ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಗ್ರಾಮೀಣ, ಬುಡಕಟ್ಟು ಮತ್ತು ಹಿಂದುಳಿದ ಪ್ರದೇಶಗಳು ಸೇರಿದಂತೆ ದೇಶಾದ್ಯಂತ ಕ್ರೀಡೆಗಳನ್ನು ಉತ್ತೇಜಿಸಲು ಯುವಜನ ಮತ್ತು ಕ್ರೀಡಾ ಸಚಿವಾಲಯವು ಹಲವಾರು ಯೋಜನೆಗಳನ್ನು ರೂಪಿಸಿದೆ: ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್

Posted On: 02 AUG 2021 3:23PM by PIB Bengaluru

ಮುಖ್ಯಾಂಶಗಳು

  • ʻಖೇಲೋ ಇಂಡಿಯಾʼ ಯೋಜನೆಯ 'ಪ್ರತಿಭಾ ಶೋಧ ಮತ್ತು ಅಭಿವೃದ್ಧಿ' ವಿಭಾಗದ ಅಡಿಯಲ್ಲಿ ಗುರುತಿಸಲಾದ ಮತ್ತು ಆಯ್ಕೆಯಾದ ಖೇಲೋ ಇಂಡಿಯಾ ಕ್ರೀಡಾಪಟುಗಳಿಗೆ ವಾರ್ಷಿಕ ತಲಾ 6.28 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುತ್ತದೆ
  • ದೇಶಾದ್ಯಂತ 1000 ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲು ಸಚಿವಾಲಯ ನಿರ್ಧರಿಸಿದ್ದು, ಅವುಗಳಲ್ಲಿ 360 ಖೇಲೋ ಇಂಡಿಯಾ ಕೇಂದ್ರಗಳಿಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ
  • ಖೇಲೋ ಇಂಡಿಯಾ ಯೋಜನೆಯ "ರಾಷ್ಟ್ರೀಯ/ ಪ್ರಾದೇಶಿಕ/ರಾಜ್ಯ ಕ್ರೀಡಾ ಅಕಾಡೆಮಿಗಳಿಗೆ ಬೆಂಬಲ" ವಿಭಾಗದ ಅಡಿಯಲ್ಲಿ ದೇಶಾದ್ಯಂತ 236 ಕ್ರೀಡಾ ಅಕಾಡೆಮಿಗಳಿಗೆ ಇಲ್ಲಿಯವರೆಗೆ ಮಾನ್ಯತೆ ನೀಡಲಾಗಿದೆ.

'ಕ್ರೀಡೆ'ಯು ರಾಜ್ಯದ ವಿಷಯವಾಗಿರುವುದರಿಂದ, ಕ್ರೀಡಾ ಶಾಲೆಗಳನ್ನು ತೆರೆಯುವುದು ಸೇರಿದಂತೆ ಕ್ರೀಡೆ ಅಭಿವೃದ್ಧಿಯ ಸಂಪೂರ್ಣ ಜವಾಬ್ದಾರಿ ರಾಜ್ಯ  ಸರಕಾರಗಳು/ ಕೇಂದ್ರಾಡಳಿತ ಪ್ರದೇಶದ ಆಡಳಿತಗಳ ಮೇಲಿದೆ. ಆದಾಗ್ಯೂ ನಿಟ್ಟಿನಲ್ಲಿ ರಾಜ್ಯ ಸರಕಾರ/ಕೇಂದ್ರಾಡಳಿತ ಪ್ರದೇಶಗಳ ಪ್ರಯತ್ನಕ್ಕೆ ಕೇಂದ್ರ ಸರಕಾರ ಪೂರಕ ಬೆಂಬಲ ಒದಗಿಸುತ್ತದೆದೇಶದಲ್ಲಿರುವ ಅಂತಹ ಶಾಲೆಗಳ ಸಂಖ್ಯೆಗೆ ಸಂಬಂಧಿ ಅಕಾಡೆಮಿಗೆ ರಾಜ್ಯ/ಕೇಂದ್ರಾಡಳಿತ ಪ್ರದೇಶ/ಜಿಲ್ಲಾವಾರು ದತ್ತಾಂಶವನ್ನು ಸಚಿವಾಲಯವು ನಿರ್ವಹಿಸುವುದಿಲ್ಲ.

ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಗ್ರಾಮೀಣ, ಬುಡಕಟ್ಟು ಮತ್ತು ಹಿಂದುಳಿದ ಪ್ರದೇಶಗಳು ಸೇರಿದಂತೆ ದೇಶದಲ್ಲಿ ಕ್ರೀಡೆಗಳನ್ನು ಉತ್ತೇಜಿಸಲು ಕೆಳಗಿನ ಯೋಜನೆಗಳನ್ನು ರೂಪಿಸಿದೆ: -

(1) ಖೇಲೋ ಇಂಡಿಯಾ ಯೋಜನೆ (2) ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಗೆ ನೆರವು; (3) ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರು ಮತ್ತು ಅವರ ತರಬೇತುದಾರರಿಗೆ ವಿಶೇಷ ಪ್ರಶಸ್ತಿಗಳು; (4) ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳು, ಪ್ರತಿಭಾನ್ವಿತ ಕ್ರೀಡಾ ವ್ಯಕ್ತಿಗಳಿಗೆ ಪಿಂಚಣಿ; (5) ಪಂಡಿತ್ ದೀನದಯಾಳ್ ಉಪಾಧ್ಯಾಯ ರಾಷ್ಟ್ರೀಯ ಕ್ರೀಡಾ ಕಲ್ಯಾಣ ನಿಧಿ; (6) ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿ; ಮತ್ತು (7) ಭಾರತೀಯ ಕ್ರೀಡಾ ಪ್ರಾಧಿಕಾರದ ಮೂಲಕ ಕ್ರೀಡಾ ತರಬೇತಿ ಕೇಂದ್ರಗಳನ್ನು ನಡೆಸುವುದು.

ಯೋಜನೆಗಳಿಂದ ಪ್ರಯೋಜನ ಪಡೆದ ಬಹುತೇಕ ಕ್ರೀಡಾಪಟುಗಳು ದೇಶದ ಗ್ರಾಮೀಣ ಪ್ರದೇಶದವರು, ಹಿಂದುಳಿದವರು, ಬುಡಕಟ್ಟು ಸಮುದಾಯದವರು ಮತ್ತು ಮಹಿಳೆಯರೇ ಆಗಿದ್ದಾರೆ. ಜೊತೆಗೆ ಇವರಿಗೆ ಯೋಜನೆಗಳ ಅನುಮೋದಿತ ನಿಯಮಗಳ ಪ್ರಕಾರ ವಸತಿ ಮತ್ತು ವಸತಿಯೇತರ ಆಧಾರದ ಮೇಲೆ ನಿಯಮಿತವಾಗಿ ತರಬೇತಿಯನ್ನು ನೀಡಲಾಗುತ್ತದೆ.

ಖೇಲೋ ಇಂಡಿಯಾ ಯೋಜನೆಯಡಿ, ಎರಡು ವಿಭಾಗಗಳಲ್ಲಿ ತಳಮಟ್ಟದಲ್ಲಿ ಪ್ರತಿಭಾ ಶೋಧವನ್ನು ಪ್ರಾರಂಭಿಸಲಾಗಿದೆ:-

  • ಸಂಭಾವ್ಯ ಕ್ರೀಡಾ ಪ್ರತಿಭೆಯನ್ನು ಗುರುತಿಸುವುದು
  • ಸಮರ್ಥ ಕ್ರೀಡಾ ಪ್ರತಿಭೆಯನ್ನು ಗುರುತಿಸುವುದು

ಇದಲ್ಲದೆ, ಪ್ರತಿಭೆಗಳ ಗುರುತಿಸುವಿಕೆಗಾಗಿ ಭಾರತವನ್ನು 05 ವಲಯಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಉತ್ತರ, ಪೂರ್ವ, ಪಶ್ಚಿಮ, ದಕ್ಷಿಣ ಮತ್ತು ಈಶಾನ್ಯ ವಲಯಗಳು. ಸಂಭಾವ್ಯ ಮತ್ತು ಸಮರ್ಥ ಕ್ರೀಡಾಪಟುಗಳ ಆಯ್ಕೆಯನ್ನು ಅಂತಿಮಗೊಳಿಸಲು ದೇಶದ ಮೂಲಮೂಲೆಗೂ ತಲುಪುವ ನಿಟ್ಟಿನಲ್ಲಿ ʻತಳಮಟ್ಟದ ವಲಯವಾರು ಪ್ರತಿಭೆ ಗುರುತಿಸುವಿಕೆ ಸಮಿತಿʼಗಳನ್ನು ರಚಿಸಲಾಗಿದೆ. 8ರಿಂದ 14 ವರ್ಷ ವಯೋಮಾನದವರಲ್ಲಿ 20 ಕ್ರೀಡಾ ವಿಭಾಗಗಳಲ್ಲಿ ಪ್ರತಿಭೆ ಗುರುತಿಸುವಿಕೆಯನ್ನು ನಡೆಸಲಾಗುತ್ತದೆ. ಮೂಲಕ ದೇಶವು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡುವ ಸಾಮರ್ಥ್ಯ /ಅನುಕೂಲವನ್ನು ಪಡೆದಿದೆ.

