ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಲ್ಲಿ ಸಹಾಯಕ ಸಚಿವರಾಗಿ ಡಾ. ಮಂಜಪಾರಾ ಮಹೇಂದ್ರಭಾಯಿ ಅಧಿಕಾರ ಸ್ವೀಕಾರ

Posted On: 08 JUL 2021 5:16PM by PIB Bengaluru

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದಲ್ಲಿ ಸಹಾಯಕ ಸಚಿವರಾಗಿ ಡಾ. ಮಂಜಪಾರಾ ಮಹೇಂದ್ರಭಾಯಿ ಅವರಿಂದಿಲ್ಲಿ ಅಧಿಕಾರ ವಹಿಸಿಕೊಂಡರು. ಡಬ್ಲ್ಯು.ಸಿ.ಡಿ. ಸಚಿವಾಲಯದ ಜೊತೆಗೆ ಅವರಿಗೆ ಆಯುಷ್ ಸಚಿವಾಲಯದಲ್ಲಿ ಸಹಾಯಕ ಸಚಿವ ಸ್ಥಾನದ ಜವಾಬ್ದಾರಿಯನ್ನೂ ನೀಡಲಾಗಿದೆ. ಸಂದರ್ಭದಲ್ಲಿ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಡಾ. ಮಹೇಂದ್ರಭಾಯಿ ಅವರು ಸಂಸತ್ ಸದಸ್ಯರಾಗಿದ್ದು, ಅವರು ಗುಜರಾತಿನ ಸುರೇಂದ್ರನಗರ್ ಕ್ಷೇತ್ರದಿಂದ 17 ನೇ ಲೋಕ ಸಭೆಗೆ ಆಯ್ಕೆಯಾಗಿದ್ದಾರೆ.

ಸಚಿವರು ಗುಜರಾತ್ ವಿಶ್ವವಿದ್ಯಾಲಯದಿಂದ ಸಾಮಾನ್ಯ ವೈದ್ಯಕೀಯ ಚಿಕಿತ್ಸಾ ವಿಭಾಗದಲ್ಲಿ ಎಂ.ಡಿ. ಪದವಿ ಪಡೆದಿದ್ದಾರೆ ಮತ್ತು ಅವರು ತಮ್ಮ ರಾಜಕೀಯ ಜೀವನದ ಪೂರ್ವದಲ್ಲಿ ಗುಜರಾತಿನಲ್ಲಿ ವೈದ್ಯಕೀಯದ ಪ್ರೊಫೆಸರ್ ಮತ್ತು ಗಣ್ಯ ಹೃದಯ ತಜ್ಞರಾಗಿ ವೃತ್ತಿಜೀವನ ನಡೆಸುತ್ತಿದ್ದರು.

***



(Release ID: 1734019) Visitor Counter : 194