ಹಣಕಾಸು ಸಚಿವಾಲಯ

ಸಿಜಿಎಸ್ ಟಿ ವಲಯಗಳು ಮತ್ತು ಜಿಎಸ್ ಟಿ ಗುಪ್ತಚರ ನಿರ್ದೇಶನಾಲಯ ಜಿಎಸ್ ಟಿ ಇಂಟೆಲಿಜೆನ್ಸ್ ಡೈರೆಕ್ಟರೇಟ್ ಜನರಲ್ (ಜಿಎಸ್ ಟಿ ಗುಪ್ತಚರ ನಿರ್ದೇಶನಾಲಯ ) 2020-21ರ ಹಣಕಾಸು ವರ್ಷದಲ್ಲಿ ನಕಲಿ ಐಟಿಸಿ ಬಳಸಿ ಸುಮಾರು 35000 ಕೋಟಿ ರೂಪಾಯಿಗಳಷ್ಟು ಮೌಲ್ಯದ 8000 ಅವ್ಯವಹಾರ ಪ್ರಕರಣಗಳನ್ನು ದಾಖಲಿಸಿದವು

Posted On: 13 JUL 2021 5:12PM by PIB Bengaluru

ಜಿಎಸ್ ಟಿ ಆಡಳಿತದಡಿಯಲ್ಲಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ನ ಪ್ರಯೋಜನಕಾರಿ ನಿಬಂಧನೆಯ ದುರುಪಯೋಗ ಮಾಡಿ ಜಿಎಸ್ ಟಿ ಕಾನೂನಿನಡಿಯಲ್ಲಿ ತಪ್ಪಿಸಿಕೊಳ್ಳುವುದು ಸಾಮಾನ್ಯ ವಿಧಾನವಾಗಿದೆ. ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿಯ (ಸಿಬಿಐಸಿ) ಕ್ಷೇತ್ರ ರಚನೆಗಳು ಜಿಎಸ್ ಟಿ ಆಡಳಿತದ ಆರಂಭದಿಂದಲೂ ಇಂತಹ ಪ್ರಕರಣಗಳನ್ನು ಅನಿಯಮಿತವಾಗಿ ಪತ್ತೆ ಮಾಡುತ್ತಿವೆ. 2020-21ರ ಆರ್ಥಿಕ ವರ್ಷದಲ್ಲಿ ಸಿಜಿಎಸ್ ಟಿ ವಲಯಗಳು ಮತ್ತು ಜಿಎಸ್ ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ) 35000 ಕೋಟಿ ರೂಪಾಯಿಗಳ ಸುಮಾರು 8000 ಪ್ರಕರಣಗಳನ್ನು ದಾಖಲಿಸಿದೆ. ಹಣಕಾಸು ವರ್ಷದಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಗಳು, ವಕೀಲರು ಮತ್ತು ಇದರ ಹಿಂದಿರುವವರು, ಫಲಾನುಭವಿಗಳು, ನಿರ್ದೇಶಕರು ಮುಂತಾದ 14 ವೃತ್ತಿಪರರು ಸೇರಿದಂತೆ 426 ಜನರನ್ನು ಬಂಧಿಸಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ನಕಲಿ ಐಟಿಸಿ ಲಭ್ಯತೆ ಮತ್ತು ಬಳಕೆಯನ್ನು ದುರುಪಯೋಗ ಪಡಿಸುತ್ತಿರುವುದನ್ನು ಪರಿಗಣಿಸಿ ನಕಲಿ ಜಿಎಸ್ ಟಿ ಬಿಲ್ಲುಗಳ ವಿರುದ್ಧ ರಾಷ್ಟ್ರವ್ಯಾಪಿ ವಿಶೇಷ ಕಾರ್ಯಾಚರಣೆಯನ್ನು 9 ನವೆಂಬರ್ 2020ರಿಂದ ಪ್ರಾರಂಭಿಸಲಾಯಿತು. ಕಾರ್ಯಾಚರಣೆಯು ಇನ್ನೂ ನಡೆಯುತ್ತಿದೆ.

