ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ

ಋಣಭಾರ ಮತ್ತು ದಿವಾಳಿತನ ಭಾರತ ಮಂಡಳಿ(ಐಬಿಬಿಐ)ಯ ಕಾರ್ಪೊರೇಟ್  ಉದ್ಯಮಿ(ವ್ಯಕ್ತಿ)ಗಳ ಋಣಭಾರ ಮತ್ತು ದಿವಾಳಿತನ ಪರಿಹಾರ ನಿರ್ಣಯ ಪ್ರಕ್ರಿಯೆ ನಿಯಂತ್ರಣ ಕಾಯಿದೆ – 2017ಕ್ಕೆ 2ನೇ ತಿದ್ದುಪಡಿ 

Posted On: 21 JUL 2021 10:28AM by PIB Bengaluru

ಋಣಭಾರ ಮತ್ತು ದಿವಾಳಿತನ ಭಾರತ ಮಂಡಳಿ(ಐಬಿಬಿಐ)ಯು ಕಾರ್ಪೊರೇಟ್  ಉದ್ಯಮಿ(ವ್ಯಕ್ತಿಗಳು)ಗಳ ಋಣಭಾರ ಮತ್ತು ದಿವಾಳಿತನ ಪರಿಹಾರ ನಿರ್ಣಯ ಪ್ರಕ್ರಿಯೆ ನಿಯಂತ್ರಣ ಕಾಯಿದೆ 2017ಕ್ಕೆ 2ನೇ ತಿದ್ದುಪಡಿ ತಂದು 2021 ಜುಲೈ 14ರಂದು ಅಧಿಸೂಚನೆ ಹೊರಡಿಸಿದೆ.

ಕಾರ್ಪೊರೇಟ್ ವಲಯದ ಋಣಭಾರ ಮತ್ತು ದಿವಾಳಿತನದ ವಿಧಿವಿಧಾನ ಮತ್ತು ಪ್ರಕ್ರಿಯೆಗಳಲ್ಲಿ ಶಿಸ್ತು, ಪಾರದರ್ಶಕತೆ ಮತ್ತು ಹೊಣೆಗಾರಿಕೆ ಹೆಚ್ಚಿಸಲು ನಿಯಂತ್ರಣ ಕಾಯಿದೆ ತಿದ್ದುಪಡಿಯು ನೆರವಾಗಲಿದೆ.

