ಹಣಕಾಸು ಸಚಿವಾಲಯ

ಜುಲೈ 2021ರಲ್ಲಿ ಜಿಎಸ್ ಟಿ ಆದಾಯ ಸಂಗ್ರಹ


ಜುಲೈ ತಿಂಗಳಲ್ಲಿ  1,16,393 ಕೋಟಿ ರೂ. ಒಟ್ಟು ಜಿಎಸ್ ಟಿ ಸಂಗ್ರಹ

Posted On: 01 AUG 2021 12:24PM by PIB Bengaluru

 

ಜುಲೈ 2021ರಲ್ಲಿ ಒಟ್ಟು ಜಿಎಸ್ ಟಿ ಆದಾಯ ಸಂಗ್ರಹ 1,16,393  ಕೋಟಿ  ರೂ ಆಗಿದ್ದು, ಆ ಪೈಕಿ  ಸಿಜಿಎಸ್ ಟಿ   22,197 ಕೋಟಿ ರೂಎಸ್ ಜಿಎಸ್ ಟಿ 28,541 ಕೋಟಿ ರೂ, ಐಜಿಎಸ್ ಟಿ 57,864 ಕೋಟಿ ರೂ. (ಇದರಲ್ಲಿ 27,900 ಕೋಟಿ ರೂ. ಆಮದು ವಸ್ತುಗಳ ಆಮದಿನಿಂದ ಸಂಗ್ರಹವಾಗಿದೆ) ಮತ್ತು  7,790 ಕೋಟಿ ರೂ. ಸೆಸ್ ಆಗಿದ್ದು, ( ಇದರಲ್ಲಿ 815  ಕೋಟಿ ವಸ್ತುಗಳ ಆಮದಿನಿಂದ ಸಂಗ್ರಹವಾಗಿದೆ ). ಈ ಮೇಲಿನ ಅಂಕಿ  ಅಂಶಗಳಲ್ಲಿ 2021ರ ಜುಲೈ 1ರಿಂದ ಜು.31ರವರೆಗೆ ಫೈಲ್ ಆಗಿರುವ ಜಿಎಸ್ ಟಿಆರ್-3 ಬಿ ಮತ್ತು ಐಜಿಎಸ್ ಟಿ ಮತ್ತು ಇದೇ ಅವಧಿಯಲ್ಲಿ ಆಮದು ವಸ್ತುಗಳಿಂದ ಸಂಗ್ರಹವಾದ ಸೆಸ್ ಸಹ ಸೇರಿದೆ.  

2021ರ ಜುಲೈ 1ರಿಂದ 5ರವರೆಗೆ ಜಿಎಸ್ ಟಿ ರಿಟರ್ನ್ 4,937 ಕೋಟಿ ರೂ, ಸಂಗ್ರಹವಾಗಿದೆ ಇದರಲ್ಲಿ ಜೂನ್ 2021ರ ತಿಂಗಳಲ್ಲಿ ಪತ್ರಿಕಾ ಪ್ರಕಟಣೆಯಲ್ಲಿ ನೀಡಲಾಗಿದ್ದು, ಅದರಲ್ಲಿ ಕೋವಿಡ್ ಸಾಂಕ್ರಾಮಿಕದ ಎರಡನೇ ಅಲೆ ಹಿನ್ನೆಲೆಯಲ್ಲಿ ಸರಾಸರಿ ವಹಿವಾಟು 5 ಕೋಟಿ ವರೆಗೆ ಹೊಂದಿರುವ ತೆರಿಗೆ ಪಾವತಿದಾರರಿಗೆ ಜೂನ್ ತಿಂಗಳ 21ರವರೆಗೆ 15 ದಿನಗಳಲ್ಲಿ ವಿಳಂಬವಾಗಿ ಪಾವತಿ ಮಾಡಿದರೂ ಸಹ ಬಡ್ಡಿ ಮನ್ನಾ/ವಿನಾಯ್ತಿ ಸೇರಿ ಹಲವು ಪರಿಹಾರ ಕ್ರಮಗಳನ್ನು ತೆರಿಗೆಪಾವತಿದಾರರಿಗೆ ಪ್ರಕಟಿಸಲಾಗಿತ್ತು.

