ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದ ಒಟ್ಟಾರೆ ಕೋವಿಡ್-19 ಲಸಿಕೆ ವ್ಯಾಪ್ತಿ 50.68 ಕೋಟಿ ದಾಟಿದೆ


56 ಲಕ್ಷ ಲಸಿಕೆ ಡೋಸ್ ಗಳನ್ನು ಕಳೆದ 2 ಗಂಟೆಗಳ ಅವಧಿಯಲ್ಲಿ ನೀಡಲಾಗಿದೆ

ಪ್ರಸ್ತುತ ಚೇತರಿಕೆಯ ದರ ಶೇ.97.39

39,070 ದೈನಿಕ ಹೊಸ ಪ್ರಕರಣಗಳು ಕಳೆದ 24 ಗಂಟೆಯಲ್ಲಿ ದಾಖಲಾಗಿವೆ

ಭಾರತದ ಸಕ್ರಿಯ ಪ್ರಕರಣಗಳು (4,06,822) ಒಟ್ಟು ಪ್ರಕರಣದಲ್ಲಿ  ಪ್ರಸ್ತುತ ಶೇ.1.27 ಆಗಿವೆ

ದೈನಿಕ ಪಾಸಿಟಿವಿಟಿ ದರ (ಶೇ.2.27) ಕಳೆದ 13 ದಿನಗಳಲ್ಲಿ ಶೇ.3ಕ್ಕಿಂತ ಕಡಿಮೆ

Posted On: 08 AUG 2021 9:41AM by PIB Bengaluru

ಭಾರತದ ಕೋವಿಡ್ -19 ಲಸಿಕೆ ವ್ಯಾಪ್ತಿ ಒಟ್ಟಾರೆ 50.68 ಕೋಟಿ ದಾಟಿದೆ,  ಇಂದು ಬೆಳಗ್ಗೆ 7 ಗಂಟೆಯವರೆಗಿನ ತಾತ್ಕಾಲಿಕ ವರದಿಯ ರೀತ್ಯ 50,68,10,492  ಡೋಸ್ ಲಸಿಕೆಗಳನ್ನು 58,51,292 ಅಧಿವೇಶನಗಳಲ್ಲಿ ನೀಡಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ 55,91,657 ಲಸಿಕೆ ಡೋಸ್ ಗಳನ್ನು ನೀಡಲಾಗಿದೆ.

ಇವುಗಳಲ್ಲಿ ಈ ಕೆಳಗಿನವು ಸೇರಿವೆ:

ಎಚ್.ಸಿ.ಡಬ್ಲ್ಯು.ಗಳು

1ನೇ ಡೋಸ್

1,03,32,085

2ನೇ ಡೋಸ್

79,74,385

ಎಫ್.ಎಲ್.ಡಬ್ಲ್ಯು.ಗಳು

1ನೇ ಡೋಸ್

1,82,15,157

2ನೇ ಡೋಸ್

1,17,33,363

18-44ವರ್ಷದೊಳಗಿನವರು

1ನೇ ಡೋಸ್

17,58,22,657

2ನೇ ಡೋಸ್

1,18,44,743

45ರಿಂದ 59 ವರ್ಷದೊಳಗಿನವರು

1ನೇ ಡೋಸ್

11,16,30,145

2ನೇ ಡೋಸ್

4,24,75,061

60 ವರ್ಷ ಮೇಲ್ಪಟ್ಟವರು

1ನೇ ಡೋಸ್

7,83,78,107

2ನೇ ಡೋಸ್

3,84,04,789

ಒಟ್ಟು

50,68,10,492

2021ರ ಜೂನ್ 21ರಿಂದ ಕೋವಿಡ್ -19 ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ಹೊಸ ಹಂತ ಆರಂಭಗೊಂಡಿದೆ. ಕೇಂದ್ರ ಸರ್ಕಾರ ದೇಶದಾದ್ಯಂತ ಕೋವಿಡ್ 19 ಲಸಿಕೆಯ ವ್ಯಾಪ್ತಿಯ ವೇಗವನ್ನು ಹೆಚ್ಚಿಸಲು ಮತ್ತು ವಿಸ್ತರಿಸಲು ಬದ್ಧವಾಗಿದೆ.

