ಉಕ್ಕು ಸಚಿವಾಲಯ

ಕಬ್ಬಿಣ ಮತ್ತು ಉಕ್ಕಿನ ಲಭ್ಯತೆಯ ಹೆಚ್ಚಳಕ್ಕೆ ಸರ್ಕಾರದಿಂದ ವಿವಿಧ ಕ್ರಮ

Posted On: 26 JUL 2021 2:00PM by PIB Bengaluru

ಉಕ್ಕು ಅನಿಯಂತ್ರಿತ ವಲಯ. ವಾಣಿಜ್ಯಾತ್ಮಕ ನಿರ್ಧಾರಗಳು ಅಂದರೆ, ಉತ್ಪಾದನೆ ರಫ್ತು/ಆಮದನ್ನು ಉಕ್ಕು ಕಂಪನಿಗಳು ಕೈಗೊಳ್ಳುತ್ತವೆ. ಆದಾಗ್ಯೂ, ಸರ್ಕಾರ ಕಬ್ಬಿಣ ಮತ್ತು ಉಕ್ಕಿನ ಲಭ್ಯತೆಯನ್ನು ಹೆಚ್ಚಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದರಲ್ಲಿ ಉಕ್ಕು ಉತ್ಪಾದಕರಿಂದ ಉತ್ಪಾದನೆ ಮತ್ತು ಸಾಮರ್ಥ್ಯದ ಬಳಕೆಯನ್ನು ಹೆಚ್ಚಿಸುವುದರ ಜೊತೆಗೆ ಕಬ್ಬಿಣದ ಅದಿರಿನ ವರ್ಧಿತ ಉತ್ಪಾದನೆ ಮತ್ತು ಲಭ್ಯತೆಯನ್ನು ಖಾತ್ರಿಪಡಿಸಿಕೊಳ್ಳಲು ಗಣಿಗಾರಿಕೆ ಮತ್ತು ಖನಿಜ ನೀತಿ ಸುಧಾರಣೆ, ಒಡಿಶಾದಲ್ಲಿ ಕೇಂದ್ರ/ರಾಜ್ಯ ಸರ್ಕಾರದ ಪಿ.ಎಸ್.ಯು.ಗಳಿಂದ ಮುಟ್ಟುಗೋಲು ಹಾಕಿಕೊಂಡಿದ್ದ ಕಾರ್ಯಾಚರಣೆಯಲ್ಲಿದ್ದ ಗಣಿಗಳ ಶೀಘ್ರ ಆರಂಭ ಇತ್ಯಾದಿಗಳು ಸೇರಿವೆ.

2021-22ರ ಕೇಂದ್ರ ಬಜೆಟ್ ನಲ್ಲಿ ಮಿಶ್ರಲೋಹವಲ್ಲದ, ಮಿಶ್ರಲೋಹ ಮತ್ತು ತುಕ್ಕು ರಹಿತ ಉಕ್ಕಿನ (ಸೈನ್ ಲೆಸ್ ಸ್ಟೀಲ್‌)ಗಳ ಸೆಮಿಸ್, ಫ್ಲಾಟ್ ಮತ್ತು ಉದ್ದದ ಉತ್ಪನ್ನಗಳ ಮೇಲೆ ಸೀಮಾ ಸುಂಕವನ್ನು ಏಕರೂಪವಾಗಿ ಶೇ.7.5ಕ್ಕೆ ಇಳಿಸಲಾಗಿದೆ. ಇದಲ್ಲದೆ, ಉಕ್ಕಿನ ತ್ಯಾಜ್ಯದ ಮೇಲಿನ ಬಿಸಿಡಿಗೆ 2022ರ ಮಾರ್ಚ್ 31ರವರೆಗೆ ವಿನಾಯಿತಿ ನೀಡಲಾಗಿದೆ. ಮೇಲಿನವುಗಳ ಜೊತೆಗೆ, ಕೆಲವು ಉಕ್ಕಿನ ಉತ್ಪನ್ನಗಳ ಮೇಲಿನ ಎಡಿಡಿ ಮತ್ತು ಸಿವಿಡಿಯನ್ನು ಸಹ ಹಿಂತೆಗೆದುಕೊಳ್ಳಲಾಗಿದೆ / ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿದೆ.

ಈ ಮಾಹಿತಿಯನ್ನು ಕೇಂದ್ರ ಉಕ್ಕು ಖಾತೆ ಸಚಿವ ಶ್ರೀ ರಾಮ್ ಚಂದ್ರ ಪ್ರಸಾದ್ ಸಿಂಗ್ ಅವರು ಇಂದು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

***



(Release ID: 1739330) Visitor Counter : 195