ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಭಾರತದಲ್ಲಿ ಭರದಿಂದ ಸಾಗಿದ ಬೃಹತ್ ಕೋವಿಡ್-19 ಲಸಿಕೆ ಅಭಿಯಾನ; 51.90 ಕೋಟಿ ಡೋಸ್ ದಾಟಿದ ಲಸಿಕೆ ನೀಡಿಕೆ ಪ್ರಮಾಣ
ಕಳೆದ 24 ತಾಸುಗಳಲ್ಲೇ 41 ಲಕ್ಷಕ್ಕಿಂತ ಹೆಚ್ಚಿನ ಡೋಸ್ ಲಸಿಕೆ ನೀಡಿಕೆ
ಭಾರತದಲ್ಲಿ ಗರಿಷ್ಠ ಮಟ್ಟಕ್ಕೆ ಏರಿದ ಕೋವಿಡ್-19 ಚೇತರಿಕೆ ದರ; 97.45%ಗೆ ಸುಧಾರಣೆ
ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 38,353 ಹೊಸ ಕೊರೊನಾ ಪ್ರಕರಣಗಳು ಪತ್ತೆ
ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 3,86,351ಕ್ಕೆ ಇಳಿಕೆ; ಕಳೆದ 140 ದಿನಗಳಲ್ಲಿ ಅತ್ಯಂತ ಕನಿಷ್ಠ
ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ ಕೇವಲ 1.21%ಗೆ ಇಳಿಕೆ
ದೈನಂದಿನ ಪಾಸಿಟಿವಿಟಿ ದರ 2.16%ಗೆ ಇಳಿಕೆ; ಸತತ 16 ದಿನಗಳಿಂದ 3% ಮಟ್ಟದಿಂದ ಕೆಳಗೆ
Posted On:
11 AUG 2021 10:24AM by PIB Bengaluru
ಭಾರತದಲ್ಲಿ ಭರದಿಂದ ಸಾಗಿರುವ ಬೃಹತ್ ಕೋವಿಡ್-19 ಲಸಿಕೆ ಅಭಿಯಾನದಲ್ಲಿ ಇದುವರೆಗೆ 51.90 ಕೋಟಿಗಿಂತ ಹೆಚ್ಚಿನ ಅಂದರೆ 51,90,80,524 ಡೋಸ್ ಲಸಿಕೆ ಹಾಕಲಾಗಿದೆ. ಇಂದು ಬೆಳಗ್ಗೆ 7 ಗಂಟೆಗೆ ಲಭ್ಯವಾಗಿರುವ ತಾತ್ಕಾಲಿಕ ವರದಿ ಪ್ರಕಾರ, 59,57,616 ಆಂದೋಲನಗಳಲ್ಲಿ ಈ ಸಾಧನೆ ಮಾಡಲಾಗಿದೆ. ಕಳೆದ 24 ತಾಸುಗಳಲ್ಲಿ ದೇಶಾದ್ಯಂತ 41,38,646 ಡೋಸ್ ಲಸಿಕೆ ನೀಡಲಾಗಿದೆ.
ಈ ಕೆಳಗಿನ ಗುಂಪುಗಳು ಅದರಲ್ಲಿ ಸೇರಿವೆ:
ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು
|
ಮೊದಲ ಡೋಸ್
|
1,03,38,727
|
2ನೇ ಡೋಸ್
|
80,17,291
|
ಮುಂಚೂಣಿ ಕಾರ್ಯಕರ್ತರು
|
ಮೊದಲ ಡೋಸ್
|
1,82,42,071
|
2ನೇ ಡೋಸ್
|
1,18,74,095
|
18-44 ವಯೋಮಾನದವರು
|
ಮೊದಲ ಡೋಸ್
|
18,23,88,445
|
2ನೇ ಡೋಸ್
|
1,29,63,932
|
45-59 ವಯೋಮಾನದವರು
|
ಮೊದಲ ಡೋಸ್
|
11,34,11,880
|
2ನೇ ಡೋಸ್
|
4,35,83,965
|
60 ವರ್ಷ ದಾಟಿದವರು
|
ಮೊದಲ ಡೋಸ್
|
7,92,14,965
|
2ನೇ ಡೋಸ್
|
3,90,45,153
|
ಒಟ್ಟು
|
51,90,80,524
|
ಲಸಿಕೆ ಅಭಿಯಾನ ಸಾರ್ವತ್ರೀಕರಣದ ಹೊಸ ಹಂತ 2021 ಜೂನ್ 21ರಿಂದ ದೇಶಾದ್ಯಂತ ಆರಂಭವಾಗಿದೆ. ಕೇಂದ್ರ ಸರ್ಕಾರವು ಬೃಹತ್ ಕೋವಿಡ್-19 ಲಸಿಕೆ ಅಭಿಯಾನದ ವ್ಯಾಪ್ತಿ ಹೆಚ್ಚಿಸಲು ಮತ್ತು ಈ ಕಾರ್ಯಕ್ರಮದ ಗತಿಗೆ ವೇಗ ನೀಡಲು ಬದ್ಧವಾಗಿದೆ.
ಭಾರತದ ಚೇತರಿಕೆ ದರ ಕಳೆದ 24 ತಾಸುಗಳಲ್ಲಿ 97.45%ಗೆ ಏರಿಕೆ ಕಂಡಿದೆ. ಕೊರೊನಾ ಸಾಂಕ್ರಾಮಿಕ ಸೋಂಕು ದೇಶದಲ್ಲಿ ಕಾಣಿಸಿಕೊಂಡ ಆರಂಭದಿಂದ ಇಲ್ಲಿಯ ತನಕ ಚೇತರಿಕೆ ದರದಲ್ಲಿ ಅತ್ಯಂತ ಗರಿಷ್ಠ ಸುಧಾರಣೆ ಕಂಡುಬಂದಿದೆ.
ಸಾಂಕ್ರಾಮಿಕ ಸೋಂಕು ದೇಶದಲ್ಲಿ ಕಾಣಿಸಿಕೊಂಡಾಗಿನಿಂದ ಇದುವರೆಗೆ ಒಟ್ಟು 3,12,20,981 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಕಳೆದ 24 ತಾಸುಗಳಲ್ಲೇ ದೇಶಾದ್ಯಂತ 40,013 ರೋಗಿಗಳು ಗುಣಮುಖರಾಗಿದ್ದಾರೆ.
ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 38,353 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.
ಸತತ 45 ದಿನಗಳಿಂದ ಕಾಣಿಸಿಕೊಳ್ಳುತ್ತಿರುವ ಹೊಸ ಕೊರೊನಾ ಪ್ರಕರಣಗಳ ಸಂಖ್ಯೆ 50,000 ಮಟ್ಟದಿಂದ ಕೆಳಗಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಸುಸ್ಥಿರ ಮತ್ತು ಜಂಟಿ ಸಹಭಾಗಿತ್ವದ ಪ್ರಯತ್ನಗಳ ಫಲವಾಗಿ ಹೊಸ ಕೊರೊನಾ ಪ್ರಕರಣಗಳ ಪ್ರಮಾಣ ದಿನೇದಿನೆ ತಗ್ಗುತ್ತಾ ಬಂದಿದೆ.
ಭಾರತದ ಸಕ್ರಿಯ ಪ್ರಕರಣಗಳ ಪ್ರಮಾಣ ಇದೀಗ 3,86,351ಕ್ಕೆ ಇಳಿಕೆ ಕಂಡಿದೆ. ಕಳೆದ 140 ದಿನಗಳಲ್ಲಿ ಕಂಡುಬಂದಿರುವ ಕನಿಷ್ಠ ಪ್ರಮಾಣ ಇದಾಗಿದೆ. ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1.21%ಗೆ ಇಳಿಕೆಯಾಗಿದೆ. ಇದು ಸಹ 2020 ಮಾರ್ಚ್|ನಿಂದ ಇಲ್ಲಿಯ ತನಕ ಆಗಿರುವ ಕನಿಷ್ಠ ಪ್ರಮಾಣ ಇದಾಗಿದೆ.
ದೇಶಾದ್ಯಂತ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಕಳೆದ 24 ತಾಸುಗಳಲ್ಲಿ 17,77,962 ಪರೀಕ್ಷೆಗಳನ್ನು ನಡೆಸಲಾಗಿದೆ. ಇದರೊಂದಿಗೆ ದೇಶಾದ್ಯಂತ ಒಟ್ಟು 48.50 ಕೋಟಿಗಿಂತ ಹೆಚ್ಚಿನ ಅಂದರೆ 48,50,56,507 ಪರೀಕ್ಷೆಗಳನ್ನು ನಡೆಸಲಾಗಿದೆ.
ಒಂದೆಡೆ, ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿರುವ ಪರಿಣಾಮ, ವಾರದ ಪಾಸಿಟಿವಿಟಿ ದರ ಪ್ರಸ್ತುತ 2.34%ಗೆ ಮತ್ತು ದೈನಂದಿನ ಪಾಸಿಟಿವಿಟಿ ದರ 2.16%ಗೆ ಇಳಿಕೆ ಕಂಡಿದೆ. ಸತತ 16 ದಿನಗಳಿಂದ ದೈನಂದಿನ ಪಾಸಿಟಿವಿಟಿ ದರ 3% ಮಟ್ಟದಿಂದ ಕೆಳಗಿದೆ. ಸತತ 65 ದಿನಗಳಿಂದ ಅದು 5% ಮಟ್ಟದಿಂದ ಕೆಳಗೆ ಕಾಯ್ದುಕೊಂಡಿದೆ.
***
(Release ID: 1744751)
Visitor Counter : 278