ಗೃಹ ವ್ಯವಹಾರಗಳ ಸಚಿವಾಲಯ

ಕಾರ್ಗಿಲ್ ವಿಜಯ್ ದಿನದಂದು ದೇಶದ ಜನರಿಗೆ ಶುಭ ಕೋರಿದ ಕೇಂದ್ರ ಗೃಹ ಸಚಿವ ಅಮಿತ್ ಶಾ


ನಿಮ್ಮ ಅದಮ್ಯ ವಿಶ್ವಾಸ, ಧೈರ್ಯ, ಶೌರ್ಯ ಮತ್ತು ತ್ಯಾಗ ಕಾರ್ಗಿಲ್ ನಲ್ಲಿ ಪ್ರವೇಶಿಸಲಾಗದ ಮತ್ತು ಸವಾಲಿನ ಎತ್ತರ ಪ್ರದೇಶಗಳಲ್ಲಿ ತ್ರಿವರ್ಣ ಧ್ವಜವನ್ನು ವೈಭವಯುತವಾಗಿ ಹಾರಿಸಲು ಸಾಧ್ಯವಾಯಿತು

ರಾಷ್ಟ್ರದ ಸಮಗ್ರತೆಯನ್ನು ಉಳಿಸಲು ನಿಮ್ಮ ಸಮರ್ಪಣೆಗೆ ದೇಶ ಕೃತಜ್ಞವಾಗಿದ್ದು, ನಿಮಗೆ ತಲೆ ಬಾಗುತ್ತದೆ

Posted On: 26 JUL 2021 3:31PM by PIB Bengaluru

ಕಾರ್ಗಿಲ್ ವಿಜಯ್ ದಿನದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಶ್ರೀ ಅಮಿತ್ ಶಾ ದೇಶದ ಜನರಿಗೆ ಶುಭ ಕೋರಿದ್ದಾರೆ. ಕಾರ್ಗಿಲ್ ದಿನದಂದು ಎಲ್ಲಾ ಧೈರ್ಯಶಾಲಿ ಸೇನಾನಿಗಳನ್ನು ಸ್ಮರಿಸಿಕೊಂಡಿರುವ ಶ್ರೀ ಅಮಿತ್ ಶಾ, ತಮ್ಮ ಟ್ವೀಟ್ ಸಂದೇಶದಲ್ಲಿ ನಿಮ್ಮ ಅದಮ್ಯ ವಿಶ್ವಾಸ, ಧೈರ್ಯ, ಶೌರ್ಯ ಮತ್ತು ತ್ಯಾಗದಿಂದಾಗಿ ಕಾರ್ಗಿಲ್ ನಲ್ಲಿ ಪ್ರವೇಶಿಸಲಾಗದ ಮತ್ತು ಸವಾಲಿನ ಎತ್ತರ ಪ್ರದೇಶಗಳಲ್ಲಿ ತ್ರಿವರ್ಣ ಧ್ವಜವನ್ನು ವೈಭವಯುತವಾಗಿ ಹಾರಿಸಲು ಸಾಧ್ಯವಾಯಿತುಎಂದು ಸ್ಮರಿಸಿಕೊಂಡಿದ್ದಾರೆ.

ರಾಷ್ಟ್ರದ ಸಮಗ್ರತೆಯನ್ನು ಉಳಿಸಲು ನಿಮ್ಮ ಸಮರ್ಪಣೆಗೆ ದೇಶೀ ಕೃತಜ್ಞವಾಗಿದ್ದು, ನಿಮಗೆ ತಲೆ ಬಾಗುತ್ತದೆ”  ಎಂದು ಅವರು ತಿಳಿಸಿದ್ದಾರೆ.

***(Release ID: 1739181) Visitor Counter : 168