ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಮಕ್ಕಳು ತಮ್ಮ ಅಭಿಪ್ರಾಯಗಳು ಮತ್ತು ಅವರಿಗೆ ಸಂಬಂಧಿಸಿದ ವಿವಿಧ ವಿಷಯಗಳ ದೃಷ್ಟಿಕೋನಗಳನ್ನು ವ್ಯಕ್ತಪಡಿಸಲು ವಯಸ್ಕರು ಉತ್ತೇಜನ ನೀಡುವುದು ಅತ್ಯಂತ ಮಹತ್ತರವಾದದ್ದು: ಏಮ್ಸ್ ನ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಕೇಂದ್ರೀಯ ಮಾನಸಿಕ ಆರೋಗ್ಯ ಪ್ರಾಧಿಕಾರದ ಸದಸ್ಯ ಡಾ. ರಾಜೇಶ್ ಸಾಗರ್
ಸಕಾರಾತ್ಮಕ ವಾತಾವರಣದ ಕೊರತೆ, ಉತ್ತೇಜನ ಅಥವಾ ಸಾಮಾಜಿಕ ಸಂವಹನಗಳ ಕೊರತೆ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು: ಆಂತರಿಕವಾಗಿ ಮಕ್ಕಳಿಗೆ ಏನಾಗುತ್ತಿದೆ ಎಂಬುದರ ಬಗ್ಗೆ ಅರಿವಿಲ್ಲದ ಕಾರಣ ಸಂವಹನ ಮಾಡುವಾಗ ಪಾಲಕರು ಸೌಮ್ಯವಾಗಿರಬೇಕು
ಸುರಕ್ಷಿತ ವಾತಾವರಣ ಮಕ್ಕಳನ್ನು ಆರೋಗ್ಯ ಸಮಸ್ಯೆಗಳಿಂದ ರಕ್ಷಿಸುತ್ತದೆ: ಡಾ. ರಾಜೇಶ್ ಸಾಗರ್
Posted On:
23 JUL 2021 11:22AM by PIB Bengaluru
ಸಾಂಕ್ರಾಮಿಕದಿಂದ ಮಕ್ಕಳ ಆರೋಗ್ಯದ ಮೇಲೆ ಆಗುವ ಪ್ರಭಾವ ಮತ್ತು ಅದನ್ನು ಹೇಗೆ ಪರಿಹರಿಸಬಹುದು ಎನ್ನುವ ಕುರಿತು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ [ಏಮ್ಸ್] ಯ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಕೇಂದ್ರೀಯ ಮಾನಸಿಕ ಆರೋಗ್ಯ ಪ್ರಾಧಿಕಾರದ ಸದಸ್ಯ ಡಾ. ರಾಜೇಶ್ ಸಾಗರ್ ವಿವರಿಸಿದ್ದಾರೆ.
ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಸಾಂಕ್ರಾಮಿಕ ಹೇಗೆ ಪರಿಣಾಮ ಬೀರುತ್ತದೆ?
ಮಕ್ಕಳು ದೈಹಿಕ ಮತ್ತು ಮಾನಸಿಕವಾಗಿ ಸೂಕ್ಷ್ಮವಾಗಿರುತ್ತಾರೆ. ಯಾವುದೇ ರೀತಿಯ ಒತ್ತಡ, ಚಿಂತೆ, ಆಘಾತ ಅವರ ಮೇಲೆ ಆಳವಾಗಿ ಪರಿಣಾಮ ಉಂಟು ಮಾಡುತ್ತದೆ ಮತ್ತು ದೀರ್ಘಕಾಲೀನ ಪರಿಣಾಮಗಳಿಗೆ ಕಾರಣವಾಗಬಹುದು. ಸಾಂಕ್ರಾಮಿಕ ಸಾಮಾನ್ಯ ಚಟುವಟಿಕೆಗಳನ್ನು ಬದಲಾಯಿಸಿದೆ. ಅವರ ಶಾಲೆಗಳು ಮುಚ್ಚಿವೆ, ಶಿಕ್ಷಣ ಆನ್ ಲೈನ್ ಗೆ ಬದಲಾವಣೆಯಾಗಿದೆ ಮತ್ತು ಗೆಳೆಯರ ಜತೆ ಸಂವಾದ ಸೀಮಿತ ಮತ್ತು ನಿಯಂತ್ರಣಗೊಂಡಿದೆ. ಇದಲ್ಲದೇ ಒಬ್ಬರು ಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡಿರುವವರು ಸಹ ಕೆಲವರಿದ್ದಾರೆ.
