ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
43 ಕೋಟಿ ಹೆಗ್ಗುರುತು ದಾಟಿದ ಭಾರತದ ಒಟ್ಟು ಕೋವಿಡ್-19 ಲಸಿಕೆ ವ್ಯಾಪ್ತಿ
ಪ್ರಸ್ತುತ ಚೇತರಿಕೆ ದರ 97.36% ರಷ್ಟಿದೆ
ಕಳೆದ 24 ಗಂಟೆಗಳಲ್ಲಿ 39,742 ದೈನಂದಿನ ಹೊಸ ಪ್ರಕರಣಗಳು ವರದಿಯಾಗಿವೆ
ಭಾರತದ ಸಕ್ರಿಯ ಪ್ರಕರಣಗಳ ಹೊರೆಯು(4,08,212) ಪ್ರಸ್ತುತ ಒಟ್ಟು ಪ್ರಕರಣಗಳಲ್ಲಿ1.30% ರಷ್ಟಿದೆ
ದೈನಂದಿನ ಪಾಸಿಟಿವಿಟಿ ದರ (2.31%). ಸತತ 34 ದಿನಗಳಳಿಂದ 3% ಕ್ಕಿಂತ ಕಡಿಮೆ ಮಟ್ಟದಲ್ಲಿದೆ
Posted On:
25 JUL 2021 10:26AM by PIB Bengaluru
ಭಾರತದ ಕೋವಿಡ್-19 ಲಸಿಕೆ ವ್ಯಾಪ್ತಿ ನಿನ್ನೆ 43 ಕೋಟಿಯ ಹೆಗ್ಗುರುತನ್ನು ದಾಟಿದೆ.
ಇಂದು ಬೆಳಿಗ್ಗೆ 8 ಗಂಟೆಯವರೆಗಿನ ವರದಿಯ ಪ್ರಕಾರ, ಒಟ್ಟು 52,72,431 ಸೆಷನ್‌ಗಳ ಮೂಲಕ 43,31,50,864 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ 51,18,210 ಲಸಿಕೆ ಡೋಸ್‌ಗಳನ್ನು ನೀಡಲಾಗಿದೆ.
ಇದರಲ್ಲಿ ಇವು ಸೇರಿವೆ:
ಆರೋಗ್ಯ ಕಾರ್ಯಕರ್ತರು
|
1ನೇ ಡೋಸ್
|
1,02,86,512
|
2ನೇ ಡೋಸ್
|
76,98,343
|
ಮುಂಚೂಣಿ ಕಾರ್ಯಕರ್ತರು
|
1ನೇ ಡೋಸ್
|
1,78,52,440
|
2ನೇ ಡೋಸ್
|
1,08,19,457
|
18-44 ವರ್ಷ ವಯೋಮಾನದವರು
|
1ನೇ ಡೋಸ್
|
13,81,09,509
|
2ನೇ ಡೋಸ್
|
60,62,371
|
45-59 ವರ್ಷ ವಯೋಮಾನದವರು
|
1ನೇ ಡೋಸ್
|
10,07,21,803
|
2ನೇ ಡೋಸ್
|
3,42,99,610
|
60 ವರ್ಷ ದಾಟಿದವರು
|
1ನೇ ಡೋಸ್
|
7,34,17,431
|
2ನೇ ಡೋಸ್
|
3,38,83,388
|
ಒಟ್ಟು
|
43,31,50,864
|
ಕೋವಿಡ್-19 ಲಸಿಕೆಯ ಸಾರ್ವತ್ರೀಕರಣದ ಹೊಸ ಹಂತವು 2021ರ ಜೂನ್ 21ರಿಂದ ಪ್ರಾರಂಭವಾಗಿದೆ. ಕೋವಿಡ್-19 ಲಸಿಕೆಯ ವ್ಯಾಪ್ತಿಯನ್ನು ದೇಶಾದ್ಯಂತ ವಿಸ್ತರಿಸಲು ಮತ್ತು ಅದರ ವೇಗವನ್ನು ಹೆಚ್ಚಿಸಲು ಕೇಂದ್ರ ಸರಕಾರ ಬದ್ಧವಾಗಿದೆ.
ಸಾಂಕ್ರಾಮಿಕದ ಆರಂಭದಿಂದ ಸೋಂಕಿಗೆ ಒಳಗಾದವರಲ್ಲಿ ಈಗಾಗಲೇ 3,05,43,138 ಮಂದಿ ಕೋವಿಡ್-19 ನಿಂದ ಚೇತರಿಸಿಕೊಂಡಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 39,972 ರೋಗಿಗಳು ಚೇತರಿಸಿಕೊಂಡಿದ್ದಾರೆ. ಇದು ಒಟ್ಟಾರೆ 97.36% ಚೇತರಿಕೆ ದರವನ್ನು ಸೂಚಿಸುತ್ತದೆ.
ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 39,742 ದೈನಂದಿನ ಹೊಸ ಪ್ರಕರಣಗಳನ್ನು ವರದಿಯಾಗಿವೆ.
ನಿರಂತರ ಇಪ್ಪತ್ತೆಂಟು ದಿನಗಳಿಂದ 50,000ಕ್ಕಿಂತ ಕಡಿಮೆ ದೈನಂದಿನ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಇದು ಕೇಂದ್ರ ಸರಕಾರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ನಿರಂತರ ಮತ್ತು ಸಹಯೋಗದ ಪ್ರಯತ್ನಗಳ ಫಲವಾಗಿದೆ.
ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು 4,08,212 ರಷ್ಟಿದ್ದು, ಸಕ್ರಿಯ ಪ್ರಕರಣಗಳ ಪ್ರಮಾಣ ಈಗ ದೇಶದ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ 1.30% ರಷ್ಟಿದೆ.
ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಿರುವುದರಿಂದ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 17,18,756 ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಾರೆಯಾಗಿ, ಭಾರತವು ಇದುವರೆಗೂ 45.62 ಕೋಟಿ (45,62,89,567) ಪರೀಕ್ಷೆಗಳನ್ನು ನಡೆಸಿದೆ.
ಒಂದೆಡೆ ಪರೀಕ್ಷಾ ಸಾಮರ್ಥ್ಯವನ್ನು ದೇಶಾದ್ಯಂತ ಹೆಚ್ಚಿಸಲಾಗಿದ್ದರೂ, ಸಾಪ್ತಾಹಿಕ ಪಾಸಿಟಿವಿಟಿ ದರವು ಪ್ರಸ್ತುತ 2.24% ರಷ್ಟಿದೆ ಮತ್ತು ದೈನಂದಿನ ಪಾಸಿಟಿವಿಟಿ ದರವು ಇಂದು 2.31% ರಷ್ಟಿದೆ. ದೈನಂದಿನ ಪಾಸಿಟಿವಿಟಿ ದರವು ಸತತ 34 ದಿನಗಳಿಂದ 3%ಕ್ಕಿಂತ ಕಡಿಮೆ ಮಟ್ಟದಲ್ಲಿ ಮತ್ತು ಸತತ 48 ದಿನಗಳಿಂದ 5%ಕ್ಕಿಂತ ಕಡಿಮೆ ಮಟ್ಟದಲ್ಲಿ ಮುಂದುವರಿದಿದೆ.
***
(Release ID: 1738915)
Visitor Counter : 220