ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

36.48 ಕೋಟಿ ಡೋಸ್ ದಾಟಿದ ಭಾರತದ ಕೋವಿಡ್-19 ಲಸಿಕೆ ನೀಡಿಕೆ ಪ್ರಮಾಣ


ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 45,892 ಹೊಸ ಕೊರೊನಾ ಪ್ರಕರಣಗಳು ಪತ್ತೆ

ಪ್ರಸ್ತುತ ಸಕ್ರಿಯ ಪ್ರಕರಣಗಳು 4,60,704; ಒಟ್ಟು ಕೊರೊನಾ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1.50%

ದೈನಂದಿನ ಪಾಸಿಟಿವಿಟಿ ದರ ಸತತ 1 ತಿಂಗಳಿಂದ 5% ಮಟ್ಟದಿಂದ ಕೆಳಗೆ ಮುಂದುವರಿಕೆ; ಅದೀಗ 2.42%ಗೆ ಇಳಿಕೆ

Posted On: 08 JUL 2021 10:24AM by PIB Bengaluru

ಭಾರತದಲ್ಲಿ ನಡೆಯುತ್ತಿರುವ ಬೃಹತ್ ಕೋವಿಡ್-19 ಲಸಿಕಾ ಅಭಿಯಾನದಲ್ಲಿ ಇದುವರೆಗೆ 36.48 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇಂದು ಬೆಳಗ್ಗೆ 7 ಗಂಟೆಗೆ ಲಭ್ಯವಾಗಿರುವ ತಾತ್ಕಾಲಿಕ ವರದಿಯ ಪ್ರಕಾರ, 47,40,833 ಕಾರ್ಯಕ್ರಮಗಳಲ್ಲಿ ಒಟ್ಟು 36,48,47,549 ಡೋಸ್ ಲಸಿಕೆ ನೀಡಲಾಗಿದೆ. ಕಳೆದ 24 ತಾಸುಗಳಲ್ಲೇ ದೇಶಾದ್ಯಂತ 33,81,671 ಡೋಸ್ ಲಸಿಕೆ ಹಾಕಲಾಗಿದೆ.

ಕೆಳಗಿನ ಗುಂಪುಗಳು ಅದರಲ್ಲಿ ಸೇರಿವೆ.

ಆರೋಗ್ಯ ಸಂರಕ್ಷಣಾ ಕಾರ್ಯಕರ್ತರು

ಮೊದಲ ಡೋಸ್

1,02,38,831

2ನೇ ಡೋಸ್

73,57,382

ಮುಂಚೂಣಿ ಕಾರ್ಯಕರ್ತರು

ಮೊದಲ ಡೋಸ್

1,76,29,332

2ನೇ ಡೋಸ್

97,78,648

18-44 ವಯೋಮಾನದವರು

ಮೊದಲ ಡೋಸ್

10,63,61,310

2ನೇ ಡೋಸ್

31,93,918

45-59 ವಯೋಮಾನದವರು

ಮೊದಲ ಡೋಸ್

9,21,04,824

2ನೇ ಡೋಸ್

2,14,42,733

60 ವರ್ಷ ದಾಟಿದವರು

ಮೊದಲ ಡೋಸ್

6,95,55,573

2ನೇ ಡೋಸ್

2,71,84,998

ಒಟ್ಟು

36,48,47,549

ದೇಶವ್ಯಾಪಿ ಕೋವಿಡ್-19 ಲಸಿಕೆ ನೀಡಿಕೆಯ ಸಾರ್ವತ್ರೀಕರಣದ ಹೊಸ ಹಂತ 2021 ಜೂನ್ 21ರಿಂದ ಆರಂಭವಾಗಿದೆ. ದೇಶಾದ್ಯಂತ ಕೋವಿಡ್-19 ಲಸಿಕೆ ಆಂದೋಲನದ ವ್ಯಾಪ್ತಿ ಹೆಚ್ಚಿಸಲು ಮತ್ತು ಅಭಿಯಾನದ ಗತಿಗೆ ವೇಗ ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ.