ಈ ಎಲ್ಲಾ ವಿಷಯಗಳು ಮಕ್ಕಳ ಮಾನಸಿಕ ಯೋಗ ಕ್ಷೇಮದ ಮೇಲೆ ಪರಿಣಾಮ ಬೀರಿದ್ದು, ಅವರ ಸಾಮಾನ್ಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಮುಖ್ಯವಾಗಿ ಭಾವನಾತ್ಮಕ ವಲಯದ ಉತ್ತಮ ವಾತಾವರಣದಿಂದ ಅವರನ್ನು ವಂಚಿತರನ್ನಾಗಿ ಮಾಡಿದೆ.
ತೊಂದರೆಗೀಡಾದ ಮಕ್ಕಳೊಂದಿಗೆ ವ್ಯವಹರಿಸುವಾಗ ನೀವು ಎದುರಿಸುತ್ತಿರುವ ದೊಡ್ಡ ಸವಾಲು ಯಾವುದು ?
ವಯಸ್ಕರಿಗಿಂತ ಮಕ್ಕಳು ಒತ್ತಡದ ಸಂದರ್ಭದಲ್ಲಿ ವಿಭಿನ್ನವಾಗಿ ಪ್ರತಿಕ್ರಿಯೆ ನೀಡುತ್ತಾರೆ. ಕೆಲವು ಮಕ್ಕಳಲ್ಲಿ ಅಂಜಿಕೆ ಇರುತ್ತದೆ, ಕೆಲವರು ಹಿಂಜರಿದರೆ ಕೆಲವರು ಖಿನ್ನತೆಗೆ ಒಳಗಾಗುತ್ತಾರೆ. ಹೀಗಾಗಿ ಮಕ್ಕಳ ಮಾನಸಿಕ ಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಸುತ್ತಮುತ್ತಲಿನ ಪರಿಸರ ಮಕ್ಕಳ ಭಾವನೆ ಅಥವಾ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಮಗೆ ತಿಳಿದಿದೆ. ಕೆಲವೊಮ್ಮೆ ಮಕ್ಕಳು ಆಂತರಿಕ ಪರಿಸ್ಥಿತಿಗೆ ಸಿಲುಕುತ್ತಾರೆ. ಗಾಬರಿ, ಅನಾರೋಗ್ಯ ಅಥವಾ ಸಮೀಪದ ಮತ್ತು ಆಪ್ತರ ಸಾವು ಪ್ರತಿಕೂಲ ಪರಿಣಾಮ ಉಂಟು ಮಾಡಬಹುದು. ಅಂತಹ ಸಂದರ್ಭದಲ್ಲಿ ತಮ್ಮ ಭಯ, ಆತಂಕ ಅಥವಾ ಚಿಂತೆಯನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ವಯಸ್ಕರು ಮಕ್ಕಳ ವರ್ತನೆಯ ಬಗ್ಗೆ ನಿಗಾವಹಿಸುವುದು ಮಹತ್ವದ್ದಾಗಿದೆ. ಪ್ರಸ್ತುತ ಬಿಕ್ಕಟ್ಟಿನ ಸಂದರ್ಭದಲ್ಲಿ ಮಕ್ಕಳು ತಮ್ಮ ಅಭಿಪ್ರಾಯಗಳನ್ನು ಮತ್ತು ಅವರಿಗೆ ಸಂಬಂಧಿಸಿದ ವಿವಿಧ ವಿಷಯಗಳ ದೃಷ್ಟಿಕೋನವನ್ನು ವ್ಯಕ್ತಪಡಿಸಲು ಉತ್ತೇಜನ ನೀಡುವುದು ಅತ್ಯಂತ ಮಹತ್ವದ್ದಾಗಿದೆ. ತಮ್ಮ ನಿಲುವುಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಲು ಮಕ್ಕಳಿಗೆ ಸೂಕ್ತ ವಾತಾವರಣ ನಿರ್ಮಿಸಬೇಕು. ಅವರು ಮಾತನಾಡಲು ಸಾಧ್ಯವಾಗದಿದ್ದರೆ ಚಿತ್ರಕಲೆ, ವರ್ಣ ಚಿತ್ರಗಳು ಇತರೆ ಮಾಧ್ಯಮಗಳ ಮೂಲಕವೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಉತ್ತೇಜಿಸಬೇಕು. ಸಾಂಕ್ರಾಮಿಕದಿಂದ ಮಕ್ಕಳ ಮೇಲೆ ಆಗಿರುವ ಪರಿಣಾಮಗಳನ್ನು ನೇರ ಪ್ರಶ್ನೆಗಳ ಮೂಲಕ ಬಗೆಹರಿಸಲಾಗದು. ಮಕ್ಕಳೊಂದಿಗೆ ಸಂವಾದಿಸುವಾಗ ಆರೈಕೆ ಮಾಡುವರು ಸೌಮ್ಯವಾಗಿರಬೇಕು, ಏಕೆಂದರೆ ಆಂತರಿಕವಾಗಿ ಏನಾಗುತ್ತಿದೆ ಎಂಬುದರ ಅರಿವು ಅವರಿಗೆ ಇರುವುದಿಲ್ಲ. ಹೀಗಾಗಿ ಮಕ್ಕಳನ್ನು ಅರ್ಥಮಾಡಿಕೊಳ್ಳುವಾಗ ಸೃಜನಶೀಲ ಮಾರ್ಗಗಳ ಬಳಕೆಯನ್ನು ಪ್ರೋತ್ಸಾಹಿಸುವುದು ಮುಖ್ಯವಾಗಿದೆ. ಕಷ್ಟಕರವಾದ ಸೋಂಕು, ಸಾವು ಇನ್ನಿತರ ವಿಷಯಗಳ ಬಗ್ಗೆ ನೇರವಾಗಿ ಸಂವಹನ ನಡೆಸಬೇಕು.
ಮೊದಲ ಐದರಿಂದ ಆರು ವರ್ಷಗಳ ಮಕ್ಕಳ ಜೀವನ ಅಡಿಪಾಯದ ವರ್ಷಗಳಾಗಿದ್ದು, ಸಾಮಾನ್ಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಹಲವಾರು ಉತ್ತೇಜನದ ಅಗತ್ಯವಿರುತ್ತದೆ. ಕಿರಿಯ ಮಕ್ಕಳ ಮೇಲೆ ಸಾಂಕ್ರಾಮಿಕ ಹೇಗೆ ಪರಿಣಾಮ ಬೀರುತ್ತಿದೆ ಮತ್ತು ಪರಿಣಾಮವನ್ನು ಹೇಗೆ ಕಡಿಮೆ ಮಾಡಬಹುದು ಎಂದು ನೀವು ಭಾವಿಸುತ್ತೀರಿ?
ಮಗುವಿನ ವಿಷಯದಲ್ಲಿ ಮೊದಲ ಐದು ವರ್ಷ ಅತ್ಯಂತ ನಿರ್ಣಾಯಕ ಮತ್ತು ಮಕ್ಕಳಿಗೆ ನಾವು ಬಹುಹಂತದ ಉತ್ತೇಜನ ಒದಗಿಸಬೇಕು. ಸಾಕಾರಾತ್ಮಕ ಪರಿಸರದ ಕೊರತೆ, ಉತ್ತೇಜನ ಅಥವಾ ಸಾಮಾಜಿಕ ಸಂವಾದದ ಕೊರತೆಯಿಂದ ಪ್ರತಿಕೂಲ ಪರಿಣಾಮ ಬೀರಬಹುದು.
