ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ
ಉತ್ತರ ಪ್ರದೇಶದಲ್ಲಿ ಗೋಧಿ ಖರೀದಿಯಲ್ಲಿ ಸಾರ್ವಕಾಲಿಕ ದಾಖಲೆ, ರೈತರಿಗೆ ಎಂ.ಎಸ್.ಪಿ.ಯಾಗಿ 11,141.28 ಕೋ.ರೂ. ಪಾವತಿ
2020-21ರ ಆರ್.ಎಂ.ಎಸ್. ಗೆ ಹೋಲಿಸಿದಾಗ ಉತ್ತರ ಪ್ರದೇಶದಲ್ಲಿ 2021-22 ರ ರಾಬಿ ಮಾರುಕಟ್ಟೆ ಹಂಗಾಮಿನಲ್ಲಿ ಗೋಧಿ ಖರೀದಿಯಲ್ಲಿ 58% ಹೆಚ್ಚಳ
ಉತ್ತರ ಪ್ರದೇಶದಲ್ಲಿ 2021-22 ರ ರಾಬಿ ಮಾರುಕಟ್ಟೆ ಹಂಗಾಮಿನಲ್ಲಿ 56.41 ಎಲ್.ಎಂ.ಟಿ. ಗೋಧಿ ಖರೀದಿ ದಾಖಲೆ. 2020-21ರ ಆರ್.ಎಂ.ಎಸ್. ಹಂಗಾಮಿನಲ್ಲಿ 35.77 ಎಲ್.ಎಂ.ಟಿ. ಗೋಧಿಯನ್ನು 6.64 ಲಕ್ಷ ರೈತರಿಂದ ಖರೀದಿಸಲಾಗಿತ್ತು
2020-21ರ ಕೆ.ಎಂ.ಎಸ್. ಹಂಗಾಮಿನಲ್ಲಿ ಉತ್ತರ ಪ್ರದೇಶದಲ್ಲಿ 10.22 ಲಕ್ಷ ರೈತರಿಂದ ದಾಖಲೆ ಪ್ರಮಾಣ 66.84 ಎಲ್.ಎಂ.ಟಿ. ಭತ್ತವನ್ನು ಖರೀದಿ ಮಾಡಲಾಗಿದೆ
Posted On:
12 JUL 2021 4:47PM by PIB Bengaluru
ಉತ್ತರ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ಆರ್.ಎಂ.ಎಸ್. 2021-22 ರ ಹಂಗಾಮಿನಲ್ಲಿ 56.41 ಲಕ್ಷ ಮೆಟ್ರಿಕ್ ಟನ್ ಗೋಧಿ ಖರೀದಿಸಲಾಗಿದೆ. ಉತ್ತರ ಪ್ರದೇಶದ 12.98 ಲಕ್ಷ ರೈತರಿಂದ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂ.ಎಸ್.ಪಿ.) ಈ ಖರೀದಿ ಮಾಡಲಾಗಿದೆ. ರಾಜ್ಯದ ಇತಿಹಾಸದಲ್ಲಿಯೇ ಇದು ಅತ್ಯಧಿಕ ಪ್ರಮಾಣದ ಖರೀದಿಯಾಗಿದೆ. ಒಟ್ಟು 11,141.28 ಕೋ.ರೂ.ಗಳನ್ನು ಎಂ.ಎಸ್.ಪಿ.ಯಾಗಿ ರೈತರಿಗೆ ಪಾವತಿ ಮಾಡಲಾಗಿದೆ. ಆರ್.ಎಂ.ಎಸ್. 2020-21 ರಲ್ಲಿ 6.64 ಲಕ್ಷ ರೈತರಿಂದ 35.77 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಖರೀದಿಸಲಾಗಿತ್ತು. ಅದಕ್ಕೆ ಹೋಲಿಸಿದರೆ ಪ್ರಸ್ತುತ ಖರೀದಿಯಲ್ಲಿ 58% ನಷ್ಟು ಹೆಚ್ಚಳ ದಾಖಲಾಗಿದೆ.
ಉತ್ತರ ಪ್ರದೇಶದಲ್ಲಿ 2020-21 ರ ಖಾರೀಫ್ ಮಾರುಕಟ್ಟೆ ಹಂಗಾಮಿನಲ್ಲಿಯೂ ದಾಖಲೆ ಪ್ರಮಾಣದಲ್ಲಿ ಭತ್ತ ಖರೀದಿ ಮಾಡಲಾಗಿದೆ. ಕೆ.ಎಂ.ಎಸ್. 2020-21ರಲ್ಲಿ ಉತ್ತರ ಪ್ರದೇಶದ 10.22 ಲಕ್ಷ ರೈತರಿಂದ 66.84 ಲಕ್ಷ ಮೆಟ್ರಿಕ್ ಟನ್ ಭತ್ತವನ್ನು ಖರೀದಿ ಮಾಡಲಾಗಿದೆ. ಇದು ದಾಖಲೆ ಪ್ರಮಾಣದ್ದಾಗಿದೆ. ರಾಜ್ಯದ ಇತಿಹಾಸದಲ್ಲಿಯೇ ಇದು ದಾಖಲೆ ಗರಿಷ್ಠ ಪ್ರಮಾಣದ ಖರೀದಿಯಾಗಿದೆ. ಉತ್ತರ ಪ್ರದೇಶದ ರೈತರಿಗೆ ಒಟ್ಟು 12491.88 ಕೋ.ರೂ.ಗಳನ್ನು ಎಂ.ಎಸ್.ಪಿ.ಯಾಗಿ ಪಾವತಿ ಮಾಡಲಾಗಿದೆ.
