ಕಲ್ಲಿದ್ದಲು ಸಚಿವಾಲಯ

ಕೇಂದ್ರ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿದ ಆಸ್ಟ್ರೇಲಿಯಾ ನಿಯೋಗ

Posted On: 06 AUG 2021 11:07AM by PIB Bengaluru

ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ್ ಜೋಶಿ ಅವರು ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಮತ್ತು ವಿಶೇಷ ವ್ಯಾಪಾರ ಪ್ರತಿನಿಧಿ ಶ್ರೀ ಟೋನಿ ಅಬಾಟ್ ನೇತೃತ್ವದ ಉನ್ನತ ಮಟ್ಟದ ನಿಯೋಗದೊಂದಿಗೆ ನಿನ್ನೆ ಇಲ್ಲಿ ಚರ್ಚೆ ನಡೆಸಿದರುಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವ್ಯಾಪಾರ ಮತ್ತು ಆರ್ಥಿಕ ಸಂಬಂಧವನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆಸಲು ನಿಯೋಗವು ಸಚಿವರನ್ನು ಭೇಟಿ ಮಾಡಿತು. ಭಾರತದ ಇಂಧನ ಅಗತ್ಯಗಳು ಮತ್ತು ಮಹತ್ವಾಕಾಂಕ್ಷೆಯ ನೀತಿ ಕಾರ್ಯಸೂಚಿಯನ್ನು ಬೆಂಬಲಿಸುವ ನಿಟ್ಟಿನಲ್ಲಿ ಆಸ್ಟ್ರೇಲಿಯಾದ ಸಂಪನ್ಮೂಲಗಳ ಬಳಕೆ ಸೇರಿದಂತೆ ಇಂಧನ ವಲಯದಲ್ಲಿನ ವ್ಯಾಪಕ ಬೆಳವಣಿಗೆಗಳ ಬಗ್ಗೆ ವಿಶೇಷವಾಗಿ ಚರ್ಚಿಸಲಾಯಿತು.

https://static.pib.gov.in/WriteReadData/Gallery/PhotoGallery/2021/Aug/H2021080599601.JPG

ಶ್ರೀ ಅಬಾಟ್ ಅವರೊಂದಿಗೆ ಆಸ್ಟ್ರೇಲಿಯಾದ ಹೈಕಮಿಷನರ್ ಶ್ರೀ ಬ್ಯಾರಿ 'ಫಾರೆಲ್ ಎಒ ಮತ್ತು ಆಸ್ಟ್ರೇಲಿಯಾದ ಹೈಕಮಿಷನ್ ಆರ್ಥಿಕ ಸಲಹೆಗಾರ ಶ್ರೀ ಹಗ್ ಬಾಯ್ಲಾನ್ ಉಪಸ್ಥಿತರಿದ್ದರು.

ಪ್ರಸ್ತುತ ಆಡಳಿತದಲ್ಲಿ ಕಲ್ಲಿದ್ದಲು ವಲಯವನ್ನು ಮುಕ್ತಗೊಳಿಸಿರುವ ಬಗ್ಗೆ ನಿಯೋಗಕ್ಕೆ ಸಚಿವರು ಮಾಹಿತಿ ನೀಡಿದರು. ಭಾರತದಲ್ಲಿ ಕಲ್ಲಿದ್ದಲು ಪ್ರಮುಖ ಇಂಧನ ಮೂಲವಾಗಿರುವುದನ್ನು ಒತ್ತಿ ಹೇಳಿದ ಸಚಿವರು, ದೇಶದಲ್ಲಿ ಕಲ್ಲಿದ್ದಲು ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸಲು ಸೂಕ್ತ ಉತ್ತೇಜನದ ಮೂಲಕ ಸರಕಾರವು ಗಮನ ಹರಿಸುತ್ತಿರುವುದರ ಬಗ್ಗೆ ಮಾಹಿತಿ ನೀಡಿದರು. ಭೂಮೇಲ್ಮೈ ಮತ್ತು ಭೂಗತ ಕಲ್ಲಿದ್ದಲು ಅನಿಲೀಕರಣ ಹಾಗೂ ಕೋಲ್‌ ಬೆಡ್‌ ಮೀಥೇನ್ (ಸಿಬಿಎಂ) ಹೊರತೆಗೆಯುವಿಕೆ ಮುಂತಾದ ಕ್ಷೇತ್ರಗಳಲ್ಲಿ ತಂತ್ರಜ್ಞಾನದ ಹಂಚಿಕೆಗೆ ಸಂಬಂಧಿಸಿದಂತೆ ಭಾರತದೊಂದಿಗೆ ಸಹಯೋಗಕ್ಕೆ ಮುಂದಾಗುವಂತೆ ಆಸ್ಟ್ರೇಲಿಯಾದ ನಿಯೋಗಕ್ಕೆ ಸಚಿವರು ಮನವಿ ಮಾಡಿದರು.

ಭಾರತದಲ್ಲಿ ವಿದ್ಯುತ್‌ ಚಾಲಿತ ವಾಹನಗಳ (.ವಿ) ಉತ್ಪಾದನೆಗೆ ಅಗತ್ಯವಾದ ಖನಿಜಗಳ ಮೂಲವಾಗಿ ಆಸ್ಟ್ರೇಲಿಯಾ ಭಾರತಕ್ಕೆ ಹೇಗೆ ಮುಖ್ಯ ಎಂಬ ಬಗ್ಗೆ ಸಚಿವರು ವಿಶದಪಡಿಸಿದರು.

ಕಲ್ಲಿದ್ದಲು ಸಚಿವಾಲಯದ ಕಾರ್ಯದರ್ಶಿ ಡಾ. ಅನಿಲ್ ಕುಮಾರ್ ಜೈನ್, ಗಣಿ ಸಚಿವಾಲಯದ ಕಾರ್ಯದರ್ಶಿ ಶ್ರೀ ಅಲೋಕ್ ಟಂಡನ್ ಮತ್ತು ಎರಡೂ ಸಚಿವಾಲಯಗಳ ಇತರ ಹಿರಿಯ ಅಧಿಕಾರಿಗಳು ಚರ್ಚೆಯಲ್ಲಿ ಭಾಗವಹಿಸಿದ್ದರು.

***



(Release ID: 1743085) Visitor Counter : 230