ಹಣಕಾಸು ಸಚಿವಾಲಯ
ಹಣಕಾಸು ಖಾತೆ ಸಹಾಯಕ ಸಚಿವರಾಗಿ ಡಾ. ಭಾಗವತ್ ಕೃಷ್ಣರಾವ್ ಕರಾಡ್ ಅಧಿಕಾರ ಸ್ವೀಕಾರ
ಪ್ರಕಟಣಾ ದಿನಾಂಕ:
08 JUL 2021 2:09PM by PIB Bengaluru
ಡಾ. ಭಾಗವತ್ ಕೃಷ್ಣರಾವ್ ಕರಾಡ್ ಅವರು ಇಂದು ಹಣಕಾಸು ಖಾತೆ ಸಹಾಯಕ ಸಚಿವರಾಗಿ ಅಧಿಕಾರ ಸ್ವೀಕರಿಸಿದರು,

ನಾರ್ತ್ ಬ್ಲಾಕ್ ನಲ್ಲಿಂದು ಡಾ. ಭಾಗವತ್ ಕೃಷ್ಣರಾವ್ ಕರಾಡ್ ಹಣಕಾಸು ಖಾತೆ ಸಹಾಯಕ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.
ಕರಾಡ್ ಮೊದಲ ಬಾರಿಗೆ ಆಯ್ಕೆಯಾಗಿರುವ ರಾಜ್ಯಸಭಾ ಸದಸ್ಯರು. ಸಾರ್ವಜನಿಕ ಸೇವೆಯಲ್ಲಿ ಸಕ್ರಿಯವಾಗಿ ತೊಡಗಿರುವ ಅವರು, ಔರಂಗಾಬಾದ್ ನಗರ ಪಾಲಿಕೆಯ ಮೇಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ ಮತ್ತು ಮರಾಠವಾಡ ಕಾನೂನು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. 64 ವರ್ಷದ ಕರಾಡ್ ವೃತ್ತಿಯಲ್ಲಿ ವೈದ್ಯರು.
ಎಂಬಿಬಿಎಸ್ ಪದವಿ ಅಲ್ಲದೆ, ಕರಾಡ್ ಅವರು ಜನರಲ್ ಸರ್ಜರಿಯಲ್ಲಿ ಎಂ.ಎಸ್, ಮಕ್ಕಳ ಶಸ್ತ್ರಚಿಕಿತ್ಸೆಯಲ್ಲಿ ಎಂಸಿಎಚ್ ಮತ್ತು ಜನರಲ್ ಸರ್ಜರಿಯಲ್ಲಿ ಎಫ್ ಸಿಪಿಎಸ್ ಗಳನ್ನು ಕ್ರಮವಾಗಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಮರಾಠವಾಡ ವಿಶ್ವವಿದ್ಯಾಲಯ ಮತ್ತು ಮುಂಬೈ ವಿಶ್ವವಿದ್ಯಾಲಯದಿಂದ ಗಳಿಸಿದ್ದಾರೆ.
***
(ಪ್ರಕಟಣೆ ಐ.ಡಿ.: 1733733)
ವಿಸಿಟರ್ ಕೌಂಟರ್ : 261