ದೇಶಾದ್ಯಂತ ಕಳೆದ 24 ತಾಸುಗಳಲ್ಲಿ 45,892 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

ಸತತ 11 ದಿನಗಳಿಂದ 50 ಸಾವಿರಕ್ಕಿಂತ ಕಡಿಮೆ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ನಿರಂತರ ಇಳಿಕೆ ಪ್ರವೃತ್ತಿ ಮುಂದುವರಿದಿದೆ. ಕೇಂದ್ರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಸುಸ್ಥಿರ ಮತ್ತು ಸಹಭಾಗಿತ್ವದ ಜಂಟಿ ಪ್ರಯತ್ನಗಳಿಂದಾಗಿ ಇದು ಸಾಧ್ಯವಾಗಿದೆ.

https://static.pib.gov.in/WriteReadData/userfiles/image/image001OZCR.jpg

ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ ಇಂದು 4,60,704ಕ್ಕೆ ಇಳಿಕೆ ಕಂಡಿದೆ. ದೇಶದಲ್ಲಿರುವ ಒಟ್ಟು ಪಾಸಿಟಿವ್ ಪ್ರಕರಣಗಳಲ್ಲಿ ಸಕ್ರಿಯ ಪ್ರಕರಣಗಳ ಪ್ರಮಾಣ 1.50% ಇದೆ.

https://static.pib.gov.in/WriteReadData/userfiles/image/image0023S7X.jpg

ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಸೋಂಕು ಕಾಣಿಸಿಕೊಂಡ ಆರಂಭದಿಂದಲೂ ಸೋಂಕಿತರು ಹೆಚ್ಚಿನ ಪ್ರಮಾಣದಲ್ಲಿ ಗುಣಮುಖರಾಗುತ್ತಿದ್ದು, ಇದುವರೆಗೆ ದೇಶಾದ್ಯಂತ ಒಟ್ಟಾರೆ 2,98,43,825 ರೋಗಿಗಳು  ಚೇತರಿಸಿಕೊಂಡಿದ್ದಾರೆ. ಕಳೆದ 24 ತಾಸುಗಳಲ್ಲೇ 44,291 ರೋಗಿಗಳು ಗುಣಮುಖರಾಗಿದ್ದಾರೆ. ಇದರೊಂದಿಗೆ ಒಟ್ಟಾರೆ ಚೇತರಿಕೆ ದರ 97.18%ಗೆ ಸುಧಾರಣೆ ಕಂಡಿದೆ. ಇದು ಸುಸ್ಥಿರವಾಗಿ ಏರಿಕೆ ಕಾಣುತ್ತಿದೆ.

https://static.pib.gov.in/WriteReadData/userfiles/image/image001W4S6.jpg

ದೇಶಾದ್ಯಂತ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷಾ ಸಾಮರ್ಥ್ಯವನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದು, ಕಳೆದ 24 ತಾಸುಗಳಲ್ಲಿ 18,93,800 ಪರೀಕ್ಷೆಗಳನ್ನು ನಡೆಸಲಾಗಿದೆ. ಒಟ್ಟಾರೆ ದೇಶಾದ್ಯಂತ ಇದುವರೆಗೆ 42.52 ಕೋಟಿ ಅಂದರೆ 42,52,25,897 ಪರೀಕ್ಷೆಗಳನ್ನು ನಡೆಸಲಾಗಿದೆ.

ದೇಶಾದ್ಯಂತ ಪರೀಕ್ಷಾ ಸಾಮರ್ಥ್ಯವನ್ನು ಹೆಚ್ಚಿಸಿರುವ ಪರಿಣಾಮ, ವಾರದ ಪಾಸಿಟಿವಿಟ ದರ ನಿರಂತರ ಇಳಿಕೆಯಾಗುತ್ತಿದೆ. ವಾರದ ಪಾಸಿಟಿವಿಟಿ ದರ ಪ್ರಸ್ತುತ 2.37%ಗೆ ಕುಸಿದಿದೆ. ದೈನಂದಿನ ಪಾಸಿಟಿವಿಟಿ ದರವೀಗ 2.42%ಗೆ ಇಳಿಕೆ ಕಂಡಿದೆ. ಸತತ 17ನೇ ದಿನದಲ್ಲಿ ದೈನಂದಿನ ಪಾಸಿಟಿವಿಟಿ ದರ 3% ಮಟ್ಟದಿಂದ ಕೆಳಗೆ ಮುಂದುವರಿದಿದೆ. ಸತತ 1 ತಿಂಗಳಿಂದ 5% ಮಟ್ಟದ ಕೆಳಗಿದೆ.

https://static.pib.gov.in/WriteReadData/userfiles/image/image004M5JW.jpg

***



(Release ID: 1733691) Visitor Counter : 186