ಉಪರಾಷ್ಟ್ರಪತಿಗಳ ಕಾರ್ಯಾಲಯ

ಎಂ. ವೆಂಕಯ್ಯನಾಯ್ಡು ಅವರ 4 ವರ್ಷಗಳ ಆಡಳಿತದ ಇ-ಬುಕ್ ಬಿಡುಗಡೆ ಮಾಡಿದ ಉಪರಾಷ್ಟ್ರಪತಿ ಕಾರ್ಯಾಲಯ


ಕಳೆದ 22 ಉದ್ಘಾಟನಾ ಕಾರ್ಯಕ್ರಮಗಳು ಸೇರಿದಂತೆ 133 ಕಾರ್ಯಕ್ರಮಗಳಲ್ಲಿ ಉಪರಾಷ್ಟ್ರಪತಿ ಭಾಗಿ

ಜನರಿಗೆ ಅಷ್ಟಾಗಿ ಗೊತ್ತಿರದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಕುರಿತು 26 ಸರಣಿ ಫೇಸ್ ಬುಕ್ ಪೋಸ್ಟ್ ಗಳು, ಕಾರಾಗೃಹ ಶಿಕ್ಷೆಗೆ ಒಳಗಾಗಿದ್ದ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಮತ್ತೊಂದು ಫೇಸ್ ಬುಕ್ ಸರಣಿ ಬರೆದಿರುವ ಉಪರಾಷ್ಟ್ರಪತಿ

ಮಾತೃಭಾಷೆ ಉತ್ತೇಜಿಸುವ ಅಗತ್ಯ ಕುರಿತು ಭಾರತೀಯ ಭಾಷೆಗಳ ಪತ್ರಿಕೆಗಳಲ್ಲಿ ಹಲವು ಲೇಖನಗಳ ಬರವಣಿಗೆ

ನಮ್ಮ ಸಹಜ ಸಾಮರ್ಥ್ಯಗಳನ್ನು ಮರುಸಂಪರ್ಕಿಸುವ ಅಗತ್ಯಕ್ಕೆ ಒತ್ತು

2020-21ರಲ್ಲಿ ಬಜೆಟ್ ಅಧಿವೇಶನದ ತನಕ ರಾಜ್ಯಸಭೆ ಕಲಾಪದ ಉತ್ಪಾದಕತೆ 95.82%ಗೆ ಸುಧಾರಣೆ; 44 ಪ್ರಮುಖ ವಿಧೇಯಕಗಳ ಅಂಗೀಕಾರ, ನಾಲ್ಕು ವರ್ಷಗಳಲ್ಲೇ ಗರಿಷ್ಠ

4 ವರ್ಷಗಳಲ್ಲಿ ರಾಜ್ಯಸಭೆ ಟಿವಿ ಯೂಟ್ಯೂಬ್ ಚಂದಾದಾರರ ನೆಲೆ 5 ಲಕ್ಷದಿಂದ 59 ಲಕ್ಷಕ್ಕೆ ಏರಿಕೆ

Posted On: 11 AUG 2021 1:40PM by PIB Bengaluru

ಭಾರತದ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಸಭಾಪತಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು ಇಂದಿಗೆ ನಾಲ್ಕು  ವರ್ಷಗಳ ಆಡಳಿತಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಸುಸಂದರ್ಭದಲ್ಲಿ ಉಪರಾಷ್ಟ್ರಪತಿ ಕಾರ್ಯಾಲಯವು, ಅವರ ಕಳೆದ ಒಂದು ವರ್ಷದ ಕಾರ್ಯವೈಖರಿ, ಆಡಳಿತದ ಅವಲೋಕನ ಪ್ರಸ್ತುತಪಡಿಸುವ ಒಂದು ಫ್ಲಿಪ್ ಪುಸ್ತಕ(-ಬುಕ್)ವನ್ನು ಬಿಡುಗಡೆ ಮಾಡಿದೆ.

ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿರುವ -ಪುಸ್ತಕದಲ್ಲಿ ಉಪರಾಷ್ಟ್ರಪತಿ ಅವರ ಸಮಗ್ರ ಆಡಳಿತ, ವಿವಿಧ ಸ್ಥಳಗಳಿಗೆ ಭೇಟಿ, ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವ ಕುರಿತು ಅವಲೋಕನ ಮಾಡಲಾಗಿದೆ. ಅವರು ದೇಶಾದ್ಯಂತ 133 ಕಾರ್ಯಕ್ರಮ(ವರ್ಚುವಲ್ ಮತ್ತು ಭೌತಿಕ)ಗಳಲ್ಲಿ ಭಾಗವಹಿಸಿದ್ದಾರೆ. 10 ರಾಜ್ಯಗಳು ಮತ್ತು 2 ಕೇಂದ್ರಾಡಳಿತ ಪ್ರದೇಶಗಳಲ್ಲಿ ಆಯೋಜಿತವಾಗಿದ್ದ ಕಾರ್ಯಕ್ರಮಗಳಲ್ಲಿ ಅವರು ಪಾಲ್ಗೊಂಡಿದ್ದು, ಅದರಲ್ಲಿ 22 ಉದ್ಘಾಟನಾ ಕಾರ್ಯಕ್ರಮಗಳು ಸೇರಿವೆ. ಕಳೆದ 1 ವರ್ಷದ ಅವಧಿಯಲ್ಲಿ ಶ್ರೀ ಎಂ. ವೆಂಕಯ್ಯ ನಾಯ್ಡು ಅವರು 53 ಉಪನ್ಯಾಸ ನೀಡಿ, 23 ಕೃತಿಗಳನ್ನು ಬಿಡುಗಡೆ ಮಾಡಿದ್ದಾರೆ. 21ಕ್ಕಿಂತ ಅಧಿಕ ಸಂಸ್ಥೆಗಳಿಗೆ ಭೇಟಿ ನೀಡಿದ್ದಾರೆ. 7 ಘಟಿಕೋತ್ಸವಗಳನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ನಾಲ್ಕು ಪ್ರಶಸ್ತಿ ಪ್ರದಾನ ಸಮಾರಂಭಗಳು ಸತ್ತು 3 ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ಸೋಂಕು ದೇಶದಲ್ಲಿ ಕಾಣಿಸಿಕೊಂಡ ನಂತರ ದೇಶದ ನಾಗರಿಕರಿಗೆ ಧೈರ್ಯ ತುಂಬಲು, ಆರೋಗ್ಯ ಕಾಪಾಡಿಕೊಳ್ಳುವಂತೆ ಸಲಹೆ ಮಾರ್ಗದರ್ಶ ನೀಡಲು ಉಪರಾಷ್ಟ್ರಪತಿ ಅವರು ಫೇಸ್|ಬುಕ್ ಮೂಲಕ ಲೇಖನಗಳು ಮತ್ತು ಮಾಹಿತಿಗಳನ್ನು ಹಂಚಿಕೊಳ್ಳಲಾರಂಭಿಸಿದರು. ಕೋವಿಡ್-ವಾರಿಯರ್|ಗಳ ನಿಸ್ವಾರ್ಥ ಸೇವೆಯನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘಿಸಿದರು. ಅಲ್ಲದೆ, ಕೋವಿಡ್ ಸುರಕ್ಷತಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ದೇಶದ ಜನತೆಗೆ ಮನವಿ ಮಾಡುತ್ತಾ ಬಂದರು. ಅವರೇ ಮೊದಲಿಗರಾಗಿ ಲಸಿಕೆ ಪಡೆದರು. ಯಾವುದೇ ಹಿಂಜರಿಕೆ ಇಲ್ಲದೆ ಲಸಿಕೆ ಪಡೆಯುವಂತೆ ಜನತೆಯನ್ನು ಹುರಿದುಂಬಿಸಿದರು. ಹೈದರಾಬಾದ್ ಭಾರತ್ ಬಯೋಟೆಕ್ ಕಂಪನಿಗೆ ಭೇಟಿ ಕೊಟ್ಟಾಗ ಅವರು, ದೇಶೀಯ ಲಸಿಕೆ ಕಂಡುಹಿಡಿದ ಭಾರತದ ವಿಜ್ಞಾನಿಗಳ ಪ್ರಯತ್ನ ಮತ್ತು ನಿರಂತರ ಶ್ರಮವನ್ನು ಶ್ಲಾಘಿಸಿದರು.

