ಹಣಕಾಸು ಸಚಿವಾಲಯ

ವಿತ್ತ ಸಚಿವರಾದ  ಶ್ರೀಮತಿ ನಿರ್ಮಲಾ ಸೀತಾರಾಮನ್ ಮತ್ತು ಭೂತಾನ್ ನ ಹಣಕಾಸು ಸಚಿವ ಶ್ರೀ ಲಿಯೊನ್ ಪೋ ನಮ್ ಗೆ ತ್ಸೆರಿಂಗ್ ಜಂಟಿಯಾಗಿ ಭೂತಾನ್ನಲ್ಲಿ ಭೀಮ್-ಯುಪಿಐ  ಗೆ  ಚಾಲನೆ ನೀಡಿದರು


2019 ರಲ್ಲಿ ಭಾರತದ ಪ್ರಧಾನ ಮಂತ್ರಿಯವರ ಭೂತಾನ್ ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳು ಮಾಡಿದ  ಒಡಂಬಡಿಕೆಯನ್ನು ಈ ಚಾಲನೆಯು ಪೂರೈಸುತ್ತದೆ

Posted On: 13 JUL 2021 4:04PM by PIB Bengaluru

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಭೂತಾನ್ ಮಾನ್ಯ ಹಣಕಾಸು ಸಚಿವರಾದ  ಶ್ರೀ ಲಿಯಾನ್ಪೊ ನಮ್ ಗೆ ತ್ಸೆರಿಂಗ್ ಅವರು ಜಂಟಿಯಾಗಿ ಭೂತಾನ್ನಲ್ಲಿ ಭೀಮ್-ಯುಪಿಐ ಅನ್ನು ಇಂದು ಮಧ್ಯಾಹ್ನ ವರ್ಚುವಲ್ ಸಮಾರಂಭದಲ್ಲಿ ಪ್ರಾರಂಭಿಸಿದರು ಸಮಾರಂಭದಲ್ಲಿ ರಾಜ್ಯ ಸಚಿವ (ಹಣಕಾಸು) ಸಚಿವ ಡಾ.ಭಗವತ್ ಕಿಶನ್ ರಾವ್ ಕರದ್, ಭೂತಾನ್ನ ರಾಯಲ್ ವಿತ್ತೀಯ ಪ್ರಾಧಿಕಾರದ ಗರ್ವನರ್  ಆದ ಶ್ರೀ ದಾಶೋ ಪೆಂಜೋರ್, ಹಣಕಾಸು ಸೇವೆಗಳ ವಿಭಾಗದ ಕಾರ್ಯದರ್ಶಿ ಶ್ರೀ ದೇಬಶಿಶ್ ಪಾಂಡ, ಭೂತಾನ್ ಭಾರತದ ರಾಯಭಾರಿ ರುಚೀರಾ ಕಾಂಬೋಜ್ ಮತ್ತು ಭಾರತದ ಭೂತಾನ್ ರಾಯಭಾರಿ ಜನರಲ್ ವಿ. ನಂಗೆಲ್ ಎನ್ಪಿಸಿಐನ ಎಂಡಿ ಮತ್ತು ಸಿಇಒ ಶ್ರೀ ದಿಲೀಪ್ ಅಸ್ಬೆ ಉಪಸ್ಥಿತರಿದ್ದರು.

ಸಂದರ್ಭದಲ್ಲಿ ಮಾತನಾಡುತ್ತಾ, ಶ್ರೀಮತಿ ಸೀತಾರಾಮನ್ ರವರು  ಭಾರತದ ನೆರೆಹೊರೆಯ ಮೊದಲ ನೀತಿಯಡಿಯಲ್ಲಿ ಭೂತಾನ್ ನಲ್ಲಿ ಸೇವೆಗಳು ಪ್ರಾರಂಭವಾಗಿವೆ ಮತ್ತು ನಮ್ಮ ಸಾಧನೆಯ ಬಗ್ಗೆ ಭಾರತ ಹೆಮ್ಮೆಪಡುತ್ತದೆ ಮತ್ತು ಅದನ್ನು ನಮ್ಮ ಅಮೂಲ್ಯವಾದ ನೆರೆಹೊರೆಯವರೊಂದಿಗೆ ಹಂಚಿಕೊಳ್ಳಲು ಸಂತೋಷವಾಗಿದೆ ಎಂದು ಹೇಳಿದರು. ಕಳೆದ 5 ವರ್ಷಗಳಲ್ಲಿ 100 ದಶಲಕ್ಷಕ್ಕಿಂತಲೂ ಹೆಚ್ಚು ಯುಪಿಐ ಕ್ಯೂ ಆರ್ ಗಳನ್ನು ಹೊಂದಿರುವ ಭೀಮ್ ಯುಪಿಐ ಡಿಜಿಟಲ್ ವಹಿವಾಟಿನ ಪ್ರಮುಖವಾದ ಭಾಗವಾಗಿದೆ   ಮತ್ತು ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಇದೊಂದು ಸಾಧನೆಯಾಗಿದೆ, 41 ಲಕ್ಷ ಕೋಟಿ ಮೌಲ್ಯದ 22 ಬಿಲಿಯನ್ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಿದೆ ಎಂದು ಹಣಕಾಸು ಸಚಿವರು ಹೇಳಿದರು.

ಭೂತಾನ್ನಲ್ಲಿ ಭೀಮ್-ಯುಪಿಐ ಸೇವೆಗಳನ್ನು ಪ್ರಾರಂಭಿಸಿದ್ದಕ್ಕಾಗಿ ಭಾರತ ಸರ್ಕಾರಕ್ಕೆ ಭೂತಾನ್ ಹಣಕಾಸು ಸಚಿವ ಶ್ರೀ ಲಿಯಾನ್ಪೊ ನಮ್ಗೆ ತ್ಸೆರಿಂಗ್ ಧನ್ಯವಾದ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದರು ಮತ್ತು ದಿನಗಳು ಕಳೆದಂತೆ ಉಭಯ ದೇಶಗಳ ನಡುವಿನ ಬಾಂಧವ್ಯವು ಬಲಗೊಳ್ಳುತ್ತಿದೆ ಎಂದು ಹೇಳಿದರು.

  ಚಾಲನೆಯು 2019 ರಲ್ಲಿ ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಭೂತಾನ್ ಭೇಟಿಯ ಸಂದರ್ಭದಲ್ಲಿ ಉಭಯ ದೇಶಗಳು ಮಾಡಿದ ಒಡಂಬಡಿಕೆಯನ್ನು ಪೂರೈಸುತ್ತದೆಭೇಟಿಯ ನಂತರ, ಭಾರತ ಮತ್ತು ಭೂತಾನ್ ಈಗಾಗಲೇ ಪರಸ್ಪರ ದೇಶಗಳಲ್ಲಿ ರೂಪೇ ಕಾರ್ಡ್ಗಳನ್ನು ಸ್ವೀಕರಿಸುವಲ್ಲಿ ಪರಸ್ಪರ ಕಾರ್ಯಸಾಧ್ಯತೆಯನ್ನು ಎರಡು ಹಂತಗಳಲ್ಲಿ ಸಕ್ರಿಯಗೊಳಿಸಿದೆ  -  ಮೊದಲ ಹಂತದಲ್ಲಿ ಭೂತಾನ್ ಮೂಲದ ಟರ್ಮಿನಲ್ ಗಳಲ್ಲಿ ಭಾರತದಲ್ಲಿ ನೀಡಲಾಗುವ ರೂಪೆ ಕಾರ್ಡ್ಗಳ ಸ್ವೀಕಾರ, ಮತ್ತು ಎರಡನೇ ಹಂತದಲ್ಲಿ ಭೂತಾನಿನಲ್ಲಿ ನೀಡಲಾಗುವ ರೂಪೆ ಕಾರ್ಡ್‌ಗಳ ಸ್ವೀಕಾರ.

ಭೂತಾನ್ ನಲ್ಲಿ ಇಂದಿನ ಭೀಮ್-ಯುಪಿಐ, ಉಭಯ ದೇಶಗಳ ಪಾವತಿ ಮೂಲಸೌಕರ್ಯಗಳು ತಡೆರಹಿತ ಸಂಪರ್ಕ ಹೊಂದಿವೆ ಮತ್ತು ಪ್ರತಿವರ್ಷ ಭೂತಾನ್ ಗೆ ಪ್ರಯಾಣಿಸುವ ಭಾರತದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮತ್ತು ಉದ್ಯಮಿಗಳಿಗೆ ಅನುಕೂಲವಾಗಲಿದೆ. ಇದು ಕೇವಲ ಗುಂಡಿಯ ಸ್ಪರ್ಶದಲ್ಲಿ ಹಣವಿಲ್ಲದ ವಹಿವಾಟಿನ ಮೂಲಕ ಪ್ರಯಾಣ ಹಾಗೂ ಜೀವನವನ್ನು ಹೆಚ್ಚು ಸುಲಭಗೊಳಿಸುತ್ತದೆ.

ಚಾಲನೆಯ ಭಾಗವಾಗಿ, ಭೂತಾನ್ನ ಸ್ಥಳೀಯ ಸಮುದಾಯಗಳು ಸಾವಯವವಾಗಿ ತಯಾರಿಸಿದ ತಾಜಾ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಭೂತಾನ್ ಒಜಿಒಪಿ ಔಟ್ ಲೆಟ್ನಿಂದ ಸಾವಯವ ಉತ್ಪನ್ನವನ್ನು ಖರೀದಿಸಲು ಭೀಮ್-ಯುಪಿಐ ಬಳಸಿ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ನೇರ ವಹಿವಾಟು ನಡೆಸಿದರು.

ಭೂತಾನ್, ಕ್ಯೂಆರ್ ನಿಯೋಜನೆಗಾಗಿ ಯುಪಿಐ ಮಾನದಂಡಗಳನ್ನು ಅಳವಡಿಸಿಕೊಂಡ ಮತ್ತು ಭೀಮ್ ಆ್ಯಪ್ ಮೂಲಕ ಮೊಬೈಲ್ ಆಧಾರಿತ ಪಾವತಿಗಳನ್ನು ಸ್ವೀಕರಿಸಿದ ನಮ್ಮ ಹತ್ತಿರದ ನೆರೆಯ ಮೊದಲ ದೇಶವಾಗಿದೆ.

***


(Release ID: 1735099) Visitor Counter : 392