ಹಣಕಾಸು ಸಚಿವಾಲಯ
ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಆದಾಯ ತೆರಿಗೆ 15 ಸಿಎ/ 15 ಸಿಬಿ ನಮೂನೆಗಳ ವಿದ್ಯುನ್ಮಾನವಾಗಿ (ಎಲೆಕ್ಟ್ರಾನಿಕ್) ಫೈಲ್ ಮಾಡುವುದರಲ್ಲಿ ಮತ್ತಷ್ಟು ಸಡಿಲಿಕೆಯನ್ನು ಮಾಡಿದೆ
Posted On:
05 JUL 2021 5:11PM by PIB Bengaluru
ಆದಾಯ ತೆರಿಗೆ ಕಾಯ್ದೆ, 1961 ರ ಪ್ರಕಾರ, ನಮೂನೆ 15 ಸಿಎ/ 15 ಸಿಬಿಯನ್ನು ವಿದ್ಯುನ್ಮಾನವಾಗಿ ಫೈಲ್ ಮಾಡುವ ಅವಶ್ಯಕತೆಯಿದೆ. ಪ್ರಸ್ತುತ, ತೆರಿಗೆದಾರರು ಯಾವುದೇ ವಿದೇಶಿ ಹಣ ರವಾನೆಗಾಗಿ ಅಧಿಕೃತ ಮಾರಾಟಗಾರರಿಗೆ ನಕಲನ್ನು ಸಲ್ಲಿಸುವ ಮೊದಲು, ಇ-ಫೈಲಿಂಗ್ ಪೋರ್ಟಲ್ನಲ್ಲಿ, ಅನ್ವಯವಾಗುವಂತೆ ಫಾರ್ಮ್ 15 ಸಿಬಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಪ್ರಮಾಣಪತ್ರದೊಂದಿಗೆ ಫಾರ್ಮ್ 15 ಸಿಎ ಅನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
www.incometax.gov.in ಪೋರ್ಟಲ್ನಲ್ಲಿ ಆದಾಯ ತೆರಿಗೆ ಫಾರ್ಮ್ಗಳಾದ 15CA / 15CB ಯ ಎಲೆಕ್ಟ್ರಾನಿಕ್ ಫೈಲಿಂಗ್ ಮಾಡುವಾಗ ಎದುರಿಸಿದ ತೊಂದರೆಗಳನ್ನು ತೆರಿಗೆದಾರರು ವರದಿ ಮಾಡಿದ್ದನ್ನು ಗಮನದಲ್ಲಿಟ್ಟುಕೊಂಡು, ತೆರಿಗೆದಾರರು ಅಧಿಕೃತವಾಗಿ 15CA / 15CB ಫಾರ್ಮ್ಗಳನ್ನು ನೋಂದಾಯಿತ ವ್ಯಾಪಾರಿಗಳಿಗೆ 2021 ಜೂನ್ 30 ರವರೆಗೆ ಭೌತಿಕ ರೂಪದಲ್ಲಿ ಸಲ್ಲಿಸಬಹುದು ಎಂದು ಸಿಬಿಡಿಟಿಯಿಂದ ಮೊದಲೇ ನಿರ್ಧರಿಸಲಾಗಿತ್ತು.
ಈಗ , ಈ ಮೇಲಿನ ದಿನಾಂಕವನ್ನು 2021 ರ ಜುಲೈ 15 ಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ, ತೆರಿಗೆದಾರರು ಈಗ ಈ ನಮೂನೆಗಳನ್ನು (ಫಾರ್ಮ್) ಭೌತಿಕ ರೂಪದಲ್ಲಿ ಅಧಿಕೃತ ವ್ಯಾಪಾರಿಗಳಿಗೆ 2021 ಜುಲೈ 15 ರವರೆಗೆ ಸಲ್ಲಿಸಬಹುದು. ಅಧಿಕೃತ ವ್ಯಾಪಾರಿಗಳು ಅಂತಹ ಫಾರ್ಮ್ಗಳನ್ನು 2021 ರ ಜುಲೈ 15 ರವರೆಗೆ ಸ್ವೀಕರಿಸುವಂತೆ ಸೂಚಿಸಲಾಗಿದೆ. ವಿದೇಶಿ ಹಣ ರವಾನೆ ಉದ್ದೇಶಕ್ಕಾಗಿ. ದಾಖಲೆಯ ಗುರುತಿನ ಸಂಖ್ಯೆಯ ಉತ್ಪಾದನೆಯ ಉದ್ದೇಶಕ್ಕಾಗಿ ಈ ಫಾರ್ಮ್ಗಳನ್ನು ನಂತರದ ದಿನಾಂಕದಂದು ಅಪ್ಲೋಡ್ ಮಾಡಲು ಹೊಸ ಇ-ಫೈಲಿಂಗ್ ಪೋರ್ಟಲ್ನಲ್ಲಿ ಸೌಲಭ್ಯವನ್ನು ಒದಗಿಸಲಾಗುವುದು.
***
(Release ID: 1732879)
Visitor Counter : 275