 ಹೆಚ್ಚು ಬೆಳಕಿಗೆ ಬಾರದ 26 ಮಹಿಳಾ ಸ್ವಾತಂತ್ರ್ಯ ಹೋರಾಟಗಾರರ ಬದುಕು ಮತ್ತು ಹೋರಾಟಗಳ ಕುರಿತು ಉಪರಾಷ್ಟ್ರಪತಿ ಅವರು ಫೇಸ್ ಬುಕ್ ಸರಣಿ ಲೇಖನಗಳನ್ನು ಬರೆದಿದ್ದಾರೆ. ಅಲ್ಲದೆ, ಅಂಡಮಾನ್ ನಲ್ಲಿ ಕಾರಾಗೃಹ ಶಿಕ್ಷೆಗೆ ಒಳಗಾಗಿದ್ದ 10 ಸ್ವಾತಂತ್ರ್ಯ ಸೇನಾನಿಗಳ ಸಾಧನೆಗಳನ್ನು ಸಹ ಅವರು ಫೇಸ್ ಬುಕ್ ಸರಣಿಯಲ್ಲಿ ಬರೆದಿದ್ದಾರೆ. ದಂಡಿ ಪಾದಯಾತ್ರೆ ಸ್ಮರಣಾರ್ಥ ವರ್ಷದ ಏಪ್ರಿಲ್ ನಲ್ಲಿ 25 ದಿನಗಳ ಕಾಲ ನಡೆದ ಆಜಾ಼ದಿ ಕಾ ಅಮೃತ್ ಮಹೋತ್ಸವ ಉದ್ದೇಶಿಸಿ, ಅವರು ಭಾಷಣ ಮಾಡಿದ್ದರು. ಸಂಘಟಿತ ಹೋರಾಟ ಮತ್ತು ಶಕ್ತಿಯೇ ನಮ್ಮ ದೇಶದ ಬಲ ಎಂದು ದಂಡಿ ಯಾತ್ರೆಯ ಹೋರಾಟಗಳನ್ನು ಸ್ಮರಿಸಿದ್ದರು.