ಬಹುತೇಕ ಗೋಧಿ ಖರೀದಿ ರಾಜ್ಯಗಳಲ್ಲಿ ಪ್ರಸ್ತುತ 2021-22 ರ ಆರ್.ಎಂ.ಎಸ್. ಮಾರುಕಟ್ಟೆ ಹಂಗಾಮು ಮುಕ್ತಾಯಗೊಂಡಿರುವುದನ್ನು ಗಮನಿಸಬಹುದಾಗಿದ್ದು, 2021ರ ಜುಲೈ 8ರವರೆಗೆ 433.32 ಎಲ್.ಎಂ.ಟಿ. ಗೋಧಿಯನ್ನು ಖರೀದಿ ಮಾಡಲಾಗಿದೆ. (ಇದು ಸಾರ್ವಕಾಲಿಕ ದಾಖಲೆಯಾಗಿದೆ, ಇದು ಹಿಂದಿನ 2020-21 ರ ಆರ್.ಎಂ.ಎಸ್.ನ 389.92 ಎಲ್.ಎಂ.ಟಿ. ಗರಿಷ್ಠ ದಾಖಲೆಯನ್ನು ಹಿಂದಿಕ್ಕಿದೆ.) ಕಳೆದ ವರ್ಷ ಇದೇ ಅವಧಿಯಲ್ಲಿ ಖರೀದಿ 387.50 ಎಲ್.ಎಂ.ಟಿ.ಯಷ್ಟಾಗಿತ್ತು. ಸುಮಾರು 49.16 ಲಕ್ಷ ರೈತರು ಈಗಾಗಲೇ ಚಾಲ್ತಿಯಲ್ಲಿರುವ ಆರ್.ಎಂ.ಎಸ್. ಖರೀದಿ ಕಾರ್ಯಾಚರಣೆಯಿಂದ ಪ್ರಯೋಜನ ಪಡೆದಿದ್ದಾರೆ. 85,581.02 ಕೋ.ರೂ. ಎಂ.ಎಸ್.ಪಿ.ಮೌಲ್ಯದ ಖರೀದಿಯನ್ನು ಈಗಾಗಲೇ ಮಾಡಲಾಗಿದೆ.
ಚಾಲ್ತಿಯಲ್ಲಿರುವ 2020-21 ರ ಖಾರೀಫ್ ಹಂಗಾಮಿನಲ್ಲಿ ಭತ್ತ ಖರೀದಿ ಕೂಡಾ ಸುಗಮವಾಗಿ ನಡೆದಿದೆ. ಖರೀದಿ ರಾಜ್ಯಗಳಲ್ಲಿ 866.05 ಎಲ್.ಎಂ.ಟಿ. ಭತ್ತವನ್ನು (ಖಾರೀಫ್ ಬೆಳೆ 707.59 ಎಲ್.ಎಂ.ಟಿ. ಮತ್ತು ರಾಬಿ ಬೆಳೆ 158.46 ಎಲ್.ಎಂ.ಟಿ.) 2021 ರ ಜುಲೈ 8 ರವರೆಗೆ ಖರೀದಿಸಲಾಗಿದೆ. ಕಳೆದ ವರ್ಷ ಇದೇ ಅವಧಿಗೆ ಖರೀದಿ ಪ್ರಮಾಣ 756.80 ಎಲ್.ಎಂ.ಟಿ.ಯಷ್ಟಾಗಿತ್ತು. ಚಾಲ್ತಿಯಲ್ಲಿರುವ ಕೆ.ಎಂ.ಎಸ್. ಖರೀದಿ ಕಾರ್ಯಾಚರಣೆಗಳಿಂದ ಎಂ.ಎಸ್.ಪಿ. ಮೌಲ್ಯ 1,63,510.77 ಕೋ.ರೂ.ಗಳ ಪ್ರಮಾಣದ ಖರೀದಿಯಿಂದಾಗಿ ಈಗಾಗಲೇ 127.72 ಲಕ್ಷ ರೈತರಿಗೆ ಲಾಭವಾಗಿದೆ. ಭತ್ತ ಖರೀದಿ ಕೂಡಾ ಸಾರ್ವಕಾಲಿಕ ದಾಖಲೆ ಪ್ರಮಾಣವನ್ನು ತಲುಪಿದೆ. ಅದು ಹಿಂದಿನ ವರ್ಷದ ದಾಖಲೆಯಾದ, 2019-20ರ ಕೆ.ಎಂ.ಎಸ್. ಹಂಗಾಮಿನ 773.45 ಎಲ್.ಎಂ.ಟಿ.ಯನ್ನು ದಾಟಿದೆ.
***
(Release ID: 1734932)
Visitor Counter : 307