ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ

ಧಾನ್ಯಗಳ ಆಮದುದಾರರಿಗೆ ಶೇಖರಿಸಿಡುವ ಮಿತಿಯಿಂದ ವಿನಾಯಿತಿ ನೀಡಲಾಗಿದೆ


ಬೇಳೆಕಾಳುಗಳ ಬೆಲೆಗಳು ಕುಸಿಯುತ್ತಿರುವ ಪ್ರವೃತ್ತಿಯನ್ನು ತೋರಿಸುತ್ತಿರುವ ಸಮಯದಲ್ಲಿ ರೈತರಿಗೆ ಅನುಕೂಲವಾಗುವಂತ  ಕ್ರಮ

ಸಗಟು ವ್ಯಾಪಾರಿಗಳಿಗೆ, ಶೇಖರಣೆ ಮಿತಿ 500 ಮೆ.ಟನ್ ಆಗಿರುತ್ತದೆ

ಮಿಲ್ಲಿನವರಿಗೆ ಶೇಖರಣೆ ಮಿತಿಯು ಕಳೆದ 6 ತಿಂಗಳ ಉತ್ಪಾದನೆ ಅಥವಾ ವಾರ್ಷಿಕ ಸಾಮರ್ಥ್ಯದ 50%, ಯಾವುದು ಹೆಚ್ಚಿನದಾಗಿದೆಯೋ ಅದು

ಚಿಲ್ಲರೆ ವ್ಯಾಪಾರಿಗಳಿಗೆ  ಶೇಖರಣೆ ಮಿತಿಯು ಎಂದಿನಂತೆ 5 .ಟನ್ ಆಗಿರುತ್ತದೆ

ಧಾನ್ಯಗಳ ಬೆಲೆಗಳನ್ನು ನಿಯಂತ್ರಿಸುವ ದಿಟ್ಟ ಕ್ರಮಗಳು ಉತ್ತಮ ಫಲಿತಾಂಶವನ್ನು ನೀಡುತ್ತವೆ

Posted On: 19 JUL 2021 5:43PM by PIB Bengaluru

ಹೆಚ್ಚುತ್ತಿರುವ ಧಾನ್ಯಗಳ ಬೆಲೆಯನ್ನು ಹತೋಟಿಗೆ ತಂದ ನಂತರ, ಇಂದು ಕೇಂದ್ರವು ರೈತರಿಗೆ ದೊಡ್ಡ ರೀತಿಯಲ್ಲಿ ಅನುಕೂಲವಾಗುವ  ಪ್ರಮುಖ ಕ್ರಮಗಳನ್ನು ಕೈಗೊಂಡಿದೆ.

ರಾಜ್ಯ ಸರ್ಕಾರಗಳು ಮತ್ತು ವಿವಿಧ ಪಾಲುದಾರರಿಂದ ಪ್ರತಿಕ್ರಿಯೆಗಳನ್ನು  ಮತ್ತು ಬೆಲೆಗಳನ್ನು ಕಡಿಮೆ ಮಾಡುವುದನ್ನು ಪರಿಗಣಿಸಿ , ಕೇಂದ್ರ ಸರ್ಕಾರವು ಮಿಲ್ಲಿನವರಿಗೆ ಮತ್ತು ಸಗಟು ವ್ಯಾಪಾರಿಗಳಿಗೆ ಶೇಖರಣೆ ಮಿತಿಯನ್ನು ಸಡಿಲಗೊಳಿಸಿದೆ ಮತ್ತು ಆಮದುದಾರರಿಗೆ ವಿನಾಯಿತಿ ನೀಡಿದೆ. ಆದಾಗ್ಯೂ ಘಟಕಗಳು ಗ್ರಾಹಕ ವ್ಯವಹಾರಗಳ ಇಲಾಖೆಯ ವೆಬ್ ಪೋರ್ಟಲ್ನಲ್ಲಿ ದಾಸ್ತಾನಿನ ಸ್ಥಿತಿಯನ್ನು ಘೋಷಿಸುವುದನ್ನು ಮುಂದುವರಿಸುತ್ತವೆ. ಶೇಖರಣೆ ಮಿತಿಗಳು ತೊಗರಿ, ಉದ್ದು, ಹೆಸರು ಮತ್ತು ಮಸೂರ್ ಬೇಳೆಗೆ ಮಾತ್ರ ಅನ್ವಯಿಸುತ್ತವೆ.

