ಪರಿಸರ ಮತ್ತು ಅರಣ್ಯ ಸಚಿವಾಲಯ

ಭಾರತದ 14 ಹುಲಿ ಮೀಸಲು ಪ್ರದೇಶಗಳಿಗೆ ಉತ್ತಮ ಹುಲಿ ಸಂರಕ್ಷಣೆಗಾಗಿ ಜಾಗತಿಕ ಸಿಎ/ಟಿಎಸ್ ಮಾನ್ಯತೆ


ಹುಲಿ ಸಂರಕ್ಷಣೆ ಅರಣ್ಯ ಸಂರಕ್ಷಣೆಯ ಸಂಕೇತ: ಶ್ರೀ ಭೂಪೇಂದರ್ ಯಾದವ್

ವೈಜ್ಞಾನಿಕ ಜ್ಞಾನದ ಜತೆ ಸಾಂಪ್ರಾಯಿಕ ಜ್ಞಾನ ಮತ್ತು ದೇಶದ ಸಸ್ಯ ಹಾಗೂ ಪ್ರಾಣಿಗಳ ರಕ್ಷಣೆಯಲ್ಲಿ ಜನರ ಪಾಲ್ಗೊಳ್ಳುವಿಕೆ ಅವಿಭಾಜ್ಯ ಅಂಗವಾಗಿದೆ  

Posted On: 29 JUL 2021 5:26PM by PIB Bengaluru

ಹುಲಿ ಸಂರಕ್ಷಣೆಯು ಅರಣ್ಯ ಸಂರಕ್ಷಣೆಯ ಸಂಕೇತವಾಗಿದೆ ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಶ್ರೀ ಭೂಪೇಂದರ್ ಯಾದವ್ ಹೇಳಿದ್ದಾರೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಸರ್ಕಾರದ ವಿಧಾನವು ವೈಜ್ಞಾನಿಕ ಮತ್ತು  ಸಾಂಪ್ರಾಯಿಕ ಜ್ಞಾನವನ್ನು ಸಂಯೋಜಿಸುವ ಜತೆಗೆ ಜನರ ಭಾಗವಹಿಸುವಿಕೆಯ ಮೂಲಕ ಸಮಗ್ರತೆಯನ್ನು ಪಡೆದುಕೊಂಡಿದೆ. ಇದು ವಿಸ್ತಾರವಾಗಿ ದೇಶದ ಸಸ್ಯ ಹಾಗೂ ಪ್ರಾಣಿಗಳ ರಕ್ಷಣೆಯನ್ನು ಒಳಗೊಂಡಿದೆ ಎಂದು ಹೇಳಿದ್ದಾರೆಜಾಗತಿಕ ಹುಲಿ ದಿನದ ಅಂಗವಾಗಿ ಆಯೋಜಿಸಿದ್ದ ವರ್ಚುವಲ್ ಸಮಾರಂಭದಲ್ಲಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಪರಿಸರ ಸಚಿವರು ಚಿರತೆಗಳು, ಪರಭಕ್ಷಕ ಮತ್ತು ದೊಡ್ಡ ಸಸ್ಯಹಾರಿ ಪ್ರಾಣಿಗಳ  ಸ್ಥಿತಿಗತಿ 2018ಕುರಿತ ವರದಿ ಬಿಡುಗಡೆ ಮಾಡಿದರು. ಹುಲಿಗಳ ಸಂರಕ್ಷಣೆ ಇಡೀ ಪರಿಸರ ಸಂರಕ್ಷಣೆಗೆ ಕಾರಣವಾಗುತ್ತದೆ ಎಂಬುದಕ್ಕೆ ವರದಿ ಸಾಕ್ಷಿಯಾಗಿದೆ ಎಂದು ಹೇಳಿದರು

ABH_6184.JPG

2018 ರಲ್ಲಿ ಹುಲಿಗಣತಿ ನಡೆದಾಗ ದೇಶದ ಹುಲಿಗಳು ವಾಸವಿರುವ ಪ್ರದೆಶಗಳಲ್ಲಿ ಚಿರತೆಗಳ ಗಣತಿ ಮಾಡಲಾಗಿತ್ತು. 2018 ರಲ್ಲಿ ಹುಲಿ ಶ್ರೇಣಿಯ ಭೂ ಪ್ರದೇಶಗಳಲ್ಲಿ ಒಟ್ಟಾರೆ ಚಿರತೆ ಸಂಖ್ಯೆಯನ್ನು ಸಹ ಅಂದಾಜಿಸಲಾಗಿದ್ದು, 12,852 ಚಿರತೆ (ಎಸ್.ಸಿ. ವಲಯದಲ್ಲಿ 12,172 ರಿಂದ 13,535) ಇರಬಹುದು ಎಂದು ಅಂದಾಜಿಸಲಾಗಿದೆ. 2014 ಕ್ಕೆ ಹೋಲಿಸಿದರೆ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ದೇಶದ 18 ಹುಲಿ ಆವಾಸಸ್ಥಾನಗಳಲ್ಲಿ 7,910 (ಎಸ್. 6,566-9,181) ಚಿರತೆಗಳು ಇರಬಹುದು.

