ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

48 ಕೋಟಿ ಹೆಗ್ಗುರುತು ದಾಟಿದ ಭಾರತದ ಒಟ್ಟು ಕೋವಿಡ್-19 ಲಸಿಕೆ ವ್ಯಾಪ್ತಿ


ಕಳೆದ 24 ಗಂಟೆಗಳಲ್ಲಿ 60 ಲಕ್ಷಕ್ಕೂ ಹೆಚ್ಚು ಲಸಿಕೆ ಡೋಸ್ ಗಳನ್ನು ನೀಡಲಾಗಿದೆ

 ಚೇತರಿಕೆ ದರವು 97.37%ರಷ್ಟಿದೆ

ಕಳೆದ 24 ಗಂಟೆಗಳಲ್ಲಿ 42,625 ಹೊಸ ದೈನಂದಿನ ಪ್ರಕರಣಗಳು ವರದಿಯಾಗಿವೆ

ಭಾರತದ ಸಕ್ರಿಯ ಪ್ರಕರಣಗಳ ಹೊರೆ (4,10,353) ಪ್ರಸ್ತುತ ಒಟ್ಟು ಪ್ರಕರಣಗಳಲ್ಲಿ 1.29% ರಷ್ಟಷ್ಟಿದ್ದು, ಅದೇ  ಮಟ್ಟದಲ್ಲಿ ಮುಂದುವರಿದಿದೆ

ದೈನಂದಿನ ಪಾಸಿಟಿವಿಟಿ ದರ ಸತತ 58 ದಿನಗಳಿಂದ 5% (2.31%) ಕ್ಕಿಂತ ಕಡಿಮೆ ಮಟ್ಟದಲ್ಲಿದೆ

Posted On: 04 AUG 2021 9:35AM by PIB Bengaluru

ಭಾರತದ ಕೋವಿಡ್-19 ಲಸಿಕೆ ವ್ಯಾಪ್ತಿ ನಿನ್ನೆ 48 ಕೋಟಿ ಹೆಗ್ಗುರುತನ್ನು ದಾಟಿದೆ.

ಒಟ್ಟಾರೆಯಾಗಿ, ಇಂದು ಬೆಳಿಗ್ಗೆ 7 ಗಂಟೆಯವರೆಗಿನ ವರದಿಯ ಪ್ರಕಾರ, 56,83,682 ಸೆಷನ್‌ಗಳ ಮೂಲಕ 48,52,86,570  ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.   ಕಳೆದ 24 ಗಂಟೆಗಳಲ್ಲಿ 62,53,741  ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.

ಇದರಲ್ಲಿ ಇವು ಸೇರಿವೆ:

ಆರೋಗ್ಯ ಕಾರ್ಯಕರ್ತರು

1ನೇ  ಡೋಸ್

1,03,18,462

2ನೇ  ಡೋಸ್

79,00,794

ಮುಂಚೂಣಿ ಕಾರ್ಯಕರ್ತರು

1ನೇ  ಡೋಸ್

1,80,03,726

2ನೇ  ಡೋಸ್

1,14,89,972

18-44 ವರ್ಷ ವಯೋಮಾನದವರು

1ನೇ ಡೋಸ್

16,41,84,445

2ನೇ  ಡೋಸ್

98,50,898

45-59 ವರ್ಷ ವಯೋಮಾನದವರು

1ನೇ  ಡೋಸ್

10,85,51,839

2ನೇ ಡೋಸ್

4,06,01,807

60 ವರ್ಷ ಮೀರಿದವರು

1ನೇ  ಡೋಸ್

7,70,32,125

2ನೇ ಡೋಸ್

3,73,52,502

ಒಟ್ಟು

48,52,86,570

ಕೋವಿಡ್-19 ಲಸಿಕೆಯ ಸಾರ್ವತ್ರೀಕರಣದ ಹೊಸ ಹಂತವು 2021ರ ಜೂನ್ 21 ರಿಂದ ಪ್ರಾರಂಭವಾಗಿದೆ. ಕೋವಿಡ್-19 ಲಸಿಕೆಯ ವ್ಯಾಪ್ತಿಯನ್ನು ದೇಶಾದ್ಯಂತ ವಿಸ್ತರಿಸಲು ಮತ್ತು ವೇಗವನ್ನು ಹೆಚ್ಚಿಸಲು ಕೇಂದ್ರ ಸರಕಾರ ಬದ್ಧವಾಗಿದೆ.

ಸಾಂಕ್ರಾಮಿಕದ ಆರಂಭದಿಂದ ಸೋಂಕಿಗೆ ಒಳಗಾದವರ ಪೈಕಿ ಈಗಾಗಲೇ 3,09,33,022 ಮಂದಿ , ಕೋವಿಡ್-19 ನಿಂದ ಚೇತರಿಸಿಕೊಂಡಿದ್ದಾರೆ  ಮತ್ತು ಕಳೆದ 24 ಗಂಟೆಗಳಲ್ಲಿ 36,668  ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದು ಒಟ್ಟಾರೆ 97.37% ಚೇತರಿಕೆ ದರವನ್ನು ಸೂಚಿಸುತ್ತದೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 42,625 ಹೊಸ ದೈನಂದಿನ ಪ್ರಕರಣಗಳು ವರದಿಯಾಗಿವೆ.

ಸತತ ಮೂವತ್ತೆಂಟು ದಿನಗಳಿಂದ 50,000 ಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳುವರದಿಯಾಗುತ್ತಿವೆ. ಇದು ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಿರಂತರ ಮತ್ತು ಸಹಯೋಗದ ಪ್ರಯತ್ನಗಳ ಫಲವಾಗಿದೆ.

ಭಾರತದ ಸಕ್ರಿಯ ಪ್ರಕರಣಗಳ ಹೊರೆಯು ಇಂದು 4,10,353 ರಷ್ಟಿದ್ದು, ಸಕ್ರಿಯ ಪ್ರಕರಣಗಳ ಪ್ರಮಾಣ ದೇಶದ ಒಟ್ಟು ಪಾಸಿಟಿವ್‌ ಪ್ರಕರಣಗಳಲ್ಲಿ 1.29% ರಷ್ಟಿದೆ.

ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿರುವುದರಿಂದ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 18,47,518 ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಾರೆಯಾಗಿ, ಭಾರತವು ಇದುವರೆಗೂ 47.31 ಕೋಟಿ (47,31,42,307)ಪರೀಕ್ಷೆಗಳನ್ನು ನಡೆಸಿದೆ.

ಒಂದೆಡೆ ಪರೀಕ್ಷಾ ಸಾಮರ್ಥ್ಯವನ್ನು ದೇಶಾದ್ಯಂತ ಹೆಚ್ಚಿಸಲಾಗಿದ್ದರೂ, ಪ್ರಸ್ತುತ ಸಾಪ್ತಾಹಿಕ ಪಾಸಿಟಿವಿಟಿ ದರವು 2.36% ರಷ್ಟಿದೆ ಮತ್ತು  ದೈನಂದಿನ ಧನಾತ್ಮಕತೆಯ ದರವು ಇಂದು 2.31% ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರವು ಸತತ 58 ದಿನಗಳಿಂದ ಶೇ. 5% ಕ್ಕಿಂತ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ.

***(Release ID: 1742210) Visitor Counter : 202