ಹಣಕಾಸು ಸಚಿವಾಲಯ

ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಯ ಪರಿಶೀಲನೆ

Posted On: 13 JUL 2021 7:48PM by PIB Bengaluru

ಭಾರತದ ಪ್ರಮುಖ ಮಾನವ ಸಂಪನ್ಮೂಲ ಸೇವೆ ಒದಗಿಸುವ ಕೇಂದ್ರವಾದ ಬೆಂಗಳೂರಿನ ಎರಡು ಸಂಸ್ಥೆಗಳಲ್ಲಿ ಆದಾಯ ತೆರಿಗೆ ಇಲಾಖೆಯು 08.07.2021 ರಂದು ಸಮೀಕ್ಷೆ (ದಾಳಿ) ನಡೆಸಿದೆ. ಆದಾಯ ತೆರಿಗೆ ಕಾಯ್ದೆ, 1961 80 ಜೆಜೆಎಎ ಅನ್ವಯ ತೆರಿಗೆದಾರರು ದೊಡ್ಡ ಕಡಿತವನ್ನು ಪಡೆಯುತ್ತಾರೆ. ಇದು ಹೊಸ ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುತ್ತದೆ, ಇದು ಉದ್ಯೋಗಿಗೆ ಪಾವತಿಸುವ ಸಂಬಳ (ತಿಂಗಳಿಗೆ 25,000 ರೂ.ಗಿಂತ ಕಡಿಮೆ ಇರಬೇಕು) ಮತ್ತು ಉದ್ಯೋಗದ ದಿನಗಳಂತಹ ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ.

ಕಾರ್ಯಾಚರಣೆಯ ಸಮಯದಲ್ಲಿ, ಆದಾಯ ತೆರಿಗೆ ಕಾಯ್ದೆ, 1961 80 ಜೆಜೆಎಎ ಕಡಿತದ ತಪ್ಪಾದ ಕ್ಲೈಮುಗಳ ಬಗ್ಗೆ ತೆರಿಗೆ ವಂಚನೆಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಹೊಸ ಉದ್ಯೋಗಿಗಳ ಸಂಬಳವು ತಿಂಗಳಿಗೆ 25,000 ರೂ.ಗಳಿಗೂ ಹೆಚ್ಚಿರುವುದು ತನಿಖೆಯಿಂದ ಬಹಿರಂಗವಾಗಿದೆ. ತೆರಿಗೆದಾರರು ಅಂತಹ ನೌಕರರ ವೇತನವನ್ನು ತಿಂಗಳಿಗೆ 25,000 ರೂ. ಗಳ ಮಿತಿಗೆ ಸರಿಹೊಂದಿಸಲು ವೇತನದ ಕೆಲವು ಭಾಗವನ್ನು ಅದರಲ್ಲಿ ಸೇರಿಸದೇ 80 ಜೆಜೆಎಎ ಅಡಿ ಕಡಿತವನ್ನು ಕ್ಲೈಮ್ ಮಾಡಿದ್ದಾರೆ.

ಇದಲ್ಲದೆ, ಕೆಲವು ಅರ್ಹ ಉದ್ಯೋಗಿಗಳು ತೆರಿಗೆದಾರರ ವೇತನದಾರರ ಪಟ್ಟಿಯಲ್ಲಿಲ್ಲದಿದ್ದರೂ ಸಹ, ಹಲವು ವರ್ಷಗಳು 80 ಜೆಜೆಎಎ ಅಡಿ ಕ್ಲೈಮ್ ಪಡೆದಿರುವುದೂ ಸಹ ಕಂಡುಬಂದಿದೆ.

ಒಟ್ಟಾರೆಯಾಗಿ, ದಾಳಿಯು ವಿವಿಧ ಮೌಲ್ಯಮಾಪನದ ವರ್ಷಗಳಲ್ಲಿ 880 ಕೋಟಿ ರೂ.ಗಳಷ್ಟು ಆದಾಯದ ಮರೆಮಾಚುವಿಕೆಯನ್ನು ಪತ್ತೆಹಚ್ಚಲು ಕಾರಣವಾಗಿದೆ.

ತನಿಖೆ ಪ್ರಗತಿಯಲ್ಲಿದೆ.

***



(Release ID: 1735224) Visitor Counter : 229


Read this release in: English , Urdu , Hindi , Tamil , Telugu