ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಕೇಂದ್ರ ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತು ರಾಜ್ಯ ಸಚಿವ ಶ್ರೀ ನಿಶಿತ್ ಪ್ರಾಮಾಣಿಕ್ ಅವರು ನಾಳೆ ಉದ್ಘಾಟನಾ ಸಮಾರಂಭದ ವೇಳೆ ಭಾರತೀಯ ಅಥ್ಲೀಟ್ ಗಳನ್ನು ರಾಷ್ಟ್ರೀಯ ಕ್ರೀಡಾಂಗಣದಿಂದ ಹುರಿದುಂಬಿಸಲಿದ್ದಾರೆ

Posted On: 22 JUL 2021 8:59PM by PIB Bengaluru

ಪ್ರಮುಖ ಮುಖ್ಯಾಂಶಗಳು:

ಮಾಜಿ ಅಥ್ಲೀಟ್ ಗಳು ಸೇರಿದಂತೆ ದೇಶದಾದ್ಯಂತದಿಂದ ಸಮಾಜದ ವಿವಿಧ ಕ್ಷೇತ್ರಗಳ ಜನಪ್ರಿಯ ವ್ಯಕ್ತಿಗಳು ನಮ್ಮ ಅಥ್ಲೀಟ್ ಗಳನ್ನು ಉತ್ತೇಜಿಸಲು ಒಗ್ಗೂಡಲಿದ್ದಾರೆ.

32ನೇ ಬೇಸಿಗೆ ಒಲಿಂಪಿಕ್ಸ್ ನಾಳೆ ಟೋಕಿಯೋದಲ್ಲಿ ಆರಂಭವಾಗಲಿದ್ದು, ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್ ಮತ್ತು ಕೇಂದ್ರ ಯುವಜನ ವ್ಯವಹಾರ ಮತ್ತು ಕ್ರೀಡಾ ಖಾತೆ ರಾಜ್ಯ ಸಚಿವ ಶ್ರೀ ನಿಶಿತ್ ಪ್ರಾಮಾಣಿಕ್ ಅವರು ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಉದ್ಘಾಟನಾ ಸಮಾರಂಭವನ್ನು ವೀಕ್ಷಿಸಲಿದ್ದಾರೆ.

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆರಂಭಿಸಿರುವ #Cheer4India  ಅಭಿಯಾನದ ಭಾಗವಾಗಿ, ನಮ್ಮ ಅಥ್ಲೀಟ್ ಗಳನ್ನು ಉತ್ತೇಜಿಸಲು ಮಾಜಿ ಅಥ್ಲೀಟ್ ಗಳೂ ಸೇರಿದಂತೆ ಸಮಾಜದ ಎಲ್ಲ ಕ್ಷೇತ್ರಗಳ ಪ್ರಮುಖ ವ್ಯಕ್ತಿಗಳು ದೇಶಾದ್ಯಂತದಿಂದ ಕಾರ್ಯಕ್ರಮದಲ್ಲಿ ಒಗ್ಗೂಡಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರೆಂದು ನಿರೀಕ್ಷಿಸಲಾಗಿರುವವರಲ್ಲಿ ಹರಿಯಾಣದ ಕ್ರೀಡಾ ಸಚಿವ ಸಂದೀಪ್ ಸಿಂಗ್, ಮಧ್ಯಪ್ರದೇಶದ ಕ್ರೀಡಾ ಸಚಿವ ಯಶೋಧರಾ ರಾಜೇ ಸಿಂಧ್ಯಾ, ರಾಷ್ಟ್ರೀಯ ಬ್ಯಾಡ್ಮಿಂಟನ್ ತರಬೇತುದಾರ ಪುಲ್ಲಾಲ ಗೋಪೀ ಚಂದ್ ಮತ್ತಿತರರು ಸೇರಿದ್ದಾರೆ.

ಅತಿ ಹೆಚ್ಚು 56 ಮಹಿಳಾ ಅಥ್ಲೀಟ್ ಗಳೂ ಸೇರಿದಂತೆ ಭಾರತವು 127 ಅಥ್ಲೀಟ್ ಗಳ ಅತಿ ದೊಡ್ಡ ತಂಡವನ್ನು ಬಾರಿಯ ಒಲಿಂಪಿಕ್ಸ್ ಗೆ ಕಳುಹಿಸಿದೆ.

***



(Release ID: 1737975) Visitor Counter : 166