ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ ಒಟ್ಟು 45 ಕೋಟಿ ಹೆಗ್ಗುರುತು ದಾಟಿದ ಕೋವಿಡ್ – 19 ಲಸಿಕಾ ಅಭಿಯಾನ


ಕಳೆದ 24 ಗಂಟೆಗಳಲ್ಲಿ 43 ಲಕ್ಷ ಕ್ಕೂ ಹೆಚ್ಚು ಕೋವಿಡ್ ಲಸಿಕೆ ಡೋಸ್ ಗಳ ನೀಡಿಕೆ

ಚೇತರಿಕೆ ದರ 97.38 % ರಷ್ಟು

ಕಳೆದ 24 ಗಂಟೆಗಳಲ್ಲಿ 43,509 ಹೊಸ ಪ್ರಕರಣಗಳು ಪತ್ತೆ

ಭಾರತದ ಸಕ್ರಿಯ ಪ್ರಕರಣಗಳು (4,03,840) ಪ್ರಸ್ತುತ ಒಟ್ಟು 1.28% ರಷ್ಟು ದಾಖಲು

ದೈನಂದಿನ ಪಾಸಿಟಿವಿಟಿ ದರ (2.52%) 52 ವಾರಗಳಲ್ಲಿ ಶೇ 5 ಕ್ಕೂ ಕಡಿಮೆ ದಾಖಲು

Posted On: 29 JUL 2021 10:00AM by PIB Bengaluru

ಭಾರತದಲ್ಲಿ ಕೋವಿಡ್-19 ಲಸಿಕೆ 45 ಕೋಟಿ ಹೆಗ್ಗುರುತು ದಾಟಿದೆ. ಇಂದು ಬೆಳಗ್ಗೆ 8 ಗಂಟೆಗೆ ದೊರೆತ ತಾತ್ಕಾಲಿಕ ಮಾಹಿತಿಯಂತೆ ಪ್ರಸ್ತುತ 54,11,501 ಅವಧಿಗಳಲ್ಲಿ 45,07,06,257 ಕೋವಿಡ್  ಲಸಿಕೆ ಡೋಸ್ ಹಾಕಲಾಗಿದೆ. ಕಳೆದ 24 ಗಂಟೆಗಳಲ್ಲಿ 43,92,697 ಲಸಿಕೆ ಡೋಸ್ ಗಳನ್ನು ನೀಡಲಾಗಿದೆ.

ಇವರನ್ನು ಒಳಗೊಂಡಂತೆ

ಎಚ್.ಸಿ.ಡಬ್ಲ್ಯೂ ಗಳು

ಮೊದಲ ಡೋಸ್

1,02,96,166

ಎರಡನೇ ಡೋಸ್

77,71,787

ಎಫ್.ಎಲ್.ಡಬ್ಲ್ಯೂ ಗಳು

ಮೊದಲ ಡೋಸ್

1,79,14,176

ಎರಡನೇ ಡೋಸ್

1,10,81,579

18-44 ವಯೋಮಿತಿಯೊಳಗಿನವರು

ಮೊದಲ ಡೋಸ್

14,68,84,314

ಎರಡನೇ ಡೋಸ್

72,09,744

45-59 ವಯೋಮಿತಿಯೊಳಗಿನವರು

ಮೊದಲ ಡೋಸ್

10,30,99,861

ಎರಡನೇ ಡೋಸ್

3,68,42,675

60 ವರ್ಷ ಮೀರಿದವರು

ಮೊದಲ ಡೋಸ್

7,43,50,754

ಎರಡನೇ ಡೋಸ್

3,52,55,201

ಒಟ್ಟು

45,07,06,257

ಕೋವಿಡ್-19 ಲಸಿಕೆಯ ಸಾರ್ವತ್ರಿಕರಣದ ಹೊಸ ಹಂತ 2021 ಜೂನ್ 21 ರಂದು ಪ್ರಾರಂಭವಾಗಿದೆ. ಕೋವಿಡ್ 19 ಲಸಿಕೆಯ ವೇಗವನ್ನು ತ್ವರಿತಗೊಳಿಸಲು ಮತ್ತು ದೇಶಾದ್ಯಂತ ವಿಸ್ತರಣೆ ಮಾಡಲು ಕೇಂದ್ರ ಸರ್ಕಾರ ಬದ್ಧವಾಗಿದೆ.

ಸಾಂಕ್ರಾಮಿಕ ಆರಂಭವಾದ ನಂತರದಿಂದ ಈವರೆಗೆ ಒಟ್ಟು 3,07,01,612 ಮಂದಿ ಚೇತರಿಸಿಕೊಂಡಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 38,465 ಮಂದಿ ಗುಣಮುಖರಾಗಿದ್ದಾರೆ. ಒಟ್ಟಾರೆ ಚೇತರಿಕೆ ದರ 97.38% ರಷ್ಟಿದೆ.

ಕಳೆದ 24 ಗಂಟೆಗಳಲ್ಲಿ 43,509 ಸೋಂಕಿತರು ಪತ್ತೆಯಾಗಿದ್ದು, ನಿರಂತರ 32 ದಿನಗಳಿಂದ 50,000 ಕ್ಕೂ ಕಡಿಮೆ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಕೇಂದ್ರ, ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಮತ್ತು ಸಾಮೂಹಿಕ ಪ್ರಯತ್ನದ ಫಲವಾಗಿ ಫಲಿತಾಂಶ ಹೊರ ಹೊಮ್ಮಿದೆ.

ಭಾರತದ ಸಕ್ರಿಯ ಪ್ರಕರಣಗಳು 4,03,840  ರಷ್ಟಿದೆ ಮತ್ತು ದೇಶದಲ್ಲಿ ಒಟ್ಟು ಸೋಂಕು ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1.28%  ರಷ್ಟಿದೆ.

ದೇಶಾದ್ಯಂತ ಪರೀಕ್ಷಾ ಸಾಮಾರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಕಳೆದ 24 ಗಂಟೆಗಳಲ್ಲಿ 17,28,795 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ. ಭಾರತದಲ್ಲಿ ಈವರೆಗೆ ಒಟ್ಟು 46, 17,28,795 ಸೋಂಕು ಪತ್ತೆ ಪರೀಕ್ಷೆಗಳನ್ನು ಮಾಡಲಾಗಿದೆ. ಒಂದೆಡೆ ದೇಶದಲ್ಲಿ ಪರೀಕ್ಷಾ ಸಾಮರ್ಥ್ಯ ವೃದ್ಧಿಯಾಗಿದ್ದು, ವಾರದ ಪಾಸಿಟಿವಿಟಿ ದರ ಶೇ 2.38 %  ರಷ್ಟಿದೆ. ಮತ್ತು ದೈನಂದಿನ ಪಾಸಿಟಿವಿಟಿ ದರ ಇಂದು 2.52 %  ರಷ್ಟು ದಾಖಲಾಗಿದೆ. ನಿರಂತರ 52 ವಾರಗಳಿಂದ ಪಾಸಿಟಿವಿಟಿ ದರ ಶೇ 5 ಕ್ಕೂ ಕಡಿಮೆ ದಾಖಲಾಗುತ್ತಿದೆ.

***


(Release ID: 1740236) Visitor Counter : 245