ರೈಲ್ವೇ ಸಚಿವಾಲಯ

ಕೇಂದ್ರ ರೈಲ್ವೆ, ಸಂಪರ್ಕ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿ ರೈಲ್ವೆ ಭವನ್, ಎಲೆಕ್ಟ್ರಾನಿಕ್ಸ್ ನಿಕೇತನ್ ಮತ್ತು ಸಂಚಾರ್ ಭವನದಲ್ಲಿ ಅಧಿಕಾರ ಸ್ವೀಕರಿಸಿದ ಶ್ರೀ ಆಶ್ವಿನಿ ವೈಷ್ಣವ್ 

ಬಡವರು, ಸಮಾಜದ ಅಂಚಿನಲ್ಲಿರುವ ಸಮುದಾಯಗಳು, ರೈತರು, ಮದ್ಯಮ ವರ್ಗ, ಯುವ ಸಮೂಹ, ಮಹಿಳೆಯರು ಮತ್ತು ಸಮಾಜದ ದುರ್ಬಲ ವರ್ಗಗಳ ಬದುಕಿನಲ್ಲಿ ಪರಿವರ್ತನೆ  ತರುವುದು ಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ಅವರ ದೃಷ್ಟಿಕೋನ: ಶ್ರೀ ಅಶ್ವಿನಿ ವೈಷ್ಣವ್

ರೈಲ್ವೆ, ಸಂಪರ್ಕ ಮತ್ತು ತಂತ್ರಜ್ಞಾನ ಎಲ್ಲಾ ಭಾರತೀಯರ ಜೀವನವನ್ನು ಸ್ಪರ್ಷಿಸುತ್ತದೆ: ಪ್ರಧಾನಮಂತ್ರಿ ದೃಷ್ಟಿಕೋನ ಪೂರೈಸಲು ಕೆಲಸ ಮಾಡುತ್ತೇನೆ: ಶ್ರೀ ಅಶ್ವಿನಿ ವೈಷ್ಣವ್

Posted On: 08 JUL 2021 5:20PM by PIB Bengaluru

ಕೇಂದ್ರ ರೈಲ್ವೆ, ಸಂಪರ್ಕ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿ ಶ್ರೀ ಅಶ್ವಿನಿ ವೈಷ್ಣವ್ ಅವರು ರೈಲ್ವೆ ಭವನ, ನಂತರ ಎಲೆಕ್ಟ್ರಾನಿಕ್ಸ್ ನಿಕೇತನ್ ಮತ್ತು ಸಂಚಾರ್ ಭವನದಲ್ಲಿ 2021, ಜುಲೈ 08 ರಂದು ಅಧಿಕಾರ ಸ್ವೀಕರಿಸಿದರು.

ಶ್ರೀ ಅಶ್ವಿನಿ ವೈಷ್ಣವ್ [ಜನನ 1970ರಲ್ಲಿ] ಒಡಿಶಾದಿಂದ ರಾಜ್ಯಸಭಾ ಸದಸ್ಯರಾಗಿದ್ದಾರೆ. ಸುಂದೇರ್ ಘರ್, ಬಲಸೋರ್, ಕಟಕ್ ಮತ್ತು ಗೋವಾದಲ್ಲಿ ಇವರು  ಸೇವೆ ಸಲ್ಲಿಸಿದ್ದಾರೆಕಾನ್ಪುರ್ ಐಐಟಿಯಿಂದ ಮಾಸ್ಟರ್ ಆಫ್ ಟೆಕ್ನಾಲಜಿ ಮತ್ತು ವಾರ್ಟನ್ ನಿಂದ ಎಂ.ಬಿ. ಪದವಿ ಗಳಿಸಿದ್ದಾರೆ. ತಂತ್ರಜ್ಞಾನ, ಹಣಕಾಸು ಮತ್ತು ಅದರ ಆನ್ವಯಿಕ ಕೌಶಲ್ಯಗಳ ಸಂಯೋಜನೆಯನ್ನು ಸಮಾಜದ ದುರ್ಬಲ ವರ್ಗಗಳಿಗೆ ತಲುಪಿಸುವ ಉದ್ದೇಶ ಹೊಂದಿದ್ದಾರೆಅಂತ್ಯೋದಯ ಎಂಬ ತತ್ವವನ್ನು ದೃಢವಾಗಿ ನಂಬಿದ್ದು, ಸಮಾಜದ ಅಂಚಿನಲ್ಲಿರುವ ವರ್ಗಗಳ ಜೀವನವನ್ನು ಪರಿವರ್ತಿಸುವ ಉದ್ದೇಶ ಹೊಂದಿದ್ದಾರೆ

 

ಟ್ವಿಟರ್https://twitter.com/AshwiniVaishnaw?s=08

ಫೇಸ್ ಬುಕ್: https://www.facebook.com/ashwinivaishnaw

ಇನ್ಸ್ಟಾಗ್ರಾಮ್: https://www.instagram.com/ashwini.vaishnaw/

***(Release ID: 1734015) Visitor Counter : 128