ಕಾರ್ಯಕ್ರಮದಲ್ಲಿ ಭಾರತದ 14 ಹುಲಿ ಮೀಸಲು ಪ್ರದೇಶಗಳು ಗ್ಲೋಬಲ್ ಕನ್ಸರ್ವೇಷನ್ ಅಶೂರ್ಡ್ ಟೈಗರ್ ಸ್ಟಾಂಡರ್ಡ್ [ಸಿಎ/ಟಿಎಸ್] ಮಾನ್ಯತೆಯನ್ನು ಸ್ವೀಕರಿಸಿದವು. ಅಸ್ಸಾಂನ ಮಾನಸ್, ಕಾಜಿ಼ರಂಗ ಮತ್ತು ಒರಂಗ್, ಮಧ್ಯಪ್ರದೇಶದ ಸತ್ಪುರ, ಕನ್ಹಾ ಮತ್ತು ಪನ್ನಾ, ಮಹಾರಾಷ್ಟ್ರದ ಪೆಂಚ್, ಬಿಹಾರದ ವಾಲ್ಮೀಕಿ ಹುಲಿ ಮೀಸಲು, ಉತ್ತರ ಪ್ರದೇಶದ ದುದ್ವಾ, ಪಶ್ಚಿಮ ಬಂಗಾಳದ ಸುಂದೆರ್ಬನ್ಸ್, ಕೇರಳದ ಪರಂಬಿಕುಲಮ್, ಕರ್ನಾಟಕದ ಬಂಡಿಪುರ ಹುಲಿ ಮೀಸಲು ಮತ್ತು ತಮಿಳುನಾಡಿನ ಮಧುಮಲೈ ಮತ್ತು ಅನ್ನಾ ಮಲೈ ಸೇರಿ 14 ಹುಲಿ ಮೀಸಲು ಪ್ರದೇಶಗಳಿಗೆ ಹುಲಿ ಮೀಸಲು ಪ್ರದೇಶಗಳೆಂದು ಮಾನ್ಯತೆ ನೀಡಲಾಗಿದೆ.

ABH_6201.JPG

ಹುಲಿ ವಲಯ ದೇಶಗಳ ಜಾಗತಿಕ ಒಕ್ಕೂಟವು ಕನ್ಸರ್ವೇಷನ್ ಅಶ್ಯೂರ್ಡ್ ಟೈಗರ್ ಸ್ಟಾಂಡರ್ಡ್ [ಸಿಎ/ಟಿಎಸ್] ಅನ್ನು ಮಾನ್ಯತೆಯ ಸಂಸ್ಥೆಯನ್ನಾಗಿ [ಟಿ.ಆರ್.ಸಿ] ಒಪ್ಪಿಕೊಂಡಿವೆ. ವ್ಯವಸ್ಥೆಯನ್ನು ಹುಲಿ ಮತ್ತು ರಕ್ಷಣಾ ಪ್ರದೇಶಗಳ ತಜ್ಞರು ಅಭಿವೃದ್ಧಿಪಡಿಸಿದ್ದಾರೆ. ಇದನ್ನು 2013 ರಲ್ಲಿ ಅಧಿಕೃತವಾಗಿ ಆರಂಭಿಸಲಾಗಿದ್ದು, ಇದು ಪ್ರಬೇಧಗಳ ಪರಿಣಾಮಕಾರಿ ನಿರ್ವಹಣೆಗೆ ಕನಿಷ್ಠ ಮಾನದಂಡಗಳನ್ನು ನಿಗದಿಪಡಿಸುತ್ತದೆ ಮತ್ತು ಸಂಬಂಧಿಸಿದ ರಕ್ಷಣಾ ಪ್ರದೇಶಗಳಲ್ಲಿ ಮಾನದಂಡಗಳ ಮೌಲ್ಯಮಾಪನವನ್ನು ಉತ್ತೇಜಿಸುತ್ತದೆಸಿಎ/ಟಿಎಸ್ ಎನ್ನುವುದು ಹಲಿಗಳ ತಾಣಗಳು, ಅವುಗಳ ಯಶಸ್ವಿ ನಿರ್ವಹಣೆಗೆ ಕಾರಣವಾಗುತ್ತದೆಯೇ ಎಂದು ಪರೀಕ್ಷಿಸಲು ಅನುವು ಮಾಡಿಕೊಡುವ ಮಾನದಂಡಗಳ ಒಂದು ಗುಂಪಾಗಿದೆ.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪರಿಸರ ಖಾತೆ ರಾಜ್ಯ ಸಚಿವ ಶ್ರೀ ಅಶ್ವಿನಿ ಕುಮಾರ್ ಚೌಬೆ, ಪ್ರಕೃತಿ ಮತ್ತು ಹಳೆಯ ಜೀವನಕ್ಕೆ ಹೊಂದಿಕೆಯಾಗುವ ಹಳೆಯ ಸಂಪ್ರದಾಯದ ಬಗ್ಗೆ ಒತ್ತಿ ಹೇಳಿದರು. ಪರಭಕ್ಷವಾಗಿರುವ ಹುಲಿ ಆರೋಗ್ಯಕರ ವ್ಯವಸ್ಥೆಯನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಮತ್ತು ಅವುಗಳ ನಿಸರ್ಗದತ್ತ ಆವಾಸಸ್ಥಾನವನ್ನು ಉಳಿಸಲು ಎಲ್ಲರೂ ಕೈಜೋಡಿಸಬೇಕು ಎಂದರು.