ಕಳೆದ ಎರಡು ಮೂರು ತಿಂಗಳುಗಳಲ್ಲಿ ಗಂಭೀರವಾದ ಕೋವಿಡ್ ಸಾಂಕ್ರಾಮಿಕ ಹರಡುವಿಕೆ ಮತ್ತು ಸಂಬಂಧಿತ ಸುರಕ್ಷತೆಯ ದೃಷ್ಟಿಯ ಕಾರಣದಿಂದಾಗಿ, ಕಾರ್ಯಾಚರಣೆಯು ನಿಧಾನಗತಿಯಲ್ಲಿ ಸಾಗಿತು ಆದರೆ ಕ್ರಮೇಣ ಲಾಕ್ ಡೌನ್ ನ ಸಡಿಲಿಕೆ ಮತ್ತು ದೇಶದ ವಿವಿಧ ಭಾಗಗಳಲ್ಲಿ ಸುಧಾರಿತ ಕೋವಿಡ್ -19 ಪರಿಸ್ಥಿತಿಯೊಂದಿಗೆ, ಇಲಾಖೆಯು ಕಾರ್ಯಾಚರಣೆಯನ್ನು ರಾಷ್ಟ್ರಮಟ್ಟದಲ್ಲಿ ಪುನರಾರಂಭಿಸಿದೆ. ಸರ್ಕಾರಿ ಬೊಕ್ಕಸಕ್ಕೆ ನಷ್ಟ ಉಂಟುಮಾಡುವ ವಿರುದ್ಧ ಕಾರ್ಯಾಚರಣೆಗಳು ಈ ತಿಂಗಳಲ್ಲಿ ವೇಗವನ್ನು ಪಡೆದಿವೆ. ತಪ್ಪಿತಸ್ಥ ಘಟಕಗಳ ವಿರುದ್ಧದ ರಾಷ್ಟ್ರವ್ಯಾಪಿ ಕಾರ್ಯಾಚರಣೆಯಲ್ಲಿ, ಜಿಎಸ್ ಟಿ ಗುಪ್ತಚರ ನಿರ್ದೇಶನಾಲಯ ಮತ್ತು ಸಿಬಿಐಸಿ ಅಡಿಯಲ್ಲಿ ಸಿಜಿಎಸ್ ಟಿ ವಲಯಗಳು ಪ್ರಸಕ್ತ ಹಣಕಾಸು ವರ್ಷದಲ್ಲಿ 1200 ಘಟಕಗಳನ್ನು ಒಳಗೊಂಡ 500 ಕ್ಕೂ ಹೆಚ್ಚು ಪ್ರಕರಣಗಳನ್ನು ಪತ್ತೆ ಹಚ್ಚಿವೆ ಮತ್ತು 24 ಜನರನ್ನು ಬಂಧಿಸಿವೆ. ಇದು ಸಿಬಿಐಸಿ ಅಧಿಕಾರಿಗಳು ಮಾಡಿದ ಬಂಧನಗಳ ಸಂಖ್ಯೆಗಳಲ್ಲಿಯೇ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು.

ಸಿಬಿಐಸಿ ಅಧಿಕಾರಿಗಳು ಇತ್ತೀಚಿನ ಐಟಿ ಪರಿಕರಗಳು, ಡಿಜಿಟಲ್ ಪುರಾವೆಗಳನ್ನು ಬಳಸುತ್ತಿದ್ದಾರೆ ಮತ್ತು ವಂಚಕರನ್ನು ಹಿಡಿಯಲು ಇತರ ಸರ್ಕಾರಿ ಇಲಾಖೆಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಕಾನೂನಿನಲ್ಲಿನ ಶಾಸಕಾಂಗ ಮತ್ತು ಕಾರ್ಯವಿಧಾನದ ಬದಲಾವಣೆಗಳ ಜೊತೆಗೆ, ರಾಷ್ಟ್ರವ್ಯಾಪಿ ಕಾರ್ಯಾಚರಣೆಯು ಉತ್ತಮ ಅನುಸರಣೆ ಮತ್ತು ಆದಾಯ ಸಂಗ್ರಹಣೆಗೆ ಕಾರಣವಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ, ಕೆಲವು ಪ್ರಸಿದ್ಧ ಕಂಪನಿಗಳ ವಿರುದ್ಧ ನಕಲಿ ಐಟಿಸಿ ಲಾಭದ ಪ್ರಕರಣಗಳನ್ನು ಸಹ ದಾಖಲಿಸಲಾಗಿದೆ.

