ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ

ನಾಳೆ ಬ್ರಿಕ್ಸ್ ಶಿಕ್ಷಣ ಸಚಿವರ ಸಭೆ: ಅಧ್ಯಕ್ಷತೆ ವಹಿಸಲಿರುವ ಶ್ರೀ ಸಂಜಯ್ ದೋತ್ರೆ 


ಭಾರತ ಆಯೋಜಿಸುತ್ತಿರುವ 13 ನೇ ಶೃಂಗಸಭೆಯ ಭಾಗವಾಗಿ ಈ ಸಭೆ

ಕಳೆದ ವಾರ ನಡೆದಿತ್ತು ಬ್ರಿಕ್ಸ್ ವಿಶ‍್ವವಿದ್ಯಾಲಯಗಳ ಸಂಪರ್ಕ ಜಾಲ – ಐಜಿಬಿ ಮತ್ತು ಹಿರಿಯ ಶಿಕ್ಷಣ ಅಧಿಕಾರಿಗಳ ಸಭೆ

Posted On: 05 JUL 2021 4:44PM by PIB Bengaluru

ಕೇಂದ್ರ ಶಿಕ್ಷಣ. ಸಂಪರ್ಕ ಮತ್ತು ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಶ್ರೀ ಸಂಜಯ್ ದೋತ್ರೆ ಅವರು ವರ್ಚುವಲ್ ಮೂಲಕ ನಾಳೆ ನಡೆಯಲಿರುವ 8 ನೇ ಬ್ರಿಕ್ಸ್ ಶಿಕ್ಷಣ ಸಚಿವರ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ.

ಭಾರತ ವರ್ಷ 13 ನೇ ಬ್ರಿಕ್ಸ್ ಶೃಂಗ ಸಭೆಯನ್ನು ಆಯೋಜಿಸುತ್ತಿದ್ದು, ಇದರ ಭಾಗವಾಗಿ ಸಭೆ ಕರೆಯಲಾಗಿದೆ. ಬ್ರಿಕ್ಸ್ ಐದು ಸದಸ್ಯ ರಾಷ್ಟ್ರಗಳ ಶಿಕ್ಷಣ ಸಚಿವರ ಜತೆ ಹಿರಿಯ ಅಧಿಕಾರಿಗಳು ಸಹ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮಕ್ಕೂ ಮುನ್ನ ಜೂನ್ 29 ರಂದು ಬ್ರಿಕ್ಸ್ ರಾಷ್ಟ್ರಗಳ ವಿಶ್ವವಿದ್ಯಾಲಯದ ಸಂಪರ್ಕ ಜಾಲದ ಅಂತಾರಾಷ್ಟ್ರೀಯ ಆಡಳಿತ ಮಂಡಳಿ ಸಭೆ ನಡೆದಿತ್ತು. ವರೆಗೆ ನಿಟ್ಟಿನಲ್ಲಿ ಕೈಗೊಂಡಿರುವ ತೀರ್ಮಾನಗಳ ಕುರಿತು ಸದಸ್ಯ ರಾಷ್ಟ್ರಗಳಿಂದ ಪ್ರಗತಿ ಪರಿಶೀಲನೆ ನಡೆಯಿತು ಮತ್ತು ಇದನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಕುರಿತು ಚರ್ಚಿಸಲಾಗಿದೆ.

ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಶ್ರೀ ಅಮಿತ್ ಖರೆ, ಯುಜಿಸಿ ಅಧ್ಯಕ್ಷ ಶ್ರೀ ಡಿ.ಪಿ. ಸಿಂಗ್ ಮತ್ತು ಐಐಟಿಯ ನಿರ್ದೇಶಕ ಪ್ರೋಫೆಸರ್ ಸುಬಾಸಿಸ್ ಚೌಧರಿ ಅವರು ಬ್ರಿಕ್ಸ್ ಎನ್.ಯು ಐಜಿಬಿ ಸಭೆಯಲ್ಲಿ ಭಾರತದಿಂದ ಭಾಗವಹಿಸಿದ್ದರು.

ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವೆ ಶೈಕ್ಷಣಿಕ ಚಟುವಟಿಕೆ ಮತ್ತು ಸಂಶೋಧನೆಯ ಸಹಭಾಗಿತ್ವ, ವರ್ಚುವಲ್ ಮಾದರಿಯೂ ಒಳಗೊಂಡಂತೆ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸಿ ಉತ್ತೇಜಿಸಲು ಅಂತಾರಾಷ್ಟ್ರೀಯ ಆಡಳಿತ ಮಂಡಳಿ ಐಜಿಬಿ ತೀರ್ಮಾನಿಸಿದೆ.

ಬ್ರಿಕ್ಸ್ ರಾಷ್ಟ್ರಗಳ ಹಿರಿಯ ಶಿಕ್ಷಣ ಅಧಿಕಾರಿಗಳು ಜುಲೈ 2 ರಂದು ಸಭೆ ಸೇರಿ, ನಾಳೆ ಬ್ರಿಕ್ಸ್ ಶಿಕ್ಷಣ ಸಚಿವರ ಸಭೆ ಹಿನ್ನೆಲೆಯಲ್ಲಿ ಚರ್ಚೆ ನಡೆಸಿದ್ದರು.

***(Release ID: 1732963) Visitor Counter : 208