ಆದರೂ ನಾವು ಮಕ್ಕಳು ಸೋಂಕಿನ ಅಪಾಯಕ್ಕೆ ಸಿಲುಕುವುದಕ್ಕೆ ಅವಕಾಶ ನೀಡಬಾರದು. ನಾವು ಮಕ್ಕಳಿಗೆ ವಿನೋದದಿಂದ ತುಂಬಿದ ಪರಿಸರ ವ್ಯವಸ್ಥೆಯನ್ನು ಕಲ್ಪಿಸಿ ಹಲವಾರು ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಬೇಕು. ಆನ್ ಲೈನ್ ಶಿಕ್ಷಣ ಸಹ ಚಟುವಟಿಕೆ ಆಧರಿತ ಕಲಿಕೆಯತ್ತ ಆಸಕ್ತಿ ತೋರುವಂತಿರಬೇಕು. ಮಕ್ಕಳ ಮೇಲೆ ಸಾಂಕ್ರಾಮಿಕದ ಪರಿಣಾಮ ಕಡಿಮೆ ಮಾಡಲು ನಾವು ಆಹ್ಲಾದಿಸಬಹುದಾದ ಮತ್ತು ಸುರಕ್ಷಿತ ವಿಧಾನಗಳನ್ನು ರೂಪಿಸಬೇಕಾಗಿದೆ ಎಂದು ನಾನು ಬಲವಾಗಿ ಪ್ರತಿಪಾದಿಸುತ್ತೇನೆ.
ಹಿರಿಯ ಮಕ್ಕಳು ಸಹ ಶೈಕ್ಷಣಿಕ ವಿಚಾರದಲ್ಲಿ ಅನಿಶ್ಚಿತತೆಯನ್ನು ಎದುರಿಸುತ್ತಿದ್ದಾರೆ. ಇದಕ್ಕಾಗಿ ನಿಮ್ಮ ಸಲಹೆ ಏನು?
ಅವರು ಅನಿಶ್ಚಿತತೆಯನ್ನು ಎದುರಿಸುವುದು ಸಾಮಾನ್ಯವಾಗಿದೆ. ಸಾಂಕ್ರಾಮಿಕ ಅವರ ಶಿಕ್ಷಣ ಮತ್ತು ವೃತ್ತಿ ಯೋಜನೆಗಳಿಗೆ ಅಡ್ಡಿಪಡಿಸಿದೆ. ಇಲ್ಲಿ ಪೋಷಕರು, ಪಾಲಕರು ಅಥವಾ ಶಿಕ್ಷಕರ ಪಾತ್ರ ಅತ್ಯಂತ ನಿರ್ಣಾಯಕವಾಗುತ್ತದೆ. ಪರಿಸ್ಥಿತಿಯ ಬಗ್ಗೆ ನಾವೇನು ಹೆಚ್ಚು ಮಾಡಲು ಸಾಧ್ಯವಿಲ್ಲ ಎಂಬ ಬಗ್ಗೆ ಮಾರ್ಗದರ್ಶನ ನೀಡಬೇಕಾಗಿದೆ ಮತ್ತು ನೀವೊಬ್ಬರೇ ಇಲ್ಲಿ ಒಂಟಿಯಲ್ಲ. ಜಗತ್ತಿನಾದ್ಯಂತ ಇತರೆ ಮಕ್ಕಳು ಸಹ ಸಂದಿಗ್ದತೆಗೆ ಸಿಲುಕಿಕೊಂಡಿದ್ದಾರೆ ಎಂಬುದನ್ನು ಅರ್ಥಮಾಡಿಸಬೇಕು. ವಾಸ್ತವಿಕತೆಯನ್ನು ಪಾಲಕರು ಸಹ ಅರ್ಥಮಾಡಿಕೊಳ್ಳಬೇಕು ಮತ್ತು ಈ ಎಲ್ಲಾ ಒಟ್ಟಾರೆ ಪ್ರಕ್ರಿಯೆಯಲ್ಲಿ ನಾವು ನಿಮ್ಮೊಂದಿಗೆ ಇರುತ್ತೇವೆ ಎಂಬ ಬೆಂಬಲವನ್ನು ಮಕ್ಕಳಿಗೆ ನೀಡಬೇಕು. ಶಿಕ್ಷಣ ಮಂಡಳಿಗಳು ಪರೀಕ್ಷೆ ನಡೆಸುವ ವಿಚಾರದಲ್ಲಿ ಹೊಂದಿಕೊಂಡು ಕಾರ್ಯನಿರ್ವಹಿಸುತ್ತಿವೆ ಮತ್ತು ಹೀಗಾಗಿ ಒಂದು ಹಂತಕ್ಕೆ ಶಿಕ್ಷಣ ತಲುಪುತ್ತಿರುವುದರಿಂದ ಶಿಕ್ಷಣದಲ್ಲಿ ಪ್ರತಿಕೂಲ ಪರಿಣಾಮ ಉಂಟಾಗಿಲ್ಲ, ವೃತ್ತಿ ಆಯ್ಕೆಗೂ ಅವಕಾಶವಿದೆ.
