ಗ್ರಾಮೀಣಾಭಿವೃದ್ಧಿ ಸಚಿವಾಲಯ

ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಶ್ರೀ ಗಿರಿರಾಜ್ ಸಿಂಗ್ ಅಧಿಕಾರ ಸ್ವೀಕಾರ


ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದಲ್ಲಿ ಸಹಾಯಕ ಸಚಿವರಾಗಿ ಶ್ರೀ ಫಾಗ್ಗನ್ ಸಿಂಗ್ ಕುಲಸ್ಥೆ ಅಧಿಕಾರ ಸ್ವೀಕಾರ

प्रविष्टि तिथि: 08 JUL 2021 4:44PM by PIB Bengaluru

ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಶ್ರೀ ಗಿರಿರಾಜ್ ಸಿಂಗ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.

ಟ್ವೀಟೊಂದರ ಮೂಲಕ ತಾವು ಅಧಿಕಾರ ವಹಿಸಿಕೊಂಡಿರುವುದನ್ನು ತಿಳಿಸಿರುವ ಶ್ರೀ ಗಿರಿರಾಜ್ ಸಿಂಗ್ ಅವರು ತಮಗೆ ಹೊಸ ಜವಾಬ್ದಾರಿ ನೀಡಿರುವುದಕ್ಕಾಗಿ ಮತ್ತು ವಿಶ್ವಾಸವನ್ನು ಮತ್ತೆ ಸ್ಥಿರೀಕರಿಸಿರುವುದಕ್ಕೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ತಮ್ಮ ಹೃದಯ ಸ್ಪರ್ಶೀ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.

ಶ್ರೀ ಸಿಂಗ್ ಅವರನ್ನು ಅವರ ಕೊಠಡಿಯಲ್ಲಿ ಶ್ರೀ ನರೇಂದ್ರ ಸಿಂಗ್  ತೋಮರ್ ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಸ್ವಾಗತಿಸಲಾಯಿತು. ಗ್ರಾಮೀಣಾಭಿವೃದ್ಧಿ ಖಾತೆ ಸಹಾಯಕ ಸಚಿವರಾದ ಸಾಧ್ವಿ ನಿರಂಜನ್ ಜ್ಯೋತಿ ಸಂದರ್ಭದಲ್ಲಿ ಹಾಜರಿದ್ದರು.

ಮಾಧ್ಯಮಗಳ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಶ್ರೀ ಸಿಂಗ್ ತಾವು ತಮ್ಮ ಕರ್ತವ್ಯವನ್ನು ಸಂಪೂರ್ಣ ಬದ್ಧತೆಯಿಂದ ನಿರ್ವಹಿಸುವುದನ್ನು ಮುಂದುವರೆಸುವುದಾಗಿ ತಿಳಿಸಿದರು.

ಶ್ರೀ ಫಾಗ್ಗನ್ ಸಿಂಗ್ ಕುಲಸ್ಥೆ ಅವರು ಗ್ರಾಮೀಣಾಭಿವೃದ್ಧಿ ಸಹಾಯಕ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.

ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ಶ್ರೀ ನಾಗೇಂದ್ರ ನಾಥ್ ಸಿನ್ಹಾ, ಹೆಚ್ಚುವರಿ ಕಾರ್ಯದರ್ಶಿ ಶ್ರೀಮತಿ ಅಲ್ಕಾ ಉಪಾಧ್ಯಾಯ ಮತ್ತು ಸಚಿವಾಲಯದ ಇತರ ಹಿರಿಯ  ಅಧಿಕಾರಿಗಳು ಹಾಜರಿದ್ದರು.

***


(रिलीज़ आईडी: 1734020)
इस विज्ञप्ति को इन भाषाओं में पढ़ें: English , Urdu , Hindi , Marathi , Bengali , Punjabi , Tamil