ಖೇಲೋ ಇಂಡಿಯಾ ಯೋಜನೆಯ 'ಪ್ರತಿಭಾ ಶೋಧ ಮತ್ತು ಅಭಿವೃದ್ಧಿ' ವಿಭಾಗದ ಅಡಿಯಲ್ಲಿ ʻಖೇಲೋ ಇಂಡಿಯಾʼ ಕ್ರೀಡಾಪಟುಗಳನ್ನು ಗುರುತಿಸಿ, ಆಯ್ಕೆ ಮಾಡಲಾಗುತ್ತದೆ. ಇವರಿಗೆ ವಾರ್ಷಿಕ 6.28 ಲಕ್ಷ ರೂ. ಆರ್ಥಿಕ ನೆರವನ್ನು ನೀಡಲಾಗುತ್ತದೆ. ವಾರ್ಷಿಕ 1.20 ಲಕ್ಷ ರೂ. ದೈನಂದಿನ ಖರ್ಚುವೆಚ್ಚ ಭತ್ಯೆ ಹಾಗೂ ತರಬೇತಿ, ಕ್ರೀಡಾ ವಿಜ್ಞಾನ ಬೆಂಬಲ, ಆಹಾರ, ಉಪಕರಣಗಳುವಿಮಾ ಶುಲ್ಕಗಳು ಮುಂತಾದ ಇತರ ಸೌಲಭ್ಯಗಳಿಗೆ 5.08 ಲಕ್ಷ ರೂ.ಗಳನ್ನು ಇದು ಒಳಗೊಂಡಿದೆ. ಇದಲ್ಲದೆ, ವಿವಿಧ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆಯಡಿ ಗುರುತಿಸಲಾದ ಪ್ರತಿ ಜಿಲ್ಲಾ ಮಟ್ಟದ ಖೇಲೋ ಇಂಡಿಯಾ ಕೇಂದ್ರವು ಸಹ ಒಂದು ಬಾರಿಯ ಅನುದಾನವಾಗಿ ಪ್ರತಿ ಅಭ್ಯರ್ಥಿಗೆ 5 ಲಕ್ಷ ರೂ. ಮತ್ತು ಪುನರಾವರ್ತಿತ ಅನುದಾನವಾಗಿ ಪ್ರತಿ ಅಭ್ಯರ್ಥಿಗೆ 5 ಲಕ್ಷ ರೂ.ಗಳನ್ನು ಪಡೆಯಲು ಅರ್ಹವಾಗಿದೆ.

ʻಖೇಲೋ ಇಂಡಿಯಾʼ ಯೋಜನೆಯ ʻರಾಷ್ಟ್ರೀಯ/ಪ್ರಾದೇಶಿಕ/ರಾಜ್ಯ ಕ್ರೀಡಾ ಅಕಾಡೆಮಿಗಳಿಗೆ ಬೆಂಬಲʼ ವಿಭಾಗದ ಅಡಿಯಲ್ಲಿ, ಖೇಲೋ ಇಂಡಿಯಾ ಕ್ರೀಡಾಪಟುಗಳ ತರಬೇತಿಗಾಗಿ ಕ್ರೀಡಾ ಅಕಾಡೆಮಿ ಮಾನ್ಯತೆ ನೀಡಲಾಗುತ್ತದೆ. ಅಕಾಡೆಮಿಗಳಿಗೆ ಮಾನ್ಯತೆ ನೀಡುವುದು ನಿರಂತರ ಪ್ರಕ್ರಿಯೆಯಾಗಿದೆ. ಖೇಲೋ ಇಂಡಿಯಾ ಯೋಜನೆಯಡಿ ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಿದ ಬಳಿಕ ರಾಜ್ಯ ಸರಕಾರ/ಕೇಂದ್ರಾಡಳಿತ ಪ್ರದೇಶಗಳು ಆಸಕ್ತಿಯ ತೋರಿದರೆ, ಕ್ರೀಡಾ ಅಕಾಡೆಮಿಗಳಿಗೆ ಮಾನ್ಯತೆ ನೀಡಲಾಗುತ್ತದೆ. ದೇಶಾದ್ಯಂತ ಈವರೆಗೆ 236 ಕ್ರೀಡಾ ಅಕಾಡೆಮಿಗಳಿಗೆ ಮಾನ್ಯತೆ ನೀಡಲಾಗಿದೆ. ಇದಲ್ಲದೆ, ಖೇಲೋ ಇಂಡಿಯಾ ಯೋಜನೆಯ ʻರಾಜ್ಯ ಮಟ್ಟದ ಖೇಲೋ ಇಂಡಿಯಾ ಕೇಂದ್ರʼ ವಿಭಾಗದ ಅಡಿಯಲ್ಲಿ, ಸಚಿವಾಲಯವು ದೇಶಾದ್ಯಂತ 1000 ಖೇಲೋ ಇಂಡಿಯಾ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಪೈಕಿ 360 ಖೇಲೋ ಇಂಡಿಯಾ ಕೇಂದ್ರಗಳಿಗೆ ಈಗಾಗಲೇ ಅಧಿಸೂಚನೆ ಹೊರಡಿಸಲಾಗಿದೆ.

ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ಮಾಹಿತಿಯನ್ನು ನೀಡಿದ್ದಾರೆ.

***(Release ID: 1741523) Visitor Counter : 255