ಸಾಂಕ್ರಾಮಿಕವು ಪೋಷಕರತ್ತಲೂ ವಿಶೇಷ ಗಮನಹರಿಸಿದೆ. ನೀವು ಪೋಷಕರಿಗೆ ಹೇಗೆ ಸಲಹೆ ನೀಡುತ್ತೀರಿ?
ವೈಯಕ್ತಿಕ ಬದುಕು ಮತ್ತು ಕಾರ್ಯಸ್ಥಳ ಮುಸುಕಾಗುವಿಕೆಯ ನಡುವೆ ಅನೇಕ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವ ಹೆಚ್ಚುವರಿ ಜವಾಬ್ದಾರಿ ನಿಭಾಯಿಸುವುದು ಸಹ ಕಷ್ಟಕರವಾಗಿದೆ. ಪ್ರತಿಯೊಂದು ವಯೋಮಿತಿಯ ಮಕ್ಕಳಿಗೂ ವಿಭಿನ್ನ ಅಗತ್ಯಗಳಿವೆ, ಅವರಿಗೆ ಸಮಯ, ಗಮನಕೊಡುವ, ಮಕ್ಕಳೊಂದಿಗೆ ಬೆರೆಯುವ, ಸಂಪನ್ಮೂಲ ಮತ್ತು ಸಂತಸ ವಾತಾವರಣ ಬೇಕಾಗುತ್ತದೆ. ಮನೆಯಲ್ಲಿ ಒತ್ತಡದ ವಾತಾವರಣ ಮಾನಸಿಕ ಆರೋಗ್ಯ ಸ್ಥಿತಿ ಹೆಚ್ಚಾಗಲು ಕಾರಣವಾಗಬಹುದು. ಸುರಕ್ಷಿತ ವಾತಾವರಣ ಮಾನಸಿಕ ಆರೋಗ್ಯ ಕಳವಳದಿಂದ ರಕ್ಷಿಸುತ್ತದೆ.
ಪಾಲಕರು ಮಕ್ಕಳನ್ನು ತಮ್ಮೊಂದಿಗೆ ತೊಡಗಿಸಿಕೊಳ್ಳಬೇಕು. ಇದರಿಂದ ಅವರ ನಡುವೆ ಸಕಾರಾತ್ಮಕ ಚೌಕಟ್ಟು ನಿರ್ಮಾಣವಾಗಲಿದೆ. ಪೋಷಕರು ಸಹ ತಮ್ಮನ್ನು ಶಾಂತಗೊಳಿಸಿಕೊಳ್ಳಲು ಮಾರ್ಗಗಳನ್ನು ಹುಡುಕಿಕೊಳ್ಳಬೇಕು. ಅವರು ತಮ್ಮ ದೈನಂದಿನ ಚಟುವಟಿಕೆಗಳನ್ನು ಸುಗಮಗೊಳಿಸಿಕೊಂಡರೆ ಮಕ್ಕಳಿಗೆ ಸಮಯ ನೀಡಬಹುದು. ಒತ್ತಡವನ್ನು ನಿಭಾಯಿಸಲು ಸಾಧ್ಯವಾಗದವರು ಕುಟುಂಬ, ಸ್ನೇಹಿತರು ಅಥವಾ ವೃತ್ತಿಪರರ ಬೆಂಬಲ ಪಡೆಯಬೇಕು.
***
(Release ID: 1738133)
Visitor Counter : 432