ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗೆ "ಭಾರತದ ಕೋವಿಡ್-19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆಗಳ ಸನ್ನದ್ಧತೆ ಪ್ಯಾಕೇಜ್: ಹಂತ-2ʼʼರ ಸಿದ್ಧತೆಗಳನ್ನು ಪರಿಶೀಲಿಸಿದ ಕೇಂದ್ರ ಆರೋಗ್ಯ ಸಚಿವಾಲಯ


ಸದೃಢ ಆರೋಗ್ಯ ಮೂಲಸೌಕರ್ಯ ಮತ್ತು ಕೋವಿಡ್‌ನ ದಕ್ಷ ವೈದ್ಯಕೀಯ ನಿರ್ವಹಣೆಯನ್ನು ಕಾಯ್ದುಕೊಳ್ಳಲು ಪರಿಣಾಮಕಾರಿ ಮುಂಗಡ ಸಿದ್ಧತೆಗಳ ಬಗ್ಗೆ ಒತ್ತಿ ಹೇಳಲಾಯಿತು

Posted On: 15 JUL 2021 2:50PM by PIB Bengaluru

ಕೇಂದ್ರ ಆರೋಗ್ಯ ಸಚಿವಾಲಯವು ಇತ್ತೀಚೆಗೆ ಅನುಮೋದಿಸಲಾದ 23,123 ಕೋಟಿ ರೂ. ಮೊತ್ತದ "ಭಾರತ ಕೋವಿಡ್-19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆಗಳ ಸನ್ನದ್ಧತೆ ಪ್ಯಾಕೇಜ್:ಹಂತ-2"  ಅಡಿಯಲ್ಲಿ ಕೈಗೊಂಡ ಸಿದ್ಧತೆಗಳನ್ನು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಕಾರ್ಯದರ್ಶಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ (ವಿಸಿ) ಮೂಲಕ ಇಂದು ಪರಿಶೀಲಿಸಿತು.  

ಗೌರವಾನ್ವಿತ ಪ್ರಧಾನ ಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2021 ಜುಲೈ 8ರಂದು 2021-22ನೇ ಹಣಕಾಸು ವರ್ಷಕ್ಕೆ 23,123 ಕೋಟಿ ರೂ.ಗಳ ಮೊತ್ತದ ಹೊಸ ಯೋಜನೆ "ಇಂಡಿಯಾ ಕೋವಿಡ್-19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆಗಳ ಸನ್ನದ್ಧತೆ ಯೋಜನೆ: ಹಂತ-2”ಕ್ಕೆ ಅನುಮೋದನೆ ನೀಡಿತು. ಇದನ್ನು  01 ಜುಲೈ 2021ರಿಂದ 31 ಮಾರ್ಚ್ 2022ರವರೆಗೆ ಅನುಷ್ಠಾನಗೊಳಿಸಲಾಗುವುದು.

ಕೋವಿಡ್-19 ತುರ್ತು ಪ್ರತಿಕ್ರಿಯೆ ಪ್ಯಾಕೇಜ್ (ಇಸಿಆರ್ಪಿ) 2ನೇ ಹಂತವು ಕೇಂದ್ರ ವಲಯ (ಸಿಎಸ್) ಮತ್ತು ಕೇಂದ್ರ ಪ್ರಾಯೋಜಿತ ಯೋಜನೆಗಳ (ಸಿಎಸ್ಎಸ್) ಘಟಕಗಳನ್ನು ಹೊಂದಿದೆ.

ಯೋಜನೆಯು ಮಕ್ಕಳ ಆರೈಕೆ ಸೇರಿದಂತೆ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಯ ಮೇಲೆ ತೀಕ್ಷ್ಣ ಗಮನ ಹರಿಸುವ ಹಾಗೂ ಪೂರ್ವಭಾವಿಯಾಗಿ ರೋಗ ತಡೆಗಟ್ಟುವಿಕೆ, ರೋಗ ಪತ್ತೆ ಮತ್ತು ನಿರ್ವಹಣೆ ನಿಟ್ಟಿನಲ್ಲಿ ತುರ್ತು ಪ್ರತಿಕ್ರಿಯೆಗಾಗಿ ಆರೋಗ್ಯ ವ್ಯವಸ್ಥೆಯ ಸಿದ್ಧತೆಯನ್ನು ವೇಗವರ್ಧನೆಗೊಳಿಸುವ ಉದ್ದೇಶವನ್ನು ಹೊಂದಿದೆ. ಇದರಿಂದ ಗ್ರಾಮೀಣ, ಉಪ-ನಗರ ಮತ್ತು ಬುಡಕಟ್ಟು ಪ್ರದೇಶಗಳಲ್ಲಿ ವಿಕೇಂದ್ರೀಕೃತ ಸಾರ್ವಜನಿಕ ಆರೋಗ್ಯ ಉಪಕ್ರಮಗಳು ಹಾಗೂ ಸಾರ್ವಜನಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸಲು ಸಹಾಯಕವಾಗುತ್ತದೆ.

