ನಾಗರೀಕ ವಿಮಾನಯಾನ ಸಚಿವಾಲಯ

ಈಶಾನ್ಯ ಭಾರತದೊಂದಿಗೆ ವಾಯುಯಾನ ಸಂಪರ್ಕ ಬಲಪಡಿಸುವಲ್ಲಿ ಹೊಸ ಮೈಲಿಗಲ್ಲಿನ ಸಾಧನೆ


ಉಡಾನ್ ಅಡಿಯಲ್ಲಿ ಇಂಫಾಲ್ - ಶಿಲ್ಲಾಂಗ್ ಮಾರ್ಗದ ಪ್ರಥಮ ನೇರ ವಿಮಾನ ಕಾರ್ಯಾಚರಣೆಗೆ ಹಸಿರು ನಿಶಾನೆ

ಈವರೆಗೆ ಉಡಾನ್ ಅಡಿಯಲ್ಲಿ 361 ಮಾರ್ಗಗಳ ಕಾರ್ಯಾರಂಭ

Posted On: 04 AUG 2021 10:21AM by PIB Bengaluru

ಇಂಫಾಲ್ (ಮಣಿಪುರ) ಮತ್ತು ಶಿಲ್ಲಾಂಗ್ (ಮೇಘಾಲಯ) ನಡುವಿನ ಮೊದಲ ನೇರ ವಿಮಾನ ಹಾರಾಟಕ್ಕೆ ನಿನ್ನೆ ಭಾರತ ಸರ್ಕಾರದ ಆರ್.ಸಿ.ಎಸ್.-ಉಡಾನ್ (ಪ್ರಾದೇಶಿಕ ಸಂಪರ್ಕ ಯೋಜನೆ-ಉಡೆ ದೇಶ್ ಕಾ ಆಮ್ ನಾಗರಿಕ್) ಅಡಿಯಲ್ಲಿ ಚಾಲನೆ ನೀಡಲಾಯಿತು. ಈ ಮಾರ್ಗದ ಕಾರ್ಯಾಚರಣೆಯು ಈಶಾನ್ಯ ಭಾರತದ ಆದ್ಯತೆಯ ಪ್ರದೇಶಗಳಲ್ಲಿ ಬಲಿಷ್ಠ ವೈಮಾನಿಕ ಸಂಪರ್ಕವನ್ನು ಸ್ಥಾಪಿಸುವ ಭಾರತ ಸರ್ಕಾರದ ಉದ್ದೇಶಗಳನ್ನು ಈಡೇರಿಸುತ್ತದೆ. ವಿಮಾನಯಾನಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ, ನಾಗರಿಕ ವಿಮಾನಯಾನ ಸಚಿವಾಲಯ (ಎಂ.ಓ.ಸಿ.ಎ) ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ದ ಅಧಿಕಾರಿಗಳು ಉಪಸ್ಥಿತರಿದ್ದರು.