ಸರ್ಕಾರ ಮಾಮೂಲಿನಂತೆ 28,087 ಕೋಟಿ ಸಿಜಿಎಸ್ ಟಿ ಮತ್ತು 24,100 ಕೋಟಿ ಎಸ್ ಜಿಎಸ್ ಟಿ ಮೊತ್ತವನ್ನು ಪಾವತಿಸಿದೆ. ಜುಲೈ 2021ರಲ್ಲಿ ಕೇಂದ್ರ ಮತ್ತು ರಾಜ್ಯಗಳು ನಿಗದಿತ ಪಾವತಿಗಳ ನಂತರ 50,284 ಕೋಟಿ ಸಿಜಿಎಸ್ ಟಿ ಮತ್ತು 52,641 ಕೋಟಿ ಎಸ್ ಜಿಎಸ್ ಟಿ ಯನ್ನು ಸಂಗ್ರಹ ಮಾಡಿದೆ.  

2021ರ ಜುಲೈನಲ್ಲಿ ಸಂಗ್ರಹಿಸಿರುವ ಜಿಎಸ್ ಟಿ ಆದಾಯ ಕಳೆದ ವರ್ಷ ಇದೇ ಅವಧಿಗೆ ಹೋಲಿಸಿದರೆ ಶೇ.33ರಷ್ಟು ಅಧಿಕವಾಗಿದೆ. ತಿಂಗಳ ಅವಧಿಯಲ್ಲಿ ಸರಕುಗಳ ಆಮದಿನ ಆದಾಯವು ಶೇ. 36ರಷ್ಟು ಹೆಚ್ಚಾಗಿದೆ ಮತ್ತು ದೇಶೀಯ ವಹಿವಾಟಿನ ಆದಾಯ (ಸೇವೆಗಳ ಆಮದು ಸೇರಿದಂತೆ) ಕಳೆದ ವರ್ಷ ಇದೇ ತಿಂಗಳಲ್ಲಿ ಈ ಮೂಲಗಳಲ್ಲಿ ಬಂದ ಆದಾಯಕ್ಕಿಂತ ಶೇ.32ರಷ್ಟು ಹೆಚ್ಚಾಗಿದೆ.

ಜಿಎಸ್ ಟಿ ಸಂಗ್ರಹ ಸತತ 8 ತಿಂಗಳು 1 ಲಕ್ಷ ಕೋಟಿಗೂ ಅಧಿಕ ಮುಂದುವರಿದಿದೆ, ಆದರೆ ಜೂನ್ 2021ರಲ್ಲಿ 1 ಲಕ್ಷಕ್ಕಿಂತ ಕೆಳಗೆ ಕುಸಿದಿತ್ತು, ಜೂನ್ ತಿಂಗಳಲ್ಲಿ ಸಂಗ್ರಹವಾಗಿದ್ದ ಮೊತ್ತ ಬಹುತೇಕ 2021ರ ಮೇ ತಿಂಗಳಿಗೆ ಸೇರಿದ್ದು, ಏಕೆಂದರೆ ಕೋವಿಡ್ ಕಾರಣದಿಂದಾಗಿ ಬಹುತೇಕ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶದಲ್ಲಿ ಸಂಪೂರ್ಣ ಅಥವಾ ಭಾಗಶಃ ಲಾಕ್ ಡೌನ್ ವಿಧಿಸಿರುವುದು ಕಾರಣವಾಗಿತ್ತು.   

ಕೋವಿಡ್ ನಿರ್ಬಂಧಗಳ ಸಡಿಲಿಕೆ ಪರಿಣಾಮ, ಜಿಎಸ್ ಟಿ ಸಂಗ್ರಹ 2021ರ ಜುಲೈನಲ್ಲಿ ಮತ್ತೆ 1 ಲಕ್ಷ ಕೋಟಿ ರೂ.ಗೂ ಮೇಲೇರಿದೆ, ಇದು ಆರ್ಥಿಕತೆ ವೇಗವಾಗಿ ಚೇತರಿಸಿಕೊಳ್ಳುತ್ತಿರುವ ಸಂಕೇತವಾಗಿದೆ. ಮುಂದಿನ ತಿಂಗಳುಗಳಲ್ಲಿಯೂ ಸಹ ಜಿಎಸ್ ಟಿ ಸಂಗ್ರಹ ಉತ್ತಮ ರೀತಿಯಲ್ಲಿ ಮುಂದುವರಿಯುವ ಸಾಧ್ಯತೆಗಳಿವೆ.