ಪರಿಷ್ಕೃತ ಆದೇಶವು ತೊಗರಿ, ಉದ್ದು, ಹೆಸರು, ಮಸೂರ್ ಮತ್ತು ಕಡಲೇ ಬೇಳೆಗಳಿಗೆ 31 ಅಕ್ಟೋಬರ್, 2021 ರವರೆಗೆ  ಅನ್ವಯವಾಗುತ್ತದೆ. ಧಾನ್ಯಗಳ ಆಮದುದಾರರಿಗೆ ಶೇಖರಣೆ ಮಿತಿಯಿಂದ ವಿನಾಯಿತಿ ನೀಡಲಾಗುವುದು ಎಂದು ನಿರ್ಧರಿಸಲಾಗಿದೆ ಮತ್ತು  ಗ್ರಾಹಕ ವ್ಯವಹಾರಗಳ ಇಲಾಖೆಯ ಪೋರ್ಟಲ್ (fcainfoweb.nic.in) ನಲ್ಲಿ ಧಾನ್ಯಗಳ ದಾಸ್ತಾನುಗಳ ಸ್ಥಿತಿಯ ಘೋಷಣೆಯನ್ನು ಮುಂದುವರಿಸಲಿವೆ.

ಸಗಟು ವ್ಯಾಪಾರಿಗಳಿಗೆ, ಶೇಖರಣೆ  ಮಿತಿ 500 ಮೆ.ಟನ್ ಆಗಿರುತ್ತದೆ (ಒಂದೇ ವಿಧದ 200 ಮೆ.ಟನ್ ಗಿಂತ ಹೆಚ್ಚು ಇರಬಾರದು; ಚಿಲ್ಲರೆ ವ್ಯಾಪಾರಿಗಳಿಗೆ, ಶೇಖರಣೆ  ಮಿತಿ  5 ಮೆ.ಟನ್ ಆಗಿರುತ್ತದೆ; ಮತ್ತು ಮಿಲ್ಲಿನವರಿಗೆ , ಶೇಖರಣೆ  ಮಿತಿ  ಕಳೆದ 6 ತಿಂಗಳ ಉತ್ಪಾದನೆ  ಅಥವಾ ವಾರ್ಷಿಕ  ಸಾಮರ್ಥ್ಯದ 50%, ಯಾವುದು ಹೆಚ್ಚು ಅದಾಗಿರುತ್ತದೆತೊಗರಿ   ಮತ್ತು ಉದ್ದು ಖಾರಿಫ್ ಬಿತ್ತನೆಯ ನಿರ್ಣಾಯಕ ಹಂತದಲ್ಲಿ ರೈತರಿಗೆ ಭರವಸೆ ನೀಡುವ ದೃಷ್ಟಿಯಿಂದ ಮಿಲ್ಲಿನವರಿಗೆ  ಅನುಕೂಲಕರ  ಪರಿಣಾಮವನ್ನು ಬೀರುತ್ತದೆ.

ಗ್ರಾಹಕ ವ್ಯವಹಾರಗಳ ಇಲಾಖೆಯ ಪೋರ್ಟಲ್ನಲ್ಲಿ (fcainfoweb.nic.in) ಸಂಬಂಧಿತ   ಘಟಕಗಳು ತಮ್ಮ ದಾಸ್ತಾನು ಗಳನ್ನು ಘೋಷಿಸುವುದನ್ನು ಮುಂದುವರೆಸುತ್ತವೆ ಮತ್ತು ಅವುಗಳು ಹೊಂದಿರುವ  ಶೇಖರಣೆಯು   ನಿಗದಿತ ಮಿತಿಗಳಿಗಿಂತ ಹೆಚ್ಚಿದ್ದರೆ ಅಧಿಸೂಚನೆಯ 30 ದಿನಗಳ ಒಳಗೆ ಅವರು ಅದನ್ನು ನಿಗದಿತ ಶೇಖರಣೆಯ ಮಿತಿಗೆ ತರತಕ್ಕದ್ದು.