ಕೋವಿಡ್ ನಿರ್ವಹಣೆಯ ವಿವಿಧ ಅಂಶಗಳ ಕುರಿತಾದ ಕೇಂದ್ರ ಆರೋಗ್ಯ ಸಚಿವಾಲಯದ ನೀತಿಗಳು ಮತ್ತು ಮಾರ್ಗಸೂಚಿಗಳ ಬಗ್ಗೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಪರಿಶೀಲನಾ ಸಭೆಯಲ್ಲಿ ಮಾರ್ಗದರ್ಶನ ನೀಡಲಾಯಿತು. ಇವುಗಳಿಂದ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್-19 ಪ್ರತಿಕ್ರಿಯೆಯನ್ನು ಸುಸೂತ್ರಗೊಳಿಸಲು ಹಾಗೂ ಅಲ್ಲಿನ ಆರೋಗ್ಯ ಮೂಲಸೌಕರ್ಯವನ್ನು ಬಲಪಡಿಸಲು ಸಹಾಯಕವಾಗುತ್ತದೆ. ಕೇಂದ್ರ ಸರಕಾರದಿಂದ ತ್ವರಿತ ಅನುಮೋದನೆ ಮತ್ತು ಮಂಜೂರಾತಿಗೆ ಅನುವಾಗುವಂತೆ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ತಮ್ಮ ವೆಚ್ಚ ಪ್ರಸ್ತಾಪಗಳನ್ನು ಆದಷ್ಟು ಬೇಗ ಕಳುಹಿಸುವಂತೆ ಕೋರಲಾಯಿತು.

ಸಭೆಯಲ್ಲಿ ಕೆಳಗಿನವುಗಳ ಮೇಲೆ ಗಮನ ಕೇಂದ್ರೀಕರಿಸಲಾಯಿತು:

  • ಪರೀಕ್ಷೆ, ಪತ್ತೆ, ಚಿಕಿತ್ಸೆ ಮತ್ತು ಪ್ರತ್ಯೇಕಗೊಳಿಸುವ ಕಾರ್ಯತಂತ್ರಕ್ಕೆ ವೇಗ ನೀಡುವ ಅಗತ್ಯ
  • ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸುವ ಅಗತ್ಯ, ಮಕ್ಕಳ ಆರೈಕೆ ಹಾಗೂ ಉಪ-ಜಿಲ್ಲಾ ಮಟ್ಟದಲ್ಲಿ ತಾತ್ಕಾಲಿಕ ಆಸ್ಪತ್ರೆಗಳು ಸೇರಿದಂತೆ ಹೆಚ್ಚುವರಿ ಹಾಸಿಗೆಗಳು
  • ನಿರ್ಣಾಯಕ ಔಷಧಗಳು, ಪರೀಕ್ಷಾ ಕಿಟ್ಗಳು ಮತ್ತು ಪಿಪಿಇ ಕಿಟ್ಗಳ ಲಭ್ಯತೆಯನ್ನು ಖಚಿತಪಡಿಸುವುದು
  • ಆಮ್ಲಜನಕ ಲಭ್ಯತೆಯನ್ನು ಹೆಚ್ಚಿಸುವುದು ಹಾಗೂ ಮನೆ ಮತ್ತು ಗ್ರಾಮ/ ಸಮುದಾಯ ಪ್ರತ್ಯೇಕವಾಸ (ಐಸೊಲೇಷನ್‌)ಕೇಂದ್ರಗಳು/ ಕೋವಿಡ್ ಆರೈಕೆ ಕೇಂದ್ರಗಳನ್ನು ಬಲಪಡಿಸುವುದು
  • ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಮತ್ತು ಭಾರತೀಯ ನರ್ಸಿಂಗ್ ಕೌನ್ಸಿಲ್ (ಐಎನ್ಸಿ) ಜೊತೆ ಸಮಾಲೋಚಿಸಿ ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಹೊಸ ಮಾರ್ಗಸೂಚಿಗಳಿಗೆ ಅನುಗುಣವಾಗಿ ನುರಿತ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಮಾನವ ಸಂಪನ್ಮೂಲವನ್ನು ಸಜ್ಜುಗೊಳಿಸುವುದು ಮತ್ತು ಅವರ ಸಂಖ್ಯೆಯನ್ನು ಹೆಚ್ಚಿಸುವುದು.
  • ʻಇಸಿಆರ್ಪಿ: ಹಂತ- ಕೆಳಗಿನ ಉದ್ದೇಶಗಳನ್ನು ಪರಿಶೀಲನಾ ಸಭೆಯಲ್ಲಿ ಪುನರುಚ್ಚರಿಸಲಾಯಿತು:
  • ಮಕ್ಕಳ ಕೋವಿಡ್-19 ನಿರ್ವಹಣೆಯ ಅಗತ್ಯಗಳಿಗೆ ಸ್ಪಂದಿಸಲು ದೇಶದ ಎಲ್ಲಾ 736 ಜಿಲ್ಲೆಗಳಲ್ಲಿ ವಿಶೇಷ ಮಕ್ಕಳ ಆರೈಕೆ ಘಟಕಗಳನ್ನು ಸ್ಥಾಪಿಸಲು ರಾಜ್ಯಗಳಿಗೆ ಬೆಂಬಲ ನೀಡುವುದು
  • ಜಿಲ್ಲಾ ಮಕ್ಕಳ ಘಟಕಗಳಿಗೆ ಟೆಲಿ-ಐಸಿಯು ಸೇವೆಗಳು, ಮಾರ್ಗದರ್ಶನ ಮತ್ತು ತಾಂತ್ರಿಕ ನೆರವು ಒದಗಿಸಲು ಪ್ರತಿ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ (ರಾಜ್ಯ ವೈದ್ಯಕೀಯ ಕಾಲೇಜುಗಳಲ್ಲಿ ಅಥವಾ ರಾಜ್ಯ ಆಸ್ಪತ್ರೆಗಳಲ್ಲಿ ಅಥವಾ ಏಮ್ಸ್, ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆ ಮುಂತಾದ ಕೇಂದ್ರ ಸರಕಾರಿ ಆಸ್ಪತ್ರೆಗಳಲ್ಲಿ) ʻಪೀಡಿಯಾಟ್ರಿಕ್ ಸೆಂಟರ್ ಆಫ್ ಎಕ್ಸಲೆನ್ಸ್ʼ ಸ್ಥಾಪಿಸಲು ರಾಜ್ಯಗಳಿಗೆ ಬೆಂಬಲ ನೀಡುವುದು.
  • ಹೆಚ್ಚುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ 20% ಮಕ್ಕಳ ಐಸಿಯು ಹಾಸಿಗೆಗಳು ಸೇರಿದಂತೆ ಒಟ್ಟಾರೆ ಐಸಿಯು ಹಾಸಿಗೆಗಳ ಲಭ್ಯತೆಯನ್ನು ಹೆಚ್ಚಿಸುವುದು
  • ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ವೈದ್ಯಕೀಯ ಆಮ್ಲಜನಕದ ಲಭ್ಯತೆಯನ್ನು ಹೆಚ್ಚಿಸಲು ವೈದ್ಯಕೀಯ ಅನಿಲ ಪೈಪ್ ಲೈನ್ ವ್ಯವಸ್ಥೆ (ಎಂಜಿಪಿಎಸ್) (ಪ್ರತಿ ಜಿಲ್ಲೆಗೆ ಕನಿಷ್ಠ ಒಂದು) ಜೊತೆಗೆ 1050 ದ್ರವರೂಪದ ವೈದ್ಯಕೀಯ ಆಮ್ಲಜನಕ (ಎಲ್ಎಂಒ) ಸಂಗ್ರಹ ಟ್ಯಾಂಕ್ಗಳನ್ನು ಹೊಂದಲು ರಾಜ್ಯಗಳಿಗೆ ನೆರವು ನೀಡುವುದು
  • ದಿನಕ್ಕೆ 5 ಲಕ್ಷ ಟೆಲಿ-ಸಮಾಲೋಚನೆ ಸೇವೆಗಳನ್ನು ಒದಗಿಸಲು ಟೆಲಿ-ಸಮಾಲೋಚನೆ ವೇದಿಕೆಯನ್ನು ಬಲಪಡಿಸುವುದು, ಮುಖ್ಯ ಕೇಂದ್ರ ಮತ್ತು ಉಪ ಕೇಂದ್ರಗಳ ಲಭ್ಯತೆಯನ್ನು ಹೆಚ್ಚಿಸುವುದು
  • ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ `ಆಸ್ಪತ್ರೆ ನಿರ್ವಹಣಾ ಮಾಹಿತಿ ವ್ಯವಸ್ಥೆ’ (ಎಚ್ಎಂಐಎಸ್) ಅನುಷ್ಠಾನಕ್ಕೆ ರಾಜ್ಯಗಳಿಗೆ ನೆರವು ನೀಡುವುದು, ನಿಟ್ಟಿನಲ್ಲಿ ರಾಷ್ಟ್ರೀಯ ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ಬಲಪಡಿಸುವುದು.
  • ಕೋವಿಡ್-19 ರೋಗಿಗಳಿಗೆ ಸಾರಿಗೆ ಮತ್ತು ರೆಫರಲ್ ವಿಳಂಬವನ್ನು ತೊಡೆದುಹಾಕಲು ಆಂಬ್ಯುಲೆನ್ಸ್ ಸೇವೆಗಳ ಲಭ್ಯತೆಯನ್ನು ಹೆಚ್ಚಿಸುವುದು, ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷಾ ಸಾಮರ್ಥ್ಯ ಹೆಚ್ಚಳ ಮತ್ತು ಸಾರ್ವಜನಿಕರಿಗೆ ಹತ್ತಿರವಾಗಿ ಬೆಂಬಲಿತ ರೋಗನಿರ್ಣಯ ಕೇಂದ್ರಗಳ ಹೆಚ್ಚಳ
  • ಪರಿಣಾಮಕಾರಿ ನಿರ್ವಹಣೆಗಾಗಿ ಪದವಿಪೂರ್ವ ಮತ್ತು ಸ್ನಾತಕೋತ್ತರ ವೈದ್ಯಕೀಯ ಇಂಟರ್ನಿಗಳುಅಂತಿಮ ವರ್ಷದ ಎಂಬಿಬಿಎಸ್, ಬಿಎಸ್ಸಿ ಮತ್ತು ಜಿಎನ್ಎಂ ನರ್ಸಿಂಗ್ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ರಾಜ್ಯಗಳಿಗೆ ನೆರವು

ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ  ತಮ್ಮ ಐಟಿ ಮೂಲಸೌಕರ್ಯ ಸನ್ನದ್ಧತೆ ಸೇರಿದಂತೆ ʻಇಸಿಆರ್ಪಿ-ಅಡಿಯಲ್ಲಿ ವಿವಿಧ ಮೂಲಸೌಕರ್ಯ ಘಟಕಗಳ ವಿಚಾರವಾಗಿ ಇರುವ ಕೊರತೆಗಳನ್ನು ತ್ವರಿತವಾಗಿ ವಿಶ್ಲೇಷಣೆ ಮಾಡುವಂತೆ ಸಲಹೆ ನೀಡಲಾಯಿತು. ಟೆಲಿ-ಸಮಾಲೋಚನೆ ಸೇವೆಗಳಿಗೆ ಮುಖ್ಯ ಕೇಂದ್ರ ಮತ್ತು ಉಪ ಕೇಂದ್ರ ವ್ಯವಸ್ಥೆಯನ್ನು ಸುಧಾರಿಸಬಹುದು, ಜಿಲ್ಲಾ ಮಟ್ಟದ ಕೇಂದ್ರಗಳ ಮೂಲಕ ಕೋವಿಡ್ಆರೈಕೆ ಕೇಂದ್ರಕ್ಕೂ ಇದರ ಸೇವೆಯನ್ನು ಬಳಸಿಕೊಳ್ಳಬಹುದು. ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು, ಪದವಿ ಪೂರ್ವ ಇಂಟರ್ನಿಗಳು ಮತ್ತು ಪಿಜಿ ನಿವಾಸಿಗಳನ್ನು ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಾರ್ಗಸೂಚಿಗಳ ಪ್ರಕಾರ ಟೆಲಿ-ಸಮಾಲೋಚನೆಯ ಮೂಲಕ ಸೌಮ್ಯ ಕೋವಿಡ್ ನಿರ್ವಹಣೆ ಸೇವೆ ಒದಗಿಸಲು ಬೋಧಕರ ಮೇಲ್ವಿಚಾರಣೆಯಲ್ಲಿ ಬಳಸಿಕೊಳ್ಳಬಹುದುಅದೇ ರೀತಿ, ಅಂತಿಮ ನರ್ಸಿಂಗ್ ಪದವೀಧರರನ್ನು (ಬಿಎಸ್ಸಿ ಮತ್ತು ಜಿಎನ್ಎಂ) ಭಾರತೀಯ ನರ್ಸಿಂಗ್ ಕೌನ್ಸಿಲ್ ಮಾರ್ಗಸೂಚಿಗಳ ಪ್ರಕಾರ ಹಿರಿಯ ಬೋಧಕರ ಮೇಲ್ವಿಚಾರಣೆಯಲ್ಲಿ ಸರಕಾರಿ ಕೇಂದ್ರಗಳಲ್ಲಿ ಪೂರ್ಣಸಮಯದ ಕೋವಿಡ್ ನರ್ಸಿಂಗ್ ಕರ್ತವ್ಯಗಳಿಗೆ ಬಳಸಬಹುದುಅಲ್ಲದೆ, ಮಾನವ ಸಂಪನ್ಮೂಲಕ್ಕೆ ಸಂಭಾವನೆ / ಪ್ರೋತ್ಸಾಹಕಗಳಿಗೆ ಅಗತ್ಯವಾದ ಮೊತ್ತವನ್ನು ರಾಜ್ಯಗಳು ಅಗತ್ಯ ಸಮಯದಲ್ಲಿ ʻಇಸಿಆರ್ ಪಿ-ಅಡಿಯಲ್ಲಿ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದುಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರಗಳು (ಕೋವಿಡ್/ಕೋವಿಡ್ ಅಲ್ಲದ), ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು (ಎಚ್ಡಬ್ಲ್ಯೂಸಿ), -ಸಂಜೀವಿನಿ ಒಪಿಡಿ, ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್ಸಿ) ಮತ್ತು ಉಪ ಕೇಂದ್ರಗಳು (ಎಎಸ್ಸಿ), ಪ್ರಾಥಮಿಕ ಆರೋಗ್ಯ ಕೇಂದ್ರಗಳು (ಪಿಎಚ್ಸಿ), ಸಮುದಾಯ ಆರೋಗ್ಯ ಕೇಂದ್ರಗಳು (ಸಿಎಚ್ಸಿ) ಮುಂತಾದ ಆರೋಗ್ಯ ಕೇಂದ್ರಗಳನ್ನು ಜಿಲ್ಲಾ ಆಸ್ಪತ್ರೆಗಳೊಂದಿಗೆ ಒಂದು ಜಾಲದಂತೆ ಸಂಪರ್ಕಿಸಬೇಕಾಗುತ್ತದೆ.

