭವನದಲ್ಲಿ ವಿಶ್ವ ಆನೆ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ರಾಮೇಶ್ವರ ಗುಪ್ತಾ, ಅರಣ್ಯ ಕಾರ್ಯದರ್ಶಿ ; ಶ್ರೀ ಸುಭಾಷ್ ಚಂದ್ರ, ಡಿಜಿಎಫ್‌ ‍‍‍‍‍‍‍‍‍‍ & ಎಸ್‌ ಎಸ್‌; ಶ್ರೀ ಎಸ್ ಪಿ ಯಾದವ್, ಎಡಿಜಿ (ಎನ್‌ ಟಿ ಸಿ ಎ), ಶ್ರೀ ರಮೇಶ್ ಪಾಂಡೆ, ಐಜಿಎಫ್‌,    ಮತ್ತು ಸಚಿವಾಲಯದ ಇತರ ಹಿರಿಯ ಅಧಿಕಾರಿಗಳು. ರಾಜ್ಯ ಅರಣ್ಯ ಇಲಾಖೆಗಳು ಮತ್ತು ಇತರ ಪಾಲುದಾರ ಸಂಸ್ಥೆಗಳು ಸಹ ಆಚರಣೆಯಲ್ಲಿ ಜೊತೆಗೂಡಿದವು.



(Release ID: 1745282) Visitor Counter : 288