ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಭಾರತದಲ್ಲಿ ಒಟ್ಟು 41.54 ಕೋಟಿ ದಾಟಿದ ಒಟ್ಟು ಕೋವಿಡ್-19 ಲಸಿಕೆ


ಚೇತರಿಕೆ ದರ ಶೇ 97.36ಕ್ಕೆ ಏರಿಕೆ

24 ಗಂಟೆಗಳಲ್ಲಿ 42,015 ಹೊಸ ಸೋಂಕು ಪ್ರಕರಣಗಳು ಪತ್ತೆ

ಭಾರತದಲ್ಲಿ ಪ್ರಸ್ತುತ ಸಕ್ರಿಯ ಸಂಖ್ಯೆ (4,07,170) ಒಟ್ಟು ಪ್ರಕರಣಗಳಲ್ಲಿ ಶೇ 1.30 ರಷ್ಟು

ದೈನಂದಿನ ಪಾಸಿಟಿವಿಟಿ ದರ [ಶೇ 2.27], 30 ದಿನಗಳಲ್ಲಿ ಶೇ 3ಕ್ಕೂ ಕಡಿಮೆ

Posted On: 21 JUL 2021 10:10AM by PIB Bengaluru

ದೇಶದಲ್ಲಿ ಕೋವಿಡ್-19 ಲಸಿಕೆ ಪ್ರಮಾಣ 41.54 ಕೋಟಿ ದಾಟಿದೆ.   ಇಂದು ಬೆಳಿಗ್ಗೆ 7 ಗಂಟೆವರೆಗೆ ದೊರೆತ ತಾತ್ಕಾಲಿಕ ಮಾಹಿತಿಯಂತೆ 51,36,590 ಅವಧಿಗಳಲ್ಲಿ 41,54,72,455 ಡೋಸ್ ಲಸಿಕೆಯನ್ನು ಹಾಕಲಾಗಿದೆ. ಕಳೆದ 24 ಗಂಟೆಗಳಲ್ಲಿ 34,25,446 ಡೋಸ್ ಲಸಿಕೆ ನೀಡಲಾಗಿದೆ