ಭಾರತೀಯ ಭಾಷೆಗಳ ಉತ್ತೇಜನಕ್ಕೆ ಉಪರಾಷ್ಟ್ರಪತಿ ಒತ್ತು ನೀಡುತ್ತಾ ಬಂದಿದ್ದಾರೆ. ಕಳೆದ 1 ವರ್ಷದಿಂದ ಅವರು ಯಾವುದೇ ಸಮಾರಂಭದಲ್ಲಿ ಭಾಗವಹಿಸಲಿ, ಮಾತೃಭಾಷೆಯಲ್ಲಿ ಶಿಕ್ಷಣ ಕಲಿಕೆಯಿಂದ ಆಗುವ ಪ್ರಯೋಜನಗಳ ಕುರಿತು ಅವರು ಪ್ರಸ್ತಾಪಿಸುತ್ತಲೇ ಇರುತ್ತಾರೆ. ಸರ್ಕಾರಗಳು ಮಾತೃಭಾಷೆಯಲ್ಲಿ ಕಲಿಕೆಗೆ ಒತ್ತು ನೀಡಬೇಕು ಎಂದು ಅವರು ಪ್ರತಿಪಾದಿಸುತ್ತಾ ಬಂದಿದ್ದಾರೆ. ಅಂತಾರಾಷ್ಟ್ರೀಯ ಮಾತೃಭಾಷೆ ದಿನದಂದು ಅವರು 22 ಭಾರತೀಯ ಭಾಷೆಗಳಲ್ಲಿ ಟ್ವೀಟ್ ಮಾಡಿದ್ದರು. ದೇಶದ 24 ಭಾಷೆಗಳ ಪತ್ರಿಕೆಗಳಲ್ಲಿ ಅವರು ಲೇಖನಗಳನ್ನು ಬರೆದಿದ್ದಾರೆ. ಮಾತೃಭಾಷೆ ಉತ್ತೇಜಿಸಲು ಪ್ರಯತ್ನಿಸುವಂತೆ ಅವರು ಎಲ್ಲಾ ಸಂಸದರರಿಗೂ ಪತ್ರ ಬರೆದು ಸೂಚಿಸಿದ್ದಾರೆ. ಭಾರತೀಯ ಹೊಸ ವರ್ಷದಲ್ಲಿ ಅವರು ಎಲ್ಲ ಸಂಸದರಿಗೂ ಅವರವರ ಮಾತೃಭಾಷೆಯಲ್ಲಿ ಪತ್ರ ಬರೆದು ಶುಭಾಶಯ ಕೋರಿದ್ದಾರೆ. ಭಾರತೀಯ ಭಾಷೆಗಳನ್ನು ವೃತ್ತಿ ಶಿಕ್ಷಣ ಒದಗಿಸಲು ಎಐಸಿಟಿಇ ನಿರ್ಧರಿಸಿದಾಗ, ಅದನ್ನು ಉಪರಾಷ್ಟ್ರಪತಿ ಮುಕ್ತಕಂಠದಿಂದ ಪ್ರಶಂಸಿಸಿದರು. ಹಾಗು 24 ಭಾರತೀಯ ಭಾಷೆಗಳ 33 ಸ್ಥಳೀಯ ಪತ್ರಿಕೆಗಳಲ್ಲಿ ಬಗ್ಗೆ ಲೇಖನಗಳನ್ನು ಬರೆದರು.

ದೇಶದ ಆರ್ಥಿಕ ಬೆಳವಣಿಗೆಗೆ ಕೃಷಿ ವಲಯದ ಬೆಳವಣಿಗೆ ಅತಿ ಮುಖ್ಯ ಎಂದು ಪ್ರತಿಪಾದಿಸಿರುವ ಅವರು, ಕೋವಿಡ್-19 ಸಂಕಷ್ಟದ ನಡುವೆ ನಮ್ಮ ರೈತರು ದಾಖಲೆ ಪ್ರಮಾಣದಲ್ಲಿ ಆಹಾರ ಧಾನ್ಯ ಉತ್ಪಾದಿಸಿರುವುದಕ್ಕೆ ಶ್ಲಾಘಿಸಿದ್ದಾರೆ. ಅವರು ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ಎಪಿಜೆ ಅಬ್ದುಲ್ ಕಲಾಂ ಮಿಸೈಲ್ ಕಾಂಪ್ಲೆಕ್ಸ್ ಸೇರಿದಂತೆ ದೇಶದ ಪ್ರತಿಷ್ಠಿತ ವಿಜ್ಞಾನ ಸಂಸ್ಥೆಗಳಿಗೆ ಭೇಟಿ ನೀಡಿದ್ದಾರೆ.

ರಾಜತಾಂತ್ರಿಕ ಸಂಬಂಧಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವರು 19ನೇ ಶಾಂಘೈ ಸಹಕಾರ ಸಂಘಟನೆ ಮಂಡಳಿಯ ವರ್ಚುವಲ್ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ಬಹ್ರೇನ್ ವಿದೇಶಾಂಗ ಸಚಿವರನ್ನು ಭೇಟಿ ಮಾಡಿ, ಉಭಯ ದೇಶಗಳ ಸ್ನೇಹ ಸಂಬಂಧ ಬಲವರ್ಧನೆಗೆ ಒತ್ತು ನೀಡಿದ್ದಾರೆ.