ಮಣಿಪುರ ಮತ್ತು ಮೇಘಾಲಯದ ರಾಜಧಾನಿ ನಗರಗಳ ನಡುವಿನ ವೈಮಾನಿಕ ಸಂಪರ್ಕ ಈ ವಲಯದ ಜನರ ದೀರ್ಘ ಕಾಲದ ಬೇಡಿಕೆಯಾಗಿತ್ತು.ಸುಂದರ ನಗರಿ ಶಿಲ್ಲಾಂಗ್ ಎಲ್ಲ ಕಡೆಗಳಿಂದಲೂ ಬೆಟ್ಟಗುಡ್ಡಗಳಿಂದ ಆವೃತವಾಗಿದೆ. ಅನೇಕ ಸುಪ್ರಸಿದ್ಧ ಶಿಕ್ಷಣ ಸಂಸ್ಥೆಗಳನ್ನೊಳಗೊಂಡು ಪ್ರಸಿದ್ಧವಾಗಿರುವ ಶಿಲ್ಲಾಂಗ್ ಇಡೀ ಈಶಾನ್ಯ ಭಾರತದ ಶಿಕ್ಷಣ ಕೇಂದ್ರವಾಗಿದೆ. ಸೌಂದರ್ಯ ಮತ್ತು ಶಿಕ್ಷಣ ಕೇಂದ್ರವಲ್ಲದೆ, ಶಿಲ್ಲಾಂಗ್ ಮೇಘಾಲಯದ ಹೆಬ್ಬಾಗಿಲಾಗಿ ಕಾರ್ಯನಿರ್ವಹಿಸುತ್ತದೆ, ರಾಜ್ಯವು ಭಾರೀ ಮಳೆ, ಗುಹೆಗಳು, ಅತಿ ಎತ್ತರದ ಜಲಪಾತಗಳು, ಸುಂದರ ಭೂರಮೆ ಮತ್ತು ಅದರ ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಶಿಲ್ಲಾಂಗ್ ಎಲಿಫೆಂಟ್ ಫಾಲ್ಸ್, ಶಿಲ್ಲಾಂಗ್ ಶಿಖರ, ಉಮಿಯಮ್ ಸರೋವರ, ಸೊಹ್‌ ಪೆಟ್‌ ನೆಂಗ್ ಶಿಖರ, ಡಾನ್ ಬಾಸ್ಕೋ ವಸ್ತುಸಂಗ್ರಹಾಲಯ, ಲೈಟ್ಲಮ್ ಕಣಿವೆಗಳಿಗೂ ಖ್ಯಾತವಾಗಿದೆ. ಇದಲ್ಲದೆ, ಐ-ಲೀಗ್‌ ನಲ್ಲಿ ಭಾಗವಹಿಸುವ ಎರಡು ಫುಟ್‌ ಬಾಲ್ ಕ್ಲಬ್‌ ಗಳಾದ ರಾಯಲ್ ವಾಹಿಂಗ್ಡೋ ಎಫ್ಸಿ ಮತ್ತು ಶಿಲ್ಲಾಂಗ್ ಲಜೊಂಗ್ ಎಫ್ಸಿಗಳನ್ನು ಹುಟ್ಟುಹಾಕಿರುವ  ಈಶಾನ್ಯ ಭಾರತದ ಏಕೈಕ ರಾಜಧಾನಿ ಶಿಲ್ಲಾಂಗ್. ಇವುಗಳ ಜೊತೆಗೆ, ಶಿಲ್ಲಾಂಗ್ ಗಾಲ್ಫ್ ಕೋರ್ಸ್ ದೇಶದ ಅತ್ಯಂತ ಹಳೆಯ ಗಾಲ್ಫ್ ಕೋರ್ಸ್‌ ಗಳಲ್ಲಿ ಒಂದಾಗಿದೆ.