ಧಾನ್ಯಗಳಂತಹ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿ ಸಲು ಭಾರತ ಸರ್ಕಾರ ನಿರಂತರ ಪ್ರಯತ್ನಗಳನ್ನು ನಡೆಸುತ್ತಿದೆ ಮತ್ತು ವಿವಿಧ ವರ್ಗಗಳ ಪಾಲುದಾರರು  2021 ಮೇ 21 ರಂದು ದ್ವಿದಳ ಧಾನ್ಯಗಳ ದಾಸ್ತಾನಿನ ಘೋಷಣೆಯಂತಹ ವಿವಿಧ ಕ್ರಮಗಳನ್ನು ಕೈಗೊಂಡಿದೆ ಮತ್ತು ನಂತರ   ಜುಲೈ 2, 2021 ರಂದು ಧಾನ್ಯಗಳ ಮೇಲೆ ಶೇಖರಣೆಯ ಮಿತಿಗಳನ್ನು ಹೇರಿದೆ ಎನ್ನುವುದನ್ನು ಗಮನಿಸಬಹುದು..

ಧಾನ್ಯಗಳ ವ್ಯಾಪಾರದಲ್ಲಿ ಭಾಗಿಯಾಗಿರುವ ರಾಜ್ಯಗಳು / ಕೇಂದ್ರಾಡಳಿತ ಪ್ರದೆಶಗಳು ಮತ್ತು ಎಲ್ಲಾ ಪಾಲುದಾರರ ಸಕ್ರಿಯ ಸಹಕಾರದೊಂದಿಗೆ, ಎರಡು ತಿಂಗಳ ಅಲ್ಪಾವಧಿಯಲ್ಲಿ, ಘಟಕಗಳಿಂದ 8343 ನೋಂದಣಿಗಳಾಗಿವೆ ಮತ್ತು 30.01 ಲಕ್ಷ ಮೆ.ಟನ್ ಗಿಂತ ಹೆಚ್ಚಿನ ಮೌಲ್ಯದ ದಾಸ್ತಾನನ್ನು  ಇಲಾಖೆಯ ವೆಬ್ ಪೋರ್ಟಲ್ನಲ್ಲಿ ಘೋಷಿಸಲಾಗಿದೆ.

ತೊಗರಿ, ಉದ್ದುಹೆಸರು ಮತ್ತು  ಕಡಲೆಕಾಳಿನ ಬೆಲೆಗಳು ನಿರಂತರವಾಗಿ ಕುಸಿಯುತ್ತಿರುವ ಪ್ರವೃತ್ತಿಯನ್ನು ತೋರಿಸಲಾರಂಭಿಸಿವೆ. ಧಾನ್ಯಗಳ ಚಿಲ್ಲರೆ ಬೆಲೆಗಳನ್ನು ತಗ್ಗಿಸುವ  ಗುರಿಯೊಂದಿಗೆ,  2021 ಮೇ ಮಧ್ಯಭಾಗದಿಂದ ಪಾಲುದಾರರು  ಪೋರ್ಟಲ್ನಲ್ಲಿ ದಾಸ್ತಾನುಗಳ   ಘೋಷಣೆಯೊಂದಿಗೆ ಪ್ರಾರಂಭಗೊಂಡು  ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅದನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುವುದರಿಂದ, ಜುಲೈ ಮೊದಲ ವಾರದಲ್ಲಿ ಸರಬರಾಜುಗಳನ್ನು ಹೆಚ್ಚಿಸಲು ಶೇಖರಣೆ ಮಿತಿಗಳನ್ನು ಹೇರುವುದು, ಮಧ್ಯಸ್ಥಿಕೆಗಳು ಸತತವಾಗಿ ನಡೆದಿವೆ  .  ಎಲ್ಲಾ  ಧಾನ್ಯಗಳ ಸಗಟು ಬೆಲೆಗಳು (ಮಸೂರ್ ಹೊರತುಪಡಿಸಿ) ಕಳೆದ ಎರಡು ತಿಂಗಳಲ್ಲಿ 3 ರಿಂದ 4% ರಷ್ಟು ಕುಸಿದಿವೆ ಮತ್ತು ಎಲ್ಲಾ ಧಾನ್ಯಗಳಿಗೆ (ಮಸೂರ್ ಹೊರತುಪಡಿಸಿ) ಒಂದೇ ಅವಧಿಯಲ್ಲಿ ಚಿಲ್ಲರೆ ಬೆಲೆಗಳು 2 ರಿಂದ 4% ರಷ್ಟು ಇಳಿದಿವೆ.