ಕೋವಿಡ್ನ ಪರಿಣಾಮಕಾರಿ ನಿರ್ವಹಣೆಗಾಗಿ ಔಷಧಗಳನ್ನು ಖರೀದಿಸುವುದು ಸಹ ʻಇಸಿಆರ್ಪಿ- ಅಗತ್ಯಾಂಶಗಳಲ್ಲಿ ಒಂದಾಗಿದೆ ಎಂಬ ಬಗ್ಗೆ ಗಮನ ಸೆಳೆಯಲಾಯಿತು; ಔಷಧ ಖರೀದಿ ಮತ್ತು ಸಂಗ್ರಹಣೆ ಮಾರ್ಗಸೂಚಿಗಳನ್ನು ಈಗಾಗಲೇ ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗಿದ್ದು, ಇವುಗಳನ್ನು ಉದ್ದೇಶಕ್ಕಾಗಿ ಅಳವಡಿಸಿಕೊಳ್ಳಬಹುದು. ಮಾರ್ಗದರ್ಶನವನ್ನು ಸ್ಥಳೀಯ ಅಗತ್ಯಗಳಿಗೆ ತಕ್ಕಂತೆ ಬದಲಿಸಿಕೊಳ್ಳಬಹುದು ಮತ್ತು ರಾಜ್ಯಗಳು ದಾಸ್ತಾನು ಮತ್ತು ವೆಚ್ಚಗಳ ಆಧಾರದ ಮೇಲೆ ತಮ್ಮದೇ ಆದ ಮೌಲ್ಯಮಾಪನಗಳನ್ನು ಮಾಡಬೇಕು ಎಂದು ಸೂಚಿಸಲಾಯಿತು.

ರಾಷ್ಟ್ರೀಯ ಆರೋಗ್ಯ ಯೋಜನೆಯ ಹೆಚ್ಚುವರಿ ಕಾರ್ಯದರ್ಶಿ ಮತ್ತು ಯೋಜನಾ ನಿರ್ದೇಶಕಿ ಶ್ರೀಮತಿ ವಂದನಾ ಗುರ್ನಾನಿ, ಹೆಚ್ಚುವರಿ ಕಾರ್ಯದರ್ಶಿ ಶ್ರೀ ವಿಕಾಸ್ ಶೀಲ್ಹಾಗೂ ಅವರು ಕೇಂದ್ರ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

***



(Release ID: 1736024) Visitor Counter : 212