ರಾಜ್ಯಸಭೆ ಸಭಾಪತಿಯಾಗಿ ಅವರು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಬಲಪಡಿಸಲು ಸ್ಥಿರವಾಗಿ ಶ್ರಮಿಸುತ್ತಾ ಬಂದಿದ್ದಾರೆ. ಕೋವಿಡ್-19  ಸಂದರ್ಭದಲ್ಲಿ ರಾಜ್ಯಸಭೆಯ ಕಲಾಪ ಸುಗಮವಾಗಿ ನಡೆಸಲು ಹಾಕಿದ ಪ್ರಯತ್ನಗಳ ಫಲವಾಗಿ ರಾಜ್ಯಸಭೆಯ ಕಲಾಪಗಳ ಉತ್ಪಾದಕತೆ 2020-21ರಲ್ಲಿ ಬಜೆಟ್ ಅಧಿವೇಶನದ ತನಕ 95.82%ಗೆ ಸುಧಾರಣೆ ಕಂಡಿದೆ. ವರ್ಷದಲ್ಲಿ ಪ್ರಮುಖ 44 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ರಾಜ್ಯಸಭೆಯ ನಾನಾ ಸಮಿತಿಗಳು 74 ವರದಿಗಳನ್ನು ಸಲ್ಲಿಸಿವೆ. ನಾಲ್ಕು ವರ್ಷಗಳಲ್ಲಿ ಇದು ಅತ್ಯಧಿಕ.

ಶ್ರೀ ಎಂ. ವೆಂಕಯ್ಯನಾಯ್ಡು ನೇತೃತ್ವದಲ್ಲಿ ರಾಜ್ಯಸಭೆಯ ಅಧಿಕೃತ ವಾಹಿನಿ ಆರ್|ಎಸ್ ಟಿವಿ ಹೊಸ ಎತ್ತರಕ್ಕೆ ಬೆಳೆದಿದೆ. ವಾಹಿನಿಯ ಯೂಟ್ಯೂಬ್ ಚಂದಾದಾರರ ನೆಲೆ ಕಳೆದ ನಾಲ್ಕು ವರ್ಷಗಳಲ್ಲಿ 5 ಲಕ್ಷದಿಂದ 59 ಲಕ್ಷಕ್ಕೆ ಏರಿಕೆ ಆಗಿದೆ. ತರುವಾಯ ರಾಜ್ಯಸಭಾ ಸಭಾಪತಿ ಅವರು ರಚಿಸಿದ ಸಮಿತಿಯು ರಾಜ್ಯಸಭೆ ಟಿವಿ ಮತ್ತು ಲೋಕಸಭೆ ಟಿವಿಯನ್ನು ವಿಲೀನಗೊಳಿಸಿ, ಹೊಸ ಸಂಸದ್ ಟಿವಿ ಸೃಜಿಸಿದೆ. ಇದಕ್ಕೆ ವ್ಯಾಪಕ ಸ್ಪಂದನೆ ಸಿಗುತ್ತಿದೆ.

ನಾಲ್ಕು ವರ್ಷಗಳ ಆಡಳಿತ ಪೂರ್ಣಗೊಳಿಸಿದ ಹಿನ್ನೆಲೆ ಉಪರಾಷ್ಟ್ರಪತಿ ಶ್ರೀ ಎಂ. ವೆಂಕಯ್ಯನಾಯ್ಡು ಅವರು ಸಂಸತ್ ಭವನದ ಆವರಣದಲ್ಲಿಂದು  ಸಸಿ ನೆಟ್ಟು ನೀರೆರೆದರು.

***



(Release ID: 1744823) Visitor Counter : 276