ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

ದೇಶದ ಎಲ್ಲಾ ಜಿಲ್ಲೆಗಳ ವ್ಯಾಪ್ತಿಯಲ್ಲಿ 02.08.2021ರ ವೇಳೆಗೆ 8,001 ಜನೌಷಧ ಕೇಂದ್ರಗಳನ್ನು ತೆರೆಯಲಾಗಿದೆ


ಅಂಗಡಿ ಮಾಲೀಕರಿಗೆ ನೀಡಲಾಗುವ ಪ್ರೋತ್ಸಾಹ ಧನವನ್ನು ಪ್ರಸ್ತುತ ಇದ್ದ 2.50 ಲಕ್ಷ ರೂ.ಗಳಿಂದ 5.00 ಲಕ್ಷ ರೂ.ಗಳವರೆಗೆ ಸರಕಾರ ಹೆಚ್ಚಿಸಿದೆ

Posted On: 06 AUG 2021 12:28PM by PIB Bengaluru

ʻಪ್ರಧಾನಮಂತ್ರಿ ಭಾರತೀಯ ಜನೌಷಧ ಪರಿಯೋಜನೆʼ (ಪಿಎಂಬಿಜೆಪಿ) ಅಡಿಯಲ್ಲಿ, ಸರಕಾರವು ದೇಶದ ಎಲ್ಲಾ ಜಿಲ್ಲೆಗಳ ವ್ಯಾಪ್ತಿಯಲ್ಲಿ 02.08.2021 ಹೊತ್ತಿಗೆ 8,001 ʻಪ್ರಧಾನ ಮಂತ್ರಿ ಭಾರತೀಯ ಜನೌಷಧ ಕೇಂದ್ರʼಗಳನ್ನು (ಪಿಎಂಬಿಜೆಕೆ) ತೆರೆದಿದೆಅಲ್ಲದೆ, 2025 ಮಾರ್ಚ್ ವೇಳೆಗೆ ಇನ್ನೂ ಸುಮಾರು 10,500 ಜನೌಷಧಿ ಕೇಂದ್ರಗಳನ್ನು ತೆರೆಯುವ ಗುರಿಯನ್ನು ಹೊಂದಲಾಗಿದೆಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್‌ಸಿಗಳು)/ಸಮುದಾಯ ಆರೋಗ್ಯ ಕೇಂದ್ರಗಳು (ಸಿಎಚ್‌ಸಿಗಳು) ಸೇರಿದಂತೆ ಆಸ್ಪತ್ರೆಗಳ ಆವರಣದಲ್ಲಿ ಜನೌಷಧ ಕೇಂದ್ರಗಳನ್ನು ತೆರೆಯಲು ವ್ಯವಸ್ಥೆ ಮಾಡುವಂತೆ ರಾಜ್ಯ ಸರಕಾರಗಳು/ಕೇಂದ್ರಾಡಳಿತ ಪ್ರದೇಶಗಳು ಕಾಲಕಾಲಕ್ಕೆ ಮನವಿ ಮಾಡಿದ್ದವು. ಇದಕ್ಕಾಗಿ ಆಸ್ಪತ್ರೆಗಳ ಆವರಣದಲ್ಲಿ ಬಾಡಿಗೆ ರಹಿತ ಸ್ಥಳವನ್ನು ನೀಡಿದ್ದವುಪ್ರಸ್ತುತ 2 ಆಗಸ್ಟ್‌ 2021 ವೇಳೆಗೆ ಸುಮಾರು 1,012 ಜನೌಷಧ ಕೇಂದ್ರಗಳು ಸರಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿವೆ.

ಯೋಜನೆಯನ್ನು ಮುಂದುವರಿಸುವ ಮೊದಲು, ಏಜೆನ್ಸಿಯೊಂದರ ಮೂಲಕ ಮೌಲ್ಯಮಾಪನ ಮಾಡಲಾಯಿತು. ಸಂಸ್ಥೆಯು ಮಾಡಿದ ಶಿಫಾರಸುಗಳನ್ನು ಪರಿಗಣಿಸಿ, ಯೋಜನೆಯ ಮುಂದುವರಿಕೆಗಾಗಿ ಸ್ಥಾಯಿ ಹಣಕಾಸು ಸಮಿತಿಯ (ಎಸ್ಎಫ್‌ಸಿ) ಅನುಮೋದನೆ ಪಡೆಯುವ ಮೊದಲು ಸೂಕ್ತ ಬದಲಾವಣೆಗಳನ್ನು ಮಾಡಲಾಯಿತುಇದಲ್ಲದೆ, ಜನೌಷಧ ಕೇಂದ್ರಗಳ ಕಾರ್ಯಕ್ಷಮತೆ/ಕಾರ್ಯನಿರ್ವಹಣೆಯನ್ನು ಬ್ಯೂರೋದ ಸಿಇಒ ಮಟ್ಟದಲ್ಲಿ ಹಾಗೂ  ʻಫಾರ್ಮಾಸ್ಯೂಟಿಕಲ್ ಮತ್ತು ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾʼ (ಪಿಎಂಬಿಐ) ಮುಂತಾದ ಯೋಜನಾ ಅನುಷ್ಠಾನ ಸಂಸ್ಥೆಗಳ ಕಾರ್ಯನಿರ್ವಾಹಕರು ಮತ್ತು ಆಡಳಿತ ಮಂಡಳಿಯಿಂದ ಕಾಲಕಾಲಕ್ಕೆ ಪರಿಶೀಲನೆಗೆ ಒಳಪಡಿಸಲಾಗುತ್ತದೆ.