ಇವು ಒಳಗೊಂಡಂತೆ

ಎಚ್.ಸಿ.ಡಬ್ಲ್ಯೂ ಗಳು

ಮೊದಲ ಡೋಸ್

1,02,75,614

ಎರಡನೇ ಡೋಸ್

75,96,053

ಎಫ್.ಎಲ್. ಡಬ್ಲ್ಯೂಗಳು

ಮೊದಲ ಡೋಸ್

1,78,16,402

ಎರಡನೇ ಡೋಸ್

1,05,07,207

 18-44 ವಯೋಮಿತಿಯವರು

ಮೊದಲ ಡೋಸ್

12,93,89,636

ಎರಡನೇ ಡೋಸ್

52,18,414

 45-59 ವಯೋಮಿತಿಯವರು

ಮೊದಲ ಡೋಸ್

9,86,55,036

ಎರಡನೇ ಡೋಸ್

3,11,44,936

60 ವರ್ಷ ದಾಟಿದವರು

ಮೊದಲ ಡೋಸ್

7,25,79,524

ಎರಡನೇ ಡೋಸ್

3,22,89,633

ಒಟ್ಟು

41,54,72,455

2021 ಜೂನ್ 21 ರಿಂದ ಕೋವಿಡ್-19 ಲಸಿಕೆಯ ಸಾರ್ವತ್ರೀಕರಣದ ಹೊಸ ಹಂತ ಪ್ರಾರಂಭವಾಗಿದೆ. ಕೇಂದ್ರ ಸರ್ಕಾರ ಕೋವಿಡ್-19 ಲಸಿಕೆಯ ವೇಗವನ್ನು ತ್ವರಿತಗೊಳಿಸಲು ಮತ್ತು ವ್ಯಾಪ್ತಿಯನ್ನು ವಿಸ್ತರಿಸಲು ಬದ್ಧವಾಗಿದೆ. ಕೋವಿಡ್-19 ಸಾಂಕ್ರಾಮಿಕ ಆರಂಭವಾದ ನಂತರದಿಂದ ವರೆಗೆ 3,03,90,687 ಮಂದಿ ಚೇತರಿಸಿಕೊಂಡಿದ್ದಾರೆ ಮತ್ತು ಕಳೆದ 24 ಗಂಟೆಗಳಲ್ಲಿ 36,977 ಮಂದಿ ಗುಣಮುಖರಾಗಿದ್ದಾರೆ. ಇದರಿಂದಾಗಿ ಒಟ್ಟಾರೆ ಚೇತರಿಕೆ ದರ ಶೇ 97.36 ಕ್ಕೆ ಏರಿಕೆಯಾಗಿದ್ದು, ಇದು ನಿರಂತವಾಗಿ ಏರಿಕೆಯಾಗುತ್ತಿರುವ ಪ್ರವೃತ್ತಿಯನ್ನು ತೋರಿಸುತ್ತದೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 42,015  ಪ್ರಕರಣಗಳು ದಾಖಲಾಗಿವೆ. ನಿರಂತರ 24 ದಿನಗಳಲ್ಲಿ 50,000 ಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿವೆ.   ಕೇಂದ್ರ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ಸುಸ್ಥಿರ ಮತ್ತು ಸಹಕಾರದಿಂದ ಫಲಿತಾಂಶ ಹೊರ ಹೊಮ್ಮಿದೆ

ಭಾರತದಲ್ಲಿ ಇಂದು 4,07,170 ಸಕ್ರಿಯ ಪ್ರಕರಣಗಳಿವೆ ಮತ್ತು ದೇಶದಲ್ಲಿ ಒಟ್ಟಾರೆ ಪ್ರಕರಣಗಳಲ್ಲಿ ಶೇ 1.30 ರಷ್ಟು ಸಕ್ರಿಯ ಪ್ರಕರಣಗಳು  ದಾಖಲಾಗಿವೆ.

ದೇಶಾದ್ಯಂತ ಸೋಂಕು ಪತ್ತೆ ಪರೀಕ್ಷೆಯನ್ನು ಹೆಚ್ಚಿಸಲಾಗಿದ್ದು, ಕಳೆದ 24 ಗಂಟೆಗಳಲ್ಲಿ 18,52,140 ಪರೀಕ್ಷೆಗಳನ್ನು ನಡೆಸಲಾಗಿದೆ. ವರೆಗೆ ಒಟ್ಟಾರೆ   44.91 ಕೋಟಿ  (44,91,93,273) ಪರೀಕ್ಷೆಗಳನ್ನು ನಡೆಸಲಾಗಿದೆ.

ಒಂದು ಕಡೆ ದೇಶದಲ್ಲಿ ಸೋಂಕು ಪತ್ತೆ ಸಾಮರ್ಥ್ಯ ಹೆಚ್ಚಿಸಲಾಗಿದ್ದು, ವಾರದ ಪಾಸಿಟಿವಿಟಿ ದರ ಶೇ 2.09 ರಷ್ಟಿದೆ ಮತ್ತು ದೈನಂದಿನ ಪಾಸಿಟಿವಿಟಿ ದರ ಶೇ 2.27 ರಷ್ಟಿದೆ. 30 ದಿನಗಳಿಂದ ನಿರಂತರವಾಗಿ ದೈನಂದಿನ ಪಾಸಿಟಿವಿಟಿ ದರ ಶೇ 3 ಕ್ಕಿಂತ ಕಡಿಮೆ ದಾಖಲಾಗಿದೆ ಮತ್ತು ನಿರಂತರ 44 ದಿನಗಳಲ್ಲಿ ಶೇ 5 ಕ್ಕೂ ಕಡಿಮೆ ದಾಖಲಾಗಿದೆ

***


(Release ID: 1737494) Visitor Counter : 293