ಇತ್ತೀಚೆಗೆ ದಾಖಲಿಸಲಾದ ಕೆಲವು ಗಮನಾರ್ಹ ಪ್ರಕರಣಗಳಲ್ಲಿ ಡಿಜಿಜಿಐ ನಾಗ್ಪುರ ವಲಯ ಘಟಕವು ರೂ. 214 ಕೋಟಿ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಯನ್ನು ಮತ್ತು ಸಂಗ್ರಹಿಸಿದ ಐಟಿಸಿಯನ್ನು ವಂಚನೆಯಿಂದ ಮರುಪಾವತಿ ಕೇಳಿದ್ದ ಮೂರು ಸಂಸ್ಥೆಗಳ ವಿರುದ್ಧ ಪ್ರಕರಣವನ್ನು ದಾಖಲು ಮಾಡಿದ್ದವು. ಈ ಸಂಸ್ಥೆಗಳು ನಕಲಿ ಬಾಡಿಗೆ ಒಪ್ಪಂದಗಳು ಮತ್ತು ನಕಲಿ ವಿದ್ಯುತ್ ಬಿಲ್ಗಳನ್ನು ಸಲ್ಲಿಸಿದ್ದವು ಮತ್ತು ಅವುಗಳು ವಾಸ್ತವವಾಗಿ ತಮ್ಮ ನೋಂದಾಯಿತ ವ್ಯವಹಾರ ಸ್ಥಳದಿಂದ ಯಾವುದೇ ವ್ಯವಹಾರ ಚಟುವಟಿಕೆಗಳು ನಡೆಯದೆ ಕಾಗದದ ಮೇಲೆ ಮಾತ್ರ ಅಸ್ತಿತ್ವದಲ್ಲಿದ್ದವು. ಈ ಸಂಸ್ಥೆಗಳು ಸಾಮಾನ್ಯ ಉತ್ಪನ್ನದ ರಫ್ತುಗಳನ್ನು ಅಂದರೆ ಜಿಎಸ್ ಟಿ @ 28% ಮತ್ತು ಕಾಂಪನಸ್ಸೇಷನ್ ಸೆಸ್ @ 290% ಅನ್ನು ಸಿಗರೆಟ್ಗಳಿಗೆ ಮತ್ತು ಸ್ಮೋಕಿಂಗ್ ಪೈಪಿನ ಧೂಮಪಾನ ಮಿಶ್ರಣಗಳಂತೆ ತೋರಿಸುತ್ತಿದ್ದವು, 

ಮತ್ತೊಂದು ಪ್ರಕರಣದಲ್ಲಿ, ಡಿಜಿಜಿಐ ಚಂಡೀಗ ಢ ವಲಯವು ಅಕ್ರಮ ಐಟಿಸಿಯನ್ನು 115 ಕೋಟಿ ರೂ.ಗೆ ರವಾನಿಸುವುದಕ್ಕಾಗಿ ನಕಲಿ ಸಂಸ್ಥೆಗಳನ್ನು ನಿರ್ವಹಿಸುತ್ತಿದ್ದ ವ್ಯಕ್ತಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿ ಬಂಧಿಸಿದೆ. ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಹರಿಯಾಣ ಮೂಲದ ವಿವಿಧ ಕಬ್ಬಿಣ ಮತ್ತು ಉಕ್ಕಿನ ಘಟಕಗಳಿಗೆ ಅನುಮತಿಸಲಾಗದ ಐಟಿಸಿಯನ್ನು ರವಾನಿಸಲು ಬೋಗಸ್ / ನಕಲಿ ಸಂಸ್ಥೆಗಳನ್ನು ಬಳಸಲಾಗಿದೆ ಎಂಬ ಮಾಹಿತಿಯ ಮೇರೆಗೆ, ಹಿಮಾಚಲ ಪ್ರದೇಶ (ಬಡ್ಡಿ) ಮತ್ತು ಪಂಜಾಬ್ನ ಅನೇಕ ಸ್ಥಳಗಳಲ್ಲಿ ಹುಡುಕಾಟಗಳನ್ನು ನಡೆಸಲಾಯಿತು, ಅಲ್ಲಿ ಆರೊಪಕ್ಕೊಳಪಡಿಸುವ ಇ-ಮೇಲ್ಗಳನ್ನು ಹೊಂದಿರುವ ಲ್ಯಾಪ್ಟಾಪ್ , ಪೆನ್ ಡ್ರೈವ್ಗಳು, ಮೋಸದ ವಹಿವಾಟುಗಳನ್ನು ಸಾಬೀತುಪಡಿಸುವ ಮೊಬೈಲ್ ಫೋನ್ಗಳನ್ನು ವಶಪಡಿಸಲಾಯಿತು. ಅದೇ ರೀತಿ ವಂಚನೆಯ ಐಟಿಸಿಯೊಂದನ್ನೂ ಡಿಜಿಜಿಐ ಸೂರತ್ ವಲಯ ಘಟಕವು ದಾಖಲಿಸಿದೆ, ಇದರಲ್ಲಿ ಅಸ್ತಿತ್ವದಲ್ಲಿಲ್ಲದ ಸಂಸ್ಥೆಗಳು ಬಿಲ್ಲುಗಳ ಸರಬರಾಜಿನಲ್ಲಿ ನಿರತರಾಗಿರುವುದು ಮತ್ತು 300 ಕೋಟಿ ರೂಪಾಯಿಗಳ ಅಕ್ರಮ ಐಟಿಸಿಯ ಬಗ್ಗೆ ಕಂಡುಹಿಡಿಯಲಾಗಿದೆ.