ಕೆಳಗಿನ ಕೋಷ್ಠಕದಲ್ಲಿ ಜಿಎಸ್ ಟಿ ಸಂಗ್ರಹದ ರಾಜ್ಯವಾರು ವಿವರ ಮತ್ತು 2020ರ ಜುಲೈನ ಸಂಗ್ರಹಕ್ಕೆ ಹೋಲಿಸಿದರೆ 2021ರ ಜುಲೈ ಸಂಗ್ರಹವಾಗಿರುವ ವಿವರಗಳನ್ನು ನೀಡಲಾಗಿದೆ. 

2021ರ ಜುಲೈನಲ್ಲಿ ರಾಜ್ಯವಾರು ಸಂಗ್ರಹವಾಗಿರುವ ಜಿಎಸ್ ಟಿ ಆದಾಯ ವಿವರ [1]

ಕ್ರ.

ಸಂ

ರಾಜ್ಯ

ಜುಲೈ 2020

ಜುಲೈ

2021

ಪ್ರಗತಿ

1

ಜಮ್ಮು ಮತ್ತು ಕಾಶ್ಮೀರ

298

432

45%

2

ಹಿಮಾಚಲ ಪ್ರದೇಶ

605

667

10%

3

ಪಂಜಾಬ್

1,188

1,533

29%

4

ಚಂಡಿಗಢ

137

169

23%

5

ಉತ್ತರಾಖಂಡ

988

1,106

12%

6

ಹರಿಯಾಣ

3,483

5,330

53%

7

ದೆಹಲಿ

2,629

3,815

45%

8

ರಾಜಸ್ಥಾನ

2,797

3,129

12%

9

ಉತ್ತರ ಪ್ರದೇಶ

5,099

6,011

18%

10

ಬಿಹಾರ

1,061

1,281

21%

11

ಸಿಕ್ಕಿಂ

186

197

6%

12

ಅರುಣಾಚಲ ಪ್ರದೇಶ

33

55

69%

13

ನಾಗಾಲ್ಯಾಂಡ್

25

28

11%

14

ಮಣಿಪುರ

25

37

48%

15

ಮಿಜೋರಾಂ

16

21

31%

16

ತ್ರಿಪುರ

48

65

36%

17

ಮೇಘಾಲಯ

120

121

1%

18

ಅಸ್ಸಾಂ

723

882

22%

19

ಪಶ್ಚಿಮ ಬಂಗಾಳ

3,010

3,463

15%

20

ಜಾರ್ಖಂಡ್

1,340

2,056

54%

21

ಒಡಿಶಾ

2,348

3,615

54%

22

ಚತ್ತಿಸ್ಗಢ

1,832

2,432

33%

23

ಮಧ್ಯಪ್ರದೇಶ

2,289

2,657

16%

24

ಗುಜರಾತ್

5,621

7,629

36%

25

ದಾಮನ್ ಮತ್ತು ದಿಯು

77

0

-99%

26

ದಾದ್ರ ಮತ್ತು ನಾಗರ್ ಹವೇಲಿ

130

227

74%

27

ಮಹಾರಾಷ್ಟ್ರ

12,508

18,899

51%

29

ಕರ್ನಾಟಕ

6,014

6,737

12%

30

ಗೋವಾ

257

303

18%

31

ಲಕ್ಷದ್ವೀಪ

2

1

-42%

32

ಕೇರಳ

1,318

1,675

27%

33

ತಮಿಳುನಾಡು

4,635

6,302

36%

34

ಪುದುಚೆರಿ

136

129

-6%

35

ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು

18

19

6%

36

ತೆಲಂಗಾಣ

2,876

3,610

26%

37

ಆಂಧ್ರ ಪ್ರದೇಶ

2,138

2,730

28%

38

ಲಡಾಖ್

7

13

95%

39

ಇತರೆ ಭೂಭಾಗ

97

141

45%

40

ಕೇಂದ್ರೀಯ ವ್ಯಾಪ್ತಿ

179

161

-10%

 

ಒಟ್ಟು

66,291

87,678

32%


[1]ಇದರಲ್ಲಿ ಆಮದು ವಸ್ತುಗಳ ಮೇಲಿನ ಜಿಎಸ್ ಟಿ ಸೇರಿಲ್ಲ.



(Release ID: 1741285) Visitor Counter : 355