ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ

ಟೋಕಿಯೊ ಒಲಿಂಪಿಕ್ಸ್ ಗಾಗಿ ಭಾರತೀಯ ಕ್ರೀಡಾಪಟುಗಳಿಗೆ ಸಿದ್ಧತೆಗಾಗಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ವಿಶೇಷ ಬೆಂಬಲವನ್ನು ನೀಡಿದೆ : ಕೇಂದ್ರ ಕ್ರೀಡಾ ಸಚಿವರು

Posted On: 19 JUL 2021 4:49PM by PIB Bengaluru

ಟೋಕಿಯೋ ಒಲಿಂಪಿಕ್ಸ್ 2020 ರ 18 ಕ್ರೀಡಾಕೂಟಗಳಲ್ಲಿ ಭಾರತೀಯ ಕ್ರೀಡಾಪಟುಗಳು ಮತ್ತು ತಂಡಗಳು ಭಾಗವಹಿಸಲಿವೆ, ಬಿಲ್ಲುಗಾರಿಕೆ, ಅಥ್ಲೆಟಿಕ್ಸ್, ಬಾಕ್ಸಿಂಗ್, ಬ್ಯಾಡ್ಮಿಂಟನ್, ಕುದುರೆ ಸವಾರಿ, ಫೆನ್ಸಿಂಗ್, ಗಾಲ್ಫ್, ಜಿಮ್ನಾಸ್ಟಿಕ್ಸ್, ಹಾಕಿ, ಜೂಡೋ, ರೋಯಿಂಗ್, ಶೂಟಿಂಗ್, ನೌಕಾಯಾನ, ಈಜು, ಟೇಬಲ್ ಟೆನಿಸ್, ಟೆನಿಸ್, ವೇಟ್ ಲಿಫ್ಟಿಂಗ್ ಮತ್ತು ರೆಸ್ಲಿಂಗ್.

ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಗರಿಷ್ಠ ಕೋಟಾ ಪಡೆಯಲು ಮತ್ತು ಪದಕಗಳನ್ನು ಗೆಲ್ಲುವ ಸಾಧ್ಯತೆಯನ್ನು ಹೆಚ್ಚಿಸಲು ಭಾರತೀಯ ಕ್ರೀಡಾಪಟುಗಳು/ ತಂಡಗಳಿಗೆ ಅವರ ತರಬೇತಿ, ವಿದೇಶಗಳ ಬಗ್ಗೆ ಜ್ಞಾನಾಭಿವೃದ್ಧಿಗೆ ಮತ್ತು ಸ್ಪರ್ಧೆಗಳಿಗೆ ಸರ್ಕಾರ ನಿರಂತರವಾಗಿ ಬೆಂಬಲವನ್ನು ನೀಡಿದೆ. ಆಯ್ದ ಕ್ರೀಡಾಪಟುಗಳು ತಮಗೆಂದೇ ಮಾಡಿದ ತರಬೇತಿ ಮತ್ತು ಸ್ಪರ್ಧೆಗಳ ಬಗ್ಗೆ ಹೆಚ್ಚಿನ ತಿಳಿವಳಿಕೆಗಾಗಿ ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು ಮತ್ತು ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿ ಯೋಜನೆಯಿಂದ ಹಣಕಾಸಿನ ಬೆಂಬಲ ನೀಡಲಾಗಿದೆ . ಟಾರ್ಗೆಟ್ ಒಲಿಂಪಿಕ್ ಪೋಡಿಯಮ್ ಸ್ಕೀಮ್ (ಟಾಪ್ಸ್) ನಲ್ಲಿ ಸೇರ್ಪಡೆಗೊಂಡ ಕ್ರೀಡಾಪಟುಗಳಿಗೆ ಔಟ್ ಆಫ್ ಪಾಕೆಟ್ ಭತ್ಯೆ (ಒಪಿಎ) ತಿಂಗಳಿಗೆ 50,000 ರೂಪಾಯಿಗಳಂತೆ ನೀಡಲಾಗಿದೆ. ಸಾಂಕ್ರಾಮಿಕ ಅವಧಿಯಲ್ಲಿ, ತಮ್ಮ ಮನೆಗಳಲ್ಲಿಯೇ ತಮ್ಮ ತರಬೇತಿ ಮತ್ತು ಅಭ್ಯಾಸವನ್ನು ಮಾಡಿಕೊಳ್ಳಲು ಕ್ರೀಡಾಪಟುಗಳಿಗೆ ಅಗತ್ಯವಾದ ಕ್ರೀಡಾ ಸಾಧನಗಳಾದ (ಬಾರ್ಬೆಲ್ ರಾಡ್ಸ್, ವೇಯಿಟ್ಸ್ , ಎಕ್ಸರ್ಸೈಸ್ ಬೈಸಿಕಲ್ ಇತ್ಯಾದಿ), ಏರ್ ಪೆಲ್ಲೆಟ್ ಗಳು, ಟಾರ್ಗೆಟ್ ಸಿಸ್ಟಮ್ ಅನ್ನು ಭಾರತೀಯ ಕೀಡಾ ಪ್ರಾಧಿಕಾರ (ಎಸ್ಎಐ) ಪ್ರಾದೇಶಿಕ ಕೇಂದ್ರಗಳು, ರಾಜ್ಯ ಸರ್ಕಾರಗಳ ಮತ್ತು ಎನ್ ಜಿ ಒಗಳು ಸಹಾಯದಿಂದ ಒದಗಿಸಲಾಗಿದೆ. 

ಭಾರತ ಸರ್ಕಾರ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮತ್ತು ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳು ಕ್ರೀಡಾಪಟುಗಳಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡಿರುವುದರಿಂದ ಭಾರತೀಯ ಕ್ರೀಡಾಪಟುಗಳು ತಮ್ಮ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ ಮತ್ತು ದೇಶವು ಹೆಮ್ಮೆಪಡುವಂತೆ ಮಾಡುತ್ತಾರೆ ಎಂದು ಸರ್ಕಾರ ವಿಶ್ವಾಸ ಮತ್ತು ಭರವಸೆ ಹೊಂದಿದೆ.

ಈ ಮಾಹಿತಿಯನ್ನು ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಶ್ರೀ ಅನುರಾಗ್ ಠಾಕೂರ್ ಅವರು ಇಂದು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ನೀಡಿದ್ದಾರೆ.

***



(Release ID: 1736919) Visitor Counter : 164