ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೋವಿಡ್-19 ಲಸಿಕೆಯ ಇತ್ತೀಚಿನ ಮಾಹಿತಿ
ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ 33.63 ಕೋಟಿಗೂ ಹೆಚ್ಚು ಲಸಿಕೆ ಡೋಸ್ ಒದಗಿಸಿದ ಕೇಂದ್ರ ಸರ್ಕಾರ
44 ಲಕ್ಷಕ್ಕೂ ಅಧಿಕ ಡೋಸ್ ಸಾಗಣೆ ಹಂತದಲ್ಲಿ
Posted On:
02 JUL 2021 10:39AM by PIB Bengaluru
ದೇಶದಾದ್ಯಂತ ಕೋವಿಡ್ -19 ಲಸಿಕೆಯ ಅಭಿಯಾನ ವಿಸ್ತರಿಸುವ ಮತ್ತು ಅದರ ವೇಗ ಹೆಚ್ಚಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. 2021ರ ಜೂನ್ 21ರಿಂದ ಕೋವಿಡ್ -19 ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಹೊಸ ವೇಗ ಪಡೆದುಕೊಂಡಿದೆ. ಹೆಚ್ಚಿನ ಲಸಿಕೆಗಳ ಲಭ್ಯತೆ, ಲಸಿಕೆಯ ಲಭ್ಯತೆಯ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡುವ ಮೂಲಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಲಸಿಕಾ ಅಭಿಯಾನವನ್ನು ಉತ್ತಮವಾಗಿ ಸಕ್ರಿಯಗೊಳಿಸಲು ಮತ್ತು ಲಸಿಕೆ ಪೂರೈಕೆ ಸರಪಳಿಯನ್ನು ಸುವ್ಯವಸ್ಥಿತಗೊಳಿಸುವ ಮೂಲಕ ಲಸಿಕೆ ಅಭಿಯಾನವನ್ನು ವೇಗವರ್ಧಿಸಲಾಗಿದೆ.
ದೇಶವ್ಯಾಪಿ ಲಸಿಕಾ ಅಭಿಯಾನದ ಭಾಗವಾಗಿ, ಭಾರತ ಸರ್ಕಾರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೋವಿಡ್ ಲಸಿಕೆಯನ್ನು ಉಚಿತವಾಗಿ ಒದಗಿಸುತ್ತಿದೆ. ಕೋವಿಡ್ -19 ಲಸಿಕೆ ಅಭಿಯಾನದ ಸಾರ್ವತ್ರೀಕರಣದ ನೂತನ ಹಂತದಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿನ ಲಸಿಕೆ ತಯಾರಕರು ಉತ್ಪಾದಿಸುವ ಲಸಿಕೆಯ ಪೈಕಿ ಶೇ.75ರಷ್ಟನ್ನು ಖರೀದಿಸಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಪೂರೈಸುತ್ತಿದೆ.
ಈವರೆಗೆ ಕೇಂದ್ರ ಸರ್ಕಾರ ಈವರೆಗೆ ರಾಜ್ಯಗಳಿಗೆ 33.63 ಕೋಟಿ (33,63,78,220) ಲಸಿಕೆ ಡೋಸ್ ಗಳನ್ನು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ (ಉಚಿತ ಮಾರ್ಗದಲ್ಲಿ) ಮತ್ತು ರಾಜ್ಯಗಳಿಂದಲೇ ನೇರವಾಗಿ ಖರೀದಿಸುವ ಪ್ರವರ್ಗದ ಮೂಲಕ ಪೂರೈಕೆ ಮಾಡಿದೆ.
ಈ ಪೈಕಿ ಲಸಿಕೆ ವ್ಯರ್ಥವಾಗಿರುವುದೂ ಸೇರಿದಂತೆ ಒಟ್ಟು ಲಸಿಕೆ ಡೋಸ್ ಬಳಕೆ 33,73,22,514 ಆಗಿದೆ. (ಇಂದು ಬೆಳಗ್ಗೆ 8 ಗಂಟೆಯವರೆಗೆ ಲಭ್ಯವಾದ ಮಾಹಿತಿಯಂತೆ)
ಮಿಗಿಲಾಗಿ 44,90,000 ಡೋಸ್ ಲಸಿಕೆ ಸಾಗಣೆಯಲ್ಲಿದ್ದು, ಮುಂದಿನ 3 ದಿನಗಳಲ್ಲಿ ಅವುಗಳನ್ನು ರಾಜ್ಯಗಳು ಪಡೆದುಕೊಳ್ಳಲಿವೆ.
***
(Release ID: 1732194)
Visitor Counter : 265
Read this release in:
English
,
Urdu
,
Marathi
,
Hindi
,
Bengali
,
Punjabi
,
Gujarati
,
Odia
,
Tamil
,
Telugu
,
Malayalam