  • ಕಾರ್ಪೊರೇಟ್ ವಲಯದ ಸಾಲಗಾರ ಅಥವಾ ಸಾಲ ಗ್ರಾಹಕ ಪಡೆದ ಸಾಲ ತೀರಿಸಲಾಗದೆ ಋಣಭಾರ ಅಥವಾ ದಿವಾಳಿತನ ಘೋಷಣೆ ಆಗುವ ಮುನ್ನ ಆತ ತನ್ನ ಹೆಸರು ಅಥವಾ ನೋಂದಾಯಿತ ಕಚೇರಿಯ ವಿಳಾಸ ಬದಲಿಸಬಹುದು. ಆಗ ಪಾಲುದಾರರು ಹೊಸ ಹೆಸರು ಅಥವಾ ನೋಂದಾಯಿತ ಕಚೇರಿಯ ವಿಳಾಸ ಪತ್ತೆ ಮಾಡಲು ಕಷ್ಟ ಎದುರಿಸಬಹುದು. ಇದರ ವ್ಯತಿರಿಕ್ತ ಪರಿಣಾಮ ಎಂಬಂತೆಕಾರ್ಪೊರೇಟ್  ಋಣಭಾರ ಮತ್ತು ದಿವಾಳಿತನ ಪರಿಹಾರ ನಿರ್ಣಯ ಪ್ರಕ್ರಿಯೆ(ಸಿಐಆರ್|ಪಿ)ಯಲ್ಲಿ ಪಾಲ್ಗೊಳ್ಳಲು ವಿಫಲರಾಗುತ್ತಾರೆ. ಹಾಗಾಗಿ, ನಿಯಂತ್ರಣ ಕಾಯಿದೆ ತಿದ್ದುಪಡಿಯಲ್ಲಿ ಋಣಭಾರ ಮತ್ತು ದಿವಾಳಿತನ ವೃತ್ತಿಪರರ ನೇಮಕಕ್ಕೆ ಅವಕಾಶ ಕಲ್ಪಿಸಲಾಗಿದೆ. ಇವರು ಕಾರ್ಪೊರೇಟ್  ಋಣಭಾರ ಮತ್ತು ದಿವಾಳಿತನ ಪರಿಹಾರ ನಿರ್ಣಯ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, 2 ವರ್ಷಗಳಲ್ಲಿ ಬದಲಾಗಿರುವ ಹೆಸರು ಮತ್ತು ನೋಂದಾಯಿತ ಕಚೇರಿಯ ವಿಳಾಸಗಳನ್ನು ಪತ್ತೆ ಮಾಡಿ, ಭವಿಷ್ಯದ ಎಲ್ಲಾ ಸಂವಹನ ಮತ್ತು ದಾಖಲೆಗಳಿಗೆ ಒದಗಿಸುತ್ತಾರೆ.
  • ಮಧ್ಯಂತರ ದಿವಾಳಿತನ ಪರಿಹಾರ ವೃತ್ತಿಪರರು ನೋಂದಾಯಿತ ಮೌಲ್ಯಮಾಪಕರು ಸೇರಿದಂತೆ ಯಾವುದೇ ರೀತಿಯ ವೃತ್ತಿಪರರನ್ನು ಪರಿಹಾರ ಪ್ರಕ್ರಿಯೆಗೆ ನೇಮಿಸಿಕೊಳ್ಳಬಹುದು. ಕಾರ್ಪೊರೇಟ್ ಸಾಲ ಗ್ರಾಹಕನಿಗೆ ಲಭ್ಯವಿಲ್ಲದ ಸೇವೆಗಳನ್ನು ಪರಿಗಣಿಸಿ, ಯಾವುದೇ ರೀತಿಯ ನೋಂದಾಯಿತ ಮೌಲ್ಯಮಾಪಕರು ಸೇರಿದಂತೆ ಸಂಬಂಧಿತ ವೃತಿಪರರನ್ನು ನೇಮಿಸಿಕೊಳ್ಳಲು ಮಧ್ಯಂತರ ದಿವಾಳಿತನ ಪರಿಹಾರ ವೃತ್ತಿಪರರಿಗೆ ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಪಾರದರ್ಶಕ ಪ್ರಕ್ರಿಯೆ ಮೂಲಕ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿದೆ. ಇಂತಹ ವೃತ್ತಿಪರರ ಸೇವೆಗೆ ಪಾವತಿಸುವ ಶುಲ್ಕವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ತಲುಪಿಸುವ ವ್ಯವಸ್ಥೆ ರೂಪಿಸಲಾಗಿದೆ.
  • ದಿವಾಳಿತನ ಪರಿಹಾರ ವೃತ್ತಿಪರರು ಕಾರ್ಪೊರೇಟ್ ಸಾಲಗಾರನ ವಹಿವಾಟು ವಂಚನೆ, ಆದ್ಯತಾ ವಹಿವಾಟು, ವಹಿವಾಟು ಅಪಮೌಲ್ಯ, ದುಬಾರಿ ಸಾಲ ವಹಿವಾಟು, ಮೋಸ ಮತ್ತು ಅಕ್ರಮ ವ್ಯವಹಾರಗಳನ್ನು ಪತ್ತೆ ಹಚ್ಚುವ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ಜತೆಗೆ, ಎಲ್ಲಾ ವ್ಯವಹಾರಗಳ ಸಮಗ್ರ ಮಾಹಿತಿ ಇರುವ ಅರ್ಜಿಗಳನ್ನು ಸಂಬಂಧಿತ(ತೀರ್ಪು ನೀಡುವ) ಪ್ರಾಧಿಕಾರಕ್ಕೆ ಸಲ್ಲಿಸಿ, ಸೂಕ್ತ ಪರಿಹಾರ ನಿರ್ಣಯಕ್ಕೆ ಮನವಿ ಸಲ್ಲಿಸಬೇಕಾಗುತ್ತದೆ. ಕಾರ್ಪೊರೇಟ್ ಸಾಲ ಗ್ರಾಹಕನ ಅಕ್ರಮ ವ್ಯವಹಾರಗಳಿಂದ ಸಾಲ ಯೋಜನೆ ಮೇಲಾಗಿರುವ ದುಷ್ಪರಿಣಾಮಗಳನ್ನು ಗುರುತಿಸಿ, ಆತನ ಸಾಲ ಮರುವಿಂಗಡಣೆಗೆ ಇರುವ ಸಾಧ್ಯತೆಗಳು ಅಥವಾ ಸಾಲದ ಮೇಲೆ ಆಗುವ ಒತ್ತಡಗಳನ್ನು ನಿರುತ್ತೇಜನಗೊಳಿಸುವ ಕುರಿತು ಸೂಕ್ತ ಪರಿಹಾರ ಕ್ರಮಗಳನ್ನು ಸೂಚಿಸಲು ಅವಕಾಶ ಕಲ್ಪಿಸಲಾಗಿದೆ. ಇಂತಹ ಸಾಲಗಳ ಪರಿಣಾಮಕಾರಿ ನಿರ್ವಹಣೆಗೆ ದಿವಾಳಿತನ ಪರಿಹಾರ ವೃತ್ತಿಪರರು ನಮೂನೆ ಸಿಐಆರ್|ಪಿ 8 ರಲ್ಲಿ ಆನ್|ಲೈನ್  ವಿವರ ಸಲ್ಲಿಸಲು ತಿದ್ದುಪಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಸಂಬಂಧ ಐಬಿಬಿಐ ನಿನ್ನೆ ಸಿಐಆರ್|ಪಿ 8 ನಮೂನೆಯ ಸುತ್ತೋಲೆ ಹೊರಡಿಸಿದೆ. 2021 ಜುಲೈ 14ರಿಂದ ನಮೂನೆಯ ಬಳಕೆಗೆ ಅವಕಾಶ ನೀಡಲಾಗಿದೆ.

ನಿಯಂತ್ರಣ ಕಾಯಿದೆ ತಿದ್ದುಪಡಿಯು 2021 ಜುಲೈ 14ರಿಂದ ಅನ್ವಯವಾಗಿದೆ. ತಿದ್ದುಪಡಿ ಕಾಯಿದೆ ಎಲ್ಲಾ ವಿವರಗಳು www.mca.gov.in and www.ibbi.gov.in ವೆಬ್|ಸೈಟ್|ನಲ್ಲಿ ಲಭ್ಯವಾಗುತ್ತವೆ.

***



(Release ID: 1737482) Visitor Counter : 296