ʻವಿಶ್ವ ಆರೋಗ್ಯ ಸಂಸ್ಥೆಯ - ಉತ್ತಮ ಉತ್ಪಾದನಾ ಕಾರ್ಯವಿಧಾನʼ (ಡಬ್ಲ್ಯೂಹೆಚ್ಒ-ಜಿಎಂಪಿ) ಪ್ರಮಾಣೀಕೃತ ಘಟಕಗಳನ್ನು ಹೊಂದಿರುವ ದೇಶೀಯ ಔಷಧ ಉತ್ಪಾದನಾ ಕಂಪನಿಗಳಿಂದ ಜನೌಷಧ ಕೇಂದ್ರಗಳಿಗೆ ಔಷಧಗಳನ್ನು ಖರೀದಿಸಲಾಗುತ್ತದೆʻಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತಾ ಮಂಡಳಿʼ (ಎನ್‌ಎಬಿಎಲ್) ಅನುಮೋದನೆ ಪಡೆದ ಪ್ರಯೋಗಾಲಯಗಳಲ್ಲಿ ಔಷಧಗಳನ್ನು ಪರೀಕ್ಷಿಸಲಾಗುತ್ತದೆ. ನಂತರ ಔಷಧಗಳನ್ನು ಗುರುಗ್ರಾಮ್, ಚೆನ್ನೈ ಮತ್ತು ಗುವಾಹಟಿಯಲ್ಲಿರುವ ʻಪಿಎಂಬಿಐʼ ಗೋದಾಮುಗಳಿಗೆ ರವಾನಿಸಲಾಗುತ್ತದೆ. ಅಲ್ಲಿಂದ ಇವುಗಳನ್ನು ದೇಶಾದ್ಯಂತದ ಮಾರಾಟಗಾರರಿಗೆ ರವಾನಿಸಲಾಗುತ್ತದೆ. ಜನೌಷಧ ಕೇಂದ್ರಗಳಿಗೆ ಔಷಧಗಳ ಸಾಗಾಣಿಕೆ ಮತ್ತು ವಿತರಣೆಯನ್ನು ಬೆಂಬಲಿಸಲು ದೇಶವ್ಯಾಪಿಯಾಗಿ 37 ವಿತರಕರ ಜಾಲವನ್ನು ಸಹ ಸ್ಥಾಪಿಸಲಾಗಿದೆ.

ಅಂಗಡಿಯ ಮಾಲೀಕರಿಗೆ ನೀಡಲಾಗುತ್ತಿದ್ದ ಪ್ರೋತ್ಸಾಹ ಧನವನ್ನು ಸರಕಾರವು ಇತ್ತೀಚೆಗೆ ಹಾಲಿ 2.50 ಲಕ್ಷ ರೂ.ಗಳಿಂದ 5.00 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. ತಿಂಗಳಿಗೆ ರೂ. 15,000/- ಮಿತಿಗೆ ಒಳಪಟ್ಟು ಮಾಸಿಕ ಖರೀದಿಗಳಲ್ಲಿ 15% @ ಅನ್ನು ನೀಡಲಾಗಿದೆ. ಇದಲ್ಲದೆ, ಮಹತ್ವಾಕಾಂಕ್ಷೆಯ ಜಿಲ್ಲೆಗಳು, ಹಿಮಾಲಯ ಪ್ರದೇಶ, ದ್ವೀಪ ಪ್ರದೇಶಗಳು, ಈಶಾನ್ಯ ರಾಜ್ಯಗಳಲ್ಲಿ ತೆರೆಯಲಾದ ಜನೌಷಧ ಕೇಂದ್ರಗಳಿಗೆ ಪೀಠೋಪಕರಣಗಳು ಮತ್ತಿತರ ಮೂಲಸೌಕರ್ಯ ಸಂಬಂಧಿತ ಸಾಮಗ್ರಿಗಳ ಖರೀದಿಗಾಗಿ ಒಮ್ಮೆಗೆ 2 ಲಕ್ಷ ರೂ. ಪ್ರೋತ್ಸಾಹಧನ ನೀಡುವ ಪ್ರಸ್ತಾವನೆಗೂ ಸರಕಾರ ಇತ್ತೀಚೆಗೆ ಅನುಮೋದನೆ ನೀಡಿದೆ. ಮಹಿಳಾ ಉದ್ಯಮಿಗಳು, ದಿವ್ಯಾಂಗರು, ಎಸ್ಸಿಗಳು ಮತ್ತು ಎಸ್‌ಟಿಗಳು ತೆರೆದಿರುವ ಜನೌಷಧ ಕೇಂದ್ರಗಳಿಗೂ ಸೌಲಭ್ಯ ವಿಸ್ತರಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವರಾದ ಶ್ರೀ ಮನ್‌ಸುಖ್ ಮಾಂಡವಿಯಾ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರ ರೂಪದಲ್ಲಿ ಮಾಹಿತಿಯನ್ನು ನೀಡಿದ್ದಾರೆ.

***



(Release ID: 1743123) Visitor Counter : 262