ಪ್ರವಾಸೋದ್ಯಮ ಸಚಿವಾಲಯ

2018-19 ನೇ ಸಾಲಿನ ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಿದ ಪ್ರವಾಸೋದ್ಯಮ ಸಚಿವಾಲಯ


ಅರ್ಜಿ ಸಲ್ಲಿಕೆಗೆ ಕೊನೆಯ ದಿನ 2021, ಆಗಸ್ಟ್ 10

Posted On: 05 JUL 2021 5:15PM by PIB Bengaluru

ಪ್ರವಾಸೋದ್ಯಮದಲ್ಲಿ ಶ್ರೇಷ್ಠ ಸಾಧನೆ ಮಾಡಿದ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ ಅರ್ಜಿಗಳನ್ನು ಆಹ್ವಾನಿಸಿದೆಪ್ರವಾಸೋದ್ಯಮ ಕ್ಷೇತ್ರದ ವಿವಿಧ ವಲಯಗಳು, ರಾಜ್ಯ ಸರ್ಕಾರಗಳು/ ಕೇಂದ್ರಾಡಳಿತ ಪ್ರದೇಶಗಳು, ವರ್ಗೀಕೃತ ಹೋಟೆಲ್ ಗಳು, ಮಂಜೂರಾತಿ ಪಡೆದಿರುವ ಪ್ರವಾಸಿ ಏಜೆಂಟ್ ಗಳು, ಪ್ರವಾಸಗಳನ್ನು ಆಯೋಜಿಸುವವರು, ಪ್ರವಾಸಿ ಪಾಸ್ ಪೋರ್ಟ್ ಕಾರ್ಯಾಚರಣೆ ಮಾಡುವವರು, ವ್ಯಕ್ತಿಗಳು, ಈಗಾಗಲೇ ಗುರುತಿಸಿರುವ ವಲಯಗಳಲ್ಲಿ   ಉತ್ತಮ ಸಾಮರ್ಥ್ಯ ತೋರಿರುವರು ಮತ್ತು ಪ್ರವಾಸೋದ್ಯಮ ಉತ್ತೇಜನಕ್ಕಾಗಿ ಆರೋಗ್ಯಕರ ಸ್ಪರ್ಧೆ ಏರ್ಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.

ಅರ್ಜಿಗಳನ್ನು ಸೂಕ್ತ ವಿಧಾನದಲ್ಲಿ ಭರ್ತಿ ಮಾಡಿರಬೇಕು. ನಿರ್ದಿಷ್ಟ ಮಾಹಿತಿಯನ್ನು ಉಲ್ಲೇಖಿಸಬೇಕು.  2018 ಏಪ್ರಿಲ್ ನಿಂದ 2019 ಮಾರ್ಚ್ ವರೆಗೆ ಕೈಗೊಂಡಿರುವ ಚಟುವಟಿಕೆಗಳು ಅಥವಾ ಪ್ರಶಸ್ತಿಗಳಿಗಾಗಿ ಸೂಕ್ತ ರೀತಿಯಲ್ಲಿ ನಮೂದು ಮಾಡಬೇಕು.

ಸಂಬಂಧಪಟ್ಟ ವಿಭಾಗಗಳಲ್ಲಿನ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಲು  2021  ಆಗಸ್ಟ್ 10 ಕೊನೆಯ ದಿನ[1600]ವಾಗಿದೆ ಮತ್ತು ಅರ್ಜಿಗಳನ್ನು ಖುದ್ದಾಗಿ ಸಲ್ಲಿಸಬೇಕು ಹಾಗೂ ನಿರ್ದಿಷ್ಟವಾದ ಸ್ವರೂಪದಲ್ಲಿ ಕಟ್ಟುನಿಟ್ಟಾಗಿ ಸಲ್ಲಿಸಬೇಕು. 2018-19 ನೇ ಸಾಲಿನ ರಾಷ್ಟ್ರೀಯ ಪ್ರವಾಸೋದ್ಯಮ ಪ್ರಶಸ್ತಿಗಳ ವಿವರ ಮತ್ತು ಮಾರ್ಗಸೂಚಿ ಪ್ರವಾಸೋದ್ಯಮ ಸಚಿವಾಲಯದ ವೆಬ್ ಸೈಟ್ ನಲ್ಲಿದೆ www.tourism.gov.in   

***



(Release ID: 1732961) Visitor Counter : 240