ನೇರ ಸಂಪರ್ಕದ ಲಭ್ಯತೆ ಇಲ್ಲದಿದ್ದ ಕಾರಣ, ಜನರು ಇಲ್ಲಿಗೆ ತಲುಪಲು ಇಂಫಾಲದಿಂದ ರಸ್ತೆಯ ಮೂಲಕ 12 ಗಂಟೆಗಳ ಪ್ರಯಾಣ ಮಾಡುವುದು ಅನಿವಾರ್ಯವಾಗಿತ್ತು ಇಲ್ಲವೆ ಗುವಾಹಟಿಯ ಲೋಕಪ್ರಿಯ ಗೋಪಿನಾತ್ ಭೊರ್ದೋಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗಿ, ಅಲ್ಲಿಂದ ಬಸ್ ನಲ್ಲಿ ಶಿಲ್ಲಾಂಗ್ ತಲುಪಬೇಕಾಗಿತ್ತು. ಇಂಫಾಲದಿಂದ ಶಿಲ್ಲಾಂಗ್ ತಲುಪುವ ಅಥವಾ ಶಿಲ್ಲಾಂಗ್ ನಿಂದ ಇಂಫಾಲಕ್ಕೆ ಬರುವ ಈ ಇಡೀ ಪ್ರಯಾಣ 1 ದಿನಕ್ಕೂ ಹೆಚ್ಚು ಸಮಯ ಹಿಡಿಯುತ್ತಿತ್ತು.  ಈಗ, ಸ್ಥಳೀಯರು ವಿಮಾನ ಪ್ರಯಾಣ ಆಯ್ಕೆ ಮಾಡಿಕೊಂಡು ಇಂಫಾಲದಿಂದ ಶಿಲ್ಲಾಂಗ್ ಗೆ ಕೇವಲ 60 ನಿಮಿಷಗಳಲ್ಲಿ ಮತ್ತು ಶಿಲ್ಲಾಂಗ್ ನಿಂದ ಇಂಫಾಲಕ್ಕೆ 75 ನಿಮಿಷಗಳಲ್ಲಿ ಸುಲಭವಾಗಿ ಈ ಎರಡು ನಗರಗಳ ನಡುವೆ ಹಾರಾಟ ನಡೆಸಬಹುದಾಗಿದೆ. ಉಡಾನ್ ಯೋಜನೆಯಡಿ ಇಂಫಾಲ್ ನೊಂದಿಗೆ ಸಂಪರ್ಕಿಸಲಾದ ಎರಡನೇ ನಗರ ಶಿಲ್ಲಾಂಗ್ ಆಗಿದೆ. ಉಡಾನ್ -4 ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಮೆ. ಇಂಡಿಗೋ ಏರ್ ಲೈನ್ಸ್ ಗೆ ಇಂಫಾಲ್ – ಶಿಲ್ಲಾಂಗ್ ಮಾರ್ಗದ ಕಾರ್ಯಾಚರಣೆ ನೀಡಲಾಗಿದೆ. ದರಗಳನ್ನು ಕೈಗೆಟುಕುವಂತೆ ಮತ್ತು ಸಾಮಾನ್ಯ ಜನರಿಗೆ ತಲುಪುವಂತೆ ಮಾಡಲು ಏರ್‌ ಲೈನ್‌ ಗಳಿಗೆ ಯುಎಡಿಎಎನ್ ಯೋಜನೆಯಡಿಯಲ್ಲಿ ಸರಿಯಾಗಿ  ವಿಜಿಎಫ್ (ವಯಬಿಲಿಟಿ ಗ್ಯಾಪ್ ಫಂಡಿಂಗ್) ಒದಗಿಸಲಾಗುತ್ತಿದೆ. ವಿಮಾನಯಾನ ಸಂಸ್ಥೆ ಒಂದು ವಾರದಲ್ಲಿ ನಾಲ್ಕು ವಿಮಾನಗಳನ್ನು ನಿರ್ವಹಿಸಲಿದೆ ಮತ್ತು ಅದರ 78 ಆಸನಗಳ ಎಟಿಆರ್ 72 ವಿಮಾನಗಳನ್ನು ನಿಯೋಜಿಸುತ್ತಿದೆ. ಪ್ರಸ್ತುತ, 66 ಉಡಾನ್ ಮಾರ್ಗಗಳನ್ನು ಮೆ. ಇಂಡಿಗೋ ವಿಮಾನಯಾನ ಸಂಸ್ಥೆಗಳಿಂದ ಕಾರ್ಯನಿರ್ವಹಿಸುತ್ತಿದೆ.

ಈವರೆಗೆ 361 ಮಾರ್ಗಗಳು ಮತ್ತು 59 ವಿಮಾನ ನಿಲ್ದಾಣಗಳನ್ನು (5 ಹೆಲಿಪೋರ್ಟ್ ಮತ್ತು 2 ಜಲ ಏರೋಡ್ರಮ್ ಸೇರಿದಂತೆ) ಉಡಾನ್ ಯೋಜನೆ ಅಡಿಯಲ್ಲಿ ಕಾರ್ಯಾರಂಭಿಸಲಾಗಿದೆ. ಈವರೆಗೆ ವಿಮಾನಯಾನ ಸಂಪರ್ಕ ಹೊಂದಿಲ್ಲದಿರದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಲಿಷ್ಠ ವೈಮಾನಿಕ ಸಂಪರ್ಕವನ್ನು ಒದಗಿಸುವುದು ಯೋಜನೆಯ ಉದ್ದೇಶವಾಗಿದ್ದು, ಭಾರತೀಯ ವೈಮಾನಿಕ ಮಾರುಕಟ್ಟೆಯಲ್ಲಿ ಹೊಸ ಪ್ರಾದೇಶಿಕ ವಲಯಕ್ಕೆ ಅಡಿಪಾಯ ಹಾಕಿದೆ.

ವಿಮಾನ ವೇಳಾಪಟ್ಟಿಯನ್ನು ಕೆಳಗೆ ನೀಡಲಾಗಿದೆ:

ವಿಮಾನದ ಸಂಖ್ಯೆ

ಹೊರಡುವ ಸಮಯ

ಬಂದಿಳಿಯುವ ಸಮಯ

ಹೊರಡುವ ಸಮಯ

ಆಗಮಿಸುವ ಸಮಯ

7959

ಇಂಫಾಲ್

ಶಿಲ್ಲಾಂಗ್

09:55

10:55

7961

ಶಿಲ್ಲಾಂಗ್

ಇಂಫಾಲ್

11:15

12:30

 ***


(Release ID: 1742185) Visitor Counter : 302