ಗೃಹ ವ್ಯವಹಾರಗಳ ಸಚಿವಾಲಯ

ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರು ನಾಮಕರಣ ಮಾಡಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಿರ್ಧಾರವನ್ನು ಸ್ವಾಗತಿಸಿದ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ


"ದೇಶದ ಉನ್ನತ ಕ್ರೀಡಾ ಗೌರವ 'ಖೇಲ್ ರತ್ನ' ವನ್ನು ಶ್ರೇಷ್ಠ ಕ್ರೀಡಾಪಟು ಮೇಜರ್ ಧ್ಯಾನ್ ಚಂದ್ ಹೆಸರಿನಿಂದ ಕರೆಯುವುದು, ಅವರಿಗೆ ನೀಡುವ ನೈಜ ಶ್ರದ್ಧಾಂಜಲಿ"

“ಈ ನಿರ್ಧಾರವು ಕ್ರೀಡಾ ಜಗತ್ತಿನೊಂದಿಗೆ ಸಂಪರ್ಕ ಹೊಂದಿರುವ ಎಲ್ಲ ವ್ಯಕ್ತಿಗಳೂ ಹೆಮ್ಮೆ ಪಡುವಂತೆ ಮಾಡಿದೆ, ಎಲ್ಲ ದೇಶವಾಸಿಗಳ ಪರಿವಾಗಿ ನಾನು ಶ್ರೀ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ”

“ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ"ಯು ಹಾಕಿ ಮಾಂತ್ರಿಕ ಧ್ಯಾನ್ ಚಂದ್  ಅವರ ರಾಷ್ಟ್ರದ ಸಮರ್ಪಣೆ,  ಗೌರವ ಮತ್ತು ಅವರ ಐತಿಹಾಸಿಕ ಸಾಧನೆಗಳು, ತ್ರಿವರ್ಣ ಧ್ವಜವನ್ನು ಕ್ರೀಡಾ ಜಗತ್ತಿನಲ್ಲಿ ಉನ್ನತ ಎತ್ತರಕ್ಕೆ ಹಾರಿಸುವ ಮೂಲಕ ದೇಶದ ಪ್ರತಿಯೊಬ್ಬ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ”

Posted On: 06 AUG 2021 5:08PM by PIB Bengaluru

ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ಅವರು ಖೇಲ್ ರತ್ನ ಪ್ರಶಸ್ತಿಯನ್ನು ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರು ನಾಮಕರಣ ಮಾಡಿರುವ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಟ್ವೀಟ್ ನಲ್ಲಿ ಶ್ರೀ ಅಮಿತ್ ಶಾ ಅವರು " ದೇಶದ ಪರಮೋಚ್ಚ ಕ್ರೀಡಾ ಪ್ರಶಸ್ತಿ  'ಖೇಲ್ ರತ್ನ ಪ್ರಶಸ್ತಿ'ಗೆ ಶ್ರೇಷ್ಠ  ಮೇಜರ್ ಧ್ಯಾನ್ ಚಂದ್ ಅವರ ಹೆಸರಿಟ್ಟಿರುವುದು ಅವರಿಗೆ ನೈಜ ಶ್ರದ್ಧಾಂಜಲಿಯಾಗಿದೆ..” “ ಸಮರ್ಪಣೆ ಕ್ರೀಡೆಯೊಂದಿಗೆ ಸಂಬಂಧಿಸಿರುವ ದೇಶದ ಪ್ರತಿಯೊಬ್ಬರಿಗೂ ಹೆಮ್ಮೆ ಎನಿಸುತ್ತದೆ, ನಾನು ಎಲ್ಲ ದೇಶವಾಸಿಗಳ ಪರವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ.

ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ"ಯು ಹಾಕಿ ಮಾಂತ್ರಿಕ ಧ್ಯಾನ್ ಚಂದ್  ಅವರ ರಾಷ್ಟ್ರದ ಸಮರ್ಪಣೆಗೌರವ ಮತ್ತು ಅವರ ಐತಿಹಾಸಿಕ ಸಾಧನೆಗಳು, ತ್ರಿವರ್ಣ ಧ್ವಜವನ್ನು ಕ್ರೀಡಾ ಜಗತ್ತಿನಲ್ಲಿ ಉನ್ನತ ಎತ್ತರಕ್ಕೆ ಹಾರಿಸುವ ಮೂಲಕ ದೇಶದ ಪ್ರತಿಯೊಬ್ಬ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡುತ್ತದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆಎಂದು ಕೇಂದ್ರ ಗೃಹ ಸಚಿವರು ತಿಳಿಸಿದ್ದಾರೆ.

***



(Release ID: 1743431) Visitor Counter : 291