ಜುಲೈ 17, 2021 ರಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವರು ಸಭೆ ನಡೆಸಿದರು, ಇದರಲ್ಲಿ ರಾಜ್ಯ ಸಚಿವರು ಸಹ ಹಾಜರಿದ್ದರು, ಆಮದುದಾರರು, ಮಿಲ್ಲಿನವರು, ಸಗಟು ವ್ಯಾಪಾರಿಗಳು ಮತ್ತು ಬೇಳೆಕಾಳುಗಳ ಚಿಲ್ಲರೆ ವ್ಯಾಪಾರಿಗಳು ಸೇರಿದಂತೆ ವಿವಿಧ ಪಾಲುದಾರರ ಸಂಘಗಳೊಂದಿಗೆ  ಧಾನ್ಯಗಳ ಮೇಲೆ ಶೇಖರಣೆ ಮಿತಿಗಳನ್ನು ಹೇರುವುದರ ಸಮಸ್ಯೆಗಳನ್ನು ಚರ್ಚಿಸಿದರು. ಎಲ್ಲಾ ಪ್ರಮುಖ ಸಂಘಗಳು ಗ್ರಾಹಕ ವ್ಯವಹಾರಗಳ ಇಲಾಖೆಯ ವೆಬ್ ಪೋರ್ಟಲ್ನಲ್ಲಿ ದಾಸ್ತಾನುಗಳ ಘೋಷಣೆಗೆ ಮತ್ತು ಯಾವುದೇ ಸಂಗ್ರಹಣೆ ಮತ್ತು ಕೃತಕ ಕೊರತೆಯಿಲ್ಲ ಎಂದು ಖಚಿತಪಡಿಸಿಕೊಳ್ಳಲು ತಮ್ಮ ಸಂಪೂರ್ಣ ಸಹಕಾರವನ್ನು ಭರವಸೆ ನೀಡಿದವು.

ಭಾರತ ಸರ್ಕಾರವು ಬೆಲೆಗಳನ್ನು ನಿಗ್ರಹಿಸಲು ಸಮಯೋಚಿತ ಕ್ರಮಗಳನ್ನು ತೆಗೆದುಕೊಳ್ಳಲು ಬದ್ಧವಾಗಿದೆ ಮತ್ತು ಸಾಮಾನ್ಯ ಜನರ ಕಳವಳ ಮತ್ತು ದುಃಖವನ್ನು ಗಣನೀಯವಾಗಿ ನಿವಾರಿಸಿದೆ. ಅದೇ ಸಮಯದಲ್ಲಿ, ನೀತಿಯ ಮಧ್ಯಸ್ಥಿಕೆಗಳನ್ನು, ಪರಿಣಾಮವನ್ನು ಅಳೆಯಲು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ಸಮಾಜದ ಎಲ್ಲಾ ವರ್ಗಗಳ ಹಿತಾಸಕ್ತಿಗಳನ್ನು ಕಾಪಾಡಲು ಮುಂದೆ ಆಗುವ ಬೆಳವಣಿಗೆಗಳ ಪ್ರಕಾರ ನಿರ್ಣಯಿಸಲಾಗುತ್ತದೆ.

***



(Release ID: 1737514) Visitor Counter : 221