ಇಬ್ಬರೂ ಸಚಿವರ ಸಮ್ಮುಖದಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ [ಎನ್.ಟಿ.ಸಿ.] ಹುಲಿ ಮತ್ತು ಅರಣ್ಯ ರಕ್ಷಣೆಯಲ್ಲಿ  ಗಣನೀಯ ಪಾತ್ರವಹಿಸಿರುವ ಕೆಲವು ಮಂಚೂಣಿ ಅರಣ್ಯ ಕಾರ್ಯಕರ್ತರನ್ನು ಬಾಘ್ ರಕ್ಷಕ್ಸ್ಹೆಸರಿನಲ್ಲಿ ಗೌರವಿಸಲಾಯಿತು.

ABH_6228.JPG

ಕೇಂದ್ರ ಪರಿಸರ ಸಚಿವರು ಮಾತನಾಡಿ, ನಮ್ಮ ಅರಣ್ಯ ಪಡೆಗಳು ಹಗಲು ಮತ್ತು ರಾತ್ರಿ ಶ್ರಮವಹಿಸಿ ಮಾರಣಾಂತಿಕ ಕೋವಿಡ್- 19 ಸಾಂಕ್ರಾಮಿಕ ಸಂದರ್ಭದಲ್ಲೂ ಸಹ ಅರಣ್ಯ ಮತ್ತು ವನ್ಯಜೀವಿಗಳನ್ನು ರಕ್ಷಿಸಿವೆ. ನಮ್ಮ ನೈಸರ್ಗಿಕ ಪರಂಪರೆಯನ್ನು ರಕ್ಷಿಸುವುದನ್ನು ಮುಂದುವರಿಸಿರುವ ಎಲ್ಲಾ ಮಂಚೂಣಿ  ಸಿಬ್ಬಂದಿಯ ಅವಿರತ ಸೇವಾ ಮನೋಭಾವನೆಯನ್ನು ಶ್ಲಾಘಿಸಿದರು.

ಭಾರತ ಸರ್ಕಾರ ಲಾಕ್ ಡೌನ್ ಸಂದರ್ಭದಲ್ಲೂ ಅರಣ್ಯ ಮತ್ತು ವನ್ಯ ಜೀವಿಗಳ ರಕ್ಷಣೆಯನ್ನು ಅಗತ್ಯ ಸೇವೆ ಎಂದು ಪರಿಗಣಿಸಿ ಸಕಾರಾತ್ಮಕ ಕ್ರಮ ಕೈಗೊಂಡಿತ್ತು ಎಂದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ [ಎನ್.ಟಿ.ಸಿ.] ತ್ರೈಮಾಸಿಕ ಸುದ್ದಿಪತ್ರಿಕೆ ಸ್ಟ್ರೈಪೆಸ್ಅನ್ನು ಬಿಡುಗಡೆ ಮಾಡಲಾಯಿತು. ಜಾಗತಿಕ ಹುಲಿ ದಿನದ ಕಾರ್ಯಕ್ರಮವನ್ನು ಇಬ್ಬರೂ ಸಚಿವರು ಸ್ಮರಣೀಯಗೊಳಿಸಿದರು. ಪರಿಸರ ಸಚಿವಾಲಯದ ಕಾರ್ಯದರ್ಶಿ ಶ್ರೀ ಆರ್.ಆರ್. ಗುಪ್ತಾ ಮತ್ತು ಎನ್.ಟಿ.ಸಿ. ಇತರೆ ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ABH_6188.JPG

***


(Release ID: 1740502) Visitor Counter : 592