ಸಿಜಿಎಸ್ ಟಿ ಜೈಪುರ ವಲಯ, 100 ಕೋಟಿಗೂ ಹೆಚ್ಚು ವಂಚನೆಯ ಐಟಿಸಿಯ ಲಾಭ / ರವಾನೆಗಾಗಿ ಅನೇಕ ನಕಲಿ ಸಂಸ್ಥೆಗಳನ್ನು ಒಳಗೊಂಡ ಪ್ರಕರಣವನ್ನು ಪತ್ತೆ ಮಾಡಿದೆ, ಇದರಲ್ಲಿ ಮೂವರನ್ನು ಬಂಧಿಸಲಾಗಿದೆ. ಐಟಿಸಿ ವಂಚನೆಯ ಮತ್ತೊಂದು ಪ್ರಕರಣದಲ್ಲಿ, ಸಿಜಿಎಸ್ ಟಿ ದೆಹಲಿ ವಲಯವು ರೂ.551 ಕೋಟಿ ಮೌಲ್ಯದ ನಕಲಿ ಬಿಲ್ಲುಗಳನ್ನು ರಚಿಸುವಲ್ಲಿ ಮತ್ತು ರೂ .91 ಕೋಟಿ ಮೌಲ್ಯದ ಮೋಸದ ಐಟಿಸಿಯನ್ನು ರವಾನಿಸುವಲ್ಲಿ ತೊಡಗಿರುವ 23 ಘಟಕಗಳ ಜಾಲವನ್ನು ಪತ್ತೆ ಮಾಡಿದೆ. ಈ ನಕಲಿ ಘಟಕಗಳು ಬಿಟುಮಿನಸ್ ಮಿಶ್ರಣಗಳು, ಮೂಲ ಲೋಹಗಳು, ಪೀಠೋಪಕರಣಗಳು ಮತ್ತು ಬಾಗಿಲುಗಳ ಬಿಲ್ಲುಗಳನ್ನು ನೀಡುತ್ತಿದ್ದವು. ಈ ನಕಲಿ ಬಿಲ್ಲುಗಳ ದಂಧೆಯಲ್ಲಿ ಭಾಗಿಯಾಗಿರುವ ಮೂವರು ಪ್ರಮುಖ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ, ಸಿಜಿಎಸ್ ಟಿ ಅಹಮದಾಬಾದ್ ವಲಯವು 38 ಕೋಟಿ ರೂಪಾಯಿಗಳ ಐಟಿಸಿ ವಂಚನೆ ಪ್ರಕರಣದಲ್ಲಿ ಕಬ್ಬಿಣ ಮತ್ತು ಉಕ್ಕಿನ ನಕಲಿ ಬಿಲ್ಲುಗಳನ್ನು ನೀಡುವ ಮೂಲಕ ಮೋಸದ ಐಟಿಸಿಗೆ ರವಾನಿಸಲು ರಚಿಸಲಾದ ಹದಿಮೂರು ನಕಲಿ ಘಟಕಗಳ ವಿರುದ್ಧ ಪ್ರಕರಣ ದಾಖಲಿಸಿದೆ.

ನಕಲಿ ಬಿಲ್ಲುಗಳ ವಂಚಕರು ಮತ್ತು ಇತರ ಜಿಎಸ್ಟಿಯಿಂದ ತಪ್ಪಿಸಿಕೊಳ್ಳುವವರ ವಿರುದ್ಧ ಸರ್ಕಾರದ ಬೊಕ್ಕಸವನ್ನು ವಂಚಿಸಲು ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಹಿಡಿದು ಪ್ರಕರಣವನ್ನು ದಾಖಲಿಸುವ ಕಾರ್ಯವು ತೀವ್ರಗೊಳ್ಳುವ ಸಾಧ್ಯತೆಯಿದೆ.

ನಕಲಿ ಐಟಿಸಿಯ ಪ್ರಕರಣಗಳ ಹೊರತಾಗಿ ಡಿಜಿಜಿಐ ಮತ್ತು ಇತರ ಸಿಜಿಎಸ್ ಟಿ ಸಂಸ್ಥೆಗಳು ಸರಕು ಮತ್ತು ಸೇವೆಗಳ ತಪ್ಪು ವರ್ಗೀಕರಣ, ಮೌಲ್ಯಮಾಪನ ಮತ್ತು ಗುಟ್ಟಾದ ಸರಬರಾಜುಗಳನ್ನು ಒಳಗೊಂಡ ಜಿಎಸ್ ಟಿಯಿಂದ ತಪ್ಪಿಸಿಕೊಳ್ಳುವ ವ್ಯವಹಾರಗಳನ್ನು ಪತ್ತೆ ಮಾಡಿವೆ.

***



(Release ID: 1735162) Visitor Counter : 232