ಭೂವಿಜ್ಞಾನ ಸಚಿವಾಲಯ

ಡಾ. ಜಿತೇಂದ್ರ ಸಿಂಗ್ ಅವರು ಭೂ ವಿಜ್ಞಾನ ಸಚಿವಾಲಯದ ಉಸ್ತುವಾರಿ ವಹಿಸಿಕೊಂಡರು

Posted On: 08 JUL 2021 6:22PM by PIB Bengaluru

ಡಾ.ಜಿತೇಂದ್ರ ಸಿಂಗ್ ಅವರು ಭೂ ವಿಜ್ಞಾನ ಸಚಿವಾಲಯದ ಉಸ್ತುವಾರಿಯನ್ನು ರಾಜ್ಯ ಸಚಿವರಾಗಿ (ಸ್ವತಂತ್ರ ನಿರ್ವಹಣೆ) ವಹಿಸಿಕೊಂಡರು. ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಡಾ. ಸಿಂಗ್ ಅವರು ಭೂ ವಿಜ್ಞಾನ ಸಚಿವಾಲಯದ ಮಹತ್ವ ವಿವಿಧ ಅಂಶಗಳ ಬಗ್ಗೆ ಜನರಿಗೆ ತಿಳಿಸುವಲ್ಲಿ ವಿಶೇಷವಾಗಿ ಹವಾಮಾನ ಮುನ್ಸೂಚನೆಯನ್ನು ತಿಳಿಸುವ ಬಗ್ಗೆ ಒತ್ತಿಹೇಳಿದರು. ದತ್ತಾಂಶ ಮತ್ತು ಮುನ್ಸೂಚನೆಯ ವೈಜ್ಞಾನಿಕ ವಿಶ್ಲೇಷಣೆ ಮೂಲಕ ಭೂ ವಿಜ್ಞಾನ ಸಚಿವಾಲಯವು ದೇಶಾದ್ಯಂತದ ರೈತರಿಗೆ ಮುಖ್ಯವಾದ ನೆರವು ನೀಡುತ್ತಿದೆ ಎಂದು ಅವರು ಹೇಳಿದರು. ಭಾರತವು ಪ್ರಸ್ತುತ ಅಭಿವೃದ್ಧಿಪಡಿಸಿದ ಮತ್ತು ಬಳಸುತ್ತಿರುವ ವಿಶಿಷ್ಟ ಹವಾಮಾನ ಮುನ್ಸೂಚನೆ ತಂತ್ರಜ್ಞಾನವು ಪ್ರಪಂಚದಾದ್ಯಂತ ಮೆಚ್ಚುಗೆ ಪಡೆದಿದೆ ಮತ್ತು ಅದನ್ನು ಅನೇಕ ದೇಶಗಳು ಅಳವಡಿಸಿಕೊಂಡಿವೆ ಎಂದು ಅವರು ಗಮನಸೆಳೆದರು.

ನಂತರ, ಸಚಿವರು ಸಚಿವಾಲಯದ ಹಿರಿಯ ಅಧಿಕಾರಿಗಳೊಂದಿಗೆ ಸಂಕ್ಷಿಪ್ತ ಮಾತುಕತೆ ನಡೆಸಿದರು ಮತ್ತು ಸಾಮಾನ್ಯ ಜನರಿಗೆ ವಿಶೇಷವಾಗಿ ರೈತರಿಗೆ ಅಪಾರ ಪ್ರಯೋಜನವನ್ನು ನೀಡುವ ವೈಜ್ಞಾನಿಕ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡುವಂತೆ ಒತ್ತಾಯಿಸಿದರು.

ನವದೆಹಲಿಯಲ್ಲಿ ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ಭೂ ವಿಜ್ಞಾನದ ರಾಜ್ಯ ಸಚಿವರಾಗಿ (ಸ್ವತಂತ್ರ ನಿರ್ವಹಣೆ) ಅಧಿಕಾರ ವಹಿಸಿಕೊಂಡರು.

***


(Release ID: 1733999) Visitor Counter : 226