ಸಾಂಕ್ರಾಮಿಕದ ಆರಂಭವಾದ ದಿನದಿಂದ ಕೋವಿಡ್- 19ರಿಂದ 3,10,99,771 ಜನರು ಸೋಂಕಿತರು ಗುಣಮುಖರಾಗಿದ್ದರೆ, ಕಳೆದ 24ಗಂಟೆಗಳ ಅವಧಿಯಲ್ಲಿ 43,910 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದು ದೇಶದ ಒಟ್ಟಾರೆ ಚೇತರಿಕೆಯನ್ನು ಶೇ.97.39ಕ್ಕೆ ಹೆಚ್ಚಿಸಿದೆ.

ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 39,070 ದೈನಿಕ ಹೊಸ ಪ್ರಕರಣಗಳು ವರದಿಯಾಗಿವೆ.

50,000 ಕ್ಕಿಂತ ಕಡಿಮೆ ದೈನಿಕ ಹೊಸ ಪ್ರಕರಣಗಳು ಕಳೆದ ಸತತ 42 ದಿನಗಳಿಂದ ವರದಿಯಾಗುತ್ತಿವೆ. ಇದು ಕೇಂದ್ರ ಮತ್ತು ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಮತ್ತು ಸಹಯೋಗಿ ಪ್ರಯತ್ನದ ಫಲವಾಗಿದೆ.

ಭಾರತದ ಸಕ್ರಿಯ ಪ್ರಕರಣಗಳು ಇಂದು 4,06,822 ರಲ್ಲಿದ್ದು, ಒಟ್ಟು ಸೋಂಕಿನ ಪ್ರಕರಣಗಳ ಪೈಕಿ ಶೇ.1.27ರಷ್ಟು ಸಕ್ರಿಯ ಪ್ರಕರಣಗಳಿವೆ.

ದೇಶದಾದ್ಯಂತ ಪರೀಕ್ಷೆಯ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಒಟ್ಟು 17,22,221 ಪರೀಕ್ಷೆಗಳನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ ಮಾಡಲಾಗಿದೆ. ಒಟ್ಟಾರೆಯಾಗಿ ದೇಶದಲ್ಲಿ 48 ಕೋಟಿ (48,00,39,185) ಪರೀಕ್ಷೆಯನ್ನು ಈವರೆಗೆ ನಡೆಸಲಾಗಿದೆ.

ಒಂದೆಡೆ ದೇಶದಲ್ಲಿ ಪರೀಕ್ಷಾ ಸಾಮರ್ಥ್ಯ ಹೆಚ್ಚಾಗುತ್ತಿದ್ದರೆ, ಸಾಪ್ತಾಹಿಕ ಪಾಸಿಟಿವಿಟಿ ದರ ಪ್ರಸ್ತುತ ಶೇ.238ರಷ್ಟಿದೆ. ಮತ್ತು ದೈನಿಕ ಪಾಸಿಟಿವಿಟಿ ದರ ಇಂದು ಶೇ.2.27ರಲ್ಲಿದೆ. ದೈನಿಕ ಪಾಸಿಟಿವಿಟಿ ದರ ಕಳೆದ 13 ದಿನಗಳಿಂದ ಶೇ.3ಕ್ಕಿಂತ ಕಡಿಮೆ ಇದ್ದು, ಸತತ 62 ದಿನಗಳಿಂದಲೂ ಶೇ.5ಕ್ಕಿಂತ ಕಡಿಮೆ ಇದೆ.

***



(Release ID: